ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಬಳಸುವ ಆ್ಯಪ್‌ಗಳು ಯಾವುವು ಗೊತ್ತೇ?
Most Popular Apps: ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆದ ಬಳಿಕ ಇನ್‌ಸ್ಟಾಗ್ರಾಮ್ ಸಾಕಷ್ಟು ಪ್ರಸಿದ್ಧಿ ಪಡೆಯಿತು. ಟಿಕ್ ಟಾಪ್ ನಂತರ ಅತಿ ಹೆಚ್ಚು ಡೌನ್‌ಲೋಡ್ ಮಾಡಿರುವ ಅಪ್ಲಿಕೇಶನ್ ಎಂದರೆ ಅದು ಇನ್‌ಸ್ಟಾಗ್ರಾಮ್. ಇದರಲ್ಲಿನ ರೀಲುಗಳು ಮತ್ತು ಸ್ಟೋರಿಗಳು ನೆಟ್ಟಿಗರನ್ನು ಆಕರ್ಷಿಸುತ್ತಿವೆ.
ಆ್ಯಂಡ್ರಾಯ್ಡ್ ಫೋನ್ (Android Phone) ಬಂದ ನಂತರ ಜಗತ್ತು ಸಂಪೂರ್ಣ ಬದಲಾಗಿದೆ. ಎಲ್ಲವೂ ಆ್ಯಪ್‌ಗಳ ರೂಪದಲ್ಲಿ ಸ್ಮಾರ್ಟ್ಫೋನ್ ಸುಲಭವಾಗಿ ಕೆಲಸ ನಿರ್ವಹಿಸುತ್ತದೆ. ಗೇಮ್, ಹಾಡುಗಳು, ಸಾಮಾಜಿಕ ಮಾಧ್ಯಮಗಳು ನಿಮ್ಮ ಅಂಗೈಯಲ್ಲಿವೆ. ಗೂಗಲ್ ಪ್ಲೇ ಸ್ಟೋರ್ ಅಥವಾ ಐಒಎಸ್ ಸ್ಟೋರ್‌ನಲ್ಲಿ ಲಕ್ಷಾಂತರ ಅಪ್ಲಿಕೇಶನ್‌ಗಳನ್ನು ನಾವು ಕಾಣಬಹುದು. ಆದರೆ ಇವುಗಳಲ್ಲಿ ಕೆಲವು ಆ್ಯಪ್‌ಗಳು ಮಾತ್ರ ಎಲ್ಲಾ ಫೋನ್‌ಗಳಲ್ಲಿ ಕಂಡುಬರುತ್ತವೆ. ಅಂತಹ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳು ಯಾವುವು? ಪ್ರತಿ ಮೊಬೈಲ್‌ನಲ್ಲಿ ಹೆಚ್ಚು ಡೌನ್‌ಲೋಡ್ ಆಗುವ ಅಪ್ಲಿಕೇಶನ್‌ಗಳು ಯಾವುವು? ಎಂಬುದನ್ನು ನೋಡೋಣ.
ಟಿಕ್ ಟಾಕ್:
ಸತತ ಮೂರನೇ ವರ್ಷವೂ ಟಿಕ್ ಟಾಕ್ ವಿಶ್ವದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆಗಿರುವ ಆ್ಯಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಇದು ಭಾರತದಲ್ಲಿ ನಿಷೇಧವಾಗಿದೆ. ಆದಾಗ್ಯೂ, ಈ ಅಪ್ಲಿಕೇಶನ್ ಜಾಗತಿಕ ಮಾರುಕಟ್ಟೆಯಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ.
ಇನ್‌ಸ್ಟಾಗ್ರಾಮ್:
ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆದ ಬಳಿಕ ಇನ್‌ಸ್ಟಾಗ್ರಾಮ್ ಸಾಕಷ್ಟು ಪ್ರಸಿದ್ಧಿ ಪಡೆಯಿತು. ಟಿಕ್ ಟಾಪ್ ನಂತರ ಅತಿ ಹೆಚ್ಚು ಡೌನ್‌ಲೋಡ್ ಮಾಡಿರುವ ಅಪ್ಲಿಕೇಶನ್ ಎಂದರೆ ಅದು ಇನ್‌ಸ್ಟಾಗ್ರಾಮ್. ಇದರಲ್ಲಿನ ರೀಲುಗಳು ಮತ್ತು ಸ್ಟೋರಿಗಳು ನೆಟ್ಟಿಗರನ್ನು ಆಕರ್ಷಿಸುತ್ತಿವೆ. ಮೆಟಾ ಒಡೆತನದ ಈ ಅಪ್ಲಿಕೇಶನ್ ಭಾರತದಲ್ಲಿ ಹೆಚ್ಚಿನ ಜನರು ಉಪಯೋಗಿಸುತ್ತಿದ್ದಾರೆ.
BMW ಡಿಸೈನ್‌ವರ್ಕ್ಸ್‌ನೊಂದಿಗೆ ಬಿಡುಗಡೆ ಆಯಿತು ಹೊಸ ಇನ್ಫಿನಿಕ್ಸ್ ನೋಟ್ 30 VIP ರೇಸಿಂಗ್ ಆವೃತ್ತಿ
ಫೇಸ್ ಬುಕ್:
ಫೇಸ್ ಬುಕ್ ಬಳಸುತ್ತಿರುವವರಿದ್ದಾರೆಯೇ? ಅನೇಕ ಜನರು ಆಶ್ಚರ್ಯ ಪಡುತ್ತಿರಬಹುದು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಫೇಸ್‌ಬುಕ್ ತನ್ನ ಉನ್ನತ ಸ್ಥಾನವನ್ನು ಉಳಿಸಿಕೊಂಡಿರುವುದು ನಿಜ. ಪ್ರಪಂಚದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆಗಿರುವ ಆ್ಯಪ್‌ಗಳಲ್ಲಿ ಇದು ಕೂಡ ಒಂದಾಗಿದೆ.
ವಾಟ್ಸ್ಆ್ಯಪ್:
ವಾಟ್ಸ್ಆ್ಯಪ್ ಅನ್ನು ಪ್ರಪಂಚದಾದ್ಯಂತ ಮಾಹಿತಿ ವಿನಿಮಯಕ್ಕಾಗಿ ವ್ಯಾಪಕವಾಗಿ ಬಳಸಲಾಗುವ ಮಾಧ್ಯಮವಾಗಿದೆ. ಬಳಕೆದಾರರು ವಾಟ್ಸ್ಆ್ಯಪ್ ಮೂಲಕ ಸಂದೇಶಗಳು, ಫೋಟೋಗಳು, ವಿಡಿಯೋಗಳು ಮತ್ತು ಧ್ವನಿ ಸಂದೇಶಗಳನ್ನು ಕಳುಹಿಸಬಹುದು.
ಕ್ಯಾಪ್ ಕಟ್:
ಇದು ವಿಡಿಯೋ ಎಡಿಟಿಂಗ್ ಆ್ಯಪ್ ಆಗಿದ್ದು, ಟಿಕ್ ಟಾಕ್ ಬಳಕೆದಾರರು ಚಿಕ್ಕ ವಿಡಿಯೋವನ್ನು ಸುಲಭವಾಗಿ ಇದರಲ್ಲಿ ಬೇಕಾದಂತೆ ರಚಿಸಬಹುದು. ಆದ್ದರಿಂದ ಬಹುತೇಕ ಎಲ್ಲಾ ಟಿಕ್ ಟಾಕ್ ಬಳಕೆದಾರರು ಈ ಕ್ಯಾಪ್ ಕಟ್ ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ.
ಟೆಲಿಗ್ರಾಮ್:
ಗೌಪ್ಯತೆಯೊಂದಿಗೆ ವೇಗವಾಗಿ ಬೆಳೆಯುತ್ತಿರುವ ಸಂದೇಶ ಕಳುಹಿಸುವ ಅಪ್ಲಿಕೇಶನ್ ಟೆಲಿಗ್ರಾಮ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಇದರ ಬಳಕೆದಾರರು ಹೆಚ್ಚಾಗುತ್ತಿದ್ದಾರೆ. ದೊಡ್ಡ ಗಾತ್ರದಲ್ಲಿ ಫೈಲ್‌ಗಳನ್ನು ಕಳುಹಿಸಲು ಅನುಮತಿ ಇರುವ ಕಾರಣ, ಹೆಚ್ಚಿನ ಬಳಕೆದಾರರು ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡುತ್ತಿದ್ದಾರೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ