ಐಫೋನ್ 15 ಸರಣಿ ಪ್ರೀ ಬುಕಿಂಗ್ ಆರಂಭ: ಆಫರ್​ಗಳ ಸುರಿಮಳೆ ಗೈದ ಆ್ಯಪಲ್

iPhone 15 series pre-booking: ಐಫೋನ್ 15 ಸರಣಿಯ ಫೋನುಗಳನ್ನು ಆ್ಯಪಲ್​ನ ಅಧಿಕೃತ ವೆಬ್​ಸೈಟ್ ಮತ್ತು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ ಮೂಲಕ ಮುಂಗಡ ಬುಕಿಂಗ್ ಮಾಡಬಹುದು. ಫ್ಲಿಪ್‌ಕಾರ್ಟ್‌ನಲ್ಲಿ, ಐಫೋನ್ 15 ಮತ್ತು ಐಫೋನ್ 15 ಪ್ಲಸ್ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 5,000 ರೂಪಾಯಿಗಳ ರಿಯಾಯಿತಿ ಕೊಡುಗೆಯೊಂದಿಗೆ ಲಭ್ಯವಿದೆ.

ಐಫೋನ್ 15 ಸರಣಿ ಪ್ರೀ ಬುಕಿಂಗ್ ಆರಂಭ: ಆಫರ್​ಗಳ ಸುರಿಮಳೆ ಗೈದ ಆ್ಯಪಲ್
iPhone 15 Series Pree Booking
Follow us
|

Updated on: Sep 16, 2023 | 12:23 PM

ಹೊಸದಾಗಿ ಬಿಡುಗಡೆಯಾದ ಐಫೋನ್ 15 ಸರಣಿಯು (iPhone 15 Series) ಈಗ ಪ್ರೀ-ಬುಕಿಂಗ್‌ಗೆ ಲಭ್ಯವಿದೆ. ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಅಥವಾ ಐಫೋನ್ 15 ಪ್ರೊ ಮ್ಯಾಕ್ಸ್ ಖರೀದಿಸಲು ಆಸಕ್ತಿ ಹೊಂದಿರುವ ಭಾರತೀಯರು ಇವುಗಳಲ್ಲಿ ಯಾವುದಾದರೂ ಒಂದನ್ನು ಕಡಿಮೆ ಬೆಲೆಗೆ ಲಾಂಚ್ ಆಫರ್‌ಗಳೊಂದಿಗೆ ಪಡೆಯಬಹುದು. ಪ್ರಿ ಬುಕಿಂಗ್ ವಿಂಡೋ ಈಗಾಗಲೇ ತೆರೆದಿದ್ದು, ಕೆಲ ಐಫೋನ್ 15 ಮಾಡೆಲ್​​ಗಳು ಸೋಲ್ಡ್ ಔಟ್ ಆಗಿದೆ. ಐಫೋನ್ 15 ಸರಣಿಯ ಮಾರಾಟವು ಅಧಿಕೃತವಾಗಿ ಸೆಪ್ಟೆಂಬರ್ 22 ರಿಂದ ದೇಶದಲ್ಲಿ ಶುರುವಾಗಲಿದೆ. ಹೊಸ ಐಫೋನ್‌ಗಳ ಬೆಲೆಗಳು ಮತ್ತು ರಿಯಾಯಿತಿ ಕೊಡುಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಐಫೋನ್ 15 ಬೆಲೆ

128GB ಬೇಸ್ ಹೊಂದಿರುವ ಐಫೋನ್ 15 ಬೆಲೆ 79,900 ರೂ. ಗಳೊಂದಿಗೆ ಬರುತ್ತದೆ ಮತ್ತು 256GB ಮಾದರಿಯು 89,900 ರೂ. ಗಳಿಗೆ ಮಾರಾಟವಾಗಲಿದೆ. 512GB ಆವೃತ್ತಿಯು ಗ್ರಾಹಕರಿಗೆ 1,09,900 ರೂಪಾಯಿಗಳ ಬೆಲೆಯೊಂದಿಗೆ ಲಭ್ಯವಿರುತ್ತದೆ.

ಭಾರತದಲ್ಲಿ ಐಫೋನ್ 15 ಪ್ಲಸ್ ಬೆಲೆ

128GB ಹೊಂದಿರುವ ಐಫೋನ್ 15 ಪ್ಲಸ್ ನಿಮಗೆ ರೂ. 89,900 ಮತ್ತು 256GB ರೂಪಾಂತರದ ಬೆಲೆ ರೂ. 99,900 ಆಗಿದೆ. ಅಂತೆಯೆ ಇದರ 512GB ಮಾದರಿಯೂ ಇದೆ ಇದು 1,19,900 ರೂ. ಗೆ ಮಾರಾಟವಾಗಲಿದೆ.

ಇದನ್ನೂ ಓದಿ
Image
ಬರುತ್ತಿದೆ ಭಾರತದ ​ಫೋನ್: ರೋಚಕತೆ ಸೃಷ್ಟಿಸಿದ ಲಾವಾ ಬ್ಲೇಜ್ ಪ್ರೊ 5G
Image
ಭಾರತದಲ್ಲಿ ಮೋಟೋ ಎಡ್ಜ್ 40 ನಿಯೋ ಫೋನಿನ ಬೆಲೆ ಸೋರಿಕೆ
Image
ಹೊಸ ಇನ್ಫಿನಿಕ್ಸ್ ನೋಟ್ 30 VIP ರೇಸಿಂಗ್ ಆವೃತ್ತಿ ಬಿಡುಗಡೆ
Image
10,000 ರೂ. ಹೆಚ್ಚು ಕೊಟ್ಟು ಐಫೋನ್ 15 ಖರೀದಿಸಬಹುದೇ?

ಭಾರತದಲ್ಲಿ ಐಫೋನ್ 15 ಪ್ರೊ ಬೆಲೆ

128GB ಮಾದರಿಯ ಐಫೋನ್ 15 ಪ್ರೊ 1,34,900 ರೂ. ಬೆಲೆಯೊಂದಿಗೆ ಬರುತ್ತದೆ. 256GB ರೂಪಾಂತರವು ನಿಮಗೆ 1,44,900 ರೂ., ಮತ್ತು 512GB ಮಾದರಿಯನ್ನು ರೂ. 1,64,900 ಅಥವಾ 1TB ರೂಪಾಂತರವನ್ನು ರೂ. 1,84,900 ಕ್ಕೆ ಖರೀದಿಸಬಹುದು.

ಭಾರತದಲ್ಲಿ ಐಫೋನ್ 15 ಪ್ರೊ ಮ್ಯಾಕ್ಸ್ ಬೆಲೆ

ಆ್ಯಪಲ್​ನ ಅತ್ಯಂತ ಪ್ರೀಮಿಯಂ ಐಫೋನ್ ಆಗಿರುವ ಐಫೋನ್ 15 ಪ್ರೊ ಮ್ಯಾಕ್ಸ್ 256GB ಮಾದರಿಗೆ 1,59,900 ರೂ. ಇದೆ. 512GB ರೂಪಾಂತರವು ನಿಮಗೆ ರೂ. 1,79,900 ವೆಚ್ಚವಾಗಲಿದ್ದು, 1TB ಮಾದರಿಯು 1,99,900 ರೂ. ಗೆ ಲಭ್ಯವಿರುತ್ತದೆ.

ಭಾರತದಲ್ಲಿ ಇಂದಿನಿಂದ ನೋಕಿಯಾದ ಈ ಸ್ಟೈಲಿಶ್ ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯ: ಬೆಲೆ ಎಷ್ಟು?

ಐಫೋನ್ 15 ಸರಣಿಯ ಫೋನುಗಳನ್ನು ಆ್ಯಪಲ್​ನ ಅಧಿಕೃತ ವೆಬ್​ಸೈಟ್ ಮತ್ತು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ ಮೂಲಕ ಮುಂಗಡ ಬುಕಿಂಗ್ ಮಾಡಬಹುದು. ಫ್ಲಿಪ್‌ಕಾರ್ಟ್‌ನಲ್ಲಿ, ಐಫೋನ್ 15 ಮತ್ತು ಐಫೋನ್ 15 ಪ್ಲಸ್ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 5,000 ರೂಪಾಯಿಗಳ ರಿಯಾಯಿತಿ ಕೊಡುಗೆಯೊಂದಿಗೆ ಲಭ್ಯವಿದೆ. ಎಚ್‌ಡಿಎಫ್‌ಸಿ ಡೆಬಿಟ್ ಕಾರ್ಡ್ ಹೊಂದಿರುವ ಜನರು ಇಎಂಐ ವಹಿವಾಟುಗಳನ್ನು ಆರಿಸಿಕೊಂಡರೆ ಈ ಕೊಡುಗೆಯನ್ನು ಪಡೆದುಕೊಳ್ಳಬಹುದು.

ಆ್ಯಪಲ್‌ನ ಅಧಿಕೃತ ಆನ್‌ಲೈನ್ ಸ್ಟೋರ್‌ನಿಂದ ಕೂಡ ಹೊಸ ಐಫೋನ್ ಖರೀದಿಸಬಹುದು. ಆಪಲ್ ತನ್ನ ಹೊಸ ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಮಾದರಿಗಳಿಗೆ ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್ ಅನ್ನು ಘೋಷಿಸಿದೆ. HDFC ಬ್ಯಾಂಕ್ ಕಾರ್ಡ್ ಬಳಕೆದಾರರು ರೂ 6,000 ರಿಯಾಯಿತಿಯನ್ನು ಪಡೆಯಬಹುದು, ಪ್ರೊ ಅಲ್ಲದ ಮಾದರಿಗಳು ರೂ. 5,000 ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಹೊಂದಿವೆ. ಕಂಪನಿಯು ಹಳೆಯ ಐಫೋನ್ ಮಾದರಿಗಳಲ್ಲಿ ಕೂಡ ಬ್ಯಾಂಕ್ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ.

ಹೆಚ್ಚುವರಿಯಾಗಿ, ಆಪಲ್ ಟ್ರೇಡ್-ಇನ್ ಆಯ್ಕೆಗಳನ್ನು ನೀಡಲಾಗಿದೆ. ಇಲ್ಲಿ ಖರೀದಿದಾರರು ಹೊಸ ಐಫೋನ್‌ಗಾಗಿ ಅರ್ಹ ಸ್ಮಾರ್ಟ್‌ಫೋನ್‌ಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ತ್ವರಿತ ಕ್ರೆಡಿಟ್‌ನಲ್ಲಿ ರೂ. 55,700 ವರೆಗೆ ಪಡೆಯಬಹುದು. ಆದರೆ, ಈ ವಿನಿಮಯದ ಕೊಡುಗೆಯು ನಿಮ್ಮ ಹಳೆಯ ಫೋನ್ ಮತ್ತು ಅದರ ಸ್ಥಿತಿಯ ಆಧಾರದ ಮೇಲೆ ನಿರ್ಧಾರವಾಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ