Hamas-Israel War: ಭಾರತದದಲ್ಲಿ ಸದ್ಯದಲ್ಲೇ ದುಬಾರಿಯಾಗಲಿದೆ ಇಂಟರ್ನೆಟ್?: ಕಾರಣ ಇಲ್ಲಿದೆ

5G Internet: ಭಾರತವು ಪ್ರಸ್ತುತ 5G ಇಂಟರ್ನೆಟ್ ಸೇವೆ ನೀಡುವಲ್ಲಿ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಇದು ದೇಶದ ಹಲವು ನಗರಗಳನ್ನು ತಲುಪಿದೆ. ಉಳಿದ ನಗರಗಳಲ್ಲಿಯೂ 5G ಸಂಪರ್ಕ ಈ ವರ್ಷಾಂತ್ಯದಲ್ಲಿ ಸಿಗಲಿದೆ ಎಂದು ಹೇಲಾಗಿತ್ತು. ಆದರೆ, ಇಸ್ರೇಲ್ ಮತ್ತು ಹಮಾಸ್ ನಡುವೆ ತೀವ್ರವಾದ ಯುದ್ಧದ ಕಾರಣದಿಂದಾಗಿ, ದೇಶದಲ್ಲಿ 5G ತಂತ್ರಜ್ಞಾನವನ್ನು ವಿಸ್ತರಿಸಲು ಕಷ್ಟವಾಗಬಹುದು.

Hamas-Israel War: ಭಾರತದದಲ್ಲಿ ಸದ್ಯದಲ್ಲೇ ದುಬಾರಿಯಾಗಲಿದೆ ಇಂಟರ್ನೆಟ್?: ಕಾರಣ ಇಲ್ಲಿದೆ
5G network
Follow us
Vinay Bhat
|

Updated on: Oct 17, 2023 | 2:05 PM

ಅಕ್ಟೋಬರ್ 7 ರಂದು ಹಮಾಸ್, ಇಸ್ರೇಲ್ (Israel) ಮೇಲೆ ದಾಳಿ ಮಾಡುವ ಮೂಲಕ ಇಡೀ ಜಗತ್ತನ್ನು ಬೆಚ್ಚಿಬೀಳಿಸಿತು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ತನ್ನ ಸೇನೆಯನ್ನು ಗಾಜಾ ಪಟ್ಟಿಯ ಗಡಿಯಲ್ಲಿ ಇಳಿಸಿದೆ. ಕಳೆದ ಒಂದು ವಾರದಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ತೀವ್ರವಾದ ಯುದ್ಧ ನಡೆಯುತ್ತಿದೆ. ಎರಡೂ ಕಡೆಯವರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಈ ಯುದ್ಧವು ಜಾಗತಿಕ ಮಟ್ಟದಲ್ಲೂ ಪರಿಣಾಮ ಬೀರುತ್ತಿದೆ. ಭಾರತ ಕೂಡ ಇದರಿಂದ ಹೊರಗುಳಿದಿಲ್ಲ. ದೇಶದಲ್ಲೂ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಿಂದ ಭಾರತದಲ್ಲಿ ಇಂಟರ್ನೆಟ್ ದುಬಾರಿ ಆಗುವ ಸಾಧ್ಯತೆ ಇದೆ.

ಭಾರತವು ಪ್ರಸ್ತುತ 5G ಇಂಟರ್ನೆಟ್ ಸೇವೆ ನೀಡುವಲ್ಲಿ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಇದು ದೇಶದ ಹಲವು ನಗರಗಳನ್ನು ತಲುಪಿದೆ. ಉಳಿದ ನಗರಗಳಲ್ಲಿಯೂ 5G ಸಂಪರ್ಕ ಈ ವರ್ಷಾಂತ್ಯದಲ್ಲಿ ಸಿಗಲಿದೆ ಎಂದು ಹೇಲಾಗಿತ್ತು. ಆದರೆ, ಯುದ್ಧದ ಕಾರಣದಿಂದಾಗಿ, ದೇಶದಲ್ಲಿ 5G ತಂತ್ರಜ್ಞಾನವನ್ನು ವಿಸ್ತರಿಸಲು ಕಷ್ಟವಾಗಬಹುದು. ಏಕೆಂದರೆ 5G ನೆಟ್‌ವರ್ಕ್‌ಗೆ ಅಗತ್ಯವಿರುವ ವಸ್ತುಗಳ ಆಮದು ದುಬಾರಿಯಾಗುವ ಸಂಭವವಿದೆ.

ಎರಡೇ ದಿನ ಬಾಕಿ: ಸ್ಯಾಮ್​ಸಂಗ್​ನಿಂದ ಬರುತ್ತಿದೆ ಆಕರ್ಷಕ ಬಜೆಟ್ ಸ್ಮಾರ್ಟ್​ಫೋನ್

ಇದನ್ನೂ ಓದಿ
Image
ವಿವೋ ಪ್ರಿಯರಿಗೆ ಭರ್ಜರಿ ಸುದ್ದಿ: ಇಂದಿನಿಂದ ವಿವೋ V29 ಫೋನ್ ಮಾರಾಟ ಆರಂಭ
Image
ತಯಾರಾಗಿ: ಧೂಳೆಬ್ಬಿಸಲು ಬರುತ್ತಿದೆ ವಿವೋ ಕಂಪನಿಯ Y200 ಸ್ಮಾರ್ಟ್​ಫೋನ್
Image
ಸ್ಯಾಮ್​ಸಂಗ್​ನಿಂದ ವಿಭಿನ್ನ ಪ್ರಯತ್ನ: ಬರುತ್ತದೆ 200MP ಕ್ಯಾಮೆರಾದ ಫೋನ್
Image
ಎರಡೇ ದಿನ ಬಾಕಿ: ಸ್ಯಾಮ್​ಸಂಗ್​ನಿಂದ ಬರುತ್ತಿದೆ ಆಕರ್ಷಕ ಬಜೆಟ್ ​ಫೋನ್

ಯುದ್ಧದಿಂದಾಗಿ ಹೊರೆ ಹೆಚ್ಚು

ಭಾರತದಲ್ಲಿ 5G ಇಂಟರ್ನೆಟ್ ಸೆಟಪ್‌ಗಾಗಿ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕು. ದಿ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ, ಆಮದು ಮಾಡಿಕೊಂಡ 5G ನೆಟ್‌ವರ್ಕ್ ಉಪಕರಣಗಳ ವೆಚ್ಚವನ್ನು ರೂ. 2,000-2,500 ಕೋಟಿಗಳಷ್ಟು ಹೆಚ್ಚಿಸಬಹುದು. ಇದರಿಂದ 5G ಸಂಪರ್ಕದಲ್ಲಿ ಕೆಲಸ ಮಾಡುವ ಟೆಲಿಕಾಂ ಕಂಪನಿಗಳಿಗೆ, 5G ರೋಲ್‌ಔಟ್‌ನ ವೇಗವು ನಿಧಾನವಾಗಬಹುದು.

ಟೆಲಿಕಾಂ ಕಂಪನಿಗಳಿಗೆ ತೊಂದರೆ

ಈ ಯುದ್ಧ ಮುಂದುವರಿದರೆ ಡಾಲರ್ ಎದುರು ರೂಪಾಯಿ ಮೌಲ್ಯ ಶೇ. 3-4ರಷ್ಟು ಕುಸಿಯಬಹುದು. ಇಂತಹ ಪರಿಸ್ಥಿತಿಯಲ್ಲಿ ಟೆಲಿಕಾಂ ಕಂಪನಿಗಳಿಗೆ ವಿದೇಶಿ ವೆಚ್ಚ ಭರಿಸುವುದು ದುಬಾರಿಯಾಗಲಿದೆ. ಸ್ಥಳೀಯ ಫೋನ್ ನೆಟ್‌ವರ್ಕ್‌ನಲ್ಲಿ ಬಳಸುವ ಟೆಲಿಕಾಂ ಉಪಕರಣಗಳನ್ನು ಸುಮಾರು 67 ಪ್ರತಿಶತದಷ್ಟು ಆಮದು ಮಾಡಿಕೊಳ್ಳಲಾಗುತ್ತದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಲಾಭದಲ್ಲೂ ಇಳಿಕೆಯಾಗಬಹುದು.

5G ಇಂಟರ್ನೆಟ್‌ಗೆ ಕಷ್ಟ

ಎರಿಕ್ಸನ್, ನೋಕಿಯಾ ಮತ್ತು ಸ್ಯಾಮ್‌ಸಂಗ್‌ನಂತಹ ವಿದೇಶಿ ಕಂಪನಿಗಳು ಈ ಟೆಲಿಕಾಂ ಉಪಕರಣಗಳನ್ನು ಭಾರತಕ್ಕೆ ಒದಗಿಸುತ್ತವೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳಿಗೆ ಇದು ಹೊಡೆತ ಬೀಳಲಿದೆ. ಅತಿ ವೇಗದ 5G ಕವರೇಜ್ ಒದಗಿಸಲು ಟೆಲಿಕಾಂ ಕಂಪನಿಗಳ ನಡುವೆ ತೀವ್ರ ಪೈಪೋಟಿ ಇದೆ. ಜಿಯೋ ಮತ್ತು ಏರ್ಟೆಲ್ ಉಚಿತ 5G ಇಂಟರ್ನೆಟ್ ಅನ್ನು ಒದಗಿಸುತ್ತಿವೆ. ಹೀಗಿರುವಾಗ ಮುಂಬರುವ ದಿನಗಳಲ್ಲಿ 5G ಇಂಟರ್ನೆಟ್‌ನ ಪರಿಸ್ಥಿತಿಗಳು ಹೇಗೆ ಬದಲಾಗುತ್ತೆ ಎಂದು ನೋಡಬೇಕಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ