ಇಸ್ರೇಲ್​-ಲೆಬನಾನ್ ಗಡಿಯಲ್ಲಿ 900 ಭಾರತೀಯ ಸೈನಿಕರು ನಿಯೋಜನೆಗೊಂಡಿರುವುದು ಏಕೆ?

ಹಮಾಸ್ ಭಯೋತ್ಪಾದಕರು ಇಸ್ರೇಲ್​ ಮೇಲೆ ಏಕಾಏಕಿ ದಾಳಿ ನಡೆಸಿದ್ದರು, ಅದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಗಾಜಾದ ಮೇಲೆ ಬಾಂಬ್ ದಾಳಿ ನಡೆಸಿದೆ, ಈ ಸಂಘರ್ಷದಲ್ಲಿ ಇದುವರೆಗೆ ಒಟ್ಟಾರೆ 4 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್-ಹಮಾಸ್ ಯುದ್ಧದಲ್ಲಿ ಹಿಂಸಾಚಾರ ಮತ್ತು ಜೀವಹಾನಿಯ ಬಗ್ಗೆ ಭಾರತ ಸರ್ಕಾರವು ಕಳವಳ ವ್ಯಕ್ತಪಡಿಸುತ್ತಿರುವಾಗ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಮತ್ತು ಇಸ್ರೇಲ್ ಸೇನೆಯ ನಡುವಿನ ಸಂಘರ್ಷದಿಂದಾಗಿ ಉದ್ವಿಗ್ನತೆ ಹೆಚ್ಚಿರುವ ಲೆಬನಾನ್‌ನ ದಕ್ಷಿಣ ಗಡಿಯಲ್ಲಿ ಭಾರತೀಯ ಪಡೆಗಳನ್ನು ನಿಯೋಜಿಸಲಾಗಿದೆ. ಇಸ್ರೇಲ್-ಲೆಬನಾನ್ ಗಡಿಯಲ್ಲಿ ಸುಮಾರು 900 ಭಾರತೀಯ ಸೈನಿಕರನ್ನು ನಿಯೋಜಿಸಲಾಗಿದೆ

ಇಸ್ರೇಲ್​-ಲೆಬನಾನ್ ಗಡಿಯಲ್ಲಿ 900 ಭಾರತೀಯ ಸೈನಿಕರು ನಿಯೋಜನೆಗೊಂಡಿರುವುದು ಏಕೆ?
ಲೆಬನಾನ್ ಗಡಿ Image Credit source: First Spot
Follow us
ನಯನಾ ರಾಜೀವ್
|

Updated on: Oct 17, 2023 | 12:35 PM

ಹಮಾಸ್(Hamas) ಭಯೋತ್ಪಾದಕರು ಇಸ್ರೇಲ್​ ಮೇಲೆ ಏಕಾಏಕಿ ದಾಳಿ ನಡೆಸಿದ್ದರು, ಅದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಗಾಜಾದ ಮೇಲೆ ಬಾಂಬ್ ದಾಳಿ ನಡೆಸಿದೆ, ಈ ಸಂಘರ್ಷದಲ್ಲಿ ಇದುವರೆಗೆ ಒಟ್ಟಾರೆ 4 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್-ಹಮಾಸ್ ಯುದ್ಧದಲ್ಲಿ ಹಿಂಸಾಚಾರ ಮತ್ತು ಜೀವಹಾನಿಯ ಬಗ್ಗೆ ಭಾರತ ಸರ್ಕಾರವು ಕಳವಳ ವ್ಯಕ್ತಪಡಿಸುತ್ತಿರುವಾಗ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಮತ್ತು ಇಸ್ರೇಲ್ ಸೇನೆಯ ನಡುವಿನ ಸಂಘರ್ಷದಿಂದಾಗಿ ಉದ್ವಿಗ್ನತೆ ಹೆಚ್ಚಿರುವ ಲೆಬನಾನ್‌ನ ದಕ್ಷಿಣ ಗಡಿಯಲ್ಲಿ ಭಾರತೀಯ ಪಡೆಗಳನ್ನು ನಿಯೋಜಿಸಲಾಗಿದೆ. ಇಸ್ರೇಲ್-ಲೆಬನಾನ್ ಗಡಿಯಲ್ಲಿ ಸುಮಾರು 900 ಭಾರತೀಯ ಸೈನಿಕರನ್ನು ನಿಯೋಜಿಸಲಾಗಿದೆ.

ಭಾರತೀಯ ಪಡೆಗಳು 110 ಕಿಮೀ ಉದ್ದದ ‘ಬ್ಲೂ ಲೈನ್’ನಲ್ಲಿ ನೆಲೆಗೊಂಡಿವೆ.ಇಸ್ರೇಲ್-ಲೆಬನಾನ್ ಗಡಿಯ ಹೊರತಾಗಿ, ಇಸ್ರೇಲ್ ಮತ್ತು ಸಿರಿಯಾ ನಡುವಿನ ಗೋಲನ್ ಹೈಟ್ಸ್‌ನಲ್ಲಿ ಯುಎನ್ ಡಿಸ್‌ಎಂಗೇಜ್‌ಮೆಂಟ್ ಫೋರ್ಸ್ (ಯುಎನ್‌ಡಿಒಎಫ್) ಭಾಗವಾಗಿ ಇನ್ನೂ 200 ಭಾರತೀಯ ಸೈನಿಕರನ್ನು ನಿಯೋಜಿಸಲಾಗಿದೆ.

ಎರಡು ಸಂಘರ್ಷದ ದೇಶಗಳ ನಡುವೆ ಶಾಂತಿ ಕಾಪಾಡುವುದು ಭಾರತೀಯ ಸೈನಿಕರ ಉದ್ದೇಶವಾಗಿದೆ. ಪ್ರಸ್ತುತ, 48 ರಾಷ್ಟ್ರಗಳಿಂದ ಸುಮಾರು 10,500 ಶಾಂತಿಪಾಲಕರನ್ನು ಗಡಿಯಲ್ಲಿ ನಿಯೋಜಿಸಲಾಗಿದೆ. ಲೆಬನಾನ್ ಸಹ ಇಸ್ರೇಲ್ ಮೇಲೆ ಹಲವಾರು ರಾಕೆಟ್​ಗಳನ್ನು ಹಾರಿಸಿತು ಮತ್ತು ಇಸ್ರೇಲ್ ಸೈನ್ಯವು ಪ್ರತಿದಾಳಿ ನಡೆಸಿತು ಅಂತಹ ಪರಿಸ್ಥಿತಿಯಲ್ಲಿ ಲೆಬನಾನ್ ಹಾಗೂ ಇಸ್ರೇಲ್ ಗಡಿಯಲ್ಲಿ ವಿಶ್ವಸಂಸ್ಥೆಯ ಶಾಂತಿ ಸ್ಥಾಪನೆ ಪಡೆ ನಿಯೋಜಿಸಲಾಗಿದೆ ಅದರಲ್ಲಿ ಭಾರತೀಯ ಸೈನಿಕರೂ ಕೂಡ ಇದ್ದಾರೆ.

ಮತ್ತಷ್ಟು ಓದಿ: ನಮ್ಮನ್ನು ಹೆದರಿಸುವ ಪ್ರಯತ್ನ ಮಾಡಬೇಡಿ, ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ: ಇಸ್ರೇಲ್​ಗೆ ಹಮಾಸ್ ಎಚ್ಚರಿಕೆ

ಈ ನಿಯೋಜನೆಯು ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಕೊಡುಗೆ ನೀಡುವ ಮೂಲಕ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಭಾರತದ ಬದ್ಧತೆಯ ಭಾಗವಾಗಿದೆ. ಇಸ್ರೇಲ್ ಪ್ಯಾಲೆಸ್ಟೀನಿಯನ್ ಗುಂಪು ಹಮಾಸ್​ ನಡುವಿನ ಸಂಘರ್ಷದ ಮಧ್ಯೆ ಇಸ್ರೇಲ್ ಲೆಬನಾನ್​​ನ ಹಿಜ್ಬುಲ್ಲಾದಿಂದ ಬೆದರಿಕೆ ಎದುರಿಸುತ್ತಿದೆ.

ಹಿಜ್ಬುಲ್ಲಾ ಸಂಘಟನೆ ಭಾನುವಾರ ಇಸ್ರೇಲ್​ ಮೇಲೆ ಲೆಬನಾನ್ ಗಡಿಯಲ್ಲಿ ಕ್ಷಿಪಣಿಗಳನ್ನು ಹಾರಿಸಿತ್ತು. ಉತ್ತರದ ನಗರವಾದ ನಹರಿಯಾ ಮತ್ತು ಸುತ್ತಮುತ್ತಲಿನ ಪಟ್ಟಣಗಳ ಮೇಲೆ 9 ರಾಕೆಟ್​ಗಳನ್ನು ಹಾರಿಸಲಾಯಿತು. ಯಾವುದೇ ಹಾನಿಯಾಗಿಲ್ಲ. ನಂತರ ರಾಕೆಟ್ ದಾಳಿಯ ಹೊಣೆಯನ್ನು ಹಮಾಸ್ ಹೊತ್ತುಕೊಂಡಿತ್ತು.

ಲೆಬನಾನ್​ನ ಗಡಿಯಿಂದ ನಾಲ್ಕು ಕಿ.ಮೀವರೆಗಿನ ಪ್ರದೇಶವನ್ನು ನಿರ್ಬಂಧಿಸುವುದಾಗಿ ಐಡಿಎಫ್​ ಘೋಷಿಸಿದೆ. ಮತ್ತು ನಾಗರಿಕರಿಗೆ ಪ್ರವೇಶಿಸದಂತೆ ಸೂಚನೆ ನೀಡಿದೆ. ಭಾರತವು ಪ್ರಸ್ತುತ 5,934 ಸೈನಿಕರನ್ನು ವಿಶ್ವದಾದ್ಯಂತ ವಿವಿಧ ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ನಿಯೋಜಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ