AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮನ್ನು ಹೆದರಿಸುವ ಪ್ರಯತ್ನ ಮಾಡಬೇಡಿ, ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ: ಇಸ್ರೇಲ್​ಗೆ ಹಮಾಸ್ ಎಚ್ಚರಿಕೆ

ನಮ್ಮನ್ನು ಹೆದರಿಸುವ ಪ್ರಯತ್ನ ಮಾಡಬೇಡಿ, ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ಹಮಾಸ್(Hamas) ಭಯೋತ್ಪಾದನಾ ಸಂಘಟನೆ ಹೇಳಿದೆ. ಇಸ್ರೇಲ್​ ಗಾಜಾ ಪಟ್ಟಿಯ ಮೇಲೆ ವಾಯು, ಸಮುದ್ರ ಹಾಗೂ ನೆಲದ ಮೂಲಕ ಮೂರು ಮಾರ್ಗದಲ್ಲಿ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಹಮಾಸ್​ನ ಮಿಲಿಟರಿ ವಕ್ತಾರ ಅಬು ಒಬೇಡೆ ನಾವು ಯಾವುದಕ್ಕೂ ಹೆದರುವುದಿಲ್ಲ, ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ನಮ್ಮನ್ನು ಹೆದರಿಸುವ ಪ್ರಯತ್ನ ಮಾಡಬೇಡಿ, ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ: ಇಸ್ರೇಲ್​ಗೆ ಹಮಾಸ್ ಎಚ್ಚರಿಕೆ
ಇಸ್ರೇಲ್Image Credit source: Forbes
ನಯನಾ ರಾಜೀವ್
|

Updated on: Oct 17, 2023 | 8:12 AM

Share

ನಮ್ಮನ್ನು ಹೆದರಿಸುವ ಪ್ರಯತ್ನ ಮಾಡಬೇಡಿ, ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ಹಮಾಸ್(Hamas) ಭಯೋತ್ಪಾದನಾ ಸಂಘಟನೆ ಹೇಳಿದೆ. ಇಸ್ರೇಲ್​ ಗಾಜಾ ಪಟ್ಟಿಯ ಮೇಲೆ ವಾಯು, ಸಮುದ್ರ ಹಾಗೂ ನೆಲದ ಮೂಲಕ ಮೂರು ಮಾರ್ಗದಲ್ಲಿ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಹಮಾಸ್​ನ ಮಿಲಿಟರಿ ವಕ್ತಾರ ಅಬು ಒಬೇಡೆ ನಾವು ಯಾವುದಕ್ಕೂ ಹೆದರುವುದಿಲ್ಲ, ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್​ ಭಯೋತ್ಪಾದಕ ಸಂಘಟನೆ ಹಮಾಸ್ ನಡುವೆ ಆರಂಭವಾದ ರಕ್ತಸಿಕ್ತ ಸಂಘರ್ಷ ಮುಂದುವರೆದಿದೆ. ಎರಡೂ ಕಡೆಯಿಂದ ಸುಮಾರು ನಾಲ್ಕು ಸಾವಿರ ಜನರು ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ ಇರಾನ್ ವಿದೇಶಾಂಗ ಸಚಿವಾಲಯವು ಇಸ್ರೇಲ್​ನ ಗಾಜಾ ಪಟ್ಟಿಯ ಮೇಲಿನ ವಾಯುದಾಳಿಯನ್ನು ನಿಲ್ಲಿಸಿದರೆ, ಒತ್ತೆಯಾಳಾಗಿದ್ದ ಸುಮಾರು 200 ಜನರನ್ನು ಬಿಡುಗಡೆ ಮಾಡಲು ಹಮಾಸ್ ಸಿದ್ಧವಾಗಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಹೇಳಿದೆ. ಆದರೆ ಇರಾನ್​ನ ಈ ಹೇಳಿಕೆಗೆ ಹಮಾಸ್​ ಯಾವುದೇ ಪ್ರತಕ್ರಿಯೆಯನ್ನು ನೀಡಿಲ್ಲ.

ಯುದ್ಧದ ಸಮಯದಲ್ಲಿ ಒತ್ತೆಯಾಳುಗಳಾಗಿದ್ದ ಎಲ್ಲಾ ಇಸ್ರೇಲಿ ನಾಗರಿಕರನ್ನು ಬಿಡುಗಡೆ ಮಾಡಲು ಹಮಾಸ್ ಸಿದ್ಧತೆ ನಡೆಸುತ್ತಿದೆ ಎಂದು ನಾಸರ್ ಕನಾನಿ ಹೇಳಿದ್ದಾರೆ. ಆದಾಗ್ಯೂ ಸಮಸ್ಯೆ ಏನೆಂದರೆ ಗಾಜಾದ ವಿವಿಧ ಭಾಗಗಳ ಮೇಲೆ ಇಸ್ರೇಲ್ ನಿರಂತರ ದಾಳಿಯನ್ನು ನಿಲ್ಲಿಸಿದರೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಹಮಾಸ್ ಸಿದ್ಧವಾಗಿದೆ.

ಮತ್ತಷ್ಟು ಓದಿ: ಹಮಾಸ್ ಉಗ್ರರು ಇಸ್ರೇಲ್​ನಲ್ಲಿ ಮನೆಗಳಿಗೆ ನುಗ್ಗಿ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ ವಿಡಿಯೋ ವೈರಲ್

ಅದೇ ಸಮಯದಲ್ಲಿ,ಇರಾನ್​ನ ವಿದೇಶಾಂಗ ಸಚಿವಾಲಯದ ವಕ್ತಾರ ನಾಸರ್ ಕನಾನಿ, ಹಮಾಸ್​ ಅನ್ನು ಉಲ್ಲೇಖಿಸಿ ಮಾತನಾಡಿ,ಈ ಯುದ್ಧವನ್ನು ಮುಂದುವರೆಸಲು ನಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ. ಇಸ್ರೇಲ್​ ಅನ್ನು ಎದುರಿಸಲು ಸಾಕಷ್ಟು ಮಿಲಿಟರಿ ಸಾಮರ್ಥ್ಯವನ್ನು ಹಿಂದಿದ್ದಾರೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಗಾಜಾದಲ್ಲಿ ಇಂತಹ ಹಿಂಸಾತ್ಮಕ ಪ್ರವೃತ್ತಿ ಮುಂದುವರೆದರೆ ಇರಾನ್ ಕೂಡ ಯುದ್ಧಕ್ಕೆ ಧುಮುಕುತ್ತದೆ ಎಂದು ಇರಾನ್ ಇಸ್ರೇಲ್​ಗೆ ಎಚ್ಚರಿಕೆ ನೀಡಿದೆ. ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್​ ಮೇಲೆ ದಾಳಿ ನಡೆಸಿತ್ತು, ಎರಡೂ ಕಡೆಗಳು ಸೇರಿ 4 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ