ಹಮಾಸ್ ಉಗ್ರರು ಇಸ್ರೇಲ್‌ನಲ್ಲಿ ಮನೆಗಳಿಗೆ ನುಗ್ಗಿ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ ವಿಡಿಯೋ ವೈರಲ್
ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷ ಮುಂದುವರೆದಿದೆ. ಇಸ್ರೇಲ್ ಗಾಜಾ ಮೇಲೆ ದಾಳಿ ನಡೆಸುತ್ತಿದ್ದರೂ ಕೂಡ ಇದು ಹಮಾಸ್ ಉಗ್ರರು ಹಾಗೂ ನಮ್ಮ ನಡುವಿನ ಸಂಘರ್ಷ ಹಾಗಾಗಿ ನಾಗರಿಕರು ಸುರಕ್ಷಿತ ಜಾಗಗಳಿಗೆ ಹೋಗಿ ಎಂದು ಎಂದು ಗಡುವು ನೀಡಿದ್ದರು. ಆದರೆ ಹಮಾಸ್ ಉಗ್ರರು ಇಸ್ರೇಲ್‌ನಲ್ಲಿ ಪ್ರತಿಯೊಬ್ಬರ ಮನೆಗಳಿಗೂ ನುಗ್ಗಿ, ಮಕ್ಕಳು, ಗರ್ಭಿಣಿಯರು, ಹಿರಿಯರು ಎನ್ನುವುದನ್ನೂ ನೋಡದೆ ಗುಂಡಿನ ದಾಳಿ ನಡೆಸಿದ್ದಾರೆ.
ಇಸ್ರೇಲ್(Israel) ಹಾಗೂ ಹಮಾಸ್(Hamas) ನಡುವಿನ ಸಂಘರ್ಷ ಮುಂದುವರೆದಿದೆ. ಇಸ್ರೇಲ್ ಗಾಜಾ(Gaza) ಮೇಲೆ ದಾಳಿ ನಡೆಸುತ್ತಿದ್ದರೂ ಕೂಡ ಇದು ಹಮಾಸ್ ಉಗ್ರರು ಹಾಗೂ ನಮ್ಮ ನಡುವಿನ ಸಂಘರ್ಷ ಹಾಗಾಗಿ ನಾಗರಿಕರು ಸುರಕ್ಷಿತ ಜಾಗಗಳಿಗೆ ಹೋಗಿ ಎಂದು ಎಂದು ಗಡುವು ನೀಡಿದ್ದರು. ಆದರೆ ಹಮಾಸ್ ಉಗ್ರರು ಇಸ್ರೇಲ್‌ನಲ್ಲಿ ಪ್ರತಿಯೊಬ್ಬರ ಮನೆಗಳಿಗೂ ನುಗ್ಗಿ, ಮಕ್ಕಳು, ಗರ್ಭಿಣಿಯರು, ಹಿರಿಯರು ಎನ್ನುವುದನ್ನೂ ನೋಡದೆ ಗುಂಡಿನ ದಾಳಿ ನಡೆಸಿದ್ದಾರೆ.
ಹಾಗೆಯೇ ವಿಡಿಯೋ ಒಂದು ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಹಮಾಸ್ ಉಗ್ರರ ಬಾಡಿ ಕ್ಯಾಮರಾದಿಂದ ಸೆರೆಹಿಡಿಯಲಾಗಿದೆಯಂತೆ ಆದರೆ ಯಾವಾಗ ಇದನ್ನು ಚಿತ್ರೀಕರಿಸಲಾಗಿದೆ ಎನ್ನುವ ಕುರಿತು ಮಾಹಿತಿ ಇಲ್ಲ.
ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿ ಹಮಾಸ್ ಹಠಾತ್ ದಾಳಿಯ ಸಮಯದಲ್ಲಿ ಇದನ್ನು ದಾಖಲಿಸಲಾಗಿದೆ ಎಂದು ಕೆಲವು ವರದಿಗಳು ಹೇಳಿವೆ. ಮೂರು ನಿಮಿಷಗಳ ಕ್ಲಿಪ್ಗಳಲ್ಲಿ ಭಾರೀ ಶಸ್ತ್ರಾಸ್ತ್ರ ಸಜ್ಜಿತ ಹಮಾಸ್ ಉಗ್ರರು ಬೈಕ್ನಲ್ಲಿ ಬಂದು ಗಾಜಾ ಹಾಗೂ ದಕ್ಷಿಣ ಇಸ್ರೇಲ್ನ್ನು ಪ್ರತ್ಯೇಕಿಸುವ ಇಸ್ರೇಲ್ ಗಡಿಯನ್ನು ದಾಟುತ್ತಿರುವುದನ್ನು ಕಾಣಬಹುದು.
ಹಮಾಸ್ ಉಗ್ರರು ಹತ್ತಾರು ಮನೆಗಳಿರುವ ಪ್ರದೇಶಗಳಿಗೆ ನುಗ್ಗುತ್ತಾರೆ, ಮನ ಬಂದಂತೆ ಮನೆಗಳ ಮೇಲೆ ಗುಂಡಿನ ದಾಳಿ ನಡೆಸುತ್ತಾರೆ. ಬಳಿಕ ಮನೆಯ ಒಳಗೆ ಪ್ರವೇಶಿಸಿ ಜನರನ್ನು ಕೊಲ್ಲಲು ಹುಡುಕಾಟ ಆರಂಭಿಸುತ್ತಾರೆ. ಆದರೆ ಅದೃಷ್ಟವಶಾತ್ ಎಲ್ಲರೂ ಮುಂಚಿತವಾಗಿಯೇ ಆ ಸ್ಥಳವನ್ನು ತೊರೆದು ಬೇರೆಡೆಗೆ ಹೋಗಿರುವುದು ಸ್ಪಷ್ಟವಾಗುತ್ತದೆ. ಹಮಾಸ್ ಉಗ್ರರು ಮನೆಯಿಂದ ಹೊರಹೋಗುವುದರೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ. ಹಾಗೆಯೇ ಈ ಉಗ್ರನನ್ನು ಕೊಂದಿರುವುದಾಗಿ ಇಸ್ರೇಲ್ ತಿಳಿಸಿದೆ.
⚠️Trigger Warning ⚠️
RAW FOOTAGE: Hamas jihadists squad invasion and killing spree of an innocent Israeli community.
The filmed terrorist was neutralized by Israeli security forces. pic.twitter.com/4sKuxl9uRq
— Israel Defense Forces (@IDF) October 15, 2023
ಇಸ್ರೇಲ್ ಮತ್ತು ಹಮಾಸ್ ಗುಂಪಿನ ನಡುವಿನ ಮಾರಣಾಂತಿಕ ಯುದ್ಧ ಸೋಮವಾರ 10 ನೇ ದಿನಕ್ಕೆ ಕಾಲಿಟ್ಟಿದೆ. ಅಕ್ಟೋಬರ್ 7 ರಂದು, ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ದಾಳಿ ಮಾಡಿದರು ಮತ್ತು ಕನಿಷ್ಠ 1,300 ಜನರನ್ನು ಕೊಂದರು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸಿತು. ಇತ್ತೀಚಿನ ನವೀಕರಣಗಳ ಪ್ರಕಾರ, ಎರಡೂ ಕಡೆಗಳಲ್ಲಿ ಕನಿಷ್ಠ 4,000 ಜನರು ಕೊಲ್ಲಲ್ಪಟ್ಟಿದ್ದಾರೆ.
ಮತ್ತಷ್ಟು ಓದಿ: ಗಾಜಾ ಪ್ರದೇಶವನ್ನು ಖಾಲಿ ಮಾಡಲು ಇಸ್ರೇಲ್ ಕೊಟ್ಟಿದ್ದ ಗಡುವು ಮುಗಿಯುತ್ತಿದ್ದಂತೆ 10 ಲಕ್ಷ ಮಂದಿ ಪಲಾಯನ
ಅಕ್ಟೋಬರ್ 7 ರಂದು ಗಾಜಾ ಗಡಿಯ ಸಮೀಪವಿರುವ ಟ್ರೈಬ್ ಆಫ್ ನೋವಾ ಮ್ಯೂಸಿಕ್ ಫೆಸ್ಟಿವಲ್ನಲ್ಲಿ ಹಮಾಸ್ ಬಂದೂಕುಧಾರಿಗಳು ದಾಳಿ ನಡೆಸಿ 250ಕ್ಕೂ ಹೆಚ್ಚು ಮಂದಿಯ ಪ್ರಾಣ ತೆಗೆದಿದ್ದರು. ಇಸ್ರೇಲಿ ಪಡೆಗಳು ಗಾಜಾ(Gaza)ದಲ್ಲಿ ಪ್ರಮುಖ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ. ಗಾಜಾ ಮೇಲೆ ವಾಯು, ಸಮುದ್ರ ಹಾಗೂ ಭೂಮಿ ಮೂಲಕ ದಾಳಿ ನಡೆಸುತ್ತೇವೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮೆರಿಕ ಸೇರಿದಂತೆ ಹಲವು ಪಾಶ್ಚಿಮಾತ್ಯ ಸರ್ಕಾರಗಳು ಭಯೋತ್ಪಾದಕ ಸಂಘಟನೆ ಹಮಾಸ್ನನ್ನು ನಾಶ ಮಾಡುವುದಾಗಿ ಪ್ರತಿಜ್ಞೆ ಮಾಡಿವೆ.
ಸೇನೆಯು ಗಾಜಾ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಒಟ್ಟುಗೂಡಿಸಿದೆ ಮತ್ತು ಅಂತಿಮ ಆಜ್ಞೆಗಾಗಿ ಕಾಯುತ್ತಿದೆ. ಸೇನೆಯು ಆರಂಭದಲ್ಲಿ ಈ ವಾರಾಂತ್ಯದೊಳಗೆ ಗಾಜಾವನ್ನು ಪ್ರವೇಶಿಸಲು ಯೋಜಿಸಿತ್ತು. ಆದಾಗ್ಯೂ, ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಇದು ಕೆಲವು ದಿನಗಳ ಕಾಲ ವಿಳಂಬವಾಯಿತು. ಮೋಡ ಕವಿದ ವಾತಾವರಣವು ಪೈಲಟ್‌ಗಳು ಮತ್ತು ಡ್ರೋನ್ ಆಪರೇಟರ್‌ಗಳಿಗೆ ನೆಲದ ಪಡೆಗಳಿಗೆ ವಾಯು ರಕ್ಷಣೆಯನ್ನು ಒದಗಿಸಲು ಅನುಕೂಲಕರವಾಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.
ಇಸ್ರೇಲ್‌ನ ಸೇನೆಯು ದಕ್ಷಿಣ ಇಸ್ರೇಲ್‌ನ ಗಾಜಾ ಗಡಿಯಲ್ಲಿ 30,000 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದೆ. IDF ಪ್ರಕಾರ, ಕನಿಷ್ಠ 10,000 ಸೈನಿಕರು ಗಾಜಾ ಕಡೆಗೆ ಮುನ್ನಡೆಯುತ್ತಿದ್ದಾರೆ. ಇಸ್ರೇಲಿ ಪಡೆಗಳು ಮತ್ತು ಹಮಾಸ್ ನಡುವಿನ ರಕ್ತಸಿಕ್ತ ಯುದ್ಧವು ಅಕ್ಟೋಬರ್ 7 ರಂದು ಪ್ರಾರಂಭವಾದಾಗಿನಿಂದ, 3,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ