ಗಾಜಾ ಪ್ರದೇಶವನ್ನು ಖಾಲಿ ಮಾಡಲು ಇಸ್ರೇಲ್​ ಕೊಟ್ಟಿದ್ದ ಗಡುವು ಮುಗಿಯುತ್ತಿದ್ದಂತೆ 10 ಲಕ್ಷ ಮಂದಿ ಪಲಾಯನ

ಗಾಜಾದ ಪರಿಸ್ಥಿತಿ ತೀರಾ ಹದಗೆಟ್ಟಿದೆ, ಹಮಾಸ್​ನ ಇಸ್ರೇಲ್​ ಮೇಲಿನ ದಾಳಿಯ ಪ್ರತಿಯಾಗಿ ಇಸ್ರೇಲ್​ ಗಾಜಾ ಮೇಲೆ ದಾಳಿ ನಡೆಸುತ್ತಿದೆ. ಗಾಜಾದಲ್ಲಿರುವ ಜನರಿಗೆ ದಕ್ಷಿಣ ಭಾಗಕ್ಕೆ ತೆರಳುವಂತೆ 3 ಗಂಟೆಗಳ ಗಡುವು ನೀಡಿತ್ತು. ಗಡುವು ಮುಕ್ತಾಯವಾಗುತ್ತಿದ್ದಂತೆ 1 ಮಿಲಿಯನ್ ಮಂದಿ ಗಾಜಾದಿಂದ ಪಲಾಯನ ಮಾಡಿದ್ದಾರೆ.

ಗಾಜಾ ಪ್ರದೇಶವನ್ನು ಖಾಲಿ ಮಾಡಲು ಇಸ್ರೇಲ್​ ಕೊಟ್ಟಿದ್ದ ಗಡುವು ಮುಗಿಯುತ್ತಿದ್ದಂತೆ 10 ಲಕ್ಷ ಮಂದಿ ಪಲಾಯನ
ಗಾಜಾImage Credit source: NDTV
Follow us
ನಯನಾ ರಾಜೀವ್
|

Updated on: Oct 16, 2023 | 7:44 AM

ಗಾಜಾ(Gaza)ದ ಪರಿಸ್ಥಿತಿ ತೀರಾ ಹದಗೆಟ್ಟಿದೆ, ಹಮಾಸ್​ನ ಇಸ್ರೇಲ್​ ಮೇಲಿನ ದಾಳಿಯ ಪ್ರತಿಯಾಗಿ ಇಸ್ರೇಲ್(Israel)ಗಾಜಾ ಮೇಲೆ ದಾಳಿ ನಡೆಸುತ್ತಿದೆ. ಗಾಜಾದಲ್ಲಿರುವ ಜನರಿಗೆ ದಕ್ಷಿಣ ಭಾಗಕ್ಕೆ ತೆರಳುವಂತೆ 3 ಗಂಟೆಗಳ ಗಡುವು ನೀಡಿತ್ತು. ಗಡುವು ಮುಕ್ತಾಯವಾಗುತ್ತಿದ್ದಂತೆ 1 ಮಿಲಿಯನ್ ಮಂದಿ ಗಾಜಾದಿಂದ ಪಲಾಯನ ಮಾಡಿದ್ದಾರೆ.

ತಾವು ವಾಯು, ಸಮುದ್ರ, ಭೂಮಿ ಮೂಲಕ ದಾಳಿ ನಡೆಸುವುದಾಗಿ ಇಸ್ರೇಲ್ ಎಚ್ಚರಿಕೆಯನ್ನು ನೀಡಿತ್ತು. ಈ ಕಾರಿಡಾರ್​ನಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಯಾವುದೇ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿತ್ತು.

ಗಾಜಾ ನಗರ ಹಾಗೂ ಉತ್ತರ ಗಾಜಾದ ಜನರಿಗೆ ದಕ್ಷಿಣ ಭಾಗಕ್ಕೆ ತೆರಳಲು ಮುಂಚೆಯೇ ಎಚ್ಚರಿಕೆ ನೀಡಲಾಗಿದೆ ಎಂದು ಸೇನೆ ಹೇಳಿದೆ. ಗಾಜಾದಲ್ಲಿ 2.3 ಮಿಲಿಯನ್ ನಾಗರಿಕರು ಆಹಾರ, ನೀರು, ಭದ್ರತೆ ವಿಚಾರದಲ್ಲಿ ಹೋರಾಟವನ್ನು ಎದುರಿಸುತ್ತಿದ್ದಾರೆ.

ಹಮಾಸ್ ಭಯೋತ್ಪಾದಕರು ಇಸ್ರೇಲ್ ಮೇಲೆ ದಾಳಿ ಮಾಡಿದ ಒಂದು ವಾರದ ನಂತರ, ಗಾಜಾದಲ್ಲಿ ಪ್ಯಾಲೆಸ್ತೀನ್​ ಮೂಲಭೂತ ಅಗತ್ಯಗಳಿಂದ ವಂಚಿತರಾಗಿದ್ದಾರೆ.

ಮತ್ತಷ್ಟು ಓದಿ: ಹಮಾಸ್ ಕಮಾಂಡರ್​ ಹತ್ಯೆ, ಮೂರು ಮಾರ್ಗದಿಂದ ಗಾಜಾ ಮೇಲೆ ದಾಳಿ ನಡೆಸಲು ಇಸ್ರೇಲ್ ಸಿದ್ಧತೆ

ಗಾಜಾದಲ್ಲಿ ಹಮಾಸ್ ಉಗ್ರರ ವಿರುದ್ಧ ಹೋರಾಡಲು ಮೊದಲು ಜನರನ್ನು ಅಲ್ಲಿಂದ ಸ್ಥಳಾಂತರಿಸಲು ಇಸ್ರೇಲ್ ಪ್ರಯತ್ನಿಸುತ್ತಿದೆ. ಈ ಸಂಘರ್ಷದಲ್ಲಿ 1300ಕ್ಕೂ ಹೆಚ್ಚು ಇಸ್ರೇಲಿಯನ್ನರು ಕೊಲ್ಲಲ್ಪಟ್ಟಿದ್ದಾರೆ. 1973ರಲ್ಲಿ ಈಜಿಪ್ಟ್​ ಮತ್ತು ಸಿರಿಯಾದೊಂದಿಗಿನ ಸಂಘರ್ಷದ ಬಳಿಕ ಇಸ್ರೇಲ್​ ಇಂಥದ್ದೊಂದು ಭಯಾನಕ ದಾಳಿಗೆ ಸಾಕ್ಷಿಯಾಗಿದೆ.

ಈ ಸಂಘರ್ಷದಲ್ಲಿ 2329 ಮಂದಿ ಪ್ಯಾಲೆಸ್ತೀನಿಯನ್ನರು ಕೂಡ ಸಾವನ್ನಪ್ಪಿದ್ದಾರೆ. 2014 ರಲ್ಲಿ ಇಸ್ರೇಲ್​-ಗಾಜಾ ನಡುವೆ ನಡೆದ ಯುದ್ಧಕ್ಕಿಂತ ಇದು ಹೆಚ್ಚು. ಸೇನೆಯು ಆರಂಭದಲ್ಲಿ ಈ ವಾರಾಂತ್ಯದೊಳಗೆ ಗಾಜಾವನ್ನು ಪ್ರವೇಶಿಸಲು ಯೋಜಿಸಿತ್ತು. ಆದಾಗ್ಯೂ, ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಇದು ಕೆಲವು ದಿನಗಳ ಕಾಲ ವಿಳಂಬವಾಯಿತು. ಮೋಡ ಕವಿದ ವಾತಾವರಣವು ಪೈಲಟ್‌ಗಳು ಮತ್ತು ಡ್ರೋನ್ ಆಪರೇಟರ್‌ಗಳಿಗೆ ನೆಲದ ಪಡೆಗಳಿಗೆ ವಾಯು ರಕ್ಷಣೆಯನ್ನು ಒದಗಿಸಲು ಅನುಕೂಲಕರವಾಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.

ಇಸ್ರೇಲ್‌ನ ಸೇನೆಯು ದಕ್ಷಿಣ ಇಸ್ರೇಲ್‌ನ ಗಾಜಾ ಗಡಿಯಲ್ಲಿ 30,000 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದೆ. IDF ಪ್ರಕಾರ, ಕನಿಷ್ಠ 10,000 ಸೈನಿಕರು ಗಾಜಾ ಕಡೆಗೆ ಮುನ್ನಡೆಯುತ್ತಿದ್ದಾರೆ. ಇಸ್ರೇಲಿ ಪಡೆಗಳು ಮತ್ತು ಹಮಾಸ್ ನಡುವಿನ ರಕ್ತಸಿಕ್ತ ಯುದ್ಧವು ಅಕ್ಟೋಬರ್ 7 ರಂದು ಪ್ರಾರಂಭವಾದಾಗಿನಿಂದ, 3,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಇಸ್ರೇಲ್ ಉತ್ತರ ಗಾಜಾದಲ್ಲಿರುವ 1.1 ಮಿಲಿಯನ್ ನಿವಾಸಿಗಳನ್ನು ಬಿಟ್ಟು ದಕ್ಷಿಣ ಭಾಗಕ್ಕೆ ತೆರಳುವಂತೆ ಕೇಳಿಕೊಂಡಿತ್ತು , ಈ ಕ್ರಮವು ಯುಎನ್ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ವ್ಯಾಪಕ ಖಂಡನೆಗೆ ಒಳಗಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ