ಇಸ್ರೇಲ್-ಗಾಜಾ ಸಂಘರ್ಷ: ತುರ್ತು ಸಭೆ ಕರೆದ ಇಸ್ಲಾಮಿಕ್ ರಾಷ್ಟ್ರಗಳ ಗುಂಪು
ಸೌದಿ ಅರೇಬಿಯಾ ಸಾಮ್ರಾಜ್ಯದ ಆಹ್ವಾನದ ಮೇರೆಗೆ ಸಂಘಟನೆಯ ಕಾರ್ಯಕಾರಿ ಸಮಿತಿಯು ಗಾಜಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಲ್ಬಣಗೊಳ್ಳುತ್ತಿರುವ ಮಿಲಿಟರಿ ಪರಿಸ್ಥಿತಿ, ನಾಗರಿಕರ ಜೀವನ ಮತ್ತು ಪ್ರದೇಶದ ಒಟ್ಟಾರೆ ಭದ್ರತೆ ಮತ್ತು ಸ್ಥಿರತೆ ಮತ್ತು ಹದಗೆಡುತ್ತಿರುವ ಪರಿಸ್ಥಿತಿಗಳನ್ನು ಪರಿಹರಿಸಲು ಸಚಿವ ಮಟ್ಟದಲ್ಲಿ ತುರ್ತು ಸಭೆಯನ್ನು ಕರೆಯುತ್ತಿದೆ ಎಂದು ಒಐಸಿ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
ದೆಹಲಿ ಅಕ್ಟೋಬರ್ 14: ಇಸ್ರೇಲ್-ಗಾಜಾ ಯುದ್ಧದ ಕುರಿತು (Israel-Gaza war) ಚರ್ಚಿಸಲು ಇಸ್ಲಾಮಿಕ್ ರಾಷ್ಟ್ರಗಳ ಉನ್ನತ ಗುಂಪು ಸೌದಿ ಅರೇಬಿಯಾದಲ್ಲಿ “ತುರ್ತು ಸಭೆ” ಕರೆದಿದೆ. ಇಸ್ಲಾಮಿಕ್ ಸಹಕಾರ ಸಂಘಟನೆ (OIC) “ಮಿಲಿಟರಿ ಉಲ್ಬಣ” ಮತ್ತು “ಗಾಜಾದಲ್ಲಿ ರಕ್ಷಣೆಯಿಲ್ಲದ ನಾಗರಿಕರಿಗೆ ಇರುವ ಬೆದರಿಕೆ”ಯನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ಇಸ್ಲಾಮಿಕ್ ಶೃಂಗಸಭೆಯ ಪ್ರಸ್ತುತ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿರುವ ಸೌದಿ ಅರೇಬಿಯಾ (Saudi Arabia) ಬುಧವಾರ ಜೆಡ್ಡಾದಲ್ಲಿ ನಡೆಯಲಿರುವ ಸಭೆಗೆ ಸದಸ್ಯ ರಾಷ್ಟ್ರಗಳನ್ನು ಆಹ್ವಾನಿಸಿದೆ.
ಸೌದಿ ಅರೇಬಿಯಾ ಸಾಮ್ರಾಜ್ಯದ ಆಹ್ವಾನದ ಮೇರೆಗೆ ಸಂಘಟನೆಯ ಕಾರ್ಯಕಾರಿ ಸಮಿತಿಯು ಗಾಜಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಲ್ಬಣಗೊಳ್ಳುತ್ತಿರುವ ಮಿಲಿಟರಿ ಪರಿಸ್ಥಿತಿ, ನಾಗರಿಕರ ಜೀವನ ಮತ್ತು ಪ್ರದೇಶದ ಒಟ್ಟಾರೆ ಭದ್ರತೆ ಮತ್ತು ಸ್ಥಿರತೆ ಮತ್ತು ಹದಗೆಡುತ್ತಿರುವ ಪರಿಸ್ಥಿತಿಗಳನ್ನು ಪರಿಹರಿಸಲು ಸಚಿವ ಮಟ್ಟದಲ್ಲಿ ತುರ್ತು ಸಭೆಯನ್ನು ಕರೆಯುತ್ತಿದೆ ಎಂದು ಒಐಸಿ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
ನಾಲ್ಕು ಖಂಡಗಳಲ್ಲಿ ಹರಡಿರುವ 57 ರಾಷ್ಟ್ರಗಳ ಸದಸ್ಯತ್ವವನ್ನು ಹೊಂದಿರುವ ವಿಶ್ವಸಂಸ್ಥೆಯ ನಂತರ ಒಐಸಿ ಎರಡನೇ ಅತಿದೊಡ್ಡ ಸಂಸ್ಥೆಯಾಗಿದೆ. ಇದು ತನ್ನನ್ನು “ಮುಸ್ಲಿಂ ಪ್ರಪಂಚದ ಸಾಮೂಹಿಕ ಧ್ವನಿ” ಎಂದು ಕರೆದುಕೊಳ್ಳುತ್ತದೆ. ಸೌದಿ ಅರೇಬಿಯಾ ಇಸ್ರೇಲ್‌ನೊಂದಿಗಿನ ಸಂಬಂಧಗಳನ್ನು ಸಾಮಾನ್ಯೀಕರಿಸುವ ಮಾತುಕತೆಗಳನ್ನು ಸ್ಥಗಿತಗೊಳಿಸಿದ ದಿನದಂದೇ ಈ ತುರ್ತು ಸಭೆಯ ಕರೆಯಲಾಗಿದೆ.
ಹಮಾಸ್ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದೊಡ್ಡ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿದ್ದು ಈ ದಾಳಿಯಲ್ಲಿ 1,300 ಜನರು ಸಾವಿಗೀಡಾಗಿದ್ದಾರೆ. ಪ್ರತೀಕಾರದ ಬಾಂಬ್ ದಾಳಿಯಲ್ಲಿ ಇಸ್ರೇಲ್ ಗಾಜಾ ಪಟ್ಟಿಯಲ್ಲಿ ಕನಿಷ್ಠ 2,215 ಜನರನ್ನು ಕೊಂದಿತು.
ಇದನ್ನೂ ಓದಿ: ಇಸ್ರೇಲ್- ಹಮಾಸ್ ಸಂಘರ್ಷ; ಶೆಲ್ ದಾಳಿಯಲ್ಲಿ ರಾಯಿಟರ್ಸ್ ಪತ್ರಕರ್ತ ಸಾವು, 6 ಮಂದಿಗೆ ಗಾಯ
“ಸೌದಿ ಅರೇಬಿಯಾ ಸಂಭವನೀಯ ಸಾಮಾನ್ಯೀಕರಣದ ಕುರಿತು ಚರ್ಚೆಯನ್ನು ನಿಲ್ಲಿಸಲು ನಿರ್ಧರಿಸಿದ್ದು ಮತ್ತು ಯುಎಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ” ಎಂದು ಚರ್ಚೆಗಳ ಬಗ್ಗೆ ತಿಳಿದಿರುವ ಮೂಲವೊಂದು ಸುದ್ದಿ ಸಂಸ್ಥೆ ಎಎಫ್ಪಿ ಗೆ ತಿಳಿಸಿದೆ.
ಶುಕ್ರವಾರ ಸೌದಿ ಅರೇಬಿಯಾ ಗಾಜಾದೊಳಗೆ ಪ್ಯಾಲೆಸ್ತೀನಿಯರ ಸ್ಥಳಾಂತರವನ್ನು ಮತ್ತು “ರಕ್ಷಣೆಯಿಲ್ಲದ ನಾಗರಿಕರ” ಮೇಲಿನ ದಾಳಿಯನ್ನು ಖಂಡಿಸಿತು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ