Israel Hamas Conflict: ಇಸ್ರೇಲ್​ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ 29 ಮಂದಿ ಅಮೆರಿಕನ್ನರು ಸಾವು

ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ 29 ಮಂದಿ ಅಮೆರಿಕ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ತಿಳಿಸಿದೆ. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು ಈ ಮಾಹಿತಿಯನ್ನು ನೀಡಿದ್ದಾರೆ. ಇದಕ್ಕೂ ಮುನ್ನ ಹಮಾಸ್ ದಾಳಿಯಲ್ಲಿ 27 ಮಂದಿ ಮೃತಪಟ್ಟಿರುವುದು ದೃಢಪಟ್ಟಿತ್ತು. ಇನ್ನೂ 15 ಮಂದಿ ನಾಗರಿಕರು ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶನಿವಾರದಂದು US ಸರ್ಕಾರವು ಗಾಜಾದಲ್ಲಿರುವ ತನ್ನ ನಾಗರಿಕರಿಗೆ ದಕ್ಷಿಣಕ್ಕೆ ರಫಾ ಗಡಿ ದಾಟಲು ಸಲಹೆ ನೀಡಿತು. ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು, ನಾವು ಗಾಜಾದಲ್ಲಿರುವ ಅಮೆರಿಕದ ನಾಗರಿಕರಿಗೆ ರಫಾ ಗಡಿಗೆ ತೆರಳಲು ತಿಳಿಸಿದ್ದೇವೆ, ಆದ್ದರಿಂದ ಅಗತ್ಯವಿದ್ದಲ್ಲಿ ನಾಗರಿಕರನ್ನು ಸ್ಥಳಾಂತರಿಸುವುದು ಸಾಧ್ಯ ಎಂದು ಹೇಳಿದರು.

Image Credit source: NDTV
Follow us
ನಯನಾ ರಾಜೀವ್
|

Updated on: Oct 15, 2023 | 9:08 AM

ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ 29 ಮಂದಿ ಅಮೆರಿಕ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ತಿಳಿಸಿದೆ. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು ಈ ಮಾಹಿತಿಯನ್ನು ನೀಡಿದ್ದಾರೆ. ಇದಕ್ಕೂ ಮುನ್ನ ಹಮಾಸ್ ದಾಳಿಯಲ್ಲಿ 27 ಮಂದಿ ಮೃತಪಟ್ಟಿರುವುದು ದೃಢಪಟ್ಟಿತ್ತು. ಇನ್ನೂ 15 ಮಂದಿ ನಾಗರಿಕರು ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶನಿವಾರದಂದು US ಸರ್ಕಾರವು ಗಾಜಾದಲ್ಲಿರುವ ತನ್ನ ನಾಗರಿಕರಿಗೆ ದಕ್ಷಿಣಕ್ಕೆ ರಫಾ ಗಡಿ ದಾಟಲು ಸಲಹೆ ನೀಡಿತು. ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು, ನಾವು ಗಾಜಾದಲ್ಲಿರುವ ಅಮೆರಿಕದ ನಾಗರಿಕರಿಗೆ ರಫಾ ಗಡಿಗೆ ತೆರಳಲು ತಿಳಿಸಿದ್ದೇವೆ, ಆದ್ದರಿಂದ ಅಗತ್ಯವಿದ್ದಲ್ಲಿ ನಾಗರಿಕರನ್ನು ಸ್ಥಳಾಂತರಿಸುವುದು ಸಾಧ್ಯ ಎಂದು ಹೇಳಿದರು.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್​ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ ಇಸ್ರೇಲ್ ತನ್ನ ಶತ್ರುಗಳೊಂದಿಗೆ ವ್ಯವಹರಿಸಲು ಸಹಾಯ ಮಾಡುತ್ತದೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಶನಿವಾರ ಹೇಳಿದ್ದಾರೆ.

ಇಸ್ರೇಲ್​​ ಮತ್ತು ಹಮಾಸ್​​ ಭಯೋತ್ಪಾದಕರ ನಡುವೆ ನಡೆಯುತ್ತಿರುವ ಯುದ್ಧ 8ನೇ ದಿನಕ್ಕೆ ಕಾಲಿಟ್ಟಿದೆ. ಒಂದು ಕಡೆ ಇಸ್ರೇಲ್​​​ ಗಾಜಾ ಪಟ್ಟಿಯ ಮೇಲೆ ದಾಳಿ ಮಾಡಿ ಹಮಾಸ್​​ ಉಗ್ರರ ನೆಲೆಯನ್ನು ನಾಶ ಮಾಡುತ್ತಿದೆ. ಇನ್ನೊಂದು ಕಡೆ ಹಮಾಸ್​ ಉಗ್ರರರು, ಇಸ್ರೇಲ್​​​​ ನಾಗರಿಕರನ್ನು ಹಾಗೂ ವಿದೇಶಿಗರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿತ್ತು. ಈ ಕಾರಣಕ್ಕೆ ಹಮಾಸ್​​ ಭಯೋತ್ಪಾದಕರು ಇಸ್ರೇಲ್​​ಗೆ ಬೆದರಿಕೆಯನ್ನು ಹಾಕಿತ್ತು.

ಯುದ್ಧವನ್ನು ನಿಲ್ಲಿಸಿ ಇಲ್ಲವೆಂದರೆ ನಮ್ಮ ವಶದಲ್ಲಿರುವ ಇಸ್ರೇಲ್​​​​ ನಾಗರಿಕರನ್ನು ಹಾಗೂ ವಿದೇಶಿಗರನ್ನು ಕೊಲ್ಲುವುದಾಗಿ ಹೇಳಿತ್ತು. ಆದರೆ ಈ ಯಾವ ಬೆದರಿಕೆಗೂ ಜಗ್ಗದ ಇಸ್ರೇಲ್​​ ಇದೀಗ ಗಾಜಾ ಪಟ್ಟಿಯಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಇಸ್ರೇಲ್​ ಸೈನಿಕರು ದಾಳಿ ನಡೆಸಿ 250 ಮಂದಿಯನ್ನು ರಕ್ಷಿಸಿದ್ದಾರೆ ಎಂದು ಹೇಳಲಾಗಿದೆ.

ಆದರೆ ಹಮಾಸ್​​ ಉಗ್ರರು ನೀಡಿರುವ ಮಾಹಿತಿ ಪ್ರಕಾರ ಇಸ್ರೇಲ್​​ 24 ಗಂಟೆಯಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 13 ಇಸ್ರೇಲಿಗರು ಮತ್ತು ವಿದೇಶಿ ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಹಮಾಸ್ ಮಾಡಿದ ತಪ್ಪಿಗೆ ಇಂದು ಇಡೀ ಗಾಜಾ ಪಟ್ಟಿ ಹಾಗೂ ಇಸ್ರೇಲ್​​ ನಾಗರಿಕರು ಶಿಕ್ಷೆ ಅನುಭವಿಸುತ್ತಿದ್ದಾರೆ. ಕರಾಳ ಯುದ್ಧಕ್ಕೆ ಹಮಾಸ್​​ ಉಗ್ರರು ಸಾಕ್ಷಿಯಾಗಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ