ಒತ್ತೆಯಾಳು ಇಸ್ರೇಲ್ ಯುವತಿಯ ವಿಡಿಯೋ ಬಿಡುಗಡೆ ಮಾಡಿದ ಹಮಾಸ್, ದಯವಿಟ್ಟು ನನ್ನನ್ನು ಬಿಡುಗಡೆ ಮಾಡಿ
ಇಸ್ರೇಲ್ನ ಕಿಬ್ಬುಟ್ಜ್ ರೀಮ್‌ನಲ್ಲಿ ನಡೆದ ಸೂಪರ್‌ನೋವಾ ಸುಕ್ಕೋಟ್ ಸಂಗೀತ ಉತ್ಸವದ ಮೇಲೆಯೂ ದಾಳಿ ಮಾಡಿದ್ದಾರೆ. ಅಲ್ಲಿದ್ದ ಇಸ್ರೇಲ್ ನಾಗರಿಕರನ್ನು ಅಪಹರಣ ಮಾಡಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಈ ಒತ್ತೆಯಾಳುಗಳಲ್ಲಿ 21 ವರ್ಷದ ಇಸ್ರೇಲಿ ಯುವತಿ ಶೋಹಮ್ ಕೂಡ ಒಬ್ಬರು. ಇದೀಗ ಈಕೆಯ ಒಂದು ವಿಡಿಯೋವನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದಾರೆ.
ಇಸ್ರೇಲ್ (Israel) ಮತ್ತು ಹಮಾಸ್ (Hamas) ಭಯೋತ್ಪಾದಕ ನಡುವೆ ನಡೆದ ಭಾರೀ ಯುದ್ಧದಿಂದ ಅನೇಕ ನಾಗರಿಕರ ಸಾವು-ನೋವುಗಳ ಸಂಭವಿಸಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಮಾಡಿ ಹಮಾಸ್ ಉಗ್ರರು, ಇಸ್ರೇಲ್ನ ಕಿಬ್ಬುಟ್ಜ್ ರೀಮ್‌ನಲ್ಲಿ ನಡೆದ ಸೂಪರ್‌ನೋವಾ ಸುಕ್ಕೋಟ್ ಸಂಗೀತ ಉತ್ಸವದ ಮೇಲೆಯೂ ದಾಳಿ ಮಾಡಿದ್ದಾರೆ. ಅಲ್ಲಿದ್ದ ಇಸ್ರೇಲ್ ನಾಗರಿಕರನ್ನು ಅಪಹರಣ ಮಾಡಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಈ ಒತ್ತೆಯಾಳುಗಳಲ್ಲಿ 21 ವರ್ಷದ ಇಸ್ರೇಲಿ ಯುವತಿ ಶೋಹಮ್ ಕೂಡ ಒಬ್ಬರು. ಇದೀಗ ಈಕೆಯ ಒಂದು ವಿಡಿಯೋವನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹಮಾಸ್ ದಾಳಿ ಮಾಡಿದ ವೇಳೆ ಆಕೆಯ ಕೈಗೆ ಗಂಭೀರ ಗಾಯಗಳಾಗಿತ್ತು. ಇದೀಗ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಮಾಸ್ ಉಗ್ರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಹಮಾಸ್ ಉಗ್ರರು ಶೋಹಮ್‌ಗೆ ಚಿಕಿತ್ಸೆ ನೀಡುತ್ತಿದ್ದು, ಆಕೆ ಕಾಳಜಿಯನ್ನು ವಹಿಸಿದೆ ಎಂದು ಈ ವಿಡಿಯೋ ಮೂಲಕ ಇಸ್ರೇಲ್ಗೆ ತಿಳಿಸಿದೆ. ಇನ್ನು ಶೋಹಮ್ ದಯವಿಟ್ಟು ನನ್ನನ್ನು ಬಿಡುಗಡೆ ಮಾಡಿ. ನನ್ನ ಕುಟುಂಬವನ್ನು ನೋಡಬೇಕು. ಅದಷ್ಟು ಬೇಗ ನನ್ನನ್ನು ಇಲ್ಲಿಂದ ಹೊರಗೆ ಕರೆದುಕೊಂಡು ಹೋಗಿ ಎಂದು ಮನವಿ ಮಾಡಿದ್ದಾಳೆ. ಈಗಾಗಲೇ ಶೋಹಮ್ ಅವರ ಮನೆಯವರಿಗೆ ಆಕೆ ಅಪಹರಣ ಆಗಿರುವ ಬಗ್ಗೆ ಇಸ್ರೇಲ್ ಸೇನೆ ತಿಳಿಸಿದೆ.
ಇದನ್ನೂ ಓದಿ:ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ 29 ಮಂದಿ ಅಮೆರಿಕನ್ನರು ಸಾವು
ಹಮಾಸ್ ಉಗ್ರರು ಬಿಡುಗಡೆ ಮಾಡಿದ ವಿಡಿಯೋ
⚡️Hamas has published a video of their troops “providing medical care to a female prisoner in Gaza, who was captured on the first day of the war” pic.twitter.com/TNW2REHkgp
— War Monitor (@WarMonitors) October 16, 2023
ಇಸ್ರೇಲ್ ಸೈನ್ಯ ಈಗಾಗಲೇ ಹಮಾಸ್ ಭಯೋತ್ಪಾದಕ ಒತ್ತೆಯಾಳುಗಳಾಗಿರುವ ಇಸ್ರೇಲಿಗರನ್ನು ರಕ್ಷಣೆ ಮಾಡುವ ಕಾರ್ಯಚರಣೆ ಮುಂದುವರಿದಿದೆ ಎಂದು ಸೈನ್ಯ ಹೇಳಿದೆ. ಇದಕ್ಕೆ ಅನೇಕ ಕಾರ್ಯಚರಣೆ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇಸ್ರೇಲ್ ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಮಾಸ್ನ ಈ ಕೃತ್ಯವನ್ನು ನಾವು ಖಂಡಿಸುತ್ತೇವೆ. ಅಮಾಯಕ ನಾಗರಿಕರನ್ನು ಹತ್ಯೆ ಮಾಡುತ್ತಿದೆ. ಅವರನ್ನು ಅಪಹರಿಸಿ ಚಿತ್ರಹಿಂಸೆ ನೀಡುತ್ತಿದೆ. ಹಮಾಸ್ ಭಯೋತ್ಪಾದಕರು ಈಗ ಈ ವಿಡಿಯೋವನ್ನು ಏಕೆ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಹಮಾಸ್ ಯಾವುದೇ ವಿವರಣೆ ನೀಡಿಲ್ಲ. ಈಗಾಗಲೇ 200 ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ. ಇನ್ನು 50 ಮಂದಿ ಹಮಾಸ್ನ ಬೇರೆ ಬೇರೆ ಸಂಘಟನೆಯ ಕೈಯಲ್ಲಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ