Google Digikavach: ಇನ್ಮುಂದೆ ನಿಮ್ಮ ಹಣ ಸುರಕ್ಷಿತ: ಗೂಗಲ್​ನಿಂದ ಡಿಜಿಕವಚ್ ಅನಾವರಣ, ಏನಿದು ನೋಡಿ

What is Google Digikavach: ಡಿಜಿಕವಚ್- DigiKavach ಸೈಬರ್ ಕ್ರೈಮ್​ನಂತಹ ಪ್ರಕರಣಗಳಿಂದ ಮುಕ್ತಿ ನೀಡುತ್ತಿದೆ. ಆರ್ಥಿಕ ವಂಚನೆಯನ್ನು ಗುರುತಿಸಲು ಮತ್ತು ಅಧ್ಯಯನ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಮೋಸ ಮಾಡುವಂತಹ ಬೆದರಿಕೆಗಳನ್ನು ಪತ್ತೆಹಚ್ಚಲು ಅತ್ಯಾಧುನಿಕ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಬೆದರಿಕೆಗಳನ್ನು ಮೊದಲೇ ಗುರುತಿಸುವ ಮೂಲಕ, ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಹಣಕಾಸಿನ ನಷ್ಟವನ್ನು ತಡೆಗಟ್ಟುತ್ತದೆ.

Google Digikavach: ಇನ್ಮುಂದೆ ನಿಮ್ಮ ಹಣ ಸುರಕ್ಷಿತ: ಗೂಗಲ್​ನಿಂದ ಡಿಜಿಕವಚ್ ಅನಾವರಣ, ಏನಿದು ನೋಡಿ
Digital Kavach
Follow us
Vinay Bhat
|

Updated on:Oct 19, 2023 | 2:02 PM

ಇಂದಿನ ಡಿಜಿಟಲ್ ಯುಗದಲ್ಲಿ, ಹಣಕಾಸಿನ ವಂಚನೆ ದೊಡ್ಡ ದಂದೆಯಾಗಿ ಮಾರ್ಪಟ್ಟಿದೆ. ಆನ್‌ಲೈನ್ ಬ್ಯಾಂಕಿಂಗ್, ಡಿಜಿಟಲ್ ವಹಿವಾಟುಗಳು ಮತ್ತು ಹೆಚ್ಚಿನ ಹಣಕಾಸಿಸ ಕೆಲಸ ಆನ್​ಲೈನ್ ಮೂಲಕವೇ ನಡೆಯುತ್ತಿರುವುದರಿಂದ ಸ್ಕ್ಯಾಮರ್‌ಗಳು ಮತ್ತು ವಂಚಕರು ಹೊಸ ಮಾರ್ಗಗಳನ್ನು ಕಂಡುಹಿಡಿದು ಅಮಾಯಕರನ್ನು ವಂಚಿಸುತ್ತಿದ್ದಾರೆ. ಇದನ್ನು ತಡೆಗಟ್ಟಲು ಗೂಗಲ್ ಮುಂದಾಗಿದ್ದು, ತನ್ನ ಡಿಜಿಕವಚ್- DigiKavach ಉಪಕ್ರಮವನ್ನು ಪರಿಚಯಿಸಿದೆ. ಇದು ಸೈಬರ್ ಕ್ರೈಮ್​ನಂತಹ ಪ್ರಕರಣಗಳಿಂದ ಮುಕ್ತಿ ನೀಡುತ್ತಿದೆ. ಆರ್ಥಿಕ ವಂಚನೆಯನ್ನು ಗುರುತಿಸಲು ಮತ್ತು ಅಧ್ಯಯನ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಡಿಜಿಕವಚ್ ಉದ್ದೇಶ

  • ಹಣಕಾಸಿನ ವಂಚನೆಯನ್ನು ಎದುರಿಸುವಲ್ಲಿ ಮೊದಲ ಹಂತವೆಂದರೆ ಸ್ಕ್ಯಾಮರ್‌ಗಳು ಯಾವ ದಾರಿ ಹಿಡಿಯುತ್ತಾರೆ ಎಂಬುದು. ವಂಚಕರ ಈ ಸ್ಟ್ರಾಟರ್ಜಿಯನ್ನು ಬಿಚ್ಚಿಡಲು ಡಿಜಿಕವಚ್​ನ ತಂಡಗಳು ಕೆಲಸ ಮಾಡುತ್ತವೆ.
  • ಮೋಸ ಮಾಡುವಂತಹ ಬೆದರಿಕೆಗಳನ್ನು ಪತ್ತೆಹಚ್ಚಲು ಅತ್ಯಾಧುನಿಕ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಬೆದರಿಕೆಗಳನ್ನು ಮೊದಲೇ ಗುರುತಿಸುವ ಮೂಲಕ, ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಹಣಕಾಸಿನ ನಷ್ಟವನ್ನು ತಡೆಗಟ್ಟುತ್ತದೆ.
  • ಫಿನ್‌ಟೆಕ್ ಅಸೋಸಿಯೇಷನ್ ​​ಫಾರ್ ಕನ್ಸ್ಯೂಮರ್ ಎಂಪವರ್‌ಮೆಂಟ್ ವಂಚನೆಯನ್ನು ಪತ್ತೆಹಚ್ಚಲು ಮತ್ತು ಲೋನ್ ಅಪ್ಲಿಕೇಶನ್‌ಗಳ ವಿರುದ್ಧ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಲು ಡಿಜಿಕವಚ್‌ನೊಂದಿಗೆ ಕಾರ್ಯನಿರ್ವಹಿಸುತ್ತಿದೆ.
  • ಸೈಬರ್ ಕ್ರೈಮ್ ಸಹಾಯವಾಣಿ (1930): ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (14C) ಸ್ಥಾಪಿಸಿದ ಈ ಸಹಾಯವಾಣಿಯು ಡಿಜಿಕವವಚ್‌ನ ಜೊತೆಗೆ ಬರುತ್ತದೆ. ಯಾರು ಹಣಕಾಸಿನ ವಂಚನೆಗೆ ಗುರಿಯಾಗುತ್ತಾರೊ ಆ ವ್ಯಕ್ತಿಗಳಿಗೆ ಮಾಹಿತಿ ಮತ್ತು ಬೆಂಬಲವನ್ನು ನೀಡುವುದು ಇದರ ಉದ್ದೇಶ.
  • ಜಾಗತಿಕ ಟೆಕ್ ದೈತ್ಯ ಗೂಗಲ್ ಕೂಡ ಈ ಕಾರ್ಯಾಚರಣೆಯಲ್ಲಿ ಪಾಲುದಾರ. ಭದ್ರತೆಗೆ ಆದ್ಯತೆ ನೀಡುವ ಉತ್ಪನ್ನಗಳನ್ನು ನಿರ್ಮಿಸುವ ಮೂಲಕ ಅವರು ಡಿಜಿಕವಚ್‌ಗೆ ಕೊಡುಗೆ ನೀಡಿದೆ. ಇದರಿಂದಾಗಿ ಡಿಜಿಟಲ್ ವಹಿವಾಟುಗಳ ಸುರಕ್ಷತೆ ಹೆಚ್ಚಿದಂತವಾಗಿದೆ.

ಭಾರತದಲ್ಲಿ ಕೇವಲ 6,499 ರೂ. ಗೆ ಬಿಡುಗಡೆ ಆಗಿದೆ ಹೊಸ ಸ್ಮಾರ್ಟ್​ಫೋನ್: ಯಾವುದು ನೋಡಿ

ಡಿಜಿಕವಚ್​ಗೆ ಗೂಗಲ್​ನ ಕೊಡುಗೆ

ಜಿ-ಮೇಲ್ ಫಿಶಿಂಗ್: ಇಂದು ಅನೇಕ ಹಣಕಾಸಿನ ವಂಚನೆಯ ಪ್ರಯತ್ನಗಳು ಫೇಕ್ ಇಮೇಲ್‌ಗಳಿಂದ ಹುಟ್ಟಿಕೊಂಡಿವೆ. ಗೂಗಲ್​ನ ಇಮೇಲ್ ಸೇವೆಯಾದ ಜಿ-ಮೇಲ್, ಸ್ಪ್ಯಾಮ್, ಫಿಶಿಂಗ್ ಮತ್ತು ಮಾಲ್‌ವೇರ್‌ನ ಶೇಕಡಾ 99.9 ಕ್ಕಿಂತ ಹೆಚ್ಚಿನದನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸುತ್ತದೆ. ಈ ಮಟ್ಟದ ರಕ್ಷಣೆಯು ಪ್ರಪಂಚದಾದ್ಯಂತ 1.5 ಬಿಲಿಯನ್ ಇನ್‌ಬಾಕ್ಸ್‌ಗಳನ್ನು ಸುರಕ್ಷಿತಗೊಳಿಸುತ್ತದೆ. ಇದರಿಂದ ವ್ಯಕ್ತಿಗಳು ಫಿಶಿಂಗ್ ವಂಚನೆಗಳಿಗೆ ಬಲಿಯಾಗುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ
Image
ಬಹುನಿರೀಕ್ಷಿತ ಸ್ಯಾಮ್​ಸಂಗ್ ಗ್ಯಾಲಕ್ಸಿ A05s ಬಿಡುಗಡೆ: ಬೆಲೆ 14,999 ರೂ.
Image
ಬಲಿಷ್ಠ ಬ್ಯಾಟರಿ, ಪ್ರೊಸೆಸರ್, ಕ್ಯಾಮೆರಾ: ಹಾನರ್​ನಿಂದ ಬಂತು ಅದ್ಭುತ ಫೋನ್
Image
ಇಂದು ಒನ್​ಪ್ಲಸ್​ನ ಮೊಟ್ಟ ಮೊದಲ ಮಡಚುವ ಫೋನ್ ರಿಲೀಸ್: ಬೆಲೆ ಎಷ್ಟು ಗೊತ್ತೇ?
Image
ಮಾಲ್ವೇರ್ ದಾಳಿಯಿಂದ ಡಿಜಿಟಲ್ ಸಾಧನಗಳ ರಕ್ಷಣೆಗೆ ಸಿಎಸ್​ಕೆ ಸ್ಥಾಪನೆ

ಗೂಗಲ್ ಪ್ಲೇ ಪ್ರೊಟೆಕ್ಟ್: ಆಂಡ್ರಾಯ್ಡ್ ಬಳಕೆದಾರರಿಗೆ, ಗೂಗಲ್ ಪ್ಲೇ ಪ್ರೊಟೆಕ್ಟ್ ಇದ್ದು, ಇದರ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳು, ಡೇಟಾ ಮತ್ತು ಅಪ್ಲಿಕೇಶನ್‌ಗಳನ್ನು ಸುರಕ್ಷಿತವಾಗಿರಿಸಲು ಇದು ತೆರೆಮರೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿದಿನ, ಇದು 125 ಬಿಲಿಯನ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಸ್ಕ್ಯಾನ್ ಮಾಡುತ್ತದೆ, ಫೇಕ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಗೂಗಲ್ ಪೇ ಸೇಫ್ಟಿ ಅಲರ್ಟ್: ಬಳಕೆದಾರರು ಹಣವನ್ನು ಕಳುಹಿಸುವಾಗ ಮತ್ತು ಸ್ವೀಕರಿಸುವಾಗ ಫಿಶಿಂಗ್ ಮತ್ತು ಇತರ ವಂಚನೆ ಅಪಾಯಗಳನ್ನು ಗುರುತಿಸಲು ಗೂಗಲ್ ಪೇ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುತ್ತದೆ. ಪ್ರತಿದಿನ, ಗೂಗಲ್ ಪೇ ತನ್ನ ಬಳಕೆದಾರರಿಗೆ ಸುರಕ್ಷತಾ ಎಚ್ಚರಿಕೆಗಳನ್ನು ಕಳುಹಿಸುತ್ತದೆ, ಮತ್ತು ಅನುಮಾನಾಸ್ಪದ ವಹಿವಾಟುಗಳು ಕಂಡುಬಂದರೆ ಎಚ್ಚರಿಕೆ ನೀಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:00 pm, Thu, 19 October 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್