AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp New Feature: ವಾಟ್ಸ್​ಆ್ಯಪ್ ವಾಯ್ಸ್ ನೋಟ್​ನಲ್ಲಿ ಅಚ್ಚರಿ ಫೀಚರ್: ಸೆಂಡ್ ಮಾಡುವಾಗ ಸಿಗುತ್ತೆ ಈ ಆಯ್ಕೆ

WhatsApp Rolls Out ‘View Once’ Mode for Voice Notes: ವಾಟ್ಸ್​ಆ್ಯಪ್ ತನ್ನ ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಬಳಕೆದಾರರಿಗೆ ವಾಯ್ಸ್ ನೋಟ್ಸ್​ನಲ್ಲಿ 'ವೀವ್ ಒನ್ಸ್' ವೈಶಿಷ್ಟ್ಯವನ್ನು ಹೊರತರುತ್ತಿದೆ. ಈ ಫೀಚರ್ ಪ್ರಸ್ತುತ ಬೀಟಾ ಪರೀಕ್ಷೆಯ ಹಂತದಲ್ಲಿದೆ ಮತ್ತು ಮುಂಬರುವ ದಿನಗಳಲ್ಲಿ ಬಳಕೆದಾರರಿಗೆ ಸಿಗಲಿದೆ.

WhatsApp New Feature: ವಾಟ್ಸ್​ಆ್ಯಪ್ ವಾಯ್ಸ್ ನೋಟ್​ನಲ್ಲಿ ಅಚ್ಚರಿ ಫೀಚರ್: ಸೆಂಡ್ ಮಾಡುವಾಗ ಸಿಗುತ್ತೆ ಈ ಆಯ್ಕೆ
WhatsApp View Once Voice Notes
Vinay Bhat
|

Updated on: Oct 19, 2023 | 3:17 PM

Share

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಕಳೆದ ಕೆಲವು ವಾರಗಳಿಂದ ಒಂದರ ಹಿಂದೆ ಒಂದರಂತೆ ನೂತನ ಫೀಚರ್​ಗಳನ್ನು ಘೋಷಣೆ ಮಾಡುವ ಜೊತೆಗೆ ಬಳಕೆದಾರರಿಗೆ ನೀಡುತ್ತಿದೆ. ಇದೀಗ ಮತ್ತೊಂದು ಉಪಯುಕ್ತ ಆಯ್ಕೆಯನ್ನು ನೀಡಲು ವಾಟ್ಸ್​ಆ್ಯಪ್ ಮುಂದಾಗಿದೆ. ಕೆಲವೇ ದಿನಗಳಲ್ಲಿ ವಾಟ್ಸ್​ಆ್ಯಪ್​ನಲ್ಲಿ ಕಳುಹಿಸುವ ವಾಯ್ಸ್ ನೋಟ್​ನಲ್ಲಿ ಹೊಸ ಆಯ್ಕೆ ಬರಲಿದೆ. ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ತನ್ನ ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಬಳಕೆದಾರರಿಗೆ ವಾಯ್ಸ್ ನೋಟ್ಸ್​ನಲ್ಲಿ ‘ವೀವ್ ಒನ್ಸ್’ ವೈಶಿಷ್ಟ್ಯವನ್ನು ಹೊರತರುತ್ತಿದೆ. ಈ ಫೀಚರ್ ಪ್ರಸ್ತುತ ಬೀಟಾ ಪರೀಕ್ಷೆಯ ಹಂತದಲ್ಲಿದೆ ಮತ್ತು ಮುಂಬರುವ ದಿನಗಳಲ್ಲಿ ಬಳಕೆದಾರರಿಗೆ ಸಿಗಲಿದೆ.

ವಾಟ್ಸ್​ಆ್ಯಪ್ ವೈಶಿಷ್ಟ್ಯದ ಟ್ರ್ಯಾಕರ್ WABetaInfo ನ ವರದಿಯ ಪ್ರಕಾರ, ಬೀಟಾ ಬಳಕೆದಾರರಿಗೆ ಈ ಹೊಸ ಗೌಪ್ಯತೆ ವೈಶಿಷ್ಟ್ಯವನ್ನು ಹೊರತರುತ್ತಿದೆ. ವಾಟ್ಸ್​ಆ್ಯಪ್ ಬಳಕೆದಾರರು ಈಗಾಗಲೇ ಆ್ಯಪ್‌ನಲ್ಲಿ ಯಾರಿಗಾದರು ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುವಾಗ ‘ವೀನ್ ಒನ್ಸ್’ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಈಗ ಅದೇ ಫೀಚರ್ ವಾಯ್ಸ್ ನೋಟ್‌ಗಳಿಗೂ ಬರಲಿದೆ.

ಇಂದು ಒನ್​ಪ್ಲಸ್​ನ ಮೊಟ್ಟ ಮೊದಲ ಮಡಚುವ ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

ಇದನ್ನೂ ಓದಿ
Image
ಭಾರತದಲ್ಲಿ ಪಿಕ್ಸೆಲ್ ಸರಣಿಯ ಸ್ಮಾರ್ಟ್​ಫೋನ್ ತಯಾರಿಸಲು ಮುಂದಾದ ಗೂಗಲ್
Image
ಇನ್ಮುಂದೆ ನಿಮ್ಮ ಹಣ ಸುರಕ್ಷಿತ: ಗೂಗಲ್​ನಿಂದ ಡಿಜಿಕವಚ್ ಅನಾವರಣ
Image
ಬಹುನಿರೀಕ್ಷಿತ ಸ್ಯಾಮ್​ಸಂಗ್ ಗ್ಯಾಲಕ್ಸಿ A05s ಬಿಡುಗಡೆ: ಬೆಲೆ 14,999 ರೂ.
Image
ಬಲಿಷ್ಠ ಬ್ಯಾಟರಿ, ಪ್ರೊಸೆಸರ್, ಕ್ಯಾಮೆರಾ: ಹಾನರ್​ನಿಂದ ಬಂತು ಅದ್ಭುತ ಫೋನ್

ಗೂಗಲ್ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್‌ಗಾಗಿ ವಾಟ್ಸ್​ಆ್ಯಪ್​ ಬೀಟಾದಲ್ಲಿ ಮತ್ತು ಟೆಸ್ಟ್‌ಫ್ಲೈಟ್ ಅಪ್ಲಿಕೇಶನ್ ಮೂಲಕ ಐಒಎಸ್‌ಗಾಗಿ ಈ ವೈಶಿಷ್ಟ್ಯವು ಹೊರಹೊಮ್ಮುತ್ತಿದೆ ಎಂದು ವರದಿಯಾಗಿದೆ. ‘ವೀನ್ ಒನ್ಸ್’ ಮೋಡ್ ವೈಶಿಷ್ಟ್ಯ ಆಂಡ್ರಾಯ್ಡ್ 2.23.21.15 ಮತ್ತು 2.23.22.4 ಅಪ್ಡೇಟ್​ನಲ್ಲಿ ಮತ್ತು iOS ನಲ್ಲಿ, ವಾಟ್ಸ್​ಆ್ಯಪ್​ ಬೀಟಾ 23.21.1.73 ಅಪ್‌ಡೇಟ್‌ಗೆ ಬರಲಿದೆ ಎಂದು ವರದಿಯಾಗಿದೆ.

ಈ ವೈಶಿಷ್ಟ್ಯವು ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿರುತ್ತದೆ. ಕೆಲವು ದಿನಗಳಲ್ಲಿ ಎಲ್ಲರಿಗೂ ಇದು ಸಿಗಲಿದೆ. ‘ವೀವ್ ಒನ್ಸ್’ ಮೋಡ್ ಆನ್ ಆಗಿರುವ ವಾಯ್ಸ್ ನೋಟ್ಸ್ ಅನ್ನು ಸೇವ್ ಮಾಡಲಿ ಅಥವಾ ಇತರ ಬಳಕೆದಾರರಿಗೆ ಫಾರ್ವರ್ಡ್ ಮಾಡಲು ಸಾಧ್ಯವಿಲ್ಲ. ಹಾಗೆಯೆ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿ ಕಳುಹಿಸಲಾದ ವಾಯ್ಸ್ ನೋಟ್ಸ್ ಅನ್ನು ಮರುಪ್ಲೇ ಮಾಡಲು, ಉಳಿಸಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ.

ಇತ್ತೀಚಿನ ದಿನಗಳಲ್ಲಿ ವಾಟ್ಸ್​ಆ್ಯಪ್​ ತನ್ನ ಗೌಪ್ಯತೆ ವೈಶಿಷ್ಟ್ಯಗಳನ್ನು ಹೆಚ್ಚಿಸುತ್ತಿದೆ. ಲಾಕ್ ಮಾಡಿದ ಚಾಟ್‌ಗಳಿಗಾಗಿ ಹೊಸ ಸೆಕ್ಯುರುಟಿ ಕೋಡ್ ವೈಶಿಷ್ಟ್ಯದಲ್ಲಿ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿದೆ. ಇದು ಬಳಕೆದಾರರು ತಮ್ಮ ಸಂರಕ್ಷಿತ ಚಾಟ್ ಫೋಲ್ಡರ್‌ಗಳಿಗೆ ಕಸ್ಟಮ್ ಪಾಸ್‌ವರ್ಡ್ ರಚಿಸಲು ಅನುಮತಿಸುತ್ತದೆ.

ವಾಟ್ಸ್​ಆ್ಯಪ್ ತನ್ನ ಚಾಟ್‌ಗಳಲ್ಲಿ ಸಂದೇಶಗಳನ್ನು ಪಿನ್ ಮಾಡಲು ಅನುಮತಿಸುವ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಭಿವೃದ್ಧಿಯಲ್ಲಿದ್ದ ಈ ಫೀಚರ್ ಇದೀಗ ಆಂಡ್ರಾಯ್ಡ್ ವಾಟ್ಸ್​ಆ್ಯಪ್ ಬೀಟಾದಲ್ಲಿ ಲಭ್ಯವಿದೆ. ಈ ಹೊಸ ವೈಶಿಷ್ಟ್ಯವು ಇತ್ತೀಚಿನ ವಾಟ್ಸ್​ಆ್ಯಪ್​ ಬೀಟಾದ ಆಂಡ್ರಾಯ್ಡ್ 2.23.21.4 ಅಪ್‌ಡೇಟ್‌ನಲ್ಲಿ ಲಭ್ಯವಿದ್ದು, ಗೂಗಲ್ ಪ್ಲೇ ಸ್ಟೋರ್​ನಿಂದ ಡೌನ್‌ಲೋಡ್ ಮಾಡಬಹುದು. WABetaInfo ಹಂಚಿಕೊಂಡಿರುವ ಸ್ಕ್ರೀನ್‌ಶಾಟ್ ಪ್ರಕಾರ, ಈ ಫೀಚರ್ ಮೂಲಕ ಚಾಟ್‌ಗಳಲ್ಲಿ ಮೆಸೇಜ್ ಅನ್ನು ಪಿನ್ ಮಾಡಬಹುದು. ನೀವು ಪಿನ್ ಮಾಡಲು ಬಯಸುವ ಸಂದೇಶವನ್ನು ಆಯ್ಕೆ ಮಾಡಿದರೆ, ಅದು ಚಾಟ್‌ನ ಮೇಲ್ಭಾಗದಲ್ಲಿ ಗೋಚರಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ