Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Loan: ಸಣ್ಣ ವ್ಯಾಪಾರಿಗಳಿಗೆ ಗುಡ್​​ ನ್ಯೂಸ್​​, ಸಾಲ ನೀಡಲು ಮುಂದಾದ ಗೂಗಲ್ ಪೇ

Google Pay: ದೇಶದ ಸಣ್ಣ ವ್ಯಾಪಾರಿಗಳಿಗೆ ಗೂಗಲ್ ಪೇ ಗುಡ್​​ ನ್ಯೂಸ್​​ ನೀಡಿದೆ. ಇನ್ನು ಮುಂದೆ ಗೂಗಲ್ ಪೇ ಮೂಲಕವು ಸಾಲ ಪಡೆಯಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ. ಗೂಗಲ್ ಇಂಡಿಯಾ ಇಂದು ಒಂದು ಮಹತ್ವದ ಘೋಷಣೆಯನ್ನು ಮಾಡಿದೆ. ಇನ್ನು ಮುಂದೆ ಭಾರತದಲ್ಲಿನ ವ್ಯಾಪಾರಿಗಳಿಗೆ ಸಾಮಾನ್ಯವಾಗಿ ಸಣ್ಣ ಮಟ್ಟದ ಸಾಲಗಳನ್ನು ನೀಡಲಾಗುವುದು.

Google Loan: ಸಣ್ಣ ವ್ಯಾಪಾರಿಗಳಿಗೆ ಗುಡ್​​ ನ್ಯೂಸ್​​, ಸಾಲ ನೀಡಲು ಮುಂದಾದ ಗೂಗಲ್ ಪೇ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Oct 19, 2023 | 4:09 PM

ದೇಶದ ಸಣ್ಣ ವ್ಯಾಪಾರಿಗಳಿಗೆ ಗೂಗಲ್ ಪೇ  (Google Pay) ಗುಡ್​​ ನ್ಯೂಸ್​​ ನೀಡಿದೆ. ಇನ್ನು ಮುಂದೆ ಗೂಗಲ್ ಪೇ ಮೂಲಕವು ಸಾಲ ಪಡೆಯಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ. ಗೂಗಲ್ ಇಂಡಿಯಾ ಇಂದು ಒಂದು ಮಹತ್ವದ ಘೋಷಣೆಯನ್ನು ಮಾಡಿದೆ. ಇನ್ನು ಮುಂದೆ ಭಾರತದಲ್ಲಿನ ವ್ಯಾಪಾರಿಗಳಿಗೆ ಸಾಮಾನ್ಯವಾಗಿ ಸಣ್ಣ ಮಟ್ಟದ ಸಾಲಗಳನ್ನು ನೀಡಲಾಗುವುದು. ಹಣ ವರ್ಗಾವಣೆ ತಂತ್ರಗಳಲ್ಲಿ ಒಂದಾದ ಜಿಪೇ ಅಪ್ಲಿಕೇಶನ್‌ನಲ್ಲಿ ಸ್ಯಾಚೆಟ್ ಸಾಲಗಳನ್ನು ನೀಡಲು ಆರಂಭಿಸಿದೆ. ಸ್ಯಾಚೆಟ್ ಸಾಲ ಎಂದರೆ ನ್ಯಾನೊ-ಕ್ರೆಡಿಟ್ ಅಥವಾ ಬೈಟ್-ಗಾತ್ರದ ಸಾಲಗಳ ಒಂದು ರೂಪವಾಗಿದ್ದು, ಇದು ತಕ್ಷಣದಲ್ಲಿ ಸಿಗುವ ಲೋನ್​​ ಆಗಿರುತ್ತದೆ. ಈ ಸ್ಯಾಚೆಟ್ ಲೋನ್​ನ್ನು 10 ಸಾವಿರದಿಂದ 1ಲಕ್ಷದವರೆಗೆ ಪಡೆಯಬಹುದು. ಆದರೆ ಗೂಗಲ್ ಪೇನಲ್ಲಿ ₹ 15,000ದವರೆಗೆ ಪಡೆಯಬಹುದು.

ಗೂಗಲ್ ಪೇ ನೀಡುವ ₹ 15,000 ಸಾಲವನ್ನು ತಿಂಗಳಿಗೆ 111 ರೂ.ನಂತೆ ಮರುಪಾವತಿ ಮಾಡಬೇಕು. ಇನ್ನು ಸಾಲ ನೀಡಲು ಗೂಗಲ್ ಪೇ DMI ಫೈನಾನ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಸಣ್ಣ ವ್ಯಾಪಾರಿಗಳಿಗೆ ಸ್ವಂತ ಉದ್ಯೋಗವನ್ನು ಮಾಡಲು ಅಥವಾ ಅವರ ಸಂಕಷ್ಟ ಕಾಲಕ್ಕೆ ಇದು ಸಹಾಯವಾಗಿದೆ ಎಂದು ಹೇಳಿದೆ. ಇದರ ಜತೆಗೆ ಗೂಗಲ್ ಪೇ ePayLater ಸಹಭಾಗಿತ್ವದಲ್ಲಿ ವ್ಯಾಪಾರಿಗಳಿಗೆ ಕ್ರೆಡಿಟ್ ಲೈನ್​​ಗಳನ್ನು ಸಕ್ರೀಯಗೊಳಿಸಲಿದೆ.

ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಪಡೆಯಲು ಆನ್‌ಲೈನ್ ಮತ್ತು ಆಫ್‌ಲೈನ್ ವಿತರಕರಲ್ಲಿ ಈ ಸಾಲವನ್ನು ಬಳಸಿಕೊಳ್ಳಬಹುದು. ಇದರ ಜತೆಗೆ ಈಗಾಗಲೇ ಗೂಗಲ್ ಇಂಡಿಯಾ ICICI ಬ್ಯಾಂಕ್ ಸಹಯೋಗದೊಂದಿಗೆ UPI ಮೇಲೆ ಕ್ರೆಡಿಟ್ ಲೈನ್‌ಗಳನ್ನು ಪ್ರಾರಂಭಿಸಿದೆ. ಇನ್ನು Axis ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದುವ ಮೂಲಕ ಗೂಗಲ್ ಪೇ ವೈಯಕ್ತಿಕ ಸಾಲಗಳ ಪೋರ್ಟ್‌ಫೋಲಿಯೊವನ್ನು ನೀಡುತ್ತದೆ. ಇನ್ನು ಗೂಗಲ್ ಪೇ ವೈಯಕ್ತಿಕ ಸಾಲಗಳ ಪೋರ್ಟ್‌ಫೋಲಿಯೊವನ್ನು ಗೂಗಲ್​​ ಇಂಡಿಯಾಕ್ಕೂ ವಿಸ್ತರಿಸಿದೆ.

ಇದನ್ನೂ ಓದಿ: ಗೂಗಲ್ ಪೇ ಯುಪಿಐ ಲೈಟ್​ನಲ್ಲಿ ಪಿನ್ ಇಲ್ಲದೇ ಹಣ ಪಾವತಿಸಿ

ಗೂಗಲ್​​ ಪೇ 12 ತಿಂಗಳಲ್ಲಿ ಯುಪಿಐ ಮೂಲಕ ₹ 167 ಲಕ್ಷ ಕೋಟಿ ಮೌಲ್ಯಗಳ ವ್ಯವಹಾರ ನಡೆಸಿದೆ ಎಂದು ಗೂಗಲ್ ಪೇ ಉಪಾಧ್ಯಕ್ಷ ಅಂಬರೀಶ್ ಕೆಂಗೆ ತಿಳಿಸಿದ್ದಾರೆ. ಈ ಲೋನ್​​ ಪಡೆಯಲು ಮಾಸಿಕ ಆದಾಯದ ₹ 30,000 ಕ್ಕಿಂತ ಕಡಿಮೆ ಇರಬೇಕು. ಜತೆಗೆ ಎರಡು ಶ್ರೇಣಿಗಳಲ್ಲಿ ನೀಡಲಾಗುತ್ತದೆ. ಒಂದು ಪಟ್ಟಣದ ಒಳಗೆ ವ್ಯಾಪಾರ ಮಾಡುವವರು ಹಾಗೂ ಅದರಿಂದ ಹೊರಗೆವ್ಯಾಪಾರ ಮಾಡುವವರು. ಹೀಗೆ ಎರಡು ಶ್ರೇಣಿಗಳಲ್ಲಿ ನೀಡಲಾಗುವುದು. ಇನ್ನು ಗೂಗಲ್​ ಇಂಡಿಯಾ ಸಣ್ಣ ವ್ಯಾಪರಿಗಳಿಗೆ ಹಲವು ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:04 pm, Thu, 19 October 23

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್