AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nokia Layoff: ವೆಚ್ಚ ಕಡಿಮೆ ಮಾಡಲು, ಉಳಿತಾಯ ಹೆಚ್ಚಿಸಲು 14 ಸಾವಿರ ಉದ್ಯೋಗಿಗಳ ವಜಾ ಮಾಡಿದ ನೋಕಿಯಾ

ಯುಎಸ್ ಮತ್ತು ಯುರೋಪಿಯನ್​​ನಂತಹ ಮಾರುಕಟ್ಟೆಗಳಲ್ಲಿ 5G ಮಾರಾಟ ನಿಧಾನಗೊಂಡ ಕಾರಣ ಹಾಗೂ ಮೊಬೈಲ್ ಮೂಲಸೌಕರ್ಯದಲ್ಲಿ ಹೂಡಿಕೆ ಕಡಿಮೆಯಾದ ಕಾರಣ ವೆಚ್ಚ ಕಡಿಮೆ ಮಾಡಲು ಮತ್ತು ಉಳಿತಾಯವನ್ನು ಹೆಚ್ಚಿಸಲು ನೋಕಿಯಾ ತನ್ನ 14 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ.

Nokia Layoff: ವೆಚ್ಚ ಕಡಿಮೆ ಮಾಡಲು, ಉಳಿತಾಯ ಹೆಚ್ಚಿಸಲು 14 ಸಾವಿರ ಉದ್ಯೋಗಿಗಳ ವಜಾ ಮಾಡಿದ ನೋಕಿಯಾ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Oct 19, 2023 | 12:09 PM

Share

ಯುಎಸ್ ಮತ್ತು ಯುರೋಪಿಯನ್​​ನಂತಹ ಮಾರುಕಟ್ಟೆಗಳಲ್ಲಿ 5G ಮಾರಾಟ ನಿಧಾನಗೊಂಡ ಕಾರಣ ಹಾಗೂ ಮೊಬೈಲ್ ಮೂಲಸೌಕರ್ಯದಲ್ಲಿ ಹೂಡಿಕೆ ಕಡಿಮೆಯಾದ ಕಾರಣ ವೆಚ್ಚ ಕಡಿಮೆ ಮಾಡಲು ಮತ್ತು ಉಳಿತಾಯವನ್ನು ಹೆಚ್ಚಿಸಲು ನೋಕಿಯಾ  (Nokia Layoff) ತನ್ನ 14 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಸಿಬ್ಬಂದಿ ವೆಚ್ಚದಲ್ಲಿ 10% ರಿಂದ 15% ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ನೋಕಿಯಾ ತನ್ನ ಮುಂದಿನ ಅಂದರೆ 2024, 2025ರಲ್ಲಿ ಎಷ್ಟು ಉಳಿತಾಯ ಮಾಡಬೇಕು ಎಂಬುದನ್ನು ಲೆಕ್ಕಚಾರ ಹಾಕಿಕೊಂಡಿದೆ. ಈ ಕಾರಣಕ್ಕೆ ಈಗಿನಿಂದಲೇ ಉಳಿತಾಯಕ್ಕಾಗಿ ಉದ್ಯೋಗಿಗಳ ವಜಾದ ನಿರ್ಧಾರವನ್ನು ತೆಗೆದುಕೊಂಡಿದೆ.

ಮುಂದಿನ ವರ್ಷ € 400 ಮಿಲಿಯನ್ (₹ 33,30,61,60,000.00) ಮತ್ತು 2025 ರಲ್ಲಿ ಹೆಚ್ಚುವರಿ €300 ಮಿಲಿಯನ್ (₹ 24,97,94,70,000) ಉಳಿತಾಯ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದೆ. ನೋಕಿಯಾದ ವರದಿ ವಿಭಿನ್ನ ಮಾಹಿತಿಯನ್ನು ನೀಡಿದೆ. ಒಂದು ವರದಿಯಲ್ಲಿ ಮೂರನೇ ತ್ರೈಮಾಸಿಕದಲ್ಲಿ ಹೊಂದಾಣಿಕೆಯ ಕಾರ್ಯಾಚರಣೆಯ ಲಾಭವು €424 ಮಿಲಿಯನ್ (₹ 35,30,43,17,600.00) ಆಗಿತ್ತು. ಆದರೆ ಬ್ಲೂಮ್‌ಬರ್ಗ್ ಸಮೀಕ್ಷೆಯ ಪ್ರಕಾರ 545.2 ಮಿಲಿಯನ್‌ಗೆ (₹ 45,39,60,23,480.00) ಹೋಲಿಸುತ್ತದೆ.

ನಾವು 2023ರ ನಿವ್ವಳ ಮಾರಾಟ ಶ್ರೇಣಿಯಲ್ಲಿ ತುಂಬಾ ಕೆಳ ಹಂತದಲ್ಲಿದ್ದೇವೆ. ಇದನ್ನು ಹೇಗಾದರು ಮಾರ್ಜಿನ್ ಶ್ರೇಣಿಗೆ ತರಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೆಕ್ಕಾ ಲುಂಡ್‌ಮಾರ್ಕ್ ತಿಳಿಸಿದ್ದಾರೆ. ಕಂಪನಿಯು ಈ ಬಗ್ಗೆ ಜುಲೈನಲ್ಲಿ ಡೌನ್‌ಗ್ರೇಡ್ ವಿಚಾರಣೆ ನಡೆಸಿತ್ತು. ಜತೆಗೆ ಈ ಬಗ್ಗೆ ವರದಿಯನ್ನು ಕೂಡ ನೀಡಿತ್ತು. ಇದರ ಪ್ರಕಾರ ಕಂಪನಿಯು ತುಂಬಾ ಲಾಭದಾಯಕವಾಗಿಲ್ಲ ಹಾಗೂ ಮುಂದಿನ ಎರಡು ವರ್ಷಗಳಿಗೆ ಅಗತ್ಯವಾಗಿ ಉಳಿತಾಯ ಮಾಡಬೇಕಿದೆ. ಇದಕ್ಕಾಗಿ ಉಳಿತಾಯ ಕಡೆ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಗಮನ ನೀಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಉದ್ಯೋಗಕಡಿತಕ್ಕೆ ನಿರ್ಧರಿಸಿದ ಶಿಯೋಮಿ; 3ನೇ ಸ್ಥಾನಕ್ಕೆ ಬಿದ್ದಿದ್ದಕ್ಕೆ ತಲೆದಂಡವಾ?

US ಮತ್ತು ಯುರೋಪಿಯನ್​​ನ ಮಾರುಕಟ್ಟೆಗಳ ನಿರ್ವಾಹಕರ ಬಂಡವಾಳ ವೆಚ್ಚವನ್ನು ಕಡಿಮೆ ಮಾಡಲು ಹಾಗೂ ದಾಸ್ತಾನುಗಳನ್ನು ಸರಿಹೊಂದಿಸಲು 5G ಉಪಕರಣಗಳ ತಯಾರಕರು ಹೆಣಗಾಡುತ್ತಿದ್ದಾರೆ. ನಮ್ಮ ಪ್ರತಿಸ್ಪರ್ಧಿಗಳು ಮುಂದೆ ಹೋಗುತ್ತಿದ್ದಾರೆ. ಈ ಕಾರಣಕ್ಕೆ ನಮ್ಮ ವೆಚ್ಚ ಕಡಿಮೆ ಆಗಬೇಕಿದೆ. ಜತೆಗೆ ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕಿದೆ ಎಂದು ನೋಕಿಯಾ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:44 am, Thu, 19 October 23

Follow Us
ಬೆಳಗ್ಗೆ 6 ಗಂಟೆಯಿಂದಲೇ ‘ಟಾಕ್ಸಿಕ್’ ಪ್ರದರ್ಶನ ಆರಂಭ; ಜೋರಾಗಿದೆ ಕ್ರೇಜ್
ಬೆಳಗ್ಗೆ 6 ಗಂಟೆಯಿಂದಲೇ ‘ಟಾಕ್ಸಿಕ್’ ಪ್ರದರ್ಶನ ಆರಂಭ; ಜೋರಾಗಿದೆ ಕ್ರೇಜ್
ಬ್ರಿಕ್ಸ್ ಶೃಂಗಸಭೆಗೂ ಮುನ್ನ ಚೀನಾ ಸಚಿವರ ಜೊತೆ ಅಜಿತ್ ದೋವಲ್ ಮಾತುಕತೆ
ಬ್ರಿಕ್ಸ್ ಶೃಂಗಸಭೆಗೂ ಮುನ್ನ ಚೀನಾ ಸಚಿವರ ಜೊತೆ ಅಜಿತ್ ದೋವಲ್ ಮಾತುಕತೆ
ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತೊಂದು ಶಾಕ್!
ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತೊಂದು ಶಾಕ್!
ದೇಶದಲ್ಲಿ ಹೆಚ್ಚಿದ H1N1 ಭೀತಿ: 'ಆತಂಕ ಬೇಡ' ಎಂದ ಯು.ಟಿ. ಖಾದರ್
ದೇಶದಲ್ಲಿ ಹೆಚ್ಚಿದ H1N1 ಭೀತಿ: 'ಆತಂಕ ಬೇಡ' ಎಂದ ಯು.ಟಿ. ಖಾದರ್
ಅಮೆರಿಕಕ್ಕೆ ತೆರಳಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
ಅಮೆರಿಕಕ್ಕೆ ತೆರಳಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ