AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Xiaomi Layoffs: ಭಾರತದಲ್ಲಿ ಉದ್ಯೋಗಕಡಿತಕ್ಕೆ ನಿರ್ಧರಿಸಿದ ಶಿಯೋಮಿ; 3ನೇ ಸ್ಥಾನಕ್ಕೆ ಬಿದ್ದಿದ್ದಕ್ಕೆ ತಲೆದಂಡವಾ?

Chinese Smartphone Maker To Trim Headcounts: 2022 ಡಿಸೆಂಬರ್​ನಲ್ಲಿ ಶೇ. 10ರಷ್ಟು ಉದ್ಯೋಗಕಡಿತ ಮಾಡಿದ್ದ ಶಿಯೋಮಿ ಇಂಡಿಯಾ ಇದೀಗ ಇನ್ನಷ್ಟು ಲೇ ಆಫ್​ಗೆ ಕೈಹಾಕಲು ನಿರ್ಧರಿಸಿದೆ. ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯನ್ನು 1000ಕ್ಕಿಂತ ಕಡಿಮೆಗೆ ಇಳಿಸುವುದು ಅದರ ಗುರಿ.

Xiaomi Layoffs: ಭಾರತದಲ್ಲಿ ಉದ್ಯೋಗಕಡಿತಕ್ಕೆ ನಿರ್ಧರಿಸಿದ ಶಿಯೋಮಿ; 3ನೇ ಸ್ಥಾನಕ್ಕೆ ಬಿದ್ದಿದ್ದಕ್ಕೆ ತಲೆದಂಡವಾ?
ಲೇ ಆಫ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 29, 2023 | 6:32 PM

Share

ನವದೆಹಲಿ: ಚೀನಾ ಮೂಲದ ಸ್ಮಾರ್ಟ್​ಫೋನ್ ತಯಾರಕ ಶಿಯೋಮಿ ಸಂಸ್ಥೆ (Xiaomi India) ಭಾರತದಲ್ಲಿ ಉದ್ಯೋಗಕಡಿತಕ್ಕೆ (Layoffs) ಕೈಹಾಕಲು ನಿರ್ಧರಿಸಿದೆ. ಶಿಯೋಮಿ ಇಂಡಿಯಾ ವಿಭಾಗದಲ್ಲಿ ಉದ್ಯೋಗಿಗಳ ಸಂಖ್ಯೆ 1,000 ಕ್ಕಿಂತ ಕಡಿಮೆಗೆ ಸೀಮಿತಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಎಕನಾಮಿಕ್ ಟೈಮ್ಸ್​ನಲ್ಲಿ ಪ್ರಕಟವಾದ ವರದಿ ಪ್ರಕಾರ, ಶಿಯೋಮಿ ಇಂಡಿಯಾ ಕಳೆದ ಒಂದು ವಾರದಲ್ಲಿ 30ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಮುಂದಿನ ಕೆಲ ತಿಂಗಳಲ್ಲಿ ಇನ್ನಷ್ಟು ಮಂದಿಗೆ ಕೆಲಸ ಹೋಗುವ ಸಾಧ್ಯತೆ ಇದೆ.

ಆದರೆ, ಶಿಯೋಮಿಯಲ್ಲಿ ಮುಂದಿನ ದಿನಗಳಲ್ಲಿ ಎಷ್ಟು ಮಂದಿಯನ್ನು ತೆಗೆಯಲಾಗುವುದು, ಯಾವಾಗ ಲೇ ಆಫ್ ಆಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ವರದಿ ಪ್ರಕಾರ, ಶಿಯೋಮಿ ಇಂಡಿಯಾದ ಮ್ಯಾನೇಜರುಗಳು ಲೇ ಆಫ್​ಗಾಗಿ ಉದ್ಯೋಗಿಗಳ ಪಟ್ಟಿ ಇನ್ನೂ ಮಾಡಿಲ್ಲ. ಉದ್ಯೋಗಿಯ ಕಾರ್ಯಸಾಧನೆ ಆಧಾರದ ಮೇಲೆ ಲೇ ಆಫ್ ನಡೆಯುತ್ತದೆ ಎಂಬ ಮಾಹಿತಿ ಸದ್ಯಕ್ಕೆ ತಿಳಿದುಬಂದಿದೆ.

ಇದನ್ನೂ ಓದಿLayoffs: ನ್ಯಾಷನಲ್ ಜಿಯೋಗ್ರಾಫಿಕ್​ನ ಎಲ್ಲಾ ಸಿಬ್ಬಂದಿಯೂ ಲೇ ಆಫ್; ಬಂದ್ ಆಗುತ್ತಾ ಪ್ರತಿಷ್ಠಿತ ಪತ್ರಿಕೆ?

2022ರ ಡಿಸೆಂಬರ್​ನಲ್ಲಿ ಶಿಯೋಮಿ ಶೇ. 10ರಷ್ಟು ಉದ್ಯೋಗಕಡಿತಗೊಳಿಸಿತ್ತು. 2023ರ ಜನವರಿ ತಿಂಗಳಲ್ಲಿ ಶಿಯೋಮಿಯ ಗ್ಲೋಬಲ್ ವೈಸ್ ಪ್ರೆಸಿಡೆಂಟ್ ಮನುಕುಮಾರ್ ಜೈನ್ ರಾಜೀನಾಮೆ ಕೊಟ್ಟು ನಿರ್ಗಮಿಸಿದ್ದರು.

ನಂಬರ್ ಒನ್ ಪಟ್ಟ ಕಳೆದುಕೊಂಡ ಶಿಯೋಮಿ

ಚೀನಾದ ಶಿಯೋಮಿ ಕಂಪನಿಯ ಮೊಬೈಲ್​ಗಳು ಕಡಿಮೆ ಬೆಲೆ ಮತ್ತು ಉತ್ತಮ ಗುಣಮಟ್ಟದ ಕಾರಣಕ್ಕೆ ಬಹಳ ಬೇಗ ಭಾರತೀಯ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡು ನಂಬರ್ ಒನ್ ಎನಿಸಿತ್ತು. ಆದರೆ, ಇತ್ತೀಚೆಗೆ ಸ್ಯಾಮ್ಸುಂಗ್ ಕಂಪನಿ ಮರಳಿ ಅಗ್ರಸ್ಥಾನ ಪಡೆದಿದೆ. ಚೀನಾದ್ದೇ ಇನ್ನೊಂದು ಕಂಪನಿ ವಿವೋ ಮಿಂಚಿನ ಗತಿಯಲ್ಲಿ ಬೆಳೆದು ಎರಡನೆ ಸ್ಥಾನ ಅಲಂಕರಿಸಿದೆ. ಶಿಯೋಮಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ಇದನ್ನೂ ಓದಿNPA: ಮಾರ್ಚ್​ನಲ್ಲಿ ಬ್ಯಾಂಕುಗಳ ಕೆಟ್ಟ ಸಾಲ ಶೇ. 4ಕ್ಕಿಂತಲೂ ಕಡಿಮೆ; ಸರ್ಕಾರಿ ಬ್ಯಾಂಕುಗಳಿಗೆ ಕ್ರೆಡಿಟ್ ಕಾರ್ಡ್​ಗಳದ್ದೇ ತಲೆನೋವು

ಸ್ಮಾರ್ಟ್​ಫೋನ್ ಮಾರುಕಟ್ಟೆಯ ಮಾಹಿತಿ ಪ್ರಕಾರ, ಸ್ಯಾಮ್ಸುಂಗ್ ಕಂಪನಿ ಶೇ. 20ರಷ್ಟು ಮಾರುಕಟ್ಟೆ ಪಾರಮ್ಯ ಹೊಂದಿದೆ. ವಿವೋ ಶೇ. 17 ಮತ್ತು ಶಿಯೋಮಿ ಶೇ. 16ರಷ್ಟು ಮಾರುಕಟ್ಟೆ ಪಾಲು ಹೊಂದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು