AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NPA: ಮಾರ್ಚ್​ನಲ್ಲಿ ಬ್ಯಾಂಕುಗಳ ಕೆಟ್ಟ ಸಾಲ ಶೇ. 4ಕ್ಕಿಂತಲೂ ಕಡಿಮೆ; ಸರ್ಕಾರಿ ಬ್ಯಾಂಕುಗಳಿಗೆ ಕ್ರೆಡಿಟ್ ಕಾರ್ಡ್​ಗಳದ್ದೇ ತಲೆನೋವು

RBI's Financial Stability Report: ಆರ್​ಬಿಐನ ಫೈನಾನ್ಷಿಯಲ್ ಸ್ಟೆಬಿಲಿಟಿ ರಿಪೋರ್ಟ್ ಪ್ರಕಾರ ಭಾರತದಲ್ಲಿ 2023 ಮಾರ್ಚ್ ತಿಂಗಳಲ್ಲಿ ಬ್ಯಾಂಕುಗಳ ಅನುತ್ಪಾದಕ ಸಾಲದ ಪ್ರಮಾಣ ಶೇ. 3.9ರಷ್ಟು ಮಾತ್ರ ಇದೆ. ಆದರೆ ಸರ್ಕಾರಿ ಬ್ಯಾಂಕುಗಳಲ್ಲಿ ಅನುತ್ಪಾದಕ ಕ್ರೆಡಿಟ್ ಕಾರ್ಡ್ ಸಾಲ ಹೆಚ್ಚು ಇದೆ.

NPA: ಮಾರ್ಚ್​ನಲ್ಲಿ ಬ್ಯಾಂಕುಗಳ ಕೆಟ್ಟ ಸಾಲ ಶೇ. 4ಕ್ಕಿಂತಲೂ ಕಡಿಮೆ; ಸರ್ಕಾರಿ ಬ್ಯಾಂಕುಗಳಿಗೆ ಕ್ರೆಡಿಟ್ ಕಾರ್ಡ್​ಗಳದ್ದೇ ತಲೆನೋವು
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 29, 2023 | 10:07 AM

Share

ನವದೆಹಲಿ: ಭಾರತೀಯ ಬ್ಯಾಂಕುಗಳ ಕೆಟ್ಟ ಸಾಲ(NPA-Non Performing Assets) ಪ್ರಮಾಣ ಇಳಿಮುಖವಾಗುವುದು ಮುಂದುವರಿದಿದೆ. 2023ರ ಮಾರ್ಚ್ ತಿಂಗಳಲ್ಲಿ ಒಟ್ಟು ಅನುತ್ಪಾದಕ ಸಾಲ ಕಡಿಮೆ ಆಗಿದೆ. ಭಾರತೀಯ ಬ್ಯಾಂಕುಗಳಲ್ಲಿ ಈ ಕೆಟ್ಟ ಸಾಲಗಳ ಪ್ರಮಾಣ ಶೇ. 3.9ರಷ್ಟು ಇದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೂನ್ 28ರಂದು ಬಿಡುಗಡೆ ಮಾಡಿದ ಫೈನಾನ್ಷಿಯಲ್ ಸ್ಟೆಬಿಲಿಟಿ ವರದಿಯಲ್ಲಿ (Financial Stability Report) ಈ ಅಂಶ ಹೈಲೈಟ್ ಎನಿಸಿದೆ. ಕಳೆದ 10 ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ ಕೆಟ್ಟ ಸಾಲ ಪ್ರಮಾಣ ಎಂದು ಹೇಳಲಾಗಿದೆ. ಇನ್ನು, ನಿವ್ವಳ ಅನುತ್ಪಾದಕ ಸಾಲದ ಪ್ರಮಾಣವೂ ಶೇ. 1ಕ್ಕೆ ಇಳಿದಿದೆ.

ಅನುತ್ಪಾದಕ ಸಾಲದ ಪ್ರಮಾಣ ಇಳಿದಿರುವುದು ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ಆರೋಗ್ಯದ ಸೂಚಕವಾಗಿದೆ. ಈಗ ಭಾರತದ ಕಮರ್ಷಿಯಲ್ ಬ್ಯಾಂಕುಗಳು ಆರ್​ಬಿಐ ನಿಗದಿಪಡಿಸಿದ ಕನಿಷ್ಠ ಬಂಡವಾಳ ಮಟ್ಟದ ಅವಶ್ಯಕತೆಯನ್ನು ಸುಲಭವಾಗಿ ಮುಟ್ಟಬಹುದು. ಯಾವುದೇ ಹೊಸ ಬಂಡವಾಳ ಒಳಹರಿವು ಇಲ್ಲದೆಯೇ ಒಂದು ವರ್ಷದವರೆಗೂ ಬ್ಯಾಂಕುಗಳು ಎನ್​ಪಿಎಗಳ ಒತ್ತಡ ತಡೆದುಕೊಳ್ಳುವಷ್ಟು ಸುದೃಢಗೊಂಡಿವೆ ಎಂದು ಆರ್​ಬಿಐನ ವರದಿ ಹೇಳುತ್ತದೆ.

ಇದನ್ನೂ ಓದಿMahila Samman Scheme: ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಅಂಚೆ ಕಚೇರಿ ಮಾತ್ರವಲ್ಲ ಈ 16 ಬ್ಯಾಂಕುಗಳಲ್ಲೂ ಲಭ್ಯ

ಕ್ರೆಡಿಟ್ ಕಾರ್ಡ್ ಸಾಲಗಳ ತಲೆನೋವು

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ವಿಭಾಗಗಳಲ್ಲಿ ಅನುತ್ಪಾದಕ ಸಾಲದ ಪ್ರಮಾಣ ಹೆಚ್ಚಿನ ಮಟ್ಟದಲ್ಲೇ ಇದೆ. ಆರ್​ಬಿಐ ಬಿಡುಗಡೆ ಮಾಡಿದ ಫೈನಾನ್ಷಿಯಲ್ ಸ್ಟೆಬಿಲಿಟಿ ರಿಪೋರ್ಟ್ ಪ್ರಕಾರ 2023 ಮಾರ್ಚ್ ತಿಂಗಳಲ್ಲಿ ಸರ್ಕಾರಿ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್​ನ ಅನುತ್ಪಾದಕ ಸಾಲದ ಪ್ರಮಾಣ ಶೇ. 18ರಷ್ಟು ಇದೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಇದು ಶೇ. 9ರಷ್ಟು ಮಾತ್ರ ಇತ್ತು. ಅಂದರೆ ಈ ಎನ್​ಪಿಎ ಬಹುತೇಕ ದ್ವಿಗುಣಗೊಂಡಿದೆ.

ಇದನ್ನೂ ಓದಿ: IT Returns: ಐಟಿ ರಿಟರ್ನ್ಸ್​ಗೆ ನೊಂದಾಯಿಸುವುದು ಹೇಗೆ, ಐಟಿಆರ್ ಫೈಲಿಂಗ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಸರ್ಕಾರಿ ಬ್ಯಾಂಕುಗಳಲ್ಲಿ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲದಲ್ಲಿ ಹೆಚ್ಚಿನ ಸಮಸ್ಯೆಯಾಗಿಲ್ಲ. ಈ ಸಾಲಗಳು ಬ್ಯಾಂಕುಗಳಿಗೆ ಒಳ್ಳೆಯ ಆದಾಯ ತಂದುಕೊಟ್ಟಿದೆ. ಆದರೆ ಕ್ರೆಡಿಟ್ ಕಾರ್ಡ್ ಸಾಲಗಳೇ ಈಗ ಈ ಸರ್ಕಾರಿ ಬ್ಯಾಂಕುಗಳಿಗೆ ತಲೆನೋವಾಗಿರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ