Memory Chip Factory: ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಅಮೆರಿಕದ ಮೈಕ್ರೋನ್ ಮತ್ತು ಗುಜರಾತ್ ಮಧ್ಯೆ ಒಪ್ಪಂದಕ್ಕೆ ಸಹಿ; ವಿಶ್ವದ ಎಲೆಕ್ಟ್ರಾನಿಕ್ಸ್ ಅಡ್ಡೆಯಾಗುವತ್ತ ಭಾರತ ಹೆಜ್ಜೆ

Micron Technology's Semiconductor Unit In Gujarat: ಗುಜರಾತ್​ನ ಅಹ್ಮದಾಬಾದ್ ಬಳಿಯ ಸಾನಂದ್​ನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಅಮೆರಿಕದ ಮೈಕ್ರೋನ್ ಟೆಕ್ನಾಲಜಿ ಮತ್ತು ಗುಜರಾತ್ ಸರ್ಕಾರದ ಮಧ್ಯೆ ಎಂಒಯು ಒಪ್ಪಂದವಾಗಿದೆ. ಇಲ್ಲಿ ಮೆಮೋರಿ ಚಿಪ್​ಗಳು ತಯಾರಾಗಲಿವೆ.

Memory Chip Factory: ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಅಮೆರಿಕದ ಮೈಕ್ರೋನ್ ಮತ್ತು ಗುಜರಾತ್ ಮಧ್ಯೆ ಒಪ್ಪಂದಕ್ಕೆ ಸಹಿ; ವಿಶ್ವದ ಎಲೆಕ್ಟ್ರಾನಿಕ್ಸ್ ಅಡ್ಡೆಯಾಗುವತ್ತ ಭಾರತ ಹೆಜ್ಜೆ
ಮೈಕ್ರೋನ್ ಎಂಒಯು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 29, 2023 | 10:54 AM

ಅಹ್ಮದಾಬಾದ್: ಇಲ್ಲಿನ ಸಾನಂದ್ ಬಳಿ 22,500 ಕೋಟಿ ರೂ ಮೌಲ್ಯದ ಸೆಮಿಕಂಡಕ್ಟರ್ ಘಟಕವೊಂದನ್ನು (Semiconductor Unit) ಸ್ಥಾಪಿಸಲು ಗುಜರಾತ್ ಸರ್ಕಾರದ ಜೊತೆ ಅಮೆರಿಕದ ಮೈಕ್ರೋನ್ ಟೆಕ್ನಾಲಜಿ ಸಂಸ್ಥೆ (Micron Technology) ಜೂನ್ 28ರಂದು ಎಂಒಯುಗೆ ಸಹಿಹಾಕಿದೆ. ಸಿಎಂ ಕಚೇರಿಯಲ್ಲಿ ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಮೈಕ್ರೋನ್ ಟೆಕ್ನಾಲಜಿ ಹಿರಿಯ ಉಪಾಧ್ಯಕ್ಷ ಗುರಶರಣ್ ಸಿಂಗ್ ಅವರು ಎಂಒಯುಗೆ ಸಹಿ ಹಾಕಿದರು. ಈ ವೇಳೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು.

93 ಎಕರೆ ಪ್ರದೇಶದಲ್ಲಿ ಸೆಮಿಕಂಡಕ್ಟರ್ ಅಸೆಂಬ್ಲಿ, ಟೆಸ್ಟ್, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್ (ATMP) ಸೌಲಭ್ಯವು ಈ ಘಟಕದಲ್ಲಿ ಇರಲಿದೆ. ಮುಂದಿನ 18 ತಿಂಗಳಲ್ಲಿ 5,000 ನೇರ ಉದ್ಯೋಗ ಸೃಷ್ಟಿಯಾಗುವ ಗುರಿ ಇದೆ. ಪರೋಕ್ಷವಾಗಿ ಇನ್ನೂ ಬಹಳಷ್ಟು ಉದ್ಯೋಗಗಳು ಸೃಷ್ಟಿಯಾಗಬಹುದು. ಹಲವು ಸ್ಟಾರ್ಟಪ್​ಗಳ ಸ್ಥಾಪನೆಗೆ ಅವಕಾಶ ಮಾಡಿಕೊಡಬಹುದು.

ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ನಾಲ್ಕು ದಶಕಗಳಿಂದ ನಡೆದಿತ್ತು ಪ್ರಯತ್ನ

ಭಾರತದಲ್ಲಿ ಸೆಮಿಕಂಡಕ್ಟರ್ ಘಟಕ ತರಲು ನಾಲ್ಕು ದಶಕಗಳಿಂದಲೂ ಪ್ರಯತ್ನಗಳು ನಡೆದಿದ್ದವು. 1980ರಲ್ಲಿ ಮೊದಲ ಬಾರಿಗೆ ಆ ಪ್ರಯತ್ನವಾಗಿದ್ದು. ಬಳಿಕ 1990 ಹಾಗೂ 2005ರಲ್ಲೂ ಪ್ರಯತ್ನಗಳಾಗಿದ್ದವು. ಕೊನೆಗೆ ಈಗ ಅದು ಸಾಕಾರಗೊಂಡಿದೆ.

ಇದನ್ನೂ ಓದಿMicron: ಶೀಘ್ರದಲ್ಲಿ ಬರಲಿದೆ ಮೊತ್ತಮೊದಲ ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್; ಮೈಕ್ರೋನ್​ನಿಂದ ಸಿದ್ಧವಾಗುತ್ತಿದೆ ಫ್ಯಾಕ್ಟರಿ

ಈ ಒಪ್ಪಂದಕ್ಕಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ಮೈಕ್ರಾನ್ ಟೆಕ್ನಾಲಜಿ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಕಳೆದ ಹಲವಾರು ತಿಂಗಳಿಂದ ಎಡಬಿಡದೆ ಮಾತುಕತೆ ನಡೆಸಿದ ಫಲವಾಗಿ ಈಗ ಘಟಕ ಸ್ಥಾಪನೆಯ ಉದ್ದೇಶ ಸಾಕಾರಗೊಳ್ಳುತ್ತಿದೆ. ಮೈಕ್ರೋನ್ ಟೆಕ್ನಾಲಜಿ ಸಂಸ್ಥೆಯ ಅಧಿಕಾರಿಗಳೊಂದಿಗೆ 40 ಸಭೆಗಳಲ್ಲಿ 50-60 ಗಂಟೆಗಳಷ್ಟು ಕಾಲ ಮಾತುಕತೆ ನಡೆಸಿದ್ದೆವು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ವಿಜಯ್ ನೆಹ್ರಾ ಹೇಳಿದ್ದಾರೆ.

ಮೈಕ್ರಾನ್​ನ ಸೆಮಿಕಂಡಕ್ಟರ್ ಘಟಕ ಯಾಕೆ ಮುಖ್ಯ?

ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಸೆಮಿಕಂಡಕ್ಟರ್ ಬಹಳ ಅಗತ್ಯ ಇರುವ ಹೂರಣ. ಮೊಬೈಲ್ ಪೋನ್​ನಿಂದ ಹಿಡಿದು ಎಲೆಕ್ಟ್ರಿಕ್ ವಾಹನಗಳವರೆಗೆ ನಾನಾ ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಸೆಮಿಕಂಡಕ್ಟರ್ ಬೇಕೇ ಬೇಕು. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ, ಭಾರತ 3 ಲಕ್ಷ ಕೋಟಿ ರೂ ಮೊತ್ತದ ಸೆಮಿಕಂಡಕ್ಟರ್​ಗಳನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಮೆಮೋರಿ ಕಾರ್ಡ್ ಆಮದು ಮೌಲ್ಯವೇ 1 ಲಕ್ಷ ಕೋಟಿ ರೂನಷ್ಟಿದೆ. ಮೈಕ್ರಾನ್ ಸಂಸ್ಥೆ ಈ ಮೆಮೋರಿ ಚಿಪ್​ಗಳನ್ನು ತಯಾರಿಸುವ ಅತಿದೊಡ್ಡ ಕಂಪನಿಗಳಲ್ಲಿ ಒಂದು. ಈಗ ಭಾರತದಲ್ಲಿ ಮೈಕ್ರೋನ್ ಟೆಕ್ನಾಲಜಿಯ ಘಟಕ ಸ್ಥಾಪನೆಯಾದರೆ ಮೆಮೋರಿ ಚಿಪ್ ತಯಾರಿಕೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸುವತ್ತ ದೊಡ್ಡ ಹೆಜ್ಜೆಯಾಗಲಿದೆ ಎಂದು ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿNPA: ಮಾರ್ಚ್​ನಲ್ಲಿ ಬ್ಯಾಂಕುಗಳ ಕೆಟ್ಟ ಸಾಲ ಶೇ. 4ಕ್ಕಿಂತಲೂ ಕಡಿಮೆ; ಸರ್ಕಾರಿ ಬ್ಯಾಂಕುಗಳಿಗೆ ಕ್ರೆಡಿಟ್ ಕಾರ್ಡ್​ಗಳದ್ದೇ ತಲೆನೋವು

ಮೈಕ್ರೋನ್ ಟೆಕ್ನಾಲಜಿಯ ಹಿರಿಯ ಉಪಾಧ್ಯಕ್ಷ ಗುರಶರಣ್ ಸಿಂಗ್ ಅವರು, ಸೆಮಿಕಂಡಕ್ಟರ್ ಘಟಕ ಸ್ಥಾಪನೆಯಿಂದ ಭಾರತವು ಈ ಕ್ಷೇತ್ರದಲ್ಲಿ ಮ್ಯಾನುಫ್ಯಾಕ್ಚರಿಂಗ್ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಭರವಸೆ ನೀಡಿದ್ದಾರೆ.

ಫಾಕ್ಸ್​ಕಾನ್ವೇದಾಂತದಿಂದಲೂ ಸೆಮಿಕಂಡಕ್ಟರ್ ಘಟಕ?

ಕುತೂಹಲವೆಂದರೆ ಭಾರತದಲ್ಲಿ ಸೆಮಿಕಂಡಕ್ಟರ್ ಸ್ಥಾಪನೆಗೆ ಮೈಕ್ರೋನ್ ಜೊತೆ ಎಂಒಯು ನಡೆಯುವ ಮುನ್ನ ಫಾಕ್ಸ್​ಕಾನ್ ಮತ್ತು ಗುಜರಾತ್ ಸರ್ಕಾರದ ಮಧ್ಯೆ ಎಂಒಯು ಆಗಿತ್ತು. ಫಾಕ್ಸ್​ಕಾನ್ ಮತ್ತು ವೇದಾಂತ ಕಂಪನಿಗಳು ಜಂಟಿಯಾಗಿ ಸೇರಿ ಸ್ಥಾಪಿಸಲುದ್ದೇಶಿಸಿರುವ ಸೆಮಿಕಂಡಕ್ಟರ್ ಘಟಕಕ್ಕೆ ಕೇಂದ್ರದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ. ಶೀಘ್ರದಲ್ಲೇ ಅದಕ್ಕೂ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಹಾಗಾದಲ್ಲಿ, ಅದೂ ಕೂಡ ಗುಜರಾತ್​ನಲ್ಲೇ ಸ್ಥಾಪನೆಯಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್