AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ತಲಾ ಆದಾಯದಲ್ಲಿ ಮೊದಲ ಸ್ಥಾನದಲ್ಲಿದೆ ಕರ್ನಾಟಕ!

ಕರ್ನಾಟಕವು 2014-15ರಲ್ಲಿ 1,05,697 ರೂ. ಇದ್ದ ತಲಾ ಆದಾಯದಿಂದ ಶೇ. 93.6ರಷ್ಟು ಹೆಚ್ಚಳವಾಗಿ 2,04,605 ರೂ.ದೊಂದಿಗೆ ಭಾರತದ ತಲಾ ಆದಾಯದಲ್ಲಿ ಅಗ್ರಸ್ಥಾನದಲ್ಲಿದೆ. ಬೆಂಗಳೂರಿನ ತಾಂತ್ರಿಕ ಪ್ರಗತಿಯು ಇದಕ್ಕೆ ಗಣನೀಯ ಕೊಡುಗೆ ನೀಡಿದೆ. ತಮಿಳುನಾಡು (1,96,309 ರೂ.) ಎರಡನೇ ಸ್ಥಾನದಲ್ಲಿದೆ. ಹರಿಯಾಣ (1,94,285 ರೂ.) ಮೂರನೇ ಸ್ಥಾನದಲ್ಲಿವೆ.

ಭಾರತದ ತಲಾ ಆದಾಯದಲ್ಲಿ ಮೊದಲ ಸ್ಥಾನದಲ್ಲಿದೆ ಕರ್ನಾಟಕ!
Income
ಸುಷ್ಮಾ ಚಕ್ರೆ
|

Updated on: Jul 23, 2025 | 5:28 PM

Share

ಬೆಂಗಳೂರು, ಜುಲೈ 23: 2025ರ ಆರ್ಥಿಕ ವರ್ಷದಲ್ಲಿ ತಲಾ ಆದಾಯದ ಆಧಾರದ ಮೇಲೆ ಕರ್ನಾಟಕ (Karnataka) ರಾಜ್ಯ ಭಾರತದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಹಣಕಾಸು ಸಚಿವಾಲಯವು ಲೋಕಸಭೆಯಲ್ಲಿ ನೀಡಿದ ಉತ್ತರದ ಪ್ರಕಾರ, ಕರ್ನಾಟಕದ ನಿವ್ವಳ ಆದಾಯ 2 ಲಕ್ಷ ರೂ.ಗಳನ್ನು ದಾಟಿದೆ. ಈ ಸಾಧನೆಯು ರಾಜ್ಯದ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯನ್ನು ಬಿಂಬಿಸುತ್ತದೆ. ಬೆಂಗಳೂರಿನಂತಹ ನಗರಗಳ ತಂತ್ರಜ್ಞಾನ ಮತ್ತು ಸ್ಟಾರ್ಟ್ಅಪ್ ಸಂಸ್ಕೃತಿ ಈ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. 6.6ರಷ್ಟು ಹೆಚ್ಚಾಗಿದೆ. ಆದರೆ, ಕಳೆದ 1 ದಶಕದಲ್ಲಿ ಇದು ಶೇ. 94ರಷ್ಟಾಗಿದೆ.

2025ನೇ ಹಣಕಾಸು ವರ್ಷದಲ್ಲಿ ಕರ್ನಾಟಕದ ತಲಾ ನಿವ್ವಳ ರಾಜ್ಯ ದೇಶೀಯ ಉತ್ಪನ್ನ ಅಥವಾ ತಲಾ ಆದಾಯ (NSDP) 2,04,605 ರೂ.ಗಳಿಗೆ ಏರಿಕೆಯಾಗಿದೆ. 2014- 2015ನೇ ಹಣಕಾಸು ವರ್ಷದಲ್ಲಿ ಈ ಅಂಕಿ ಅಂಶ 1,05,697 ರೂ.ಗಳಷ್ಟಿತ್ತು. ಅಂದರೆ ಕಳೆದ 10 ವರ್ಷಗಳಲ್ಲಿ ಇದು ಶೇ. 93ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 2024-25ನೇ ಹಣಕಾಸು ವರ್ಷದಲ್ಲಿ ತಲಾ ಆದಾಯ (NNI) 1,14,710 ರೂ.ಗಳಷ್ಟಿತ್ತು. ಇದು ಒಂದು ದಶಕದ ಹಿಂದೆ ಇದ್ದ 72,805 ರೂ.ಗಳಿಗಿಂತ ಶೇ. 57.6ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Lokayukta Raid: ಆದಾಯಕ್ಕೂ ಮೀರಿ ಗಳಿಕೆ ಆರೋಪ; ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ

ಇವು ಟಾಪ್ 5 ರಾಜ್ಯಗಳು:

2025ರ ಹಣಕಾಸು ವರ್ಷದ NSDP ಆಧಾರದ ಮೇಲೆ ಕರ್ನಾಟಕ ಅಗ್ರಸ್ಥಾನದಲ್ಲಿದ್ದರೆ, ತಮಿಳುನಾಡು 1,96,309 ರೂ.ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಹರಿಯಾಣ 1,94,285 ರೂ.ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. NSDP ಆಧಾರದ ಮೇಲೆ ತೆಲಂಗಾಣ 4ನೇ ಸ್ಥಾನದಲ್ಲಿದೆ ಮತ್ತು ಮಹಾರಾಷ್ಟ್ರ 5ನೇ ಸ್ಥಾನದಲ್ಲಿದೆ.

2023-24ನೇ ಹಣಕಾಸು ವರ್ಷದಲ್ಲಿ ಕರ್ನಾಟಕದ NSDP ರೂ. 1,91,970 ರಷ್ಟಿತ್ತು. ಇದು 2024-25ನೇ ಹಣಕಾಸು ವರ್ಷದಲ್ಲಿ ರೂ. 2,04,605ಗೆ ಏರಿದೆ. ಹೀಗಾಗಿ, ಇದು ಶೇ. 6.6ರಷ್ಟು ಹೆಚ್ಚಾಗಿದೆ. ಕಳೆದ ದಶಕದಲ್ಲಿ ಕರ್ನಾಟಕದ NSDP ಶೇ. 93.6ರಷ್ಟು ಹೆಚ್ಚಾಗಿದೆ. ಒಡಿಶಾದ NSDP ಶೇ. 96.7ರಷ್ಟು ಹೆಚ್ಚಾಗಿದೆ. ಈ ಆಧಾರದ ಮೇಲೆ ಇವು ಅಗ್ರ 2 ರಾಜ್ಯಗಳಾಗಿವೆ. 2023-24ನೇ ಸಾಲಿನಲ್ಲಿ ಮಿಜೋರಾಂ (ಶೇ. 125.4), ಗುಜರಾತ್ (ಶೇ. 90.7), ಗೋವಾ (ಶೇ. 89.9), ಕರ್ನಾಟಕ (ಶೇ. 88.5), ತೆಲಂಗಾಣ (ಶೇ. 84.3) ಮತ್ತು ಒಡಿಶಾ (ಶೇ. 83.4) ಅತಿ ಹೆಚ್ಚು ವಾರ್ಷಿಕ ಹೆಚ್ಚಳವನ್ನು ದಾಖಲಿಸಿವೆ.

ಇದನ್ನೂ ಓದಿ: ಆದಾಯ ಸಮಾನತೆಯಲ್ಲಿ ಭಾರತಕ್ಕೆ 4ನೇ ಸ್ಥಾನ; ವಿಶ್ವಬ್ಯಾಂಕ್ ಗಿನಿ ಇಂಡೆಕ್ಸ್​​ನಲ್ಲಿ ಅಮೆರಿಕ, ಚೀನಾಗಿಂತಲೂ ಭಾರತ ಮುಂದು

NSDP ಎಂದರೇನು?:

ನಿವ್ವಳ ರಾಜ್ಯ ದೇಶೀಯ ಉತ್ಪನ್ನ (NSDP) ಎಂದರೆ ಒಂದು ನಿರ್ದಿಷ್ಟ ಅವಧಿಯಲ್ಲಿ (ಉದಾಹರಣೆಗೆ ಹಣಕಾಸು ವರ್ಷ) ಒಂದು ರಾಜ್ಯವು ಉತ್ಪಾದಿಸುವ ಎಲ್ಲಾ ಸರಕು ಮತ್ತು ಸೇವೆಗಳ ನಿವ್ವಳ ಮೌಲ್ಯ. ಇದು ಒಟ್ಟು ರಾಜ್ಯ ದೇಶೀಯ ಉತ್ಪನ್ನ (GSDP)ಕ್ಕಿಂತ ಭಿನ್ನವಾಗಿರುತ್ತದೆ. NSDP ರಾಜ್ಯದ ಆರ್ಥಿಕ ಚಟುವಟಿಕೆ ಮತ್ತು ಸಮೃದ್ಧಿಯ ಪ್ರಮುಖ ಸೂಚಕವಾಗಿದೆ. ಇದನ್ನು ತಲಾ ಆದಾಯವನ್ನು ಲೆಕ್ಕಹಾಕಲು ಸಹ ಬಳಸಲಾಗುತ್ತದೆ. ಇದು ಜನರ ಜೀವನದ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ಸುಮ್ಮನೆ ನಿಂತಿದ್ದ ಅಂಪೈರ್​ ತಲೆಗೆ ಗಾಯ ಮಾಡಿದ ಪಾಕ್ ಆಟಗಾರ; ವಿಡಿಯೋ
ಸುಮ್ಮನೆ ನಿಂತಿದ್ದ ಅಂಪೈರ್​ ತಲೆಗೆ ಗಾಯ ಮಾಡಿದ ಪಾಕ್ ಆಟಗಾರ; ವಿಡಿಯೋ
ರಸ್ತೆ ಗುಂಡಿ, ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಮತ್ತಷ್ಟು ಅವ್ಯವಸ್ಥೆ ಬಯಲು
ರಸ್ತೆ ಗುಂಡಿ, ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಮತ್ತಷ್ಟು ಅವ್ಯವಸ್ಥೆ ಬಯಲು
ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸುಪ್ರೀಂಗೆ ಅರ್ಜಿ
ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸುಪ್ರೀಂಗೆ ಅರ್ಜಿ