AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಾಯ ಸಮಾನತೆಯಲ್ಲಿ ಭಾರತಕ್ಕೆ 4ನೇ ಸ್ಥಾನ; ವಿಶ್ವಬ್ಯಾಂಕ್ ಗಿನಿ ಇಂಡೆಕ್ಸ್​​ನಲ್ಲಿ ಅಮೆರಿಕ, ಚೀನಾಗಿಂತಲೂ ಭಾರತ ಮುಂದು

India better than US, China in world bank gini index: ಸಮ ಸಮಾಜ ಅಥವಾ ಆದಾಯ ಸಮಾನತೆಯನ್ನು ಅಳೆಯುವ ಗಿನಿ ಇಂಡೆಕ್ಸ್​​ನಲ್ಲಿ ಭಾರತ 4ನೇ ಸ್ಥಾನಕ್ಕೆ ಏರಿದೆ. ವಿಶ್ವಬ್ಯಾಂಕ್​​ನಿಂದ ಬಿಡುಗಡೆಯಾದ ದತ್ತಾಂಶದ ಪ್ರಕಾರ ಭಾರತದ ಗಿನಿ ಇಂಡೆಕ್ಸ್ 25.5 ಇದೆ. ಸ್ಲೊವಾಕ್ ಗಣರಾಜ್ಯ, ಸ್ಲೊವೇನಿಯಾ, ಬೆಲಾರಸ್ ದೇಶಗಳು ಭಾರತದಕ್ಕಿಂತ ಉತ್ತಮ ಗಿನಿ ಇಂಡೆಕ್ಸ್ ಹೊಂದಿವೆ.

ಆದಾಯ ಸಮಾನತೆಯಲ್ಲಿ ಭಾರತಕ್ಕೆ 4ನೇ ಸ್ಥಾನ; ವಿಶ್ವಬ್ಯಾಂಕ್ ಗಿನಿ ಇಂಡೆಕ್ಸ್​​ನಲ್ಲಿ ಅಮೆರಿಕ, ಚೀನಾಗಿಂತಲೂ ಭಾರತ ಮುಂದು
ಭಾರತದಲ್ಲಿ ಬಡತನ ನಿವಾರಣೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 06, 2025 | 3:30 PM

Share

ನವದೆಹಲಿ, ಜುಲೈ 6: ಭಾರತದ ಜಿಡಿಪಿ ಹೆಚ್ಚುತ್ತಿದೆಯಾದರೂ ಅದರ ತಲಾದಾಯ ಬಹಳ ಕಡಿಮೆ ಇದೆ. ಶ್ರೀಮಂತರು ಮತ್ತು ಬಡವರ ಮಧ್ಯೆ ಅಂತರ ಹೆಚ್ಚುತ್ತಿದೆ ಎನ್ನುವ ವಾದಗಳ ಮಧ್ಯೆ ವಿಶ್ವಬ್ಯಾಂಕ್​ನ ಗಿನಿ ಇಂಡೆಕ್ಸ್ (World Bank Gini Index) ಅಚ್ಚರಿಯ ಸಂಗತಿಯೊಂದನ್ನು ಹೊರಗೆಡವಿದೆ. ಈ ಇಂಡೆಕ್ಸ್ ಪ್ರಕಾರ ಭಾರತವು ವಿಶ್ವದಲ್ಲೇ ನಾಲ್ಕನೇ ಅತೀ ಸಮ ಸಮಾಜ (equity society) ಎನಿಸಿದೆ. ಅಂದರೆ, ಆದಾಯ ಸಮಾನತೆಯಲ್ಲಿ (income equality) ಭಾರತ ನಾಲ್ಕನೇ ಸ್ಥಾನ ಹೊಂದಿದೆ. ಅಮೆರಿಕ, ಚೀನಾ ಇತ್ಯಾದಿ ಬಹುತೇಕ ಎಲ್ಲಾ ದೇಶಗಳಿಗಿಂತಲೂ ಭಾರತ ಉತ್ತಮ ಎನಿಸಿದೆ.

ವಿಶ್ವಬ್ಯಾಂಕ್ ಬಿಡುಗಡೆ ಮಾಡಿದ ಹೊಸ ದತ್ತಾಂಶದ ಪ್ರಕಾರ ಭಾರತದ ಜಿನಿ ಇಂಡೆಕ್ಸ್ 25.5 ಇದೆ. ಜಿನಿ ಸಂಖ್ಯೆ ಕಡಿಮೆ ಇದ್ದಷ್ಟೂ ಉತ್ತಮ ರ್ಯಾಂಕಿಂಗ್ ಎನಿಸುತ್ತದೆ. ಸ್ಲೊವಾಕ್ ರಿಪಬ್ಲಿಕ್, ಸ್ಲೊವೇನಿಯಾ ಮತ್ತು ಬೆಲಾರಸ್ ದೇಶಗಳು ಈ ಇಂಡೆಕ್ಸ್​​ನಲ್ಲಿ ಮೊದಲ ಮೂರು ಸ್ಥಾನ ಪಡೆದಿವೆ.

ಜಿ7, ಜಿ20 ಗುಂಪಿನಲ್ಲಿರುವ ಶ್ರೀಮಂತ ದೇಶಗಳ ಗಿನಿ ಇಂಡೆಕ್ಸ್ ಭಾರತದಕ್ಕಿಂತ ಹಿಂದಿದೆ. ಅಮೆರಿಕ ಮತ್ತು ಚೀನಾದ ಗಿನಿ ಇಂಡೆಕ್ಸ್ ಕ್ರಮವಾಗಿ 41.8 ಮತ್ತು 35.7 ಇದೆ. ಭಾರತದ್ದು 25.5 ಇದೆ.

ಇದನ್ನೂ ಓದಿ: Forex Reserves: ಎರಡನೇ ಬಾರಿ 700 ಬಿಲಿಯನ್ ಡಾಲರ್ ಗಡಿ ದಾಟಿದ ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ

12 ವರ್ಷದಲ್ಲಿ ಕಡುಬಡತನದಿಂದ ಹೊರಬಂದ ಭಾರತೀಯರ ಸಂಖ್ಯೆ 17 ಕೋಟಿಗೂ ಅಧಿಕ

ವಿಶ್ವಬ್ಯಾಂಕ್​​ನ 2025ರ ಬಡತನ ಮತ್ತು ಸಮತೆ ವರದಿ ಪ್ರಕಾರ 2011ರಿಂದ 2023ರವರೆಗೆ 12 ವರ್ಷದಲ್ಲಿ ಭಾರತವು ಬಡತನ ನಿವಾರಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಈ ಅವಧಿಯಲ್ಲಿ 17.1 ಕೋಟಿ ಜನರು ಕಡುಬಡತನದಿಂದ ಹೊರಬಂದಿದ್ದಾರೆ. 2011ರಲ್ಲಿ ಶೇ. 16.2ರಷ್ಟಿದ್ದ ಬಡತನ ದರ 2023ರಲ್ಲಿ ಶೇ. 2.3ಕ್ಕೆ ಇಳಿದಿದೆ. ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ದಿನಕ್ಕೆ 2.15 ಡಾಲರ್​​ಗಿಂತ (ಸುಮಾರು 200 ರೂ) ಕಡಿಮೆ ಆದಾಯ ಇದ್ದರೆ ಅದು ಬಡತನ ಎಂದು ಪರಿಗಣಿಸಲಾಗುತ್ತದೆ.

2011ರಲ್ಲಿ 28.8 ಇದ್ದ ಭಾರತದ ಗಿನಿ ಇಂಡೆಕ್ಸ್

2011ರಲ್ಲಿ ಭಾರತದ ಗಿನಿ ಇಂಡೆಕ್ಸ್ 28.8 ಇತ್ತು. ಒಂದು ದಶಕದಲ್ಲಿ ನಿರಂತರವಾಗಿ ಬೆಳವಣಿಗೆ ಕಾಣುತ್ತಾ ಇರುವುದರ ಜೊತೆಗೆ ಹೆಚ್ಚ ಸಮ ಪ್ರಮಾಣದ ಆದಾಯ ಹಂಚಿಕೆಯೂ ನಡೆಯುತ್ತಿದೆ. ನಿರ್ದಿಷ್ಟ ಗುಂಪುಗಳನ್ನು ಗುರಿ ಮಾಡಿ ನಡೆಸಲಾಗುತ್ತಿರುವ ಸಮಾಜ ಕಲ್ಯಾಣ ಯೋಜನೆಗಳು, ಅವುಗಳ ಫಲವು ನೇರವಾಗಿ ಜನರನ್ನು ತಲುಪಲು ಸಹಾಯವಾಗುವ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಇತ್ಯಾದಿ ಸೌಲಭ್ಯಗಳ ಸಂಯೋಜನೆಯು ಭಾರತದ ಆದಾಯ ಅಸಮಾನತೆಯನ್ನು ತಗ್ಗಿಸಲು ಸಹಾಯವಾಗಿವೆ.

ಇದನ್ನೂ ಓದಿ: ಸಾಲಗಳಿಗೆ ಇರಲ್ಲ ಪ್ರೀಪೇಮೆಂಟ್ ಚಾರ್ಜ್; ಜನವರಿ 1ರಿಂದ ಆರ್​ಬಿಐ ಹೊಸ ನಿಯಮ

ಪಿಎಂ ಜನ್ ಧನ್ ಯೋಜನೆ ಅಡಿಯಲ್ಲಿ 55 ಕೋಟಿ ಬ್ಯಾಂಕ್ ಖಾತೆಗಳನ್ನು ಆರಂಭಿಸಲಾಗಿದೆ. ಕೋಟ್ಯಂತರ ಜನರು ಮೊದಲ ಬಾರಿಗೆ ಬ್ಯಾಂಕಿಂಗ್ ವ್ಯವಸ್ಥೆಗೆ ಸೇರ್ಪಡೆಯಾಗಿದ್ದಾರೆ. ಆರ್ಥಿಕವಾಗಿ ದುರ್ಬಲರಾದ ಈ ವರ್ಗದ ಜನರಿಗೆ ವಿವಿಧ ಸರ್ಕಾರಿ ಸ್ಕೀಮ್​​ಗಳ ಫಲವನ್ನು ನೇರವಾಗಿ ತಲುಪಿಸಲು ಡಿಬಿಟಿಯನ್ನು ಸರ್ಕಾರ ಬಳಸಿದೆ. ಈ ನೇರ ಹಣ ವರ್ಗಾವಣೆಯ ಕೆಲಸವನ್ನು ಸಾಧ್ಯವಾಗುವಂತೆ ಮಾಡಿದ್ದು ಆಧಾರ್ ಅನ್ನು ಒಳಗೊಂಡ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್.

ಇದರ ಜೊತೆಗೆ ಹಿರಿಯ ನಾಗರಿಕರು ಸೇರಿದಂತೆ ದುರ್ಬಲ ವರ್ಗದವರಿಗೆ ಉಚಿತ ಹೆಲ್ತ್ ಇನ್ಷೂರೆನ್ಸ್ ನೀಡುವ ಆಯುಷ್ಮಾನ್ ಭಾರತ್ ಯೋಜನೆ, 80 ಕೋಟಿಗೂ ಅಧಿಕ ಜನರಿಗೆ ಆಹಾರ ವಸ್ತು ವಿತರಿಸುವ ಪಿಎಂಜಿಕೆಎವೈ ಯೋಜನೆ, ತಳಮಟ್ಟದಲ್ಲಿ ಉದ್ದಿಮೆದಾರರಿಗೆ ಧನ ಸಹಾಯ ನೀಡಿ ಉತ್ತೇಜಿಸುವ ಸ್ಟ್​ಯಾಂಡ್ ಅಪ್ ಇಂಡಿಯಾ, ಇತ್ಯಾದಿ ಯೋಜನೆಗಳು ಭಾರತದ ಬೆಳವಣಿಗೆಗೆ ಸಹಾಯಕವಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ