AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Forex Reserves: ಎರಡನೇ ಬಾರಿ 700 ಬಿಲಿಯನ್ ಡಾಲರ್ ಗಡಿ ದಾಟಿದ ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ

India's forex reserves 702.78 billion USD: 2025ರ ಜೂನ್ 27ರಂದು ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ 702.78 ಬಿಲಿಯನ್ ಡಾಲರ್ ಮಟ್ಟ ಮುಟ್ಟಿದೆ. ಆ ವಾರ ಫಾರೆಕ್ಸ್ ರಿಸರ್ವ್ಸ್ 4.84 ಬಿಲಿಯನ್ ಡಾಲರ್​​ನಷ್ಟು ಏರಿದೆ. 2024ರ ಸೆಪ್ಟೆಂಬರ್​​ನಲ್ಲಿ ಈ ಮೀಸಲು ನಿಧಿ 704.80 ಬಿಲಿಯನ್ ಡಾಲರ್ ಮಟ್ಟ ಮುಟ್ಟಿ ಸಾರ್ವಕಾಲಿಕ ದಾಖಲೆ ಸ್ಥಾಪಿಸಿತ್ತು. ಈಗ 2.02 ಬಿಲಿಯನ್ ಡಾಲರ್​​ನಷ್ಟು ಮಾತ್ರ ಹಿಂದೆ ಇದೆ.

Forex Reserves: ಎರಡನೇ ಬಾರಿ 700 ಬಿಲಿಯನ್ ಡಾಲರ್ ಗಡಿ ದಾಟಿದ ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ
ಫಾರೆಕ್ಸ್ ರಿಸರ್ವ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 06, 2025 | 12:57 PM

Share

ನವದೆಹಲಿ, ಜುಲೈ 6: ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ (Forex Reserves) ಜೂನ್ 27ರಂದು ಅಂತ್ಯಗೊಂಡ ವಾರದಲ್ಲಿ 4.84 ಬಿಲಿಯನ್ ಡಾಲರ್​​ನಷ್ಟು ಏರಿದೆ. ಇದರೊಂದಿಗೆ ಭಾರತದ ಫಾರೆಕ್ಸ್ ನಿಧಿ 702.78 ಬಿಲಿಯನ್ ಡಾಲರ್ ಮುಟ್ಟಿದೆ. ಎರಡನೇ ಬಾರಿ ಭಾರತದ ಈ ಸಂಪತ್ತು 700 ಬಿಲಿಯನ್ ಡಾಲರ್ ಗಡಿ ದಾಟಿರುವುದು. ಇದು ಭಾರತದ ಎರಡನೇ ಅತಿದೊಡ್ಡ ಫಾರೆಕ್ಸ್ ರಿಸರ್ವ್ಸ್ ಮಟ್ಟ ಎನಿಸಿದೆ. 2024ರ ಸೆಪ್ಟೆಂಬರ್​​ನಲ್ಲಿ 704.89 ಬಿಲಿಯನ್ ಡಾಲರ್​​ನಷ್ಟು ಮಟ್ಟಕ್ಕೆ ಫಾರೆಕ್ಸ್ ರಿಸರ್ವ್ಸ್ ಏರಿತ್ತು. ಅದು ಸಾರ್ವಕಾಲಿಕ ಗರಿಷ್ಠ ಮಟ್ಟ ಎನಿಸಿದೆ.

ಜೂನ್ 27ರಂದು ಅಂತ್ಯಗೊಂಡ ವಾರದಲ್ಲಿ ಏರಿಕೆಯಾದ 4.84 ಬಿಲಿಯನ್ ಡಾಲರ್ ಸಂಪತ್ತಿನಲ್ಲಿ ವಿದೇಶೀ ಕರೆನ್ಸಿಗಳ ಪ್ರಮಾಣ ಬಹಳ ಹೆಚ್ಚು. ಚಿನ್ನದ ಸಂಗ್ರಹ ಕಡಿಮೆಗೊಂಡರೂ ಫಾರೀನ್ ಕರೆನ್ಸಿಗಳನ್ನು ಹೆಚ್ಚು ಖರೀದಿಸಿದ್ದರಿಂದ ಒಟ್ಟಾರೆ ಫಾರೆಕ್ಸ್ ನಿಧಿ ಮೇಲ್ಮುಖ ಕಂಡಿದೆ.

ಇದನ್ನೂ ಓದಿ: ಏಟಿಗೆ ಏಟು; ಭಾರತದ ಉತ್ಪನ್ನಗಳ ಮೇಲೆ ಸುಂಕ ಹಾಕುತ್ತಿರುವ ಅಮೆರಿಕಕ್ಕೆ ಪ್ರತಿಸುಂಕ ವಿಧಿಸಲು ಭಾರತ ನಿರ್ಧಾರ

ಆರ್​ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಫಾರೀನ್ ಕರೆನ್ಸಿ ಆಸ್ತಿಗಳ ಮೌಲ್ಯ 5.75 ಬಿಲಿಯನ್ ಡಾಲರ್​​ನಷ್ಟು ಏರಿದೆ. ಎಸ್​​ಡಿಆರ್ ಮತ್ತು ಐಎಂಎಫ್ ರಿಸರ್ವ್ ಪೊಸಿಶನ್ ಕೂಡ ಏರಿಕೆ ಕಂಡಿವೆ. ಗೋಲ್ಡ್ ರಿಸರ್ವ್ಸ್ ಮಾತ್ರ 1.23 ಬಿಲಿಯನ್ ಡಾಲರ್​​ನಷ್ಟು ಕಡಿಮೆಗೊಂಡಿದೆ.

ಜೂನ್ 27ರಂದು ಭಾರತದ ಫಾರೆಕ್ಸ್ ರಿಸರ್ವ್ಸ್

ಒಟ್ಟಾರೆ ಫಾರೆಕ್ಸ್ ರಿಸರ್ವ್ಸ್: 702.78 ಬಿಲಿಯನ್ ಡಾಲರ್

  1. ಫಾರೀನ್ ಕರೆನ್ಸಿ ಅಸೆಟ್: 594.82 ಬಿಲಿಯನ್ ಡಾಲರ್
  2. ಗೋಲ್ಡ್ ರಿಸರ್ವ್ಸ್: 84.5 ಬಿಲಿಯನ್ ಡಾಲರ್
  3. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್​​ಡಿಆರ್): 18.83 ಬಿಲಿಯನ್ ಡಾಲರ್
  4. ಐಎಂಎಫ್​​ನೊಂದಿಗಿನ ಮೀಸಲು: 4.62 ಬಿಲಿಯನ್ ಡಾಲರ್

ಇದನ್ನೂ ಓದಿ: ಷೇರುಮಾರುಕಟ್ಟೆಗೆ ಚಳ್ಳೆಹಣ್ಣು ತಿನ್ನಿಸಿ 36,500 ಕೋಟಿ ರೂ ಪಂಗನಾಮ ಹಾಕಿತಾ ಜೇನ್ ಸ್ಟ್ರೀಟ್; ಅದರ ಕುತಂತ್ರದ ಕಥೆ ಕೇಳಿ…

ಮುಂದಿನ ವಾರಗಳಲ್ಲಿ ಫಾರೆಕ್ಸ್ ನಿಧಿಯಲ್ಲಿ ಇಳಿಕೆ..?

ಭಾರತದ ರೂಪಾಯಿ ಕರೆನ್ಸಿಯ ಏರಿಳಿತ ತೀವ್ರವಾಗಿದ್ದು ಕಂಪನದ ಸ್ಥಿತಿಯಲ್ಲಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಉತ್ತಮವಾಗಿದ್ದಾಗ ಆರ್​ಬಿಐ ವಿದೇಶೀ ಕರೆನ್ಸಿಗಳನ್ನು ಹೆಚ್ಚೆಚ್ಚು ಖರೀದಿಸುತ್ತದೆ. ರುಪಾಯಿ ಮೌಲ್ಯ ಕಡಿಮೆಗೊಂಡರೆ ಡಾಲರ್ ಕರೆನ್ಸಿಗಳನ್ನು ಮಾರಿ, ರುಪಾಯಿ ಮೌಲ್ಯ ಕುಸಿತ ತಡೆಯಲು ಪ್ರಯತ್ನಿಸುತ್ತದೆ. ಈಗ ಆರ್​​ಬಿಐ ಡಾಲರ್ ಕರೆನ್ಸಿಗಳನ್ನು ಮಾರುವ ಸಾಧ್ಯತೆ ಇರುವುದರಿಂದ ಫಾರೆಕ್ಸ್ ಸಂಪತ್ತು ತುಸು ಕರಗುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ