ಸದ್ದಿಲ್ಲದೆ ಬಿಡುಗಡೆ ಆಯಿತು ಒನ್​ಪ್ಲಸ್​ನ ಹೊಸ ಏಸ್ 3V ​ಫೋನ್: ಬೆಲೆ ಎಷ್ಟು?, ಏನಿದೆ ಫೀಚರ್ಸ್?

|

Updated on: Mar 22, 2024 | 12:56 PM

OnePlus Ace 3V Launched: ಒನ್​ಪ್ಲಸ್​ ಏಸ್ 3V ಸ್ಮಾರ್ಟ್​ಫೋನ್​ನಲ್ಲಿ ವಿಶೇಷವಾದ ಎಲರ್ಟ್ ಸ್ಲೈಡರ್‌ ಆಯ್ಕೆ ನೀಡಲಾಗಿದೆ. ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸದ್ದಿಲ್ಲದೆ ಬಿಡುಗಡೆ ಆಯಿತು ಒನ್​ಪ್ಲಸ್​ನ ಹೊಸ ಏಸ್ 3V ​ಫೋನ್: ಬೆಲೆ ಎಷ್ಟು?, ಏನಿದೆ ಫೀಚರ್ಸ್?
OnePlus Ace 3V
Follow us on

ಪ್ರಸಿದ್ಧ ಒನ್​ಪ್ಲಸ್​ ಕಂಪನಿ ಸದ್ದಿಲ್ಲದೆ ಹೊಸ ಒನ್​ಪ್ಲಸ್​ ಏಸ್ 3V (OnePlus Ace 3V) ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ಕ್ವಾಲ್ಕಂನ ಸ್ನಾಪ್​ಡ್ರಾಗನ್ 7+ Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು ವೈರ್ಡ್ SuperVOOC ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,500mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದರಲ್ಲಿ ವಿಶೇಷವಾದ ಎಲರ್ಟ್ ಸ್ಲೈಡರ್‌ ಆಯ್ಕೆ ನೀಡಲಾಗಿದೆ. ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಒನ್​ಪ್ಲಸ್​ ಏಸ್ 3V ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಒನ್​ಪ್ಲಸ್​ ಏಸ್ 3V ಬೆಲೆ, ಲಭ್ಯತೆ:

ಸದ್ಯಕ್ಕೆ ಚೀನಾದಲ್ಲಿ ರಿಲೀಸ್ ಆಗಿರುವ ಒನ್​ಪ್ಲಸ್​ ಏಸ್ 3V ಫೋನಿನ 12GB + 256GB ಆಯ್ಕೆಗೆ CNY 1,999 ಇದೆ. ಇದರ 12GB + 512GB ಮತ್ತು 16GB + 512GB ರೂಪಾಂತರಗಳ ಬೆಲೆ ಕ್ರಮವಾಗಿ CNY 2,299 ಮತ್ತು CNY 2,599. ಈ ಹ್ಯಾಂಡ್ಸೆಟ್ ಅನ್ನು ಮ್ಯಾಜಿಕ್ ಪರ್ಪಲ್ ಸಿಲ್ವರ್ ಮತ್ತು ಟೈಟಾನಿಯಂ ಏರ್ ಗ್ರೇ ಬಣ್ಣಗಳಲ್ಲಿ ನೀಡಲಾಗುತ್ತದೆ. ಬಳಕೆದಾರರು ಒಪ್ಪೋ ಚೀನಾ ಇ-ಸ್ಟೋರ್ ಮೂಲಕ ಈ ಫೋನ್ ಅನ್ನು ಮುಂಗಡವಾಗಿ ಬುಕ್ ಮಾಡಬಹುದು. ಮಾರ್ಚ್ 25 ರಂದು ಮೊದಲ ಸೇಲ್ ಕಾಣಲಿದೆ.

ರೈನ್‌ವಾಟರ್ ಸ್ಮಾರ್ಟ್ ಟಚ್ ವೈಶಿಷ್ಟ್ಯದ ರಿಯಲ್ ಮಿ ನಾರ್ಜೊ 70 ಪ್ರೊ ಇಂದಿನಿಂದ ಖರೀದಿಗೆ ಲಭ್ಯ

ಒನ್​ಪ್ಲಸ್​ ಏಸ್ 3V ಫೀಚರ್ಸ್:

ಒನ್​ಪ್ಲಸ್​ ಏಸ್ 3V ಸ್ಮಾರ್ಟ್​ಫೋನ್ 2,772 x 1,240 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ವರೆಗೆ ರಿಫ್ರೆಶ್ ದರ ಮತ್ತು 2,150 nits ಬ್ರೈಟ್‌ನೆಸ್ ಮಟ್ಟವನ್ನು ಹೊಂದಿರುವ 6.74-ಇಂಚಿನ AMOLED ಡಿಸ್​ಪ್ಲೇಯನ್ನು ಹೊಂದಿದೆ. ಈ ಫೋನ್​ನಲ್ಲಿ 16GB ಯ LPDDR5x RAM ಮತ್ತು 512GB ವರೆಗಿನ UFS 4.0 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಸ್ನಾಪ್‌ಡ್ರಾಗನ್ 7+ Gen 3 SoC ಇದೆ. ಇದು ಆಂಡ್ರಾಯ್ಡ್ 14 ಆಧಾರಿತ ColorOS 14 ನೊಂದಿಗೆ ರನ್ ಆಗುತ್ತದೆ.

ಕ್ಯಾಮರಾ ವಿಭಾಗದಲ್ಲಿ, ಒನ್​ಪ್ಲಸ್​ ಏಸ್ 3V ಫೋನ್ OIS ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, 8-ಮೆಗಾಪಿಕ್ಸೆಲ್ ಸಂವೇದಕದೊಂದಿಗೆ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಹಿಂಭಾಗದಲ್ಲಿ LED ಫ್ಲ್ಯಾಷ್ ಘಟಕವನ್ನು ಒಳಗೊಂಡಿದೆ. ಮತ್ತೊಂದೆಡೆ, ಮುಂಭಾಗದ ಕ್ಯಾಮೆರಾವು 16-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.

ಬಹುನಿರೀಕ್ಷಿತ ವಿವೋ T3 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಕೇವಲ 19,999 ರೂ.

ಈ ಸ್ಮಾರ್ಟ್​ಫೋನ್ 100W ವೈರ್ಡ್ SuperVOOC ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದು 5G, 4G VoLTE, Wi-Fi 7, ಬ್ಲೂಟೂತ್ 5.4, NFC, ಮತ್ತು USB ಟೈಪ್-C ಸಂಪರ್ಕವನ್ನು ಸಹ ಬೆಂಬಲಿಸುತ್ತದೆ. ಭದ್ರತೆಗಾಗಿ, ಇದು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ