ಒನ್ಪ್ಲಸ್ನಿಂದ ಬರುತ್ತಿದೆ ಹೊಸ ಸ್ಮಾರ್ಟ್‌ಫೋನ್: ರೋಚಕತೆ ಸೃಷ್ಟಿಸಿದ ಒನ್ಪ್ಲಸ್ ಏಸ್ 3V
OnePlus Ace 3V: ಒನ್ಪ್ಲಸ್ ಏಸ್ 3V ಸ್ಮಾರ್ಟ್‌ಫೋನ್ ಈ ಹಿಂದೆ ಬಿಡುಗಡೆಯಾದ ಒನ್ಪ್ಲಸ್ ಏಸ್ 2V ನ ಉತ್ತರಾಧಿಕಾರಿಯಾಗಿದೆ. ಲಾಂಚ್‌ಗೂ ಮುನ್ನ ಫೋನ್‌ನ ಪ್ರೊಸೆಸರ್ ಮತ್ತು ಡಿಸ್‌ಪ್ಲೇ ಬಗ್ಗೆ ಮಾಹಿತಿ ಬಹಿರಂಗವಾಗಿದೆ. Weibo ನಲ್ಲಿ ಫೋನ್‌ಗೆ ಸಂಬಂಧಿಸಿದ ಕೆಲ ಫೀಚರ್ಸ್ ಸೋರಿಕೆ ಆಗಿದೆ.
ಒನ್ಪ್ಲಸ್ ಕಂಪನಿಯ ಪ್ರೀಮಿಯಂ ಸ್ಮಾರ್ಟ್‌ಫೋನ್ ಒನ್ಪ್ಲಸ್ ಏಸ್ 3 ಕಳೆದ ವರ್ಷ ಅನಾವರಣಗೊಂಡಿತ್ತು. ಇದಕ್ಕೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಇದೀಗ ಕಂಪನಿಯ ತನ್ನ Ace ಸರಣಿಗೆ Ace 3V (OnePlus Ace 3V) ಸೇರ್ಪಡೆಗೊಳಿಸಲು ಮುಂದಾಗಿದೆ. ಹೊಸ ಒನ್ಪ್ಲಸ್ ಏಸ್ 3ವಿ ಫೋನ್ ಕುರಿತು ಕೆಲ ಫೀಚರ್ಸ್ ಬಹಿರಂಗವಾಗಿದೆ. ಈ ಫೋನ್ ಸ್ನಾಪ್‌ಡ್ರಾಗನ್ 7 Gen 3 ಚಿಪ್‌ಸೆಟ್ ಅನ್ನು ಹೊಂದಿದೆ. ಇದಲ್ಲದೆ, ಇದರ ಡಿಸ್‌ಪ್ಲೇ ಹೆಚ್ಚಿನ ರೆಸಲ್ಯೂಶನ್ ಪ್ಯಾನೆಲ್‌ನೊಂದಿಗೆ ಬರಲಿದೆಯಂತೆ.
ಒನ್ಪ್ಲಸ್ ಏಸ್ 3V ಸ್ಮಾರ್ಟ್‌ಫೋನ್ ಈ ಹಿಂದೆ ಬಿಡುಗಡೆಯಾದ ಒನ್ಪ್ಲಸ್ ಏಸ್ 2V ನ ಉತ್ತರಾಧಿಕಾರಿಯಾಗಿದೆ. ಲಾಂಚ್‌ಗೂ ಮುನ್ನ ಫೋನ್‌ನ ಪ್ರೊಸೆಸರ್ ಮತ್ತು ಡಿಸ್‌ಪ್ಲೇ ಬಗ್ಗೆ ಮಾಹಿತಿ ಬಹಿರಂಗವಾಗಿದೆ. Weibo ನಲ್ಲಿ ಫೋನ್‌ಗೆ ಸಂಬಂಧಿಸಿದ ಕೆಲ ಫೀಚರ್ಸ್ ಸೋರಿಕೆ ಆಗಿದೆ. 1.5K ರೆಸಲ್ಯೂಶನ್ ಹೊಂದಿರುವ OLED ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ಟಿಪ್ಸ್ಟರ್ ಸೋರಿಕೆ ಮಾಡಿದ್ದಾರೆ. ಈ ಫೋನ್ 120Hz ರಿಫ್ರೆಶ್ ದರವನ್ನು ಹೊಂದಿರುತ್ತದೆ. ಪ್ರೊಸೆಸರ್‌ಗೆ ಸಂಬಂಧಿಸಿದಂತೆ, ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 ಜನ್ 3 ಚಿಪ್‌ಸೆಟ್‌ನೊಂದಿಗೆ ಬರಬಹುದು ಎಂದು ಹೇಳಲಾಗಿದೆ.
ಒನ್ಪ್ಲಸ್ ಏಸ್ 3V ನ ಬ್ಯಾಟರಿ ವಿಶೇಷಣಗಳನ್ನು ಸಹ ಇಲ್ಲಿ ಉಲ್ಲೇಖಿಸಲಾಗಿದೆ. ಅದರ ಪ್ರಕಾರ ಫೋನ್ 5000 mAh ಬ್ಯಾಟರಿ ಶಕ್ತಿಯನ್ನು ಪಡೆಯಬಹುದು. ಇದರೊಂದಿಗೆ, 100W ವೇಗದ ಚಾರ್ಜಿಂಗ್ ಬೆಂಬಲವನ್ನು ಒದಗಿಸಲಾಗುತ್ತದೆ. ಈ ಫೋನ್ ಫ್ರೇಮ್ ಪ್ಲಾಸ್ಟಿಕ್‌ನಲ್ಲಿ ಬರಬಹುದು ಮತ್ತು ಹಿಂಭಾಗಕ್ಕೆ ಗಾಜಿನ ಫಲಕವನ್ನು ನೀಡಬಹುದು ಎಂದು ಹೇಳಲಾಗಿದೆ. ಇದರ ಹೊರತಾಗಿ ಫೋನ್‌ನ ಕ್ಯಾಮೆರಾ, ಸ್ಟೋರೇಜ್, RAM ಇತ್ಯಾದಿಗಳ ಮಾಹಿತಿಯನ್ನು ನೀಡಲಾಗಿಲ್ಲ.
ಫ್ಲಿಪ್ಕಾರ್ಟ್ನಲ್ಲಿ ಮೊಬೈಲ್ ಫೆಸ್ಟ್ ಸೇಲ್: ಸ್ಮಾರ್ಟ್‌ಫೋನ್ ಖರೀದಿಗೆ ಇದೇ ಬೆಸ್ಟ್ ಟೈಮ್
ಒನ್ಪ್ಲಸ್ ಏಸ್ 2V ನ ವಿಶೇಷಣಗಳನ್ನು ನೋಡಿದರೆ, ಈ ಫೋನ್ 6.74 ಇಂಚಿನ 2.5D AMOLED ಡಿಸ್ಪ್ಲೇಯನ್ನು ಹೊಂದಿದೆ, ಇದರ ರಿಫ್ರೆಶ್ ದರ 120Hz ಆಗಿದೆ. ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರ ರಕ್ಷಣೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 9000 ಪ್ರೊಸೆಸರ್ ಅನ್ನು ಹೊಂದಿದೆ. ಬ್ಯಾಟರಿ ಬ್ಯಾಕಪ್ ಕುರಿತು ಮಾತನಾಡುತ್ತಾ, 5,000mAh ಬ್ಯಾಟರಿಯನ್ನು ಹೊಂದಿದ್ದು 80W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್‌ನ ಬ್ಯಾಟರಿಯನ್ನು ಕೇವಲ 32 ನಿಮಿಷಗಳಲ್ಲಿ 0 ರಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಈ ಸ್ಮಾರ್ಟ್‌ಫೋನ್‌ನ ಹಿಂಭಾಗವು 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸಂವೇದಕವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಮುಂಭಾಗದಲ್ಲಿ ಅಳವಡಿಸಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ