OnePlus Nord CE 3 Lite 5G vs Realme 10 Pro 5G: ಯಾವ ಪೋನ್ ಬೆಸ್ಟ್?
ಒನ್ಪ್ಲಸ್ ನಾರ್ಡ್ ಸಿಇ 3 ಲೈಟ್ 5G ಮತ್ತು ರಿಯಲ್ಮಿ 10 ಪ್ರೊ ಪ್ಲಸ್ 5G ಫೋನ್ ಎರಡರಲ್ಲೂ ಹಲವು ವ್ಯತ್ಯಾಸಗಳಿವೆ. ಒನ್ಪ್ಲಸ್ ಫೋನ್ನಲ್ಲಿದೆ 6.72 ಇಂಚಿನ ಡಿಸ್ಪ್ಲೇ ಹಾಗೂ ರಿಯಲ್ಮಿ ಫೋನ್ನಲ್ಲಿ 6.70 ಇಂಚಿನ ಡಿಸ್ಪ್ಲೇ ಇದೆ.
ಚೀನಾ ಹೊರತುಪಡಿಸಿದರೆ, ಜಾಗತಿಕವಾಗಿ ಅತಿ ದೊಡ್ಡ ಗ್ಯಾಜೆಟ್ ಮಾರುಕಟ್ಟೆ ಇರುವುದು ಭಾರತದಲ್ಲಿ. ಇಲ್ಲಿ ಚೀನಾ ಮೂಲದ ಕಂಪನಿಗಳ ಬ್ರ್ಯಾಂಡ್ಗಳದ್ದೇ ಕಾರುಬಾರು. ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಕಂಪನಿಗಳ ವಿವಿಧ ಸ್ಮಾರ್ಟ್ಫೋನ್ಗಳು ಭರ್ಜರಿ ಸದ್ದು ಮಾಡುತ್ತಿವೆ. ಚೀನಾದ ಎರಡು ಪ್ರಮುಖ ಬ್ರ್ಯಾಂಡ್ಗಳಾಗಿರುವ ಒನ್ಪ್ಲಸ್ ಮತ್ತು ರಿಯಲ್ಮಿ, ಇತ್ತೀಚೆಗೆ ಭಾರತದಲ್ಲಿ ಪರಿಚಯಿಸಿರುವ ಹೊಸ ಸ್ಮಾರ್ಟ್ಫೋನ್ಗಳ ನಡುವಣ ಭಿನ್ನತೆ, ವೈಶಿಷ್ಟ್ಯಗಳ ವಿವರ ಇಲ್ಲಿದೆ. ಎರಡೂ ಮಾದರಿಗಳಿಗೆ ಇರುವ ಪ್ರಮುಖ ವ್ಯತ್ಯಾಸಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಒನ್ಪ್ಲಸ್ ನಾರ್ಡ್ ಸಿಇ 3 ಲೈಟ್ 5G ಮತ್ತು ರಿಯಲ್ಮಿ 10 ಪ್ರೊ ಪ್ಲಸ್ 5G ಫೋನ್ ಎರಡರಲ್ಲೂ ಹಲವು ವ್ಯತ್ಯಾಸಗಳಿವೆ. ಒನ್ಪ್ಲಸ್ ಫೋನ್ನಲ್ಲಿದೆ 6.72 ಇಂಚಿನ ಡಿಸ್ಪ್ಲೇ ಹಾಗೂ ರಿಯಲ್ಮಿ ಫೋನ್ನಲ್ಲಿ 6.70 ಇಂಚಿನ ಡಿಸ್ಪ್ಲೇ ಇದೆ. ಎರಡೂ ಫೋನ್ಗಳಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಇದೆ. ಒನ್ಪ್ಲಸ್ 108+2+2 ಮೆಗಾಪಿಕ್ಸೆಲ್ ಕ್ಯಾಮೆರಾ ಇದ್ದರೆ, ರಿಯಲ್ಮಿ 108+8+2 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಎರಡೂ ಫೋನ್ಗಳಲ್ಲಿ 5000mAh ಬ್ಯಾಟರಿ ಸಾಮರ್ಥ್ಯವಿದ್ದು, ರಿಯಲ್ಮಿ ಫೋನ್ 6GB RAM + 128GB ಮಾದರಿಗೆ ₹18,999 ದರವಿದೆ. ಒನ್ಪ್ಲಸ್ ಫೋನ್ 8GB RAM + 128GB ಆವೃತ್ತಿಗೆ ₹19,999 ದರ ಹೊಂದಿದೆ.