oppo find n3 flip
ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಒಪ್ಪೋ ಇತ್ತೀಚೆಗಷ್ಟೆ ಭಾರತದಲ್ಲಿ ತನ್ನ ಹೊಸ ಕ್ಲಾಮ್‌ಶೆಲ್-ಶೈಲಿಯ ಫೋಲ್ಡಬಲ್ ಫೋನ್ ಒಪ್ಪೋ ಫೈಂಡ್ N3 ಫ್ಲಿಪ್ (Oppo Find N3 Flip) ಅನ್ನು ಬಿಡುಗಡೆ ಮಾಡಿತ್ತು. ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್ ಮತ್ತು 44W SUPERVOOC ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿರುವ ಈ ಹ್ಯಾಂಡ್‌ಸೆಟ್ ಇಂದಿನಿಂದ ಭಾರತದಲ್ಲಿ ಮಾರಾಟ ಕಾಣಲಿದೆ. ಈ ಫೋನಿನ ಕುರಿತ ಸಂಪೂರ್ಣ ಮಾಹಿತಿ ನೋಡೋಣ.
ಒಪ್ಪೋ ಫೈಂಡ್ N3 ಫ್ಲಿಪ್ ಬೆಲೆ:
ಒಪ್ಪೋ ಫೈಂಡ್ N3 ಫ್ಲಿಪ್ ಬೆಲೆ ರೂ. 94,999 ರೂ. ಆಗಿದೆ. ಇದು 12GB RAM ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ಇಂದಿನಿಂದ ಫ್ಲಿಪ್‌ಕಾರ್ಟ್ ಮತ್ತು ಒಪ್ಪೋ ಸ್ಟೋರ್‌ಗಳ ಮೂಲಕ ಸಂಜೆ 6 ಗಂಟೆಯಿಂದ ಖರೀದಿಗೆ ಲಭ್ಯವಿರುತ್ತದೆ. ಮೊದಲ ಸೇಲ್ ಪ್ರಯುಕ್ತ ಒಪ್ಪೋ 12,000 ರೂ. ವರೆಗೆ ಕ್ಯಾಶ್‌ಬ್ಯಾಕ್ ಮತ್ತು 24 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಅನ್ನು ಆಯ್ದ ಬ್ಯಾಂಕ್‌ಗಳ ಮೂಲಕ ಘೋಷಿಸಿದೆ. ಒಂದು-ಬಾರಿ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಮತ್ತು ರೂ. 8,000 ವರೆಗಿನ ಎಕ್ಸ್‌ಚೇಂಜ್ ಬೋನಸ್ ಆಯ್ಕೆ ಕೂಡ ಇದೆ.
Tech Tips: ಬಟ್ಟೆ ಒಗೆದ ತಕ್ಷಣ ವಾಷಿಂಗ್ ಮಷೀನ್ ಮುಚ್ಚಳ ಹಾಕಬೇಡಿ: ಯಾಕೆ ನೋಡಿ
ಒಪ್ಪೋ ಫೈಂಡ್ N3 ಫ್ಲಿಪ್ ಫೀಚರ್ಸ್:
- ಒಪ್ಪೋ ಫೈಂಡ್ N3 ಫ್ಲಿಪ್ 6.8-ಇಂಚಿನ ಪೂರ್ಣ-HD (1,080×2,520 ಪಿಕ್ಸೆಲ್‌ಗಳು) LTPO AMOLED ಇನ್ನರ್ ಡಿಸ್ ಪ್ಲೇ ಹೊಂದಿದ್ದು, 1Hz ಮತ್ತು 120Hz ನಡುವಿನ ಡೈನಾಮಿಕ್ ರಿಫ್ರೆಶ್ ದರದಿಂದ ಕೂಡಿದೆ.
- 3.26-ಇಂಚಿನ (382×720 ಪಿಕ್ಸೆಲ್‌ಗಳು) ಕವರ್ ಡಿಸ್‌ಪ್ಲೇಯು AMOLED ಪ್ಯಾನೆಲ್ ಜೊತೆಗೆ 900 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್ ಹೊಂದಿದೆ. ಈ ಫೋನ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ರಕ್ಷಿಸಲ್ಪಟ್ಟಿದೆ.
- ವಿಶೇಷವಾಗಿ ಈ ಫೋನ್ ಅನ್ನು ಸೈಲೆಂಟ್ ಮಾಡಲು, ರಿಂಗ್ ಮಾಡಲು ಅಥವಾ ವೈಬ್ರೇಟ್ ಮಾಡಲು ಅಲರ್ಟ್ ಸ್ಲೈಡರ್ ಕೂಡ ಇದೆ.
- ಮಡಿಸಬಹುದಾದ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಪ್ರೊಸೆಸರ್ ಬೆಂಬಲಿಸುತ್ತದೆ. ಇದನ್ನು ARM ಇಮ್ಮಾರ್ಟಲಿಸ್-G715 MC11 GPU ನೊಂದಿಗೆ ಜೋಡಿಸಲಾಗಿದೆ.
- ಇದು 50MP ಸೋನಿ IMX890 ಪ್ರಾಥಮಿಕ ಸಂವೇದಕ, 48MP ಸೋನಿ IMX581 ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 32MP ಸೋನಿ IMX709 ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿಗಾಗಿ, 32MP ಸೋನಿ IMX709 RGBW ಫ್ರಂಟ್ ಕ್ಯಾಮೆರಾ ಇದೆ.
- ಒಪ್ಪೋ ಫೈಂಡ್ N3 ಫ್ಲಿಪ್ 44W SUPERVOOC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4,300mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
- ಆಂಡ್ರಾಯ್ಡ್ 13 ಅನ್ನು ಆಧರಿಸಿದ ColorOS 13.2 ಮೂಲಕ ರನ್ ಮಾಡುತ್ತದೆ. ಇತರ ವೈಶಿಷ್ಟ್ಯಗಳಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕ, ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಪೀಕರ್‌ಗಳು, 5G ಮತ್ತು ವೈ-ಫೈ 7 ಸೇರಿವೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ