Reliance Jio: 1 ವರ್ಷ ಅಮೆಜಾನ್ ಪ್ರೈಮ್ ಫ್ರೀ: ಜಿಯೋದಿಂದ ಹೊಸ ಬಂಪರ್ ಪ್ಲಾನ ಬಿಡುಗಡೆ

Jio Introduces New Annual Plan: ರಿಲಯನ್ಸ್ ಜಿಯೋದ ಈ ಹೊಸ ಯೋಜನೆಯ ಬೆಲೆ 3227 ರೂ. ಆಗಿದೆ. ಈ ಜಿಯೋ ಯೋಜನೆಯಲ್ಲಿ ಎಷ್ಟು ಡೇಟಾವನ್ನು ಪಡೆಯಬಹುದು?, ಎಷ್ಟು ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ?. ಇಲ್ಲಿದೆ ನೋಡಿ ಮಾಹಿತಿ.

Reliance Jio: 1 ವರ್ಷ ಅಮೆಜಾನ್ ಪ್ರೈಮ್ ಫ್ರೀ: ಜಿಯೋದಿಂದ ಹೊಸ ಬಂಪರ್ ಪ್ಲಾನ ಬಿಡುಗಡೆ
Reliance jio
Follow us
Vinay Bhat
|

Updated on:Oct 22, 2023 | 2:55 PM

ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) OTT ಪ್ರಿಯರಿಗಾಗಿ ಈಗಾಗಲೇ ಅನೇಕ ಉತ್ತಮ ಯೋಜನೆಗಳನ್ನು ಹೊಂದಿದೆ. ಇದರ ನಡುವೆ ಕಂಪನಿಯು ಮತ್ತೊಂದು ಹೊಸ ರೀಚಾರ್ಜ್ ಪ್ಲಾನ್ ಅನ್ನು ಪ್ರಾರಂಭಿಸಿದೆ. ಜಿಯೋದ ಈ ನೂತನ ಯೋಜನೆ ಸಾಕಷ್ಟು ಪ್ರಯೋಜನಕಾರಿ ಆಗಿದೆ. ಮುಖ್ಯವಾಗಿ ಜಿಯೋ ಈ ಯೋಜನೆಯೊಂದಿಗೆ ನಿಮಗೆ ಒಂದು ವರ್ಷದ ವರೆಗೆ ಅಮೆಜಾನ್ ಪ್ರೈಮ್ ವಿಡಿಯೋದ ಪ್ರಯೋಜನವನ್ನು ನೀಡುತ್ತದೆ.

ರಿಲಯನ್ಸ್ ಜಿಯೋದ ಈ ಹೊಸ ಯೋಜನೆಯ ಬೆಲೆ 3227 ರೂ. ಆಗಿದೆ. ಈ ಜಿಯೋ ಯೋಜನೆಯಲ್ಲಿ ಎಷ್ಟು ಡೇಟಾವನ್ನು ಪಡೆಯಬಹುದು?, ಎಷ್ಟು ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ?. ಇಲ್ಲಿದೆ ನೋಡಿ ಮಾಹಿತಿ.

ಜಿಯೋ 3227 ರೂ. ಯೋಜನೆ ವಿವರಗಳು

ಜಿಯೋದ 3227 ರೂ. ಪ್ಲಾನ್​ನಲ್ಲಿ ನೀವು ಪ್ರತಿದಿನ 2 GB ಹೈ-ಸ್ಪೀಡ್ ಡೇಟಾದ ಪ್ರಯೋಜನವನ್ನು ಪಡೆಯುತ್ತೀರಿ, ಆದರೆ ಮಿತಿ ಮುಗಿದ ನಂತರ, ವೇಗವು 64Kbps ಗೆ ಕಡಿಮೆಯಾಗುತ್ತದೆ. ಇದರೊಂದಿಗೆ, ಸ್ಥಳೀಯ ಮತ್ತು STD ಕರೆ ಮಾಡುವ ಸೌಲಭ್ಯ ಯಾವುದೇ ನೆಟ್‌ವರ್ಕ್​ಗೆ ಉಚಿತವಾಗಿದೆ. ದಿನಕ್ಕೆ 100 SMS ನ ಪ್ರಯೋಜನವನ್ನು ಸಹ ಪಡೆಯುತ್ತೀರಿ.

ಇದನ್ನೂ ಓದಿ
Image
108MP ಅದ್ಭುತ ಕ್ಯಾಮೆರಾ ಹೊಂದಿರುವ 3 ಅಗ್ಗದ ಸ್ಮಾರ್ಟ್‌ಫೋನ್‌ಗಳು ಇಲ್ಲಿದೆ
Image
ವಾಟ್ಸ್​ಆ್ಯಪ್​ನಿಂದ ಫೋನ್ ಸ್ಟೋರೇಜ್ ಫುಲ್ ಆಗಿದ್ರೆ ಜಸ್ಟ್ ಹೀಗೆ ಮಾಡಿ
Image
ವಿವೋದ ಈ ಸ್ಮಾರ್ಟ್​ಫೋನ್ ಬೆಲೆಯಲ್ಲಿ ಬರೋಬ್ಬರಿ 10,000 ರೂ. ಇಳಿಕೆ
Image
ಬಟ್ಟೆ ಒಗೆದ ತಕ್ಷಣ ವಾಷಿಂಗ್ ಮಷೀನ್ ಮುಚ್ಚಳ ಹಾಕಬೇಡಿ: ಯಾಕೆ ನೋಡಿ

WhatsApp New Feature: ವಾಟ್ಸ್​ಆ್ಯಪ್​ನಿಂದ ಬಂತು ಊಹಿಸಲಾಗದ ಫೀಚರ್: ಒಂದೆ ಆ್ಯಪ್​ನಲ್ಲಿ ಎರಡು ಅಕೌಂಟ್

ರಿಲಯನ್ಸ್ ಜಿಯೋದ ಈ ಪ್ರಿಪೇಯ್ಡ್ ಪ್ಲಾನ್ ಅನ್ನು ನೀವು 365 ದಿನಗಳ ದೀರ್ಘಾವಧಿಯ ವ್ಯಾಲಿಡಿಟಿಯೊಂದಿಗೆ ಪಡೆಯುತ್ತೀರಿ. 365 ದಿನಗಳ ವ್ಯಾಲಿಡಿಟಿಯ ಪ್ರಕಾರ ಮತ್ತು ಪ್ರತಿದಿನ 2 ಜಿಬಿ ಡೇಟಾ ಎಂದರೆ ಒಟ್ಟು 730 ಜಿಬಿ ಹೈ-ಸ್ಪೀಡ್ ಡೇಟಾದ ಪ್ರಯೋಜನವನ್ನು ಪಡೆಯುತ್ತೀರಿ. ಒಮ್ಮೆ ರಿಚಾರ್ಜ್ ಮಾಡಿದರೆ ಮತ್ತೆ ಒಂದು ವರ್ಷ ಯಾವುದೇ ಟೆನ್ಶನ್ ಇರುವುದಿಲ್ಲ.

ಈ 3227 ರೂ. ಯೋಜನೆಯೊಂದಿಗೆ, ರಿಲಯನ್ಸ್ ಜಿಯೋ ನಿಮಗೆ 1 ವರ್ಷಕ್ಕೆ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್, ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ಜಿಯೋ ಕ್ಲೌಟ್​ಗೆ ಉಚಿತ ಪ್ರವೇಶವನ್ನು ಪಡೆಯಬಹುದು. ನಿಮ್ಮ ಪ್ರದೇಶದಲ್ಲಿ ಜಿಯೋ 5G ಸೇವೆಯನ್ನು ಹೊಂದಿದ್ದರೆ ಮತ್ತು ನಿಮ್ಮದು 5G ಫೋನ್ ಆಗದ್ದರೆ, ಈ ಯೋಜನೆಯೊಂದಿಗೆ ನೀವು ಅನಿಯಮಿತ ಟ್ರೂ 5G ಡೇಟಾವನ್ನು ಆನಂದಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Sun, 22 October 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್