
ಬೆಂಗಳೂರು (ನ. 18): ಭಾರತದಲ್ಲಿ ಒಪ್ಪೋ ಫೈಂಡ್ X9 (Oppo Find X9) ಸರಣಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಒಪ್ಪೋ ಫೈಂಡ್ X9 ಮತ್ತು ಫೈಂಡ್ X9 ಪ್ರೊ ಎಂಬ ಎರಡು ಫೋನುಗಳಿವೆ. ಎರಡೂ ಹ್ಯಾಂಡ್‌ಸೆಟ್‌ಗಳು ಮೀಡಿಯಾ ಟೆಕ್‌ನ ಪ್ರಮುಖ ಡೈಮೆನ್ಸಿಟಿ 9500 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಫೈಂಡ್ X9 ಸರಣಿಯು ಹ್ಯಾಸೆಲ್‌ಬ್ಲಾಡ್ ಅಭಿವೃದ್ಧಿಪಡಿಸಿದ ಟ್ರಿಪಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿರುತ್ತದೆ. ಫೈಂಡ್ X9 ಮತ್ತು ಫೈಂಡ್ X9 ಪ್ರೊ ಆಂಡ್ರಾಯ್ಡ್ 16 ಆಧಾರಿತ ಕಲರ್ ಒಎಸ್ 16 ನಲ್ಲಿ ರನ್ ಆಗುತ್ತವೆ. ಈ ಫೋನುಗಳ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಒಪ್ಪೋ ಫೈಂಡ್ X9 ನ 12GB+256GB RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್ ಬೆಲೆ ರೂ. 74,999 ರಿಂದ ಪ್ರಾರಂಭವಾಗುತ್ತದೆ. ಇದು 16GB+512GB ರೂಪಾಂತರದಲ್ಲಿಯೂ ಲಭ್ಯವಿದೆ, ಇದರ ಬೆಲೆ ರೂ. 84,999. ಇನ್ನು ಒಪ್ಪೋ ಫೈಂಡ್ X9 ಪ್ರೊ 16GB RAM ಮತ್ತು 512GB ಆನ್‌ಬೋರ್ಡ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ, ಇದರ ಬೆಲೆ ರೂ. 1,09,999.
ಈ ಹ್ಯಾಂಡ್‌ಸೆಟ್ 6.59-ಇಂಚಿನ AMOLED ಡಿಸ್ಪ್ಲೇ, 120Hz ರಿಫ್ರೆಶ್ ದರ ಹೊಂದಿದೆ. ಡಿಸ್ಪ್ಲೇ ಮೇಲ್ಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ. ಹ್ಯಾಸೆಲ್‌ಬ್ಲಾಡ್-ಟ್ಯೂನ್ ಮಾಡಲಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ, ಇದರಲ್ಲಿ 50-ಮೆಗಾಪಿಕ್ಸೆಲ್ (f/1.6) ಸೋನಿ LYT-808 ವೈಡ್ ಕ್ಯಾಮೆರಾ, 50-ಮೆಗಾಪಿಕ್ಸೆಲ್ (f/2.0) ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ (f/2.6) ಸೋನಿ LYT-600 ಟೆಲಿಫೋಟೋ ಕ್ಯಾಮೆರಾ OIS ಜೊತೆಗೆ ಸೇರಿವೆ. 32-ಮೆಗಾಪಿಕ್ಸೆಲ್ ಸೋನಿ IMX615 ಫ್ರಂಟ್-ಫೇಸಿಂಗ್ ಕ್ಯಾಮೆರಾವನ್ನು ಹೊಂದಿದೆ.
Upcoming Smartphones: ಒಂದಲ್ಲ.. ಎರಡಲ್ಲ.. ಈ ವಾರ ರಿಲೀಸ್ ಆಗಲಿದೆ 5 ಶಕ್ತಿಶಾಲಿ ಸ್ಮಾರ್ಟ್‌ಫೋನ್ಸ್
3nm ಮೀಡಿಯಾ ಟೆಕ್ ಡೈಮೆನ್ಸಿಟಿ 9500 ಚಿಪ್‌ಸೆಟ್ ಹೊಂದಿದ್ದು, 16GB ವರೆಗಿನ LPDDR5X RAM ಮತ್ತು 512GB ವರೆಗಿನ UFS 4.1 ಆನ್‌ಬೋರ್ಡ್ ಸ್ಟೋರೇಜ್ ಹೊಂದಿದೆ. ಇದು VC ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ. 7,025mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ನೀಡಲಾಗಿದ್ದು, ಇದು 80W ವೈರ್ಡ್ ಫಾಸ್ಟ್ ಚಾರ್ಜಿಂಗ್, 50W ಏರ್‌ವಿಒಒಸಿ ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಒಪ್ಪೋ ಫೈಂಡ್ X9 ಪ್ರೊ ದೊಡ್ಡದಾದ 6.78-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. 50-ಮೆಗಾಪಿಕ್ಸೆಲ್ (f/1.5) ಸೋನಿ LYT-828 ಪ್ರಾಥಮಿಕ ಕ್ಯಾಮೆರಾವನ್ನು 1/1.28-ಇಂಚಿನ ಸೆನ್ಸರ್, 23mm ಫೋಕಲ್ ಲೆಂತ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 50-ಮೆಗಾಪಿಕ್ಸೆಲ್ (f/2.0) ಸ್ಯಾಮ್ಸಂಗ್ ISOCELL 5KJN5 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು 15mm ಫೋಕಲ್ ಲೆಂತ್ ಮತ್ತು 200-ಮೆಗಾಪಿಕ್ಸೆಲ್ (f/2.1) ಟೆಲಿಫೋಟೋ ಕ್ಯಾಮೆರಾವನ್ನು 70mm ಫೋಕಲ್ ಲೆಂತ್ ಮತ್ತು OIS ಜೊತೆಗೆ ಹೊಂದಿದೆ. ಮುಂಭಾಗದಲ್ಲಿ, ಇದು 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
ಈ ಹ್ಯಾಂಡ್‌ಸೆಟ್ ಫೈಂಡ್ X9 ನಂತೆಯೇ ಚಿಪ್‌ಸೆಟ್, ಸಂಗ್ರಹಣೆ ಮತ್ತು ಸಾಫ್ಟ್‌ವೇರ್ ಬೆಂಬಲವನ್ನು ಹೊಂದಿದೆ. 80W ಸೂಪರ್‌ವಿಒಒಸಿ ವೈರ್ಡ್ ಮತ್ತು 50W ಏರ್‌ವಿಒಒಸಿ ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 7,500mAh ಸಿಲಿಕಾನ್-ಕಾರ್ಬನ್ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲವೂ ಇದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ