AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಟೆಕ್ ಸಮಿಟ್ 2025ಗೆ ಚಾಲನೆ; ಸ್ಟಾರ್ಟಪ್ ನಗರಿಯಲ್ಲಿ 3 ದಿನ ತಂತ್ರಜ್ಞಾನ ಶಕ್ತಿ ಅನಾವರಣ

CM Siddaramaiah inaugurates Bengaluru Tech Summit 2025: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಗಳವಾರ 28ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್ ಅನ್ನು ಉದ್ಘಾಟಿಸಿದ್ದಾರೆ. ತುಮಕೂರು ರಸ್ತೆಯ ಬಿಇಐಸಿಯಲ್ಲಿ ಈ ಸಮಿಟ್ ನ. 20ರವರೆಗೂ 3 ದಿನ ಕಾಲ ನಡೆಯಲಿದೆ. ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಮೊದಲಾದವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಇದ್ದರು.

ಬೆಂಗಳೂರು ಟೆಕ್ ಸಮಿಟ್ 2025ಗೆ ಚಾಲನೆ; ಸ್ಟಾರ್ಟಪ್ ನಗರಿಯಲ್ಲಿ 3 ದಿನ ತಂತ್ರಜ್ಞಾನ ಶಕ್ತಿ ಅನಾವರಣ
ಬೆಂಗಳೂರು ಟೆಕ್ ಸಮಿಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 18, 2025 | 12:57 PM

Share

ಬೆಂಗಳೂರು, ನವೆಂಬರ್ 18: ಮೂರು ದಿನಗಳ ಬೆಂಗಳೂರು ಟೆಕ್ ಸಮಿಟ್​ಗೆ (Bengaluru Tech Summit 2025) ಇಂದು ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಗಳವಾರ 28ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್ ಅನ್ನು ಉದ್ಘಾಟಿಸಿದ್ದಾರೆ. ನವೆಂಬರ್ 18ರಿಂದ 20ರವರೆಗೆ ಮೂರು ದಿನಗಳ ಕಾಲ ಈ ತಂತ್ರಜ್ಞಾನ ಶೃಂಗಸಭೆ ನಡೆಯಲಿದೆ. 50ಕ್ಕೂ ಹೆಚ್ಚು ದೇಶಗಳ ತಂತ್ರಜ್ಞಾನ ಪರಿಣಿತರು, ನಾಯಕರು, ವಿವಿಧ ಕ್ಷೇತ್ರಗಳ ಉದ್ಯಮಪತಿಗಳು ಈ ಟೆಕ್ ಸಮಿಟ್​ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಎಂಬಿ ಪಾಟೀಲ್, ಪ್ರಿಯಾಕ್ ಖರ್ಗೆ, ಬೆಂಗಳೂರಿನ ಪ್ರಮುಖ ಉದ್ಯಮಿಗಳಾದ ಕಿರಣ್ ಮಜುಮ್ದಾರ್, ಕ್ರಿಸ್ ಗೋಪಾಲಕೃಷ್ಣನ್, ಪ್ರಶಾಂತ್ ಪ್ರಕಾಶ್ ಮೊದಲಾದವರು ವೇದಿಕೆ ಹಂಚಿಕೊಂಡರು.

ಇದನ್ನೂ ಓದಿ: ವಾರಕ್ಕೆ 72 ಗಂಟೆ ಕೆಲಸ: ಚೀನಾದ ನಿದರ್ಶನ ನೀಡಿದ ನಾರಾಯಣಮೂರ್ತಿ

ತುಮಕೂರು ರಸ್ತೆಯಲ್ಲಿರುವ ಮಾದಾವರ ಮೆಟ್ರೋ ನಿಲ್ದಾಣ ಸಮೀಪದ ಬಿಇಐಸಿ ಮೈದಾನದಲ್ಲಿ ಮಂಗಳವಾರದಿಂದ ಗುರುವಾರದವರೆಗೂ ಈ ಟೆಕ್ ಸಮಿಟ್ ನಡೆಯಲಿದೆ. ಭವಿಷ್ಯದ ತಂತ್ರಜ್ಞಾನದ ಥೀಮ್ ಈ ಬಾರಿ ಸಮಿಟ್​ನದ್ದಾಗಿದೆ. ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಬಿಟಿ ಇಲಾಖೆ, ಸಾಫ್ಟ್​ವೇರ್ ಟೆಕ್ನಾಲಜಿ ಪಾರ್ಕ್ಸ್ ಸಂಸ್ಥೆ ಈ ತಂತ್ರಜ್ಞಾನ ಶೃಂಗಸಭೆಯನ್ನು ಆಯೋಜಿಸಿವೆ.

ಈ ವೇಳೆ, ಕರ್ನಾಟಕ ಸರ್ಕಾರದ ಹೊಸ ಐಟಿ, ಸ್ಟಾರ್ಟಪ್ ಮತ್ತು ಸ್ಪೇಸ್​ಟೆಕ್ ನೀತಿಗಳನ್ನೂ ಅನಾವರಣಗೊಳಿಸಲಾಗುತ್ತದೆ. ಎಐ ಸಿದ್ಧ ಕಂಪ್ಯೂಟರ್ ಸೇರಿದಂತೆ ಹಲವು ವಿಶೇಷತೆಗಳು ಈ ಸಮಿಟ್​ನಲ್ಲಿ ಕಾಣಸಿಗಲಿವೆ.

ಇದನ್ನೂ ಓದಿ: ಅರಬ್ ಶ್ರೀಮಂತರು ಹಾಯಾಗಿದ್ದಂತೆ ಅನಿಸೋದು ಯಾಕೆ? ಭಾರತ, ಅಮೆರಿಕ, ಚೀನೀಯರ ದೃಷ್ಟಿಕೋನ ಹೇಗೆ?

ಈ ಬಾರಿಯ ಟೆಕ್ ಸಮಿಟ್​ನಲ್ಲಿ ಹಲವು ವಿಶೇಷತೆಗಳಿವೆ. ಫ್ಯೂಚರ್ ಮೇಕರ್ಸ್ ಕಾಂಕ್ಲೇವ್ ಕಾರ್ಯಕ್ರಮವನ್ನು ಈ ಬಾರಿ ನಡೆಸಲಿದ್ದು, ಇದರಲ್ಲಿ 10,000 ಉದ್ದಿಮೆ ಸಂಸ್ಥಾಪಕರು, ಹೂಡಿಕೆದಾರರು ಮತ್ತು ಇನ್ನೋವೇಟರ್​ಗಳ ಸಮ್ಮಿಳನ ಆಗಲಿದೆ. ಹೊಸ ಆಕಾಂಕ್ಷಿಗಳಿಂದ ಹಿಡಿದು ಅನುಭವಸ್ಥ ಆಂಟ್ರಪ್ರನ್ಯೂರ್​ಗಳವರೆಗೆ ಪ್ರತಿಯೊಬ್ಬ ಪ್ರತಿಭೆಗೂ ಒಳ್ಳೆಯ ವೇದಿಕೆ ಸಿಗಲಿದೆ.

ಈ ಟೆಕ್ ಸಮಿಟ್​ಗೆ 50,000 ಹೆಚ್ಚು ಮಂದಿ ಭೇಟಿ ನೀಡಲಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಹೂಡಿಕೆದಾರರು, 500ಕ್ಕೂ ಹೆಚ್ಚು ಮಂದಿ ಭಾಷಣಕಾರರು, ಸಾವಿರಕ್ಕೂ ಅಧಿಕ ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ. 60ಕ್ಕೂ ಹೆಚ್ಚು ದೇಶಗಳಿಂದ ಪ್ರತಿನಿಧಿಗಳು ಬರಲಿದ್ದಾರೆ. ಸಮಿಟ್​ನಲ್ಲಿ 80 ಜ್ಞಾನ ಅಧಿವೇಶನಗಳು, 5,000ಕ್ಕೂ ಅಧಿಕ ಸಭೆಗಳು ನಡೆಯಲಿವೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Tue, 18 November 25

ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ