ಅರಬ್ ಶ್ರೀಮಂತರು ಹಾಯಾಗಿದ್ದಂತೆ ಅನಿಸೋದು ಯಾಕೆ? ಭಾರತ, ಅಮೆರಿಕ, ಚೀನೀಯರ ದೃಷ್ಟಿಕೋನ ಹೇಗೆ?
360 ONE founder Karan Bhagat gives interesting glimpse on rich world: ಶ್ರೀಮಂತರು ಹೇಗೆ ಯೋಚಿಸುತ್ತಾರೆ ಎಂಬುದು ಅವರಿರುವ ಪ್ರದೇಶ, ಅಲ್ಲಿನ ಸಂಸ್ಕೃತಿ, ಪರಿಸರದ ಪ್ರಭಾವ ಇರಬಹುದು. ಉದ್ಯಮಿ ಕರಣ್ ಭಗತ್ ಅವರು ವಿವಿಧ ಪ್ರದೇಶಗಳ ಬಿಲಿಯನೇರ್ಗಳ ಯೋಚನಾಲಹರಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತ, ಅಮೆರಿಕ, ಚೀನಾ ಮತ್ತು ಅರಬ್ನ ಬಿಲಿಯನೇರ್ಗಳು ಯಾವುದಕ್ಕೆ ಪ್ರಾಧಾನ್ಯತೆ ಕೊಡುತ್ತಾರೆ ಎಂದು ವಿಶ್ಲೇಷಿಸಿದ್ದಾರೆ.

ಶ್ರೀಮಂತರು (ultra rich) ಎಂದರೆ ಸದಾ ಐಷಾರಾಮಿತನದಲ್ಲೇ ಮಿಂದೆದ್ದು ಬದುಕುವವರು ಎಂದೇ ಬಹಳ ಜನರ ಕಲ್ಪನೆ. ಆದರೆ, ಹಣ, ಸಮಯ, ಶ್ರಮ, ಜೀವನ ಎಲ್ಲವನ್ನೂ ಬ್ಯಾಲನ್ಸ್ ಮಾಡಬಲ್ಲವನೇ ಶ್ರೀಮಂತನಾಗುವುದು. ಈ ಶ್ರೀಮಂತರು ಹೇಗೆ ಯೋಚಿಸುತ್ತಾರೆ, ಏನು ಯೋಚಿಸುತ್ತಾರೆ ಎನ್ನುವ ಕುತೂಹಲ ನಮಗಿದ್ದೇ ಇರುತ್ತದೆ. ಭಾರತೀಯರ ಯೋಚನೆ ಬೇರೆ ಇರುತ್ತದೆ, ಅಮೆರಿಕದವರು, ಚೀನಾದವರು, ಐರೋಪ್ಯರ ಯೋಚನೆಯೇ ಬೇರೆ ಇರಬಹುದು. ಅಂತೆಯೇ ಆ ಪ್ರದೇಶಗಳ ಶ್ರೀಮಂತರ ಯೋಚನೆಯಲ್ಲೂ, ಇಷ್ಟಾನಿಷ್ಟಗಳಲ್ಲೂ ವ್ಯತ್ಯಾಸ ಇರಬಹುದು. ಉದ್ಯಮಿ ಕರಣ್ ಭಗತ್ (Karan Bhagat) ಪೋಡ್ಕ್ಯಾಸ್ಟ್ವೊಂದರಲ್ಲಿ ಪಾಲ್ಗೊಂಡು ಶ್ರೀಮಂತರ ಮಾನಸಿಕ ಪ್ರಪಂಚದ ಒಂದು ಎಳೆ ಬಿಚ್ಚಿಟ್ಟಿದ್ದಾರೆ.
ಶ್ರೀಮಂತರು ಹೇಗೆ ಕೆಲಸ ಮಾಡುತ್ತಾರೆ ಎಂಬುದು ಅವರಿರುವ ಪ್ರದೇಶ, ಅದರ ಸಂಸ್ಕೃತಿ, ಭೌಗೋಳಿಕತೆ, ಯೋಚನಾಕ್ರಮದ ಮೇಲೆ ಅವಲಂಬಿತವಾಗಿರುತ್ತದೆ ಎಂದು ರಾಜ್ ಶಮಾನಿ ಅವರೊಂದಿಗಿನ ಸಂದರ್ಶನದಲ್ಲಿ 360 ಒನ್ ಸಿಇಒ ಆಗಿರುವ ಕರಣ್ ಭಗತ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತ-ಅಮೆರಿಕ ನಡುವೆ ಮೊತ್ತಮೊದಲ ಎಲ್ಪಿಜಿ ಒಪ್ಪಂದ; ಭಾರತಕ್ಕೆ ಪ್ರಯೋಜನಗಳೇನು?
ಭಾರತದ ಬಿಲಿಯನೇರ್ಗಳು ಅಂತರ್ಮುಖಿಗಳು…
ಭಾರತದಲ್ಲಿ ಬಿಲಿಯನೇರ್ಗಳು ಬ್ಯುಸಿನೆಸ್ ಮೇಲೆಯೇ ಹೆಚ್ಚು ಗಮನ ಹೊಂದಿರುತ್ತಾರೆ. ಇಲ್ಲಿ ಒಬ್ಬ ವ್ಯಕ್ತಿ ಬಿಲಿಯನೇರ್ ಆಗಿಬಿಟ್ಟರೆ ಅವರ ಮುಂದಿನ ಗಮನ ಎರಡು ಬಿಲಿಯನ್, ನಂತರ ನಾಲ್ಕು, ನಂತರ ಹದಿನೈದು ಹೀಗೆ ಹೆಚ್ಚುತ್ತಾ ಹೋಗುತ್ತದೆ. ಇದು ಒಳ್ಳೆಯದೂ ಅಲ್ಲ, ಕೆಟ್ಟದ್ದರೂ ಅಲ್ಲ, ಸಹಜ ಗುಣ ಎಂದು ಕರಣ್ ಭಗತ್ ಅಭಿಪ್ರಾಯಪಡುತ್ತಾರೆ.
ಅಮೆರಿಕದ ಬಿಲಿಯನೇರ್ಗಳಿಗೆ ಸ್ಪೋರ್ಟ್ಸ್ ಟೀಮ್ ಇತ್ಯಾದಿ ಬೇಕು…
ಅಮೆರಿಕದವರ ನೋಟ ಹೆಚ್ಚು ವಿಸ್ತೃತವಾಗಿರುತ್ತದೆ. ಅಮೆರಿಕದ ಯಾವುದೇ ಬಿಲಿಯನೇರ್ ತೆಗೆದುಕಂಡರೂ ಅವರು ಸ್ಪೋರ್ಟ್ಸ್ ಟೀಮ್ ಹೊಂದಿರುತ್ತಾರೆ. ಅಥವಾ ಮಾಧ್ಯಮ ಸಂಸ್ಥೆಯೋ ಮತ್ತೊಂದೋ ಹೊಂದಿರುತ್ತಾರೆ. ಅವರಿಗೆ ಹಲವು ಅಭಿರುಚಿಗಳಿರುತ್ತವೆ. ಆ ಅಭಿರುಚಿಗಳನ್ನೇ ಬ್ಯುಸಿನೆಸ್ ಆಗಿ ಪರಿವರ್ತಿಸುವುದು ಹೇಗೆಂದು ತಿಳಿದಿರುತ್ತದೆ ಎಂದು ಹಲವು ಭಾರತೀಯ ಶ್ರೀಮಂತರಿಗೆ ಸಲಹೆಗಾರರೂ ಆಗಿರುವ ಕರಣ್ ಹೇಳುತ್ತಾರೆ.
ಇದನ್ನೂ ಓದಿ: ಕೋಟಿ ರೂ ಸಂಬಳ ಕೊಡ್ತೀನಂದ್ರೂ ಅಮೆರಿಕದಲ್ಲಿ ಸಿಗುತ್ತಿಲ್ಲ ಕೆಲಸಗಾರರು; ಮೆಕ್ಯಾನಿಕ್ಸ್ ಇತ್ಯಾದಿ ಕಾರ್ಮಿಕರಿಗೆ ಸಖತ್ ಬೇಡಿಕೆ
ಚೀನಾದ ಬಿಲಿಯನೇರ್ಗಳದ್ದು ಶ್ರಮ ಸ್ವಭಾವ
ಚೀನಾದ ಬಿಲಿಯನೇರ್ಗಳು ಶ್ರಮಕ್ಕೆ ಅತಿಹೆಚ್ಚು ಒತ್ತು ಕೊಡುತ್ತಾರೆ. ಪ್ರತಿಯೊಬ್ಬರೂ ಕೂಡ ಚೀನಾದಿಂದ ಹೊರಗೆ ಹೋಗಬೇಕು, ಹಾಂಕಾಂಗ್ನಲ್ಲೋ ಮತ್ತೆಲ್ಲಾದರೂ ಏನಾದರೂ ಮಾಡಬೇಕು ಎಂದು ಹಾತೊರೆಯುತ್ತಿರುತ್ತಾರೆ’ ಎನ್ನುತ್ತಾರೆ ಕರಣ್ ಭಗತ್.
ಅರಬ್ಬರದ್ದು ಬೇರೆಯದೇ ಸ್ತರ
ಅರಬ್ ಬಿಲಿಯನೇರ್ಗಳನ್ನು ನೋಡಿದಾಗ ಅವರು ಏನೂ ಕೆಲಸ ಮಾಡುತ್ತಾರೆ ಅಂತ ಅನಿಸೋದಿಲ್ಲ. ವಾಸ್ತವವಾಗಿ ಅವರು ಸಾಕಷ್ಟು ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಪ್ರೊಫೆಷನಲ್ ಮ್ಯಾನೇಜ್ಮೆಂಟ್ ಅನ್ನು ಸಿದ್ಧಿಸಿಕೊಂಡಿರುತ್ತಾರೆ. ಬ್ಯುಸಿನೆಸ್ಗಳನ್ನು ತಾವೇ ನಿಂತು ನಿಭಾಯಿಸುವುದಿಲ್ಲ. ಅದಕ್ಕೆಂದೇ ಅಸಾಧಾರಣ ತಂಡಗಳನ್ನು ಕಟ್ಟಿ ಎಲ್ಲವನ್ನೂ ನಿಭಾಯಿಸುತ್ತಾರೆ. ಅವರು ಬ್ಯುಸಿನೆಸ್ ನಿರ್ವಹಣೆಗೆ ಸಮರ್ಪಕವಾದ ವ್ಯವಸ್ಥೆ ನಿರ್ಮಿಸಿ, ಅದನ್ನು ನಿರ್ವಹಿಸಬಲ್ಲ ಸಮರ್ಥ ತಂಡಗಳನ್ನು ಕಟ್ಟಿರುತ್ತಾರೆ. ಹೀಗಾಗಿ, ಅವರು ಹೆಚ್ಚು ಸಮಯ ಹಾಯಾಗಿ ಇದ್ದಂತೆ ಅನಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




