Kannada News Technology Oppo has added a new smartphone to its A-series with the launch of Oppo A17 smartphone
ಒಪ್ಪೋದಿಂದ ಬಜೆಟ್ ಬೆಲೆಗೆ ಒಪ್ಪೋ A17 ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಎಷ್ಟು?, ಏನು ಫೀಚರ್ಸ್
2022 ಎರಡನೇ ಕ್ವಾರ್ಟರ್ನಲ್ಲಿ ಅತಿ ಕಡಿಮೆ ಸ್ಮಾರ್ಟ್ಫೋನನ್ನು ಪರಿಚಯಿಸಿರುವ ಒಪ್ಪೋ ಇದೀಗ ದಿಢೀರ್ ಆಗಿ ತನ್ನ A ಸರಣಿಯಲ್ಲಿ ಹೊಸ ಒಪ್ಪೋ ಎ17 (Oppo A17) ಫೋನನ್ನು ಅನಾವರಣ ಮಾಡಿದೆ. ಇದೊಂದು ಪಕ್ಕಾ ಬಜೆಟ್ ಬೆಲೆಯ ಫೋನಾಗಿದ್ದು, ಆಕರ್ಷಕ ವಿನ್ಯಾಸ, ಉ್ತತಮ ಬ್ಯಾಟರಿ, ಕ್ಯಾಮೆರಾಗಳನ್ನು (Camera) ಸಹ ಹೊಂದಿದೆ.
Oppo A17
Follow us on
ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಒಪ್ಪೋ (Oppo) ಹೊಸ ಮೊಬೈಲ್ ಬಿಡುಗಡೆ ಮಾಡಿ ತಿಂಗಳು ಕಳೆದಿದೆ. 2022 ಎರಡನೇ ಕ್ವಾರ್ಟರ್ನಲ್ಲಿ ಅತಿ ಕಡಿಮೆ ಸ್ಮಾರ್ಟ್ಫೋನನ್ನು ಪರಿಚಯಿಸಿರುವ ಒಪ್ಪೋ ಇದೀಗ ದಿಢೀರ್ ಆಗಿ ತನ್ನ A ಸರಣಿಯಲ್ಲಿ ಹೊಸ ಒಪ್ಪೋ ಎ17 (Oppo A17) ಫೋನನ್ನು ಅನಾವರಣ ಮಾಡಿದೆ. ಇದೊಂದು ಪಕ್ಕಾ ಬಜೆಟ್ ಬೆಲೆಯ ಫೋನಾಗಿದ್ದು, ಆಕರ್ಷಕ ವಿನ್ಯಾಸ, ಉತ್ತಮ ಬ್ಯಾಟರಿ, ಕ್ಯಾಮೆರಾಗಳನ್ನು (Camera) ಸಹ ಹೊಂದಿದೆ. ಸದ್ಯಕ್ಕೆ ಈ ಫೋನ್ ಮಲೇಷ್ಯಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಕೆಲವೇ ದಿನಗಳಲ್ಲಿ ಭಾರತಕ್ಕೂ ಕಾಲಿಡುವ ಸಾಧ್ಯತೆ ಇದೆಯಂತೆ. ಹಾಗಾದರೆ ಈ ಫೋನಿನ, ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
ಒಪ್ಪೋ A17 ಸ್ಮಾರ್ಟ್‌ಫೋನ್ ಬೆಲೆ ಮಲೆಷ್ಯಾದಲ್ಲಿ MYR599, ಅಂದರೆ ಭಾರತದಲ್ಲ ಇದರ ಬೆಲೆ ಸುಮಾರು 10,619ರೂ. ಇರಬಹುದು. ಈ ಫೋನ್ ಲೇಕ್ ಬ್ಲೂ ಮತ್ತು ಮಿಡ್ನೈಟ್ ಬ್ಲಾಕ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವುದೆ.
ಈ ಸ್ಮಾರ್ಟ್‌ಫೋನ್ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.56 ಇಂಚಿನ ಹೆಚ್‌ಡಿ ಪ್ಲಸ್ LCD ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ನಿಂದ ಕೂಡಿದೆ.
ಮೀಡಿಯಾ ಟೆಕ್ ಹೆಲಿಯೊ G35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಬೆಂಬಲವನ್ನು ಪಡೆದಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ.
ಒಪ್ಪೋ A17 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ.
ಇದಲ್ಲದೆ ವಿಡಿಯೋ ಕರೆಗಳು ಹಾಗೂ ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ AI, 360 ಡಿಗ್ರಿ ಫಿಲ್ ಲೈಟ್, ಪೋರ್ಟ್ರೇಟ್ ರಿಟೌಚಿಂಗ್, HDR ಅನ್ನು ಒಳಗೊಂಡಿದೆ.
ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಸೂಪರ್ ಪವರ್ ಸೇವಿಂಗ್ ಮೋಡ್ ಮತ್ತು ಸೂಪರ್ ನೈಟ್‌ಟೈಮ್ ಸ್ಟ್ಯಾಂಡ್‌ಬೈ ಅನ್ನು ಪಡೆದುಕೊಂಡದೆ.