ರೆನೋ 8 ಸರಣಿ ಬಿಡುಗಡೆ ಕಾರ್ಯಕ್ರಮದ ಮಧ್ಯೆ ಭಾರತದ ಒಪ್ಪೋ ಯೂಟ್ಯೂಬ್ ಚಾನೆಲ್ ದಿಢೀರ್ ಸ್ಥಗಿತ

| Updated By: Vinay Bhat

Updated on: Jul 19, 2022 | 12:03 PM

ಮೂಲಗಳ ಪ್ರಕಾರ, ಒಪ್ಪೋ ಕಂಪನಿ ಕಾರ್ಯಕ್ರಮದ ಮಧ್ಯೆ ಒಪ್ಪೋ ರೆನೋ 8 ಸರಣಿಯನ್ನು ಆ್ಯಪಲ್ ಐಫೋನ್​ಗೆ ಹೋಲಿಸಿದೆ. ಹೀಗಾಗಿ ಇದು ನಿಯಮದ ವಿರುದ್ಧವಾದ ಕಾರಣ ಯೂ ಟ್ಯೂಬ್ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

ರೆನೋ 8 ಸರಣಿ ಬಿಡುಗಡೆ ಕಾರ್ಯಕ್ರಮದ ಮಧ್ಯೆ ಭಾರತದ ಒಪ್ಪೋ ಯೂಟ್ಯೂಬ್ ಚಾನೆಲ್ ದಿಢೀರ್ ಸ್ಥಗಿತ
Oppo Youtube Channel
Follow us on

ಭಾರತದಲ್ಲಿ ಸೋಮವಾರ ರಾತ್ರಿ ಒಪ್ಪೋ ಕಂಪನಿ ನತನ್ನ ಬಹುನಿರೀಕ್ಷಿತ ಒಪ್ಪೋ 8 ಸರಣಿಯ ಸ್ಮಾರ್ಟ್​​ಫೋನ್​ಗಳನ್ನು ಅನಾವರಣ ಮಾಡಿದೆ. ಇದರಲ್ಲಿ ಒಪ್ಪೋ ರೆನೋ 8 ಮತ್ತು ಒಪ್ಪೋ ರೆನೋ 8 ಪ್ರೊ ಎಂಬ ಎರಡು ಫೋನ್​ಗಳಿವೆ. ಇದರ ಜೊತೆಗೆ ಒಪ್ಪೋ ಪ್ಯಾಡ್‌ ಏರ್‌ (Oppo Pad Air) ಮತ್ತು ಒಪ್ಪೋ ಎನ್ಕೋ X2 ಟ್ರೂಲಿ ವಾಯರ್‌ಲೆಸ್ಟ್‌ ಸ್ಟಿರಿಯೊ ಇಯರ್‌ಫೋನ್‌ಗಳು ಬಿಡುಗಡೆ ಆಗಿದೆ. ಭಾರತದ ಒಪ್ಪೋ ಯೂ ಟ್ಯೂಬ್ ಚಾನೆಲ್​ನಲ್ಲಿ ಈ ಕಾರ್ಯಕ್ರಮದ ನೇರಪ್ರಸಾರ ಮಾಡಲಾಗಿತ್ತಿತ್ತು. ಆದರ, ಲೈವ್ ಮಧ್ಯೆಯೇ ಗೂಗಲ್ ಒಡೆತನದ ಯೂಟ್ಯೂಬ್ ಒಪ್ಪೋ ಚಾನೆಲ್ ಅನ್ನು ಸ್ಥಗಿತಿಗೊಳಿಸಿದೆ.

‘ಈ ಖಾತೆ ಯೂ ಟ್ಯೂಬ್​ನ ನೀತಿನಿಯಮಗಳ ವಿರುದ್ಧವಾಗಿ ನಡೆದುಕೊಂಡಿದೆ’, ಎಂದು ಬರುತ್ತಿದೆ. ಆದರೆ, ಚೀನಾ ಮೂಲದ ಪ್ರಸಿದ್ಧ ಬ್ರ್ಯಾಂಡ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೂಲಗಳ ಪ್ರಕಾರ, ಒಪ್ಪೋ ಕಂಪನಿ ಕಾರ್ಯಕ್ರಮದ ಮಧ್ಯೆ ಒಪ್ಪೋ ರೆನೋ 8 ಸರಣಿಯನ್ನು ಆ್ಯಪಲ್ ಐಫೋನ್​ಗೆ ಹೋಲಿಸಿದೆ. ಹೀಗಾಗಿ ಇದು ನಿಯಮದ ವಿರುದ್ಧವಾದ ಕಾರಣ ಯೂ ಟ್ಯೂಬ್ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

ನಿಯಮಗಳ ಪ್ರಕಾರ, ಒಂದು ಸ್ಮಾರ್ಟ್​​ಫೋನ್ ಬ್ರ್ಯಾಂಡ್ ಮತ್ತೊಂದು ಸ್ಮಾರ್ಟ್​​ಫೋನ್ ಬ್ರ್ಯಾಂಡ್​ಗೆ ಹೋಲಿಕೆ ಮಾಡುವಂತಿಲ್ಲ. ಅಂದರೆ ಯಾವುದೇ ಕಂಪನಿ ನಮ್ಮ ಮೊಬೈಲ್ ಮತ್ತೊಂದು ಕಂಪನಿಯ ಮೊಬೈಲ್​ಗಿಂತ ಉತ್ತಮವಾಗಿದೆ ಎಂದು ಹೇಲುವಂತಿಲ್ಲ. ಒಪ್ಪೋ ಈರೀತಿಯ ತಪ್ಪು ಮಾಡಿದ ಕಾರಣ ಯೂಟ್ಯೂಬ್ ಕಠಿಣ ಕ್ರಮ ಕೈಗೊಂಡಿದೆ. ಸ್ಮಾರ್ಟ್​​ಫೋನ್ ಬ್ರ್ಯಾಂಡ್​ಗಳು ಈರೀತಿ ಆ್ಯಪಲ್ ಐಫೋನ್​ಗೆ ಹೋಲಿಕೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಶವೋಮಿ ಒಡೆತನದ ಪೋಕೋ ಸಂಸ್ಥೆ ಕೂಡ ತನ್ನ ಫೋನ್ ಲಾಂಚ್ ಮಾಡುವಾಗ ಐಫೋನ್​ಗೆ ಹೋಲಿಕೆ ಮಾಡಿ ಕೈಸುಟ್ಟುಕೊಂಡಿತ್ತು.

ಇದನ್ನೂ ಓದಿ
Oppo Reno 8 Series: ಭಾರತದಲ್ಲಿ ಬಹುನಿರೀಕ್ಷಿತ ಒಪ್ಪೋ 8 ರೆನೋ ಸರಣಿ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ
ಐಕ್ಯೂಯಿಂದ ದಿಢೀರ್ ನಿಯೋ 6 5G ಹೊಸ ವೇರಿಯೆಂಟ್ ಲಾಂಚ್: ಬೆಲೆ ಎಷ್ಟು?, ಏನು ವಿಶೇಷತೆ?
Tecno Spark 9: ಬೆಲೆ ಕೇವಲ 9,499 ರೂ.: ಭಾರತದಲ್ಲಿ ಟೆಕ್ನೋ ಸ್ಪಾರ್ಕ್ 9 ಸ್ಮಾರ್ಟ್​ಫೋನ್ ಬಿಡುಗಡೆ: ಏನು ವಿಶೇಷತೆ?
Apple iPhone: ಬುಲೆಟ್ ತಾಗಿದ್ದು ಕಿಸೆಯಲ್ಲಿದ್ದ ಐಫೋನ್​ಗೆ: ಸೈನಿಕನ ಪ್ರಾಣ ಉಳಿಸಿದ ಐಫೋನ್ 11 ಪ್ರೊ

ಹೇಗಿದೆ ಒಪ್ಪೋ ರೆನೋ 8-ರೆನೋ 8 ಪ್ರೊ:

ಒಪ್ಪೋ ರೆನೋ 8 ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ಸೂಪರ್ ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಇದರ ಆರಂಭಿಕ ಬೆಲೆ 29,999ರೂ.

ಇನ್ನು ಒಪ್ಪೋ ರೆನೋ 8 ಪ್ರೊ 6.7 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 8100-ಮ್ಯಾಕ್ಸ್ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ಸೂಪರ್ ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್‌ ಬೆಂಬಲಿಸುತ್ತದೆ. ಇದರ ಬೆಲೆ 45,999ರೂ. ಆಗಿದೆ.