ಫೋನ್ ಹ್ಯಾಕ್ ಬಗ್ಗೆ ನೀವು ಹಲವಾರು ಬಾರಿ ಕೇಳಿರಬಹುದು. ಆದರೆ, ನಿಮ್ಮ ಫೋನ್ ಹ್ಯಾಕ್ ಆಗಿದ್ದರೆ ಏನು ಮಾಡಬೇಕೆಂದು ನಿಮಗೆ ತಿಳಿಯದಿದ್ದರೆ, ಚಿಂತಿಸಬೇಡಿ. ಈ ಬಗ್ಗೆ ನಾವು ಇಂದು ತಿಳಿಸುತ್ತೇವೆ. ಸೈಬರ್ ಹ್ಯಾಕರ್‌ಗಳು ನಿಮ್ಮ ಫೋನ್ ಒಳಗೆ ನುಸುಳಬಹುದು. ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯಬಹುದು, ನಿಮ್ಮ ಬ್ಯಾಂಕ್ ಖಾತೆಗಳನ್ನು ಪ್ರವೇಶಿಸಿ ಹಣವನ್ನು ಲೂಟಿ ಹೊಡೆಯಬಹುದು. ಸಂಪೂರ್ಣವಾಗಿ ನಿಮ್ಮ ಫೋನ್ ಅನ್ನು ಕಂಟ್ರೋಲ್ಗೆ ತೆಗೆದುಕೊಳ್ಳಬಹುದು. ಆದರೆ, ಚಿಂತಿಸಬೇಡಿ. ಇದಕ್ಕೆ ಪರಿಹಾರವನ್ನೂ ನಾವು ಹೇಳುತ್ತೇವೆ.
ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂಬ ಮಾಹಿತಿಯನ್ನು ಕೇವಲ ಒಂದು ಸಣ್ಣ ‘ಲೈಟ್’ ನಿಮಗೆ ತಿಳಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?. ಅಂತಹ ವಿಧಾನಗಳ ಬಗ್ಗೆ ನಾವು ಇಂದು ಮಾಹಿತಿಯನ್ನು ನೀಡಲಿದ್ದೇವೆ. ನೀವು ಸ್ಮಾರ್ಟ್ ಫೋನ್ ಬಳಸುತ್ತೀರಿ ಆದರೆ ನಿಮ್ಮ ಸ್ಮಾರ್ಟ್ ಫೋನ್ ಹ್ಯಾಕ್ ಆಗಿದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ?. ಇದನ್ನು ಕಂಡುಹಿಡಿಯಲು ಕೆಲವು ಸರಳ ಮಾರ್ಗಗಳಿವೆ.
ವಿಚಿತ್ರ ಜಾಹೀರಾತುಗಳು ಮತ್ತು ಪಾಪ್-ಅಪ್‌ಗಳು: ನಿಮ್ಮ ಫೋನ್‌ನಲ್ಲಿ ನೀವು ಇದ್ದಕ್ಕಿದ್ದಂತೆ ವಿಚಿತ್ರ ಜಾಹೀರಾತುಗಳನ್ನು ನೋಡಲು ಪ್ರಾರಂಭಿಸಿದರೆ, ವಿಶೇಷವಾಗಿ ನೀವು ಇಂಟರ್ನೆಟ್ ಬ್ರೌಸ್ ಮಾಡುವಾಗ ಆ್ಯಡ್ ಬರುತ್ತಾ ಇದ್ದರೆ ಎಚ್ಚರದಿಂದಿರಿ. ಇದು ನಿಮ್ಮ ಫೋನ್ ಹ್ಯಾಕ್ ಆಗಿರುವ ಸಂಕೇತವಾಗಿರಬಹುದು.
ಡೇಟಾ ಬಳಕೆಯಲ್ಲಿ ಹಠಾತ್ ಹೆಚ್ಚಳ: ನೀವು ಮೊದಲಿನಂತೆ ಫೋನ್ ಬಳಸುತ್ತಾ ಇರುತ್ತೀರಿ. ಆದರೆ, ಇದ್ದಕ್ಕಿದ್ದಂತೆ ನಿಮ್ಮ ಡೇಟಾ ಹೆಚ್ಚು ಹೋಗುತ್ತಿದ್ದರೆ, ಅಂದರೆ ಬೇಗನೆ ಖಾಲಿ ಆಗುತ್ತದೆ. ಇದು ನಿಮ್ಮ ಫೋನ್ ಹ್ಯಾಕ್ ಆಗಿರುವ ಸೂಚನೆ ಆಗಿರುತ್ತದೆ.
ಹೊಸ ಅಪ್ಲಿಕೇಶನ್‌ಗಳು ಇನ್ಸ್ಟಾಲ್: ನಿಮ್ಮ ಫೋನ್‌ನಲ್ಲಿ ನೀವು ಇನ್ಸ್ಟಾಲ್ ಮಾಡದೇ ಇರುವ ಕೆಲವು ಅಪ್ಲಿಕೇಶನ್‌ಗಳನ್ನು ನೀವು ಇದ್ದಕ್ಕಿದ್ದಂತೆ ಕಾಣಬಹುದು. ನೀವು ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡದಿದ್ದರೆ, ಇದು ಅಪಾಯದ ಸಂಕೇತವೂ ಆಗಿರಬಹುದು. ಈ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನಲ್ಲಿ ವೈರಸ್‌ಗಳನ್ನು ಹಾಕಬಹುದು, ಆಗ ಸುಲಭವಾಗಿ ಹ್ಯಾಕರ್‌ಗಳು ನಿಮ್ಮ ಮಾಹಿತಿಯನ್ನು ಕದಿಯಬಹುದು.
ಬ್ಯಾಟರಿ ಬೇಗ ಖಾಲಿಯಾಗುತ್ತದೆ: ನೀವು ಮೊದಲಿನಂತೆಯೇ ಫೋನ್ ಬಳಸುತ್ತಿದ್ದರೆ, ಆದರೆ ಬ್ಯಾಟರಿ ಬೇಗ ಖಾಲಿಯಾಗುತ್ತಾ ಇದ್ದರೆ ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದು ಅರ್ಥ.
ಕ್ಯಾಮೆರಾ ಲೈಟ್: ಈ ಐಕಾನ್ ನಾವು ಮೊದಲೇ ಉಲ್ಲೇಖಿಸಿದ್ದೇವೆ. ನಿಮ್ಮ ಫೋನ್‌ನ ಕ್ಯಾಮೆರಾವನ್ನು ನೀವು ಬಳಸದೇ ಇರುವಾಗ, ಕ್ಯಾಮೆರಾ ‘ಲೈಟ್’ (ಸೂಚಕ ಬೆಳಕು) ಆನ್ ಆಗಿದ್ದರೆ, ಇದು ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂಬುದರ ದೊಡ್ಡ ಸಂಕೇತವಾಗಿದೆ. ಹ್ಯಾಕರ್ ನಿಮ್ಮ ಫೋನ್‌ನಲ್ಲಿ ಸ್ಪೈವೇರ್ ಅನ್ನು ಸ್ಥಾಪಿಸಿರುವ ಸಂಭವವಿರುತ್ತದೆ. ಅವರು ನಿಮ್ಮ ಫೋನ್‌ನ ಕ್ಯಾಮೆರಾವನ್ನು ಬಳಸಿಕೊಂಡು ಎಲ್ಲ ಚಲನ-ವಲನಗಳನ್ನು ಗಮನಿಸುತ್ತಾರೆ.
ಇದನ್ನೂ ಓದಿ: ಫೋನ್‌ನ ಲಾಕ್ ಬಟನ್ ಹಾಳಾದರೆ ಡಿಸ್ಪ್ಲೇ ಆನ್ ಮಾಡಲು ಏನು ಮಾಡಬೇಕು?: ಇಲ್ಲಿದೆ ಟ್ರಿಕ್
ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದು ನೀವು ಭಾವಿಸಿದರೆ, ತಕ್ಷಣವೇ ಅದರ ಪಾಸ್‌ವರ್ಡ್ ಬದಲಾಯಿಸಿ. ನಿಮ್ಮ ಮೊಬೈಲ್ನಲ್ಲಿ ನೀವು ಇನ್ಸ್ಟಾಲ್ ಮಾಡಿರದ ಎಲ್ಲಾ ಅಪರಿಚಿತ ಅಪ್ಲಿಕೇಶನ್‌ಗಳನ್ನು ಸಹ ಅನ್‌ಇನ್‌ಸ್ಟಾಲ್ ಮಾಡಿ. ಹಾಗೆಯೆ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್ನಿಂದ ಇನ್ಸ್ಟಾಲ್ ಮಾಡಿರದ ಅಪ್ಲಿಕೇಷನ್ ಯಾವುದೇ ಇದ್ದರೂ ಕೂಡಲೇ ಅದನ್ನು ಡಿಲೀಟ್ ಮಾಡಿ. ನಂತರ ಫೋನ್ ಅನ್ನು ರಿಸ್ಟಾರ್ಟ್ ಮಾಡಿ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ