Tech Tips: ಫೋನ್‌ನ ಲಾಕ್ ಬಟನ್ ಹಾಳಾದರೆ ಡಿಸ್​ಪ್ಲೇ ಆನ್ ಮಾಡಲು ಏನು ಮಾಡಬೇಕು?: ಇಲ್ಲಿದೆ ಟ್ರಿಕ್

ನಿಮ್ಮ ಸ್ಮಾರ್ಟ್​ಫೋನ್ ಲಾಕ್ ಆಗಿದ್ದರೆ ಮತ್ತು ಫೋನ್ ಡಿಸ್​ಪ್ಲೇ ಮೇಲಿನ ಬೆಳಕು ಸಹ ಆಫ್ ಆಗಿದ್ದರೆ, ನೀವು ಪವರ್ ಬಟನ್ ಅನ್ನು ಒತ್ತದೆ ಫೋನ್ ಅನ್ನು ಅನ್ಲಾಕ್ ಮಾಡಲು ಸಾಧ್ಯವಾಗುತ್ತದೆ, ಇಂದು ನಾವು ಇದು ಹೇಗೆ ಎಂದು ಹೇಳಲಿದ್ದೇವೆ.

Tech Tips: ಫೋನ್‌ನ ಲಾಕ್ ಬಟನ್ ಹಾಳಾದರೆ ಡಿಸ್​ಪ್ಲೇ ಆನ್ ಮಾಡಲು ಏನು ಮಾಡಬೇಕು?: ಇಲ್ಲಿದೆ ಟ್ರಿಕ್
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 18, 2024 | 2:41 PM

ಸ್ಮಾರ್ಟ್‌ಫೋನ್ ಅನ್ನು ಕೇವಲ ಖರೀದಿಸಿದರೆ ಸಾಕಾಗುವುದಿಲ್ಲ, ಅದರಲ್ಲಿ ಲಭ್ಯವಿರುವ ಎಲ್ಲಾ ವೈಶಿಷ್ಟ್ಯಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿರುವುದು ಸಹ ಮುಖ್ಯವಾಗಿದೆ. ಒಂದು ವೇಳೆ ನಿಮ್ಮ ಫೋನ್‌ನ ಪವರ್ ಬಟನ್ ಹಾನಿಗೊಳಗಾದರೆ ನೀವು ಫೋನ್ ಡಿಸ್​ಪ್ಲೇ ಯನ್ನು ಹೇಗೆ ಆನ್ ಮಾಡುತ್ತೀರಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಡಿಸ್​ಪ್ಲೇ ಮೇಲೆ ಬೆಳಕು ಬಂದರಷ್ಟೆ ಬಳಿಕ ಫೋನ್‌ನ ಪ್ಯಾಟರ್ನ್ ಅಥವಾ ಪಿನ್ ಲಾಕ್ ಮೂಲಕ ಆನ್ ಮಾಡಬಹುದು. ಆದರೆ, ಈ ಪ್ರಕ್ರಿಯೆಗೂ ಮುನ್ನ ಆನ್ ಮಾಡಬೇಕು ಎಂದಾದರೆ ಹೇಗೆ ತೆರೆಯುವುದು?.

ಫೋನ್ ಲಾಕ್ ಆಗಿದ್ದರೆ ಮತ್ತು ಫೋನ್ ಡಿಸ್​ಪ್ಲೇ ಮೇಲಿನ ಬೆಳಕು ಸಹ ಆಫ್ ಆಗಿದ್ದರೆ, ನೀವು ಪವರ್ ಬಟನ್ ಅನ್ನು ಒತ್ತದೆ ಫೋನ್ ಅನ್ನು ಅನ್ಲಾಕ್ ಮಾಡಲು ಸಾಧ್ಯವಾಗುತ್ತದೆ, ಇಂದು ನಾವು ಇದು ಹೇಗೆ ಎಂದು ಹೇಳಲಿದ್ದೇವೆ. ವಾಸ್ತವವಾಗಿ, ನಿಮ್ಮ ಫೋನ್​ನ ಸೆಟ್ಟಿಂಗ್ಸ್​ನಲ್ಲಿಯೇ ಅಂತಹ ಉಪಯುಕ್ತ ಟ್ರಿಕ್ ಇದೆ. ನೀವು ಇದನ್ನು ಅನುಸರಿಸಿದರೆ ನಿಮ್ಮ ಫೋನ್‌ನ ಪವರ್ ಬಟನ್ ಎಂದಿಗೂ ಹಾನಿಗೊಳಗಾಗುವುದಿಲ್ಲ ಅಥವಾ ಪವರ್ ಬಟನ್ ಹಾನಿಗೊಳಗಾದರೆ ಫೋನ್ ಅನ್‌ಲಾಕ್ ಮಾಡುವಲ್ಲಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ.

ಆಂಡ್ರಾಯ್ಡ್ ಮೊಬೈಲ್​ನಲ್ಲಿ ಈ ವೈಶಿಷ್ಟ್ಯವು ಸಹಾಯ ಮಾಡುತ್ತದೆ:

ಬಳಕೆದಾರರ ಅನುಕೂಲಕ್ಕಾಗಿ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಡಬಲ್ ಟ್ಯಾಪ್ ಟು ವೇಕ್ ಎಂಬ ವೈಶಿಷ್ಟ್ಯವನ್ನು ಒದಗಿಸಲಾಗಿದೆ, ವಿಭಿನ್ನ ಆಪರೇಟಿಂಗ್ ಸಿಸ್ಟಂಗಳಲ್ಲಿ ಕಾರ್ಯನಿರ್ವಹಿಸುವ ಮೊಬೈಲ್‌ಗಳಲ್ಲಿ ಈ ವೈಶಿಷ್ಟ್ಯವು ಬೇರೆ ಬೇರೆ ಹೆಸರಿನಲ್ಲಿರಬಹುದು. ಈ ವೈಶಿಷ್ಟ್ಯದ ವಿಶೇಷತೆಯೆಂದರೆ ಈ ಫೀಚರ್ ಮೂಲಕ ಡಿಸ್​ಪ್ಲೇ ಅನ್ನು ಆನ್ ಮಾಡಬಹುದು.

ಪವರ್ ಬಟನ್ ನಿಮ್ಮ ಡಿಸ್‌ಪ್ಲೇಯನ್ನು ಎಚ್ಚರಗೊಳಿಸಲು ಸಹಾಯ ಮಾಡುವಂತೆಯೇ, ಈ ವೈಶಿಷ್ಟ್ಯವು ಸಹ ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಒಂದೇ ವ್ಯತ್ಯಾಸವೆಂದರೆ ಈ ವೈಶಿಷ್ಟ್ಯವನ್ನು ಆನ್ ಮಾಡಿದ ನಂತರ, ಪವರ್ ಬಟನ್ ಒತ್ತುವ ಬದಲು, ನೀವು ಡಿಸ್​ಪ್ಲೇಯಲ್ಲಿ ಎರಡು ಬಾರಿ ಟ್ಯಾಪ್ ಮಾಡಬೇಕು. ನೀವು ಡಿಸ್​ಪ್ಲೇ ಮೇಲೆ ಎರಡು ಬಾರಿ ಟ್ಯಾಪ್ ಮಾಡಿದ ತಕ್ಷಣ, ಡಿಸ್​ಪ್ಲೇ ಮೇಲೆ ಬೆಳಕು ಬರುತ್ತದೆ. ನಂತರ ನೀವು ಸ್ವೈಪ್ ಮಾಡುವ ಮೂಲಕ, ಪಿನ್ ಅನ್ನು ನಮೂದಿಸುವ ಮೂಲಕ ಅಥವಾ ಪ್ಯಾಟರ್ನ್ ಸಹಾಯದಿಂದ ಸುಲಭವಾಗಿ ಫೋನ್ ಅನ್ನು ಅನ್ ಲಾಕ್ ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ನಿಮ್ಮ ಐಫೋನ್ ಸ್ಲೋ ಚಾರ್ಜ್ ಆಗುತ್ತಿದೆಯೇ? ಈ ಕೆಲಸವನ್ನು ತಕ್ಷಣವೇ ಮಾಡಿ

ಫೋನ್‌ನ ಸೆಟ್ಟಿಂಗ್‌ಗಳಲ್ಲಿ ಟ್ಯಾಪ್ ಟು ವೇಕ್ ಹೆಸರಿನ ಈ ವೈಶಿಷ್ಟ್ಯವನ್ನು ನೀವು ಕಾಣಬಹುದು, ಈ ವೈಶಿಷ್ಟ್ಯವು ಪ್ರತಿ OS ನಲ್ಲಿ ಬೇರೆ ಬೇರೆ ಸ್ಥಳದಲ್ಲಿ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಫೋನ್‌ನ ಸೆಟ್ಟಿಂಗ್‌ಗಳಲ್ಲಿ ಸರ್ಚ್ ಸಾಧನದ ಸಹಾಯದಿಂದ ನೀವು ಈ ವೈಶಿಷ್ಟ್ಯವನ್ನು ಸುಲಭವಾಗಿ ಕಂಡುಹಿಡಿಯಬಹುದು. ಪವರ್ ಬಟನ್ ಹಾನಿಗೊಳಗಾದರೆ ಈ ವೈಶಿಷ್ಟ್ಯವು ನಿಮಗೆ ಸಹಾಯ ಮಾಡುತ್ತದೆ. ಪವರ್ ಬಟನ್ ಹಾನಿಗೊಳಗಾದರೆ, ನೀವು ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಬಳಸಬಹುದು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್