Tech Tips: ನಿಮ್ಮ ಐಫೋನ್ ಸ್ಲೋ ಚಾರ್ಜ್ ಆಗುತ್ತಿದೆಯೇ? ಈ ಕೆಲಸವನ್ನು ತಕ್ಷಣವೇ ಮಾಡಿ

ನಿಮ್ಮ ಐಫೋನ್ ನ ಚಾರ್ಜಿಂಗ್ ನಿಧಾನವಾಗುತ್ತಿದ್ದರೆ, iOS 18 ನಿಮಗೆ ತಿಳಿಸುತ್ತದೆ. ಹಾಗಂತ ನಿಮ್ಮ ಐಫೋನ್ ಅಥವಾ ಚಾರ್ಜರ್‌ನಲ್ಲಿ ದೋಷವಿದೆ ಎಂದು ಇದರ ಅರ್ಥವಲ್ಲ, ಆದರೆ ನೀವು ಇನ್ನೂ ಹೆಚ್ಚಿನ ವೇಗದ ಚಾರ್ಜರ್ ಅನ್ನು ಬಳಸಬಹುದು ಎಂದು ಆಪಲ್ ಹೇಳುತ್ತದೆ.

Tech Tips: ನಿಮ್ಮ ಐಫೋನ್ ಸ್ಲೋ ಚಾರ್ಜ್ ಆಗುತ್ತಿದೆಯೇ? ಈ ಕೆಲಸವನ್ನು ತಕ್ಷಣವೇ ಮಾಡಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 15, 2024 | 11:49 AM

ನಿಮ್ಮ ಐಫೋನ್ ಚಾರ್ಜಿಂಗ್ ಮೊದಲಿಗಿಂತ ನಿಧಾನವಾಗಿದೆ ಎಂದು ನೀವು ಭಾವಿಸಿದರೆ, ಹೊಸದಾದ ಐಒಎಸ್ 18 ನಲ್ಲಿ ಇದನ್ನು ಪರಿಶೀಲಿಸಲು ಸುಲಭವಾದ ಮಾರ್ಗವಿದೆ. ಆಪಲ್ ಸೆಟ್ಟಿಂಗ್ಸ್​ನ ಬ್ಯಾಟರಿ ವಿಭಾಗದಲ್ಲಿ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಈ ವೈಶಿಷ್ಟ್ಯವು ನಿಮಗೆ ಗ್ರಾಫ್ ಅನ್ನು ಪ್ರದರ್ಶಿಸುತ್ತದೆ. ಅಂದರೆ ಹಳದಿ ಬಣ್ಣ ನಿಧಾನವಾಗಿ ಚಾರ್ಜಿಂಗ್ ಆಗುವುದನ್ನು ಸೂಚಿಸುತ್ತದೆ, ಹಸಿರು ಸಾಮಾನ್ಯ ಚಾರ್ಜಿಂಗ್ ಅನ್ನು ಸೂಚಿಸುತ್ತದೆ ಮತ್ತು ಕೆಂಪು ತುಂಬಾ ನಿಧಾನವಾದ ಚಾರ್ಜಿಂಗ್ ಅನ್ನು ಸೂಚಿಸುತ್ತದೆ. ಹೀಗಾದಾಆಗ ನೀವು ಚಾರ್ಜಿಂಗ್ ಅನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ.

ನಿಮ್ಮ ಐಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡಲು, ಈ ಸಲಹೆಗಳನ್ನು ಅನುಸರಿಸಿ:

  • ಐಫೋನ್ 15 ಮತ್ತು ನಂತರದ ಮಾದರಿಗಳಿಗಾಗಿ, USB-C ಚಾರ್ಜರ್ ಮತ್ತು USB-C ಕೇಬಲ್ ಬಳಸಿ.
  •  ಐಫೋನ್ 14 ಮತ್ತು ಹಳೆಯ ಮಾದರಿಗಳಿಗೆ, USB-C ಟು ಲೈಟ್ನಿಂಗ್ ಕೇಬಲ್ ಬಳಸಿ.
  • ವೈರ್‌ಲೆಸ್ ಚಾರ್ಜಿಂಗ್ ಅನ್ನು ವೇಗಗೊಳಿಸಲು, MagSafe ಚಾರ್ಜರ್ ಅಥವಾ Qi2-ಪ್ರಮಾಣೀಕೃತ ವೈರ್‌ಲೆಸ್ ಚಾರ್ಜರ್ ಅನ್ನು ಬಳಸಿ. ಇವೆರಡೂ ಮೂಲ ಚಾರ್ಜರ್‌ಗಳಿಗಿಂತ ಹೆಚ್ಚಿನ ಶಕ್ತಿಯನ್ನು ನೀಡುತ್ತವೆ.

ನಿಮ್ಮ ಐಫೋನ್ ನಿಧಾನವಾಗಿ ಚಾರ್ಜ್ ಆಗಲು ಹಲವಾರು ಕಾರಣಗಳಿವೆ:

  • ನೀವು ಕಡಿಮೆ ಪವರ್ ಚಾರ್ಜರ್ ಬಳಸುತ್ತಿದ್ದರೆ, ಚಾರ್ಜಿಂಗ್ ನಿಧಾನವಾಗಿರುತ್ತದೆ.
  • ನೀವು ಫೋನ್ ಅನ್ನು ಹೆಚ್ಚಾಗಿ ಬಳಸುತ್ತಿದ್ದರೆ, ಅಂದರೆ ಹೆಚ್ಚು ಗೇಮ್ಸ್ ಆಡುವುದು ಅಥವಾ ವಿಡಿಯೋಗಳನ್ನು ನೋಡುವುದು, ಆಗ ಚಾರ್ಜಿಂಗ್ ನಿಧಾನವಾಗಬಹುದು.
  • ಫೋನ್ ಅನ್ನು ಚಾರ್ಜ್ ಮಾಡುವಾಗ ನೀವು ಇತರ ಹಾಟ್​ಸ್ಪಾಟ್ ಸಾಧನಗಳನ್ನು ಸಂಪರ್ಕಿಸಿದರೆ, ಚಾರ್ಜಿಂಗ್ ನಿಧಾನವಾಗಬಹುದು.
  • ನೀವು ಒಂದೇ ಚಾರ್ಜರ್‌ನೊಂದಿಗೆ ಅನೇಕ ಮೊಬೈಲ್​ಗಳನ್ನು ಚಾರ್ಜ್ ಮಾಡಿದರೆ, ನಿಮ್ಮ ಐಫೋನ್‌ನ ಚಾರ್ಜಿಂಗ್ ನಿಧಾನವಾಗಬಹುದು.
  • ಕಾರಿನಲ್ಲಿ ಅಥವಾ USB ಹಬ್‌ನಿಂದ ಚಾರ್ಜ್ ಮಾಡುವುದರಿಂದ ನಿಧಾನಗತಿಯ ಚಾರ್ಜಿಂಗ್ ಕೂಡ ಉಂಟಾಗುತ್ತದೆ.

ಐಒಎಸ್ 18 ಹೇಗೆ ಸಹಾಯ ಮಾಡುತ್ತದೆ?:

ನಿಮ್ಮ ಐಫೋನ್ ನ ಚಾರ್ಜಿಂಗ್ ನಿಧಾನವಾಗುತ್ತಿದ್ದರೆ, iOS 18 ನಿಮಗೆ ತಿಳಿಸುತ್ತದೆ. ಹಾಗಂತ ನಿಮ್ಮ ಐಫೋನ್ ಅಥವಾ ಚಾರ್ಜರ್‌ನಲ್ಲಿ ದೋಷವಿದೆ ಎಂದು ಇದರ ಅರ್ಥವಲ್ಲ, ಆದರೆ ನೀವು ಇನ್ನೂ ಹೆಚ್ಚಿನ ವೇಗದ ಚಾರ್ಜರ್ ಅನ್ನು ಬಳಸಬಹುದು ಎಂದು ಆಪಲ್ ಹೇಳುತ್ತದೆ. ನಿಧಾನ ಚಾರ್ಜಿಂಗ್ ಅನ್ನು ತಪ್ಪಿಸಲು, ಚಾರ್ಜ್ ಮಾಡುವಾಗ ಇತರ ಸಾಧನಗಳನ್ನು ತೆಗೆದುಹಾಕಿ ಮತ್ತು ಮೂಲ ಆಪಲ್ ಚಾರ್ಜರ್‌ಗಳು ಮತ್ತು ಕೇಬಲ್‌ಗಳನ್ನು ಬಳಸಿ. ನಕಲಿ ಚಾರ್ಜರ್‌ಗಳು ನಿಮ್ಮ ಫೋನ್ ಅನ್ನು ಹಾನಿಗೊಳಿಸಬಹುದು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ