AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Poco C31: ಭಾರತದಲ್ಲಿ ಕೇವಲ 8,499 ರೂ. ಗೆ ಬಿಡುಗಡೆ ಆಯಿತು ಪೋಕೋ ಸಿ31 ಸ್ಮಾರ್ಟ್​ಫೋನ್

Poco C31 has launched: ಒಟ್ಟು ಎರಡು ಆಯ್ಕೆಯಲ್ಲಿ ಪೋಕೋ ಸಿ31 ಸ್ಮಾರ್ಟ್​ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಪೈಕಿ 3GB RAM ಮತ್ತು 32GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 8,499 ರೂ. ಆಗಿದೆ.

Poco C31: ಭಾರತದಲ್ಲಿ ಕೇವಲ 8,499 ರೂ. ಗೆ ಬಿಡುಗಡೆ ಆಯಿತು ಪೋಕೋ ಸಿ31 ಸ್ಮಾರ್ಟ್​ಫೋನ್
Poco C31
TV9 Web
| Updated By: Vinay Bhat|

Updated on:Sep 30, 2021 | 1:41 PM

Share

ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು (Smartphone) ಬಿಡುಗಡೆ ಮಾಡಿ ಯಶಸ್ಸು ಕಂಡಿರುವ ಪೋಕೋ (POCO) ಸಂಸ್ಥೆ ಇದೀಗ ಭಾರತದಲ್ಲಿ ತನ್ನ ಸಿ ಸರಣಿಯ ಹೊಸ ಪೋಕೋ ಸಿ31 (Poco C31) ಫೋನನ್ನು ಅನಾವರಣ ಮಾಡಿದೆ. 5000mAh ಬ್ಯಾಟರಿ, ಟ್ರಿಪಲ್ ಕ್ಯಾಮೆರಾ ಸಿಸ್ಟಮ್, ಮೀಡಿಯಾ ಟೆಕ್ ಪ್ರೊಸೆಸರ್ ಸೇರಿದಂತೆ ಆಕರ್ಷಕ ಫೀಚರ್​ಗಳಿಂದ ಕೂಡಿರುವ ಈ ಸ್ಮಾರ್ಟ್​ಫೋನ್ ಬಜೆಟ್ ಬೆಲೆಗೆ ಲಭ್ಯವಿದೆ.

ಒಟ್ಟು ಎರಡು ಆಯ್ಕೆಯಲ್ಲಿ ಪೋಕೋ ಸಿ31 ಸ್ಮಾರ್ಟ್​ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಪೈಕಿ 3GB RAM ಮತ್ತು 32GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 8,499 ರೂ. ಆಗಿದೆ. ಹಾಗೆಯೆ 4GB RAM ಮತ್ತು 64GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 9,499 ರೂ. ನಿಗದಿ ಮಾಡಲಾಗಿದೆ. ಫ್ಲಿಪ್‌ಕಾರ್ಟ್​ನಲ್ಲಿ ಅಕ್ಟೋಬರ್ 3 ರಂದು ಆರಂಭವಾಗಲಿರುವ ಬಿಗ್ ಬಿಲಿಯನ್ ಡೇಸ್ ಸೇಲ್‌ ವೇಳೆದಲ್ಲಿ ಈ ಸ್ಮಾರ್ಟ್​ಫೋನ್ ಮಾರಾಟ ಕಾಣಲಿದೆ. ಈ ವೇಳೆ ಎರಡೂ ಮಾದರಿಯ ಫೋನ್​ಗೆ ತಲಾ 500 ರೂ. ಡಿಸ್ಕೌಂಟ್ ನೀಡಲಾಗಿದೆ.

ಪೋಕೋ C31 ಸ್ಮಾರ್ಟ್‌ಪೋನ್‌ 1,080×2,400 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 6.53 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು ವಾಟರ್​ಡ್ರಾಪ್ ನಾಟ್ಚ್ ಡಿಸ್​ಪ್ಲೇ ಆಗಿದೆ. ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್‌ ಬೆಂಬಲವನ್ನು ಪಡೆದಿದೆ.

ಈ ಸ್ಮಾರ್ಟ್‌ಪೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್‌ ಕ್ಯಾಮೆರಾ, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸೆನ್ಸಾರ್‌ ಅನ್ನು ಹೊಂದಿದೆ.

ಪೊಕೊ M2 ಸ್ಮಾರ್ಟ್‌ಪೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ, ಬ್ಲೂಟೂತ್, GPS, ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸುತ್ತದೆ.

Micromax IN Note 1: ಚೀನಾ ಮೊಬೈಲ್​ಗಳಿಗೆ ಶಾಕ್ ಕೊಟ್ಟ ಭಾರತೀಯ ಸ್ಮಾರ್ಟ್​ಫೋನ್: ಬೆಲೆಯಲ್ಲಿ ಭರ್ಜರಿ ಇಳಿಕೆ

Internet SHUTDOWN: ಇಂದಿನಿಂದ ವಿಶ್ವಾದ್ಯಂತ ಇಂಟರ್ನೆಟ್ ಬಂದ್; ಯಾಕೆ ಗೊತ್ತಾ?

(Poco C31 Poco has launched a new affordable smartphone Poco C31 in India sales on Flipkart)

Published On - 1:40 pm, Thu, 30 September 21