AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Micromax IN Note 1: ಚೀನಾ ಮೊಬೈಲ್​ಗಳಿಗೆ ಶಾಕ್ ಕೊಟ್ಟ ಭಾರತೀಯ ಸ್ಮಾರ್ಟ್​ಫೋನ್: ಬೆಲೆಯಲ್ಲಿ ಭರ್ಜರಿ ಇಳಿಕೆ

Flipkart Big Billion Days sale: ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ ವೇಳೆದಲ್ಲಿ ಮತ್ತಷ್ಟು ಭರ್ಜರಿ ಡಿಸ್ಕೌಂಟ್​ನೊಂದಿಗೆ ಮಾರಾಟ ಕಾಣಲಿದೆ.

Micromax IN Note 1: ಚೀನಾ ಮೊಬೈಲ್​ಗಳಿಗೆ ಶಾಕ್ ಕೊಟ್ಟ ಭಾರತೀಯ ಸ್ಮಾರ್ಟ್​ಫೋನ್: ಬೆಲೆಯಲ್ಲಿ ಭರ್ಜರಿ ಇಳಿಕೆ
micromax in note 1
TV9 Web
| Updated By: Vinay Bhat|

Updated on: Sep 30, 2021 | 12:40 PM

Share

ಚೀನಾ ಮೂಲದ ಸ್ಮಾರ್ಟ್‌ಫೋನ್ (Smartphone) ಬ್ರ್ಯಾಂಡ್‌ಗಳಿಗೆ ಸ್ಪರ್ಧೆ ಒಡ್ಡಲು ಮತ್ತು ದೇಸಿ ಬ್ರ್ಯಾಂಡ್ ಪ್ರಚಾರದೊಂದಿಗೆ ಮಾರುಕಟ್ಟೆ ಗೆಲ್ಲಲು ಮೈಕ್ರೋಮ್ಯಾಕ್ಸ್ (Micromax) ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಇದರ ಮೊದಲ ಹೆಜ್ಜೆಯಾಗಿ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ್ದ ಮೈಕ್ರೋಮ್ಯಾಕ್ಸ್‌ ಇನ್ ಸರಣಿಯ ಇನ್ ನೋಟ್ 1 (Micromax IN Note 1) ಸ್ಮಾರ್ಟ್​ಫೋನ್ ಬೆಲೆಯಲ್ಲಿ ಭರ್ಜರಿ ಖಡಿತ ಮಾಡಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್‌, ಉತ್ತಮ ಬ್ಯಾಟರಿ, ಕ್ವಾಡ್‌ ರಿಯರ್ ಕ್ಯಾಮೆರಾ ಸೆಟ್‌ಅಪ್ ಸೇರಿದಂತೆ ಆಕರ್ಷಕ ಫೀಚರ್ಸ್​ನಿಂದ ಕೂಡಿರುವ ಈ ಸ್ಮಾರ್ಟ್​ಫೋನ್ ಬೆಲೆಯಲ್ಲಿ ಈಗ 1,500ರೂ.ಗಳ ಇಳಿಕೆ ಆಗಿದೆ.

ಒಟ್ಟು ಎರಡು ಸ್ಟೋರೆಜ್​ನಲ್ಲಿ ಈ ಫೋನ್ ಲಭ್ಯವಿದ್ದು, 4GB RAM ಮತ್ತಯ 64GB ಸ್ಟೋರೆಜ್ ಸಾಮರ್ಥ್ಯದ ಫೋನ್ ಈಗ ಕೇವಲ 9,499 ರೂ. ಗೆ ಲಭ್ಯವಾಗುತ್ತಿದೆ. ಅಂತೆಯೆ 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯದ ಫೋನ್ 11,999 ರೂ. ನಿಗದಿ ಪಡಿಸಲಾಗಿದೆ. ಪರ್ಪಲ್ ಹಾಗೂ ಬ್ಲೂ ಕಲರ್​ನಲ್ಲಿ ಈ ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯವಿದೆ.

ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ ವೇಳೆದಲ್ಲಿ ಮಾರಾಟ ಮಾಡಲಿದೆ. ಅಕ್ಟೋಬರ್ 3 ಮತ್ತು ಅಕ್ಟೋಬರ್ 10 ರ ಸೇಲ್ ಅವಧಿಯ ನಡುವೆ ಗ್ರಾಹಕರು ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ, ಈ ಫೋನ್ ಖರೀದಿಸಿದರೇ ಶೇಕಡಾ 10 ರಷ್ಟು ರಿಯಾಯಿತಿ ಕೂಡ ಪಡೆಯಬಹುದು.

ಭಾರತದ ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67-ಇಂಚಿನ ಫುಲ್‌-ಹೆಚ್‌ಡಿ + ಡಿಸ್‌ಪ್ಲೇಯನ್ ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಆಂಡ್ರಾಯ್ಡ್ 11 ಗೆ ಅಪ್‌ಗ್ರೇಡ್ ಆಯ್ಕೆ ನೀಡಿದೆ.

ಇನ್ನೂ ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಸೆನ್ಸಾರ್‌, ಮೂರನೇ ಮತ್ತು ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯ ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ನೀಡಲಾಗಿದ್ದು, ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, 4G, ಡ್ಯುಯಲ್-VOLTE, ಬ್ಲೂಟೂತ್ 5.0, GPS ಮತ್ತು USB ಟೈಪ್-ಸಿ ಪೋರ್ಟ್‌ ಅನ್ನು ಬೆಂಬಲಿಸುತ್ತದೆ.

Internet SHUTDOWN: ಇಂದಿನಿಂದ ವಿಶ್ವಾದ್ಯಂತ ಇಂಟರ್ನೆಟ್ ಬಂದ್; ಯಾಕೆ ಗೊತ್ತಾ?

ಭಾರತದಲ್ಲಿ ಇಂದು ಬಿಡುಗಡೆಗೊಂಡ Xiaomi 11 Lite NE 5G ಫೋನ್; ಬೆಲೆ ಎಷ್ಟಿದೆ ಗೊತ್ತಾ?

(Micromax IN Note 1 price in India is now slashed and Big discounts on Flipkart Big Billion Days sale)

ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ