ಭಾರತದಲ್ಲಿ ಇಂದು ಬಿಡುಗಡೆಗೊಂಡ Xiaomi 11 Lite NE 5G ಫೋನ್; ಬೆಲೆ ಎಷ್ಟಿದೆ ಗೊತ್ತಾ?

Xiaomi 11 Lite NE 5G: ಇಂದು ಭಾರತದಲ್ಲಿ ಬಿಡುಗಡೆಗೊಂಡ Xiaomi 11 Lite NE 5G ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಭಾರತದಲ್ಲಿ ಇಂದು ಬಿಡುಗಡೆಗೊಂಡ Xiaomi 11 Lite NE 5G ಫೋನ್; ಬೆಲೆ ಎಷ್ಟಿದೆ ಗೊತ್ತಾ?
Xiaomi 11 Lite NE 5G
Follow us
TV9 Web
| Updated By: shruti hegde

Updated on:Sep 29, 2021 | 2:57 PM

ಶಿಯೋಮಿ ತನ್ನ ಹೊಸ ಪ್ರೀಮಿಯಂ ಸ್ಮಾರ್ಟ್​ಫೋನ್​ Xiaomi 11 Lite NE 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. Xiaomi 11 Lite NE 5G ಹೆಸರೇ ಸೂಚಿಸುವಂತೆ 5 ಜಿ ಸಂಪರ್ಕ ಹೊಂದಿರುತ್ತದೆ. ಆದರೆ ಭಾರತದಲ್ಲಿ 4ಜಿ ಮಾತ್ರ ಪರಿಚಯಿಸಿದೆ. ಇದು ತ್ರಿವಳಿ ಕ್ಯಾಮೆರಾ ಸೆಟಪ್​ ಹೊಂದಿದೆ. ಈ ಹೊಸ ಫೀಚರ್ ಮೊಬೈಲ್​ನ ದರವೆಷ್ಟು? ಜತೆಗೆ Xiaomi 11 Lite NE 5G ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಕಂಪನಿಯು 6 GM RAM ಮತ್ತು 128 GB ಸ್ಟೋರೇಜ್ ಬೆಲೆ 26,999 ರೂಪಾಯಿ ಹಾಗೂ 8 GM RAM ಮತ್ತು 128 GM ಸ್ಟೋರೇಜ್​ಗೆ 28,999 ರೂಪಾಯಿ ನಿಗದಿ ಮಾಡಿದೆ. Xiaomi 11 Lite NE 5G Mi.com, Xiaomi Store ಮತ್ತು Amazon India ದಲ್ಲಿ ಲಭ್ಯವಿರುತ್ತದೆ. Xiaomi 11 Lite NE 5G ಸ್ಮಾರ್ಟ್ ಫೋನ್ ಮೊದಲ ಮಾರಾಟ ಅಕ್ಟೋಬರ್ 2ರಂದು ಮಧ್ಯರಾತ್ರಿ 12 ಗಂಟೆಗೆ ಪ್ರಾರಂಭವಾಗಲಿದೆ.

Xiaomi ಸಹ ಸೀಮಿತ ಅವಧಿಯಲ್ಲಿ ವಿಶೇಷವಾದ ರಿಯಾಯಿತಿ ನೀಡುತ್ತಿದೆ. ಖರೀದಿದಾರರು ಅಕ್ಟೋಬರ್ 2ರಿಂದ 7ನೇ ತಾರೀಕಿನ ವರೆಗೆ ದೀಪಾವಳಿ ವಿಶೇಷ ರಿಯಾಯಿತಿ ₹1,500 ರೂ. ಪಡೆಯಬಹುದು. ಗ್ರಾಹಕರು ಬ್ಯಾಂಕ್ ಆಫರ್ ಕೂಡಾ ಪಡೆಯಬಹುದಾಗಿದೆ. ಅದರಲ್ಲಿ ₹2000 ರೂಪಾಯಿ ಕೊಡುಗೆ ನೀಡಲಾಗುತ್ತಿದೆ.

Xiaomi 11 Lite NE 5G  ಟಸ್ಕನಿ ಕೋರಲ್ (Tuscany Coral), ವಿನೈಲ್​ ಬ್ಲಾಂಕ್ (Vinyl Black),  ಜಾಜ್ ಬ್ಲೂ (Jazz Blue), ಡೈಮಂಡ್ ಡಜಲ್ (Diamond Dazzle)  ಬಣ್ಣಗಳಲ್ಲಿ ಮಾರಾಟವಾಗಲಿದೆ. ವಿಭಿನ್ನ ಕ್ವಾಲ್ ಕ್ಯಾಮ್ ಸ್ನಾಪ್ ಡ್ರಾಗನ್ 778G Soc ಯೊಂದಿಗೆ ಬರುತ್ತದೆ. ಜತೆಗೆ 5ಜಿ ಸಂಪರ್ಕವನ್ನು ಸಹ ಹೊಂದಿರುತ್ತದೆ. ಈ ಸ್ಮಾರ್ಟ್ ಫೋನ್ 6.55 ಇಂಚಿನ HD+AMOLED ಡಿಸ್ಪ್ಲೇಯನ್ನು 90Hz ಬೆಂಬಲಿಸುತ್ತದೆ. ಫೋನ್ full HD+ ರೆಸಲ್ಯೂಷನ್ ಮತ್ತು 20:9ರ ಅನುಪಾತವನ್ನು ಹೊಂದಿದೆ.

ಕ್ಯಾಮರಾ ಮತ್ತು ಬ್ಯಾಟರಿ ಫೋನ್ 64MH ಪ್ರೈಮರಿ ಲೆನ್ಸ್ ಹೊಂದಿದೆ. ಜತೆಗೆ 3 ಕ್ಯಾಮರಾಗಳನ್ನು ಒಳಗೊಂಡಿದೆ. 8MP ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಮತ್ತು 5MP ಟೆಲಿಮಾಕ್ರೋ ಲೆನ್ಸ್ ಹೊಂದಿದೆ. Xiaomi 11 Lite NE 5G ಮೊಬೈಲ್ ಫೋನ್ 5,000mAh ಬ್ಯಾಟರಿಯನ್ನು ಹೊಂದಿರುತ್ತದೆ. ಜತೆಗೆ 33W ಚಾರ್ಜಿಂಗ್ ಬೆಂಬಲೊಂದಿಗೆ ಬಿಡುಗಡೆಯಾಗಿದೆ.

ಇದನ್ನೂ ಓದಿ:

Mi 11 Ultra: ಶಿಯೋಮಿ ಕಂಪೆನಿಯ ದುಬಾರಿ ಫೋನ್ Mi 11 ಅಲ್ಟ್ರಾ ಮಾರಾಟ ಭಾರತದಲ್ಲಿ ಇಂದಿನಿಂದಲೇ ಶುರು

Xiaomi: ಆಪಲ್ ಕಂಪೆನಿಯನ್ನು ಪಕ್ಕಕ್ಕೆ ಸರಿಸಿ ವಿಶ್ವದ ಎರಡನೇ ಅತಿ ದೊಡ್ಡ ಸ್ವಾರ್ಟ್​ಫೋನ್ ತಯಾರಕ ಆದ ಶಿಯೋಮಿ

(Xiaomi 11 Lite NE 5G launched in India rs 26999 here the full details)

Published On - 2:53 pm, Wed, 29 September 21