ಒನ್ಪ್ಲಸ್ ನಾರ್ಡ್ 2 5ಜಿ ಫೋನ್ ಸ್ಟೋಟ ಪ್ರಕರಣ; ಫೋನ್ ನಂತರ ಈ ಬಾರಿ ಚಾರ್ಜರ್ ಬ್ಲಾಸ್ಟ್; ಕಂಪನಿ ಪ್ರತಿಕ್ರಿಯೆ ಏನಿತ್ತು ಗೊತ್ತಾ?
OnePlus Nord 2 5G: ಇದ್ದಕ್ಕಿದ್ದಂತೆಯೇ ಮೊಬೈಲ್ ಚಾರ್ಜರ್ ಸ್ಟೋಟಗೊಂಡಿತು ಬಳಕೆದಾರರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಆದರೆ ಮೊಬೈಲ್ ಚಾರ್ಜರ್ ಇದ್ದಕ್ಕಿದ್ದಂತೆ ಸ್ಟೋಟಗೊಂಡಿದ್ದರಿಂದ ಆಘಾತದಲ್ಲಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ದೆಹಲಿಯ ಮೂಲದ ವಕೀಲರ ಒನ್ಪ್ಲಸ್ ನಾರ್ಡ್ 2 5ಜಿ ಸ್ಮಾರ್ಟ್ ಫೋನ್ ಜೇಬಿನಲ್ಲಿ ಸ್ಟೋಟಗೊಂಡ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಮತ್ತೋರ್ವ ಗ್ರಾಹಕರ ಮೊಬೈಲ್ ಚಾರ್ಜರ್ ಬ್ಲಾಸ್ಟ್ ಆಗಿದೆ. ಈ ಬಾರಿ ಕೇರಳ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಸ್ಮಾರ್ಟ್ ಫೋನ್ ಚಾರ್ಜರ್ ಸ್ಟೋಟಗೊಂಡಿದೆ. ಈ ಕುರಿತಂತೆ ಜಿಮ್ಮಿ ಜೋಸ್ ಒನ್ಪ್ಲಸ್ ನಾರ್ಡ್ 2 5ಜಿ ಚಾರ್ಜರ್ ಇದ್ದಕ್ಕಿದ್ದಂತೆ ಸ್ಟೋಟಗೊಂಡಿತು ಎಂದು ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದ್ದಕ್ಕಿದ್ದಂತೆಯೇ ಮೊಬೈಲ್ ಚಾರ್ಜರ್ ಸ್ಟೋಟಗೊಂಡಿತು ಬಳಕೆದಾರರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಆದರೆ ಮೊಬೈಲ್ ಚಾರ್ಜರ್ ಇದ್ದಕ್ಕಿದ್ದಂತೆ ಸ್ಟೋಟಗೊಂಡಿದ್ದರಿಂದ ಆಘಾತದಲ್ಲಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಸಾಫ್ಟ್ವೇರ್ ಎಂಜಿನಿಯರ್ ಒನ್ಪ್ಲಸ್ ಕಂಪನಿಯನ್ನು ಸಂಪರ್ಕಿಸಿ ಮಾತನಾಡಿದಾಗ, ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡುವಂತೆ ಕಂಪನಿಯು ಕೇಳಿದೆ ಎಂದು ಅವರು ವಿವರಿಸಿದ್ದಾರೆ. ಸ್ಟೋಟಗೊಂಡ ಚಾರ್ಜರ್ಅನ್ನು ಪರಿಶೀಲಿಸಿದ ಬಳಿಕ ವಿದ್ಯುತ್ ಏರಿಕೆಯಿಂದಾಗಿ ಈ ಸ್ಟೋಟ ಸಂಭವಿಸಿರಬಹುದು ಎಂದು ವಿವರಿಸಿದರು. ಬಹುಶಃ ನನ್ನ ಫೋನನ್ನು ಚಾರ್ಜ್ ಮಾಡಲು ನಾನು ವೋಲ್ಟೇಜ್ ಸ್ಟೆಬಿಲೈಜರ್ ಪಡೆಯಬೇಕು ಎಂದು ಬಳಕೆದಾರರು ಹೇಳಿದ್ದಾರೆ.
I wanted to get this to your immediate attention. My OnePlus Nord 2 warp charger blasted with a huge sound and it blew up the socket. Luckily I’m alive to make this tweet. The Nord 2 is working. but this is scary af. I’m still in shock?@OnePlus_IN @oneplus @OnePlus_Support pic.twitter.com/K3fXCyGzNp
— Jimmy Jose (@TheGlitchhhh) September 25, 2021
ಒನ್ಪ್ಲಸ್ ನ್ಯೂಸ್ 18ಗೆ ಹೇಳಿದ ಹೇಳಿಕೆಯಲ್ಲಿ, ಇಂತಹ ವಿಷಯಗಳನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಜತೆಗೆ ಬಳಕೆದಾರರಿಗೆ ಬದಲಿ ಅವಕಾಶಗಳನ್ನು ನೀಡಲಾಗಿದೆ. ಸಮಸ್ಯೆಗಳು ಹೇಗೆ ಉದ್ಭವಿಸಬಹುದು ಎಂಬುದಕ್ಕೆ ಉತ್ತರಿಸಿದ ಕಂಪನಿಯು, ಒನ್ಪ್ಲಸ್ ಚಾರ್ಜರ್ಗಳು ಅಂತರ್ನಿರ್ಮಿತ ಕೆಪಾಸಿಟರ್ಗಳನ್ನು ಹೊಂದಿದ್ದು, ಅದು ಪವರ್ಅನ್ನು (ವಿದ್ಯುತ್) ನಿಯಂತ್ರಿಸುತ್ತದೆ. ಜತೆಗೆ ಬೇಕಾದಷ್ಟು ಮಾತ್ರ ಸಂಗ್ರಹಿಸುತ್ತದೆ. ವೋಲ್ಟೇಜ್ ಏರಿಳಿತಗಳಿಂದ ಇಂತಹ ಘಟನೆಗಳು ನಡೆಯಬಹುದು ಎಂದು ಕಂಪನಿ ಉತ್ತರಿಸಿದೆ. ಬಳಕೆದಾರರು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸುವಂತೆ ಒನ್ಪ್ಲಸ್ ಬಳಕೆದಾರರಿಗೆ ಒತ್ತಾಯಿಸಿದೆ. ದೆಹಲಿ ಮೂಲದ ವಕೀಲರ ಒನ್ಪ್ಲಸ್ ನಾರ್ಡ್ 2 ಸ್ಮಾರ್ಟ್ ಫೋನ್ ಜೇಬಿನಲ್ಲಿ ಸ್ಟೋಟಗೊಂಡ ಕೆಲವೇ ವಾರಗಳಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿಯೂ ಸಹ ಬಳಕೆದಾರರು ಕಂಪನಿಯ ಸ್ಪಷ್ಟೀಕರಣದಿಂದ ತೃಪ್ತಿ ಹೊಂದಿಲ್ಲ.
ಈ ಹಿಂದೆ ದೆಹಲಿ ಮೂಲದ ವಕೀಲರು ತಮ್ಮ ಒನ್ಪ್ಲಸ್ ನಾರ್ಡ್ 2 5ಜಿ ಸ್ಟೋಟಗೊಂಡ ನಂತರ ಗಾಯಗೊಂಡರು. ನಂತರ ಒನ್ಪ್ಲಸ್ ದೆಹಲಿ ಮೂಲದ ವಕೀಲರಿಗೆ ಕಾನೂನು ನೋಟೀಸ್ ಕಳುಹಿಸಿತು. ಜತೆಗೆ ಸಾಮಾಜಿಕ ಮಾಧ್ಯಮದಿಂದ ಪೋಸ್ಟ್ಗಳನ್ನು ತೆಗೆದು ಹಾಕುವಂತೆ ಕೇಳಿತು. ಈ ಹಿಂದೆ ಬೆಂಗಳೂರಿನಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಒನ್ ಪ್ಲಸ್ ನಾರ್ಡ್ 2 5ಜಿ ಮಹಿಳೆಯೋರ್ವರ ಬ್ಯಾಗ್ನಲ್ಲಿ ಸ್ಪೋಟಗೊಂಡಿತ್ತು. ಇದು ಉತ್ಪಾದನೆ ಅಥವಾ ವಿನ್ಯಾಸದ ಸೋಷಗಳಿಂದಲ್ಲ ಎಂದು ಒನ್ಪ್ಲಸ್ ಹೇಳಿತ್ತು.
ಇದನ್ನೂ ಓದಿ:
ಕೋರ್ಟ್ ಆವರಣದಲ್ಲೇ ವಕೀಲರ ಸ್ಮಾರ್ಟ್ಫೋನ್ ಬ್ಲಾಸ್ಟ್: ಭಯ ಹುಟ್ಟಿಸಿದ ಒನ್ಪ್ಲಸ್ನ ಈ ಫೋನ್
(Another oneplus nord 2 5G blast This time user charging brick explodes company reactions full story)
Published On - 11:32 am, Wed, 29 September 21