ಕೋರ್ಟ್​ ಆವರಣದಲ್ಲೇ ವಕೀಲರ ಸ್ಮಾರ್ಟ್​ಫೋನ್ ಬ್ಲಾಸ್ಟ್: ಭಯ ಹುಟ್ಟಿಸಿದ ಒನ್​ಪ್ಲಸ್​ನ ಈ ಫೋನ್

TV9 Digital Desk

| Edited By: Vinay Bhat

Updated on: Sep 14, 2021 | 12:06 PM

OnePlus Nord 2 5G Blast: ದೆಹಲಿಯಲ್ಲಿ ವಕೀಲರೊಬ್ಬರ ಜೇಬಿನಲ್ಲಿ ಇದ್ದಾಗಲೇ ಹೊಸದಾಗಿ ಖರೀದಿಸಿದ್ದ ಒನ್‌ ಪ್ಲಸ್‌ ಕಂಪೆನಿಯ ನಾರ್ಡ್‌ 2 5G ಸ್ಮಾರ್ಟ್​ಫೋನ್‌ ಸ್ಫೋಟಗೊಂಡಿರುವ ಘಟನೆ ವರದಿಯಾಗಿದೆ.

ಕೋರ್ಟ್​ ಆವರಣದಲ್ಲೇ ವಕೀಲರ ಸ್ಮಾರ್ಟ್​ಫೋನ್ ಬ್ಲಾಸ್ಟ್: ಭಯ ಹುಟ್ಟಿಸಿದ ಒನ್​ಪ್ಲಸ್​ನ ಈ ಫೋನ್
OnePlus Nord 2 5G Blast

ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳುವ (Mobile Blast) ಸಂಗತಿಗಳು ಈಗೀಗ ಹೊಸದೇನೂ ಅಲ್ಲ. ಇತ್ತೀಚಿನ ದಿನಗಳಲ್ಲಿ ಇಂಥಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಜೀವ ಹಾನಿ ಸಂಭವಿಸಿದ್ದೂ ಇದೆ. ಫೋನ್‌ಗಳಿಂದ ಲಾಭದಷ್ಟೇ ಹಾನಿ ಕೂಡಾ ಅಷ್ಟೇ ಇದೆ ಎಂಬುದು ಜನರು ಇನ್ನೂ ಅರಿತಿಲ್ಲ. ಇತ್ತೀಚೆಗಷ್ಟೆ ಸ್ಯಾಮ್​ಸಂಗ್ (Samsung) ಕಂಪೆನಿಯ ಸ್ಮಾರ್ಟ್​ಫೋನ್ ಒಂದು ವಿಮಾನದಲ್ಲಿ ಸ್ಫೋಟಗೊಂಡ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಸದ್ಯ ಇದೇರೀತಿಯಾಗಿ ಮತ್ತೊಂದು ಸ್ಮಾರ್ಟ್​ಫೋನ್ ಬ್ಲಾಸ್ಟ್ (Smartphone Blast) ಆದ ಘಟನೆ ನಡೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಕೀಲರೊಬ್ಬರ ಜೇಬಿನಲ್ಲಿ ಇದ್ದಾಗಲೇ ಹೊಸದಾಗಿ ಖರೀದಿಸಿದ್ದ ಒನ್‌ ಪ್ಲಸ್‌ ಕಂಪೆನಿಯ ನಾರ್ಡ್‌ 2 5G (OnePlus Nord 2 5G) ಸ್ಮಾರ್ಟ್​ಫೋನ್‌ ಸ್ಫೋಟಗೊಂಡಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ಸ್ವತಃ ವಕೀಲ ಗೌರವ್‌ ಗುಲಾಟಿ (Gaurav Gulati) ಸ್ಫೋಟಗೊಂಡಿರುವ ಮೊಬೈಲ್‌ ಫೋಟೋಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಸ್ಫೋಟದ ಸಮಯದಲ್ಲಿ ನಾನು ಫೋನ್ ಬಳಸಿರಲಿಲ್ಲ. ಜೊತೆಗೆ ಶೇ. 90ರಷ್ಟು ಚಾರ್ಜ್ ಫುಲ್ ಆಗಿತ್ತು. ಈ ಒನ್‌ ಪ್ಲಸ್‌ ಕಂಪೆನಿಯ ನಾರ್ಡ್‌-2 ಫೋನ್‌ನಲ್ಲಿ ಮೊದಲು ಬೆಂಕಿ ಕಾಣಿಸಿದೆ. ನಂತರ ಕೆಲವೇ ಸೆಕೆಂಡುಗಳಲ್ಲಿ ಸ್ಫೋಟಗೊಂಡಿದೆ. ಇದರಿಂದ ನನಗೂ ಗಾಯಗಳಾಗಿವೆ. ಇದೆಲ್ಲ ಕೋರ್ಟ್‌ ಆವರಣದಲ್ಲೇ ನಡೆಯಿತು ಎಂದು ಗೌರವ್‌ ಗುಲಾಟಿ ಬರೆದುಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಈ ವಿಚಾರದ ಬಗ್ಗೆ ಒನ್‌ಪ್ಲಸ್‌ ಸಂಸ್ಥೆಯ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಫೋನ್‌ ತಯಾರಿಸಿದ ಕಂಪನಿಯನ್ನು ನಿಷೇಧಿಸಲು ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಒನ್‌ಪ್ಲಸ್ ಸಂಸ್ಥೆ ಪ್ರತಿಕ್ರಿಯಿಸಿದ್ದು, ಫೋನ್ ಸ್ಫೋಟದ ಬಗ್ಗೆ ಪರಿಶೀಲನೆ ನಡೆಸದೆ ಪರಿಹಾರ ನೀಡುವುದಿಲ್ಲ. ಸ್ಫೋಟ ಹೇಗಾಯಿತು ಎಂದು ತಿಳಿಯಲು ಗೌರವ್‌ ಅವರನ್ನು ಸಂಪರ್ಕಿದರೆ, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದೆ.

ಇನ್ನೂ ಒನ್ ಪ್ಲಸ್ ಕಂಪೆನಿ ಸ್ಮಾರ್ಟ್​ಫೋನ್ ಸ್ಫೋಟಗೊಳ್ಳುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಆಗಸ್ಟ್ ಮೊದಲ ವಾರದಲ್ಲಿ ಇದೇ ರೀತಿ ಫೋನ್‌ನಲ್ಲಿ ಬೆಂಕಿ ಕಾಣಿಸಿತ್ತು. ಒನ್ ಪ್ಲಸ್ ನಾರ್ಡ್ 2 ಫೋನ್ ಮಾರುಕಟ್ಟೆಗೆ ಬಂದು ಎರಡು ವಾರ ಕಳೆದಿವೆ. ಆದರೆ, ಬೇರೆ ಕಾರಣಗಳಿಂದ ಫೋನ್ ಸ್ಫೋಟಗೊಂಡಿದೆ ಎಂದು ಒನ್‌ಪ್ಲಸ್ ಸ್ಪಷ್ಟನೆ ನೀಡಿದೆ. ಅದೇನೆ ಇದ್ದರೂ ಫೋನ್ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಎರಡೆರಡು ಫೋನ್‌ ಸ್ಫೋಟ ಆಗಿರುವುದು ಬಳಕೆದಾರರಲ್ಲಿ ಆತಂಕ ಶುರುಮಾಡಿದೆ.

Realme 8s: ಅತಿ ಕಡಿಮೆ ಬೆಲೆಗೆ ಲಭ್ಯವಿರುವ ರಿಯಲ್‌ಮಿ 8s 5G ಫಸ್ಟ್ ಸೇಲ್: ಬಂಪರ್ ಆಫರ್​ನಲ್ಲಿ ಖರೀದಿಸಿ

WhatsApp Tricks: ಇದೀಗ ಟೈಪ್ ಮಾಡದೇ ವಾಟ್ಸ್​ಆ್ಯಪ್​ನಲ್ಲಿ ಟೆಕ್ಸ್ಟ್​​​ ಮೆಸೇಜ್ ಕಳುಹಿಸಿ: ಇಲ್ಲಿದೆ ಟ್ರಿಕ್

(OnePlus Nord 2 5G smartphone suddenly exploded in Delhi lawyers coat Details here)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada