WhatsApp Tricks: ಇದೀಗ ಟೈಪ್ ಮಾಡದೇ ವಾಟ್ಸ್​ಆ್ಯಪ್​ನಲ್ಲಿ ಟೆಕ್ಸ್ಟ್​​​ ಮೆಸೇಜ್ ಕಳುಹಿಸಿ: ಇಲ್ಲಿದೆ ಟ್ರಿಕ್

ವಾಟ್ಸ್​ಆ್ಯಪ್ ಓಪನ್‌ ಮಾಡದಂತೆ ಮೆಸೇಜ್‌ ಸೆಂಡ್‌ ಮಾಡಲು ಗೂಗಲ್‌ ಕೂಡ ಸಹಾಯ ಮಾಡುತ್ತಿದೆ. ಗೂಗಲ್‌ ಫೋಲ್ಡರ್‌ ಅಥವಾ ಆಪ್‌ ಡ್ರಾವರ್‌ನಿಂದ ಗೂಗಲ್‌ ಆ್ಯಪ್‌ ಓಪನ್‌ ಮಾಡಿ ಜೋರಾಗಿ 'OK Google' ಎಂದು ಹೇಳಿ.

WhatsApp Tricks: ಇದೀಗ ಟೈಪ್ ಮಾಡದೇ ವಾಟ್ಸ್​ಆ್ಯಪ್​ನಲ್ಲಿ ಟೆಕ್ಸ್ಟ್​​​ ಮೆಸೇಜ್ ಕಳುಹಿಸಿ: ಇಲ್ಲಿದೆ ಟ್ರಿಕ್
WhatsApp
Follow us
| Updated By: Vinay Bhat

Updated on:Sep 13, 2021 | 2:31 PM

ಪ್ರಪಂಚದಲ್ಲಿ ಕೋಟ್ಯಾಂತರ ಜನರು ಇನ್ಸ್ಟೆಂಟ್ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ (WhatsApp) ಅನ್ನು ಬಳಕೆ ಮಾಡುತ್ತಾರೆ. ನಿತ್ಯ ಅಸಂಖ್ಯಾತ ಸಂದೇಶಗಳು ರವಾನೆಯಾಗುತ್ತಿರುತ್ತದೆ. ಸಾಮಾನ್ಯವಾಗಿ ವಾಟ್ಸ್​ಆ್ಯಪ್​ನಲ್ಲಿ ಅಥವಾ ಇತರೆ ಆ್ಯಪ್​ಗಳಲ್ಲಿ ಟೈಪ್ ಮಾಡಿ ಮೆಸೇಜ್ ಕಳುಹಿಸುವುದು ಗೊತ್ತಿರುವ ವಿಷಯ. ಆದರೆ ವಾಟ್ಸ್ಆ್ಯಪ್​ನಲ್ಲಿ ಟೈಪ್ ಮಾಡದೆಯೇ ಟೆಕ್ಸ್ಟ್ ಮೆಸೇಜ್ (Text Message) ಅನ್ನು ಕಳುಹಿಸಬಹುದು. ಈ ವೈಶಿಷ್ಟ್ಯ ನಿಮ್ಮ ಧ್ವನಿಯನ್ನು ಆಧರಿಸಿ ಕೆಲಸ ಮಾಡುತ್ತದೆ. ಅಂದರೆ ನೀವು ಕಳುಹಿಸ ಬೇಕಾದ ಸಂದೇಶವನ್ನು ನೀವು ಕೇವಲ ಮಾತನಾಡುವ ಮೂಲಕ ಹೇಳಬೇಕು ಮತ್ತು ನೀವು ಹೇಳಿದ್ದು ಸ್ವಯಂಚಾಲಿತವಾಗಿ ಟೈಪ್ ಆಗುತ್ತದೆ.

ಇದಕ್ಕಾಗಿ ನೀವು ಗೂಗಲ್ ಪ್ಲೇ ಸ್ಟೋರ್​ನಿಂದ ಗೂಗಲ್ ಇಂಡಿಕ್ ಕೀಬೋರ್ಟ್ (google indic keyboard) ಅನ್ನು ಡೌನ್​ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡಬೇಕು. ವಿಶೇಷ ಎಂದರೆ ಇದು ಕನ್ನಡ ಭಾಷೆಗೂ ಕೂಡ ಸಪೋರ್ಟ್ ಮಾಡುತ್ತದೆ.

ಇಂಡಿಕ್ ಕೀಬೋರ್ಟ್ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿದ ಬಳಿಕ ವಾಟ್ಸ್ಆ್ಯಪ್ ಅನ್ನು ತೆರೆಯಬೇಕು. ಬಳಿಕ ನೀವು ಸಂದೇಶ ಕಳುಹಿಸಬೇಕೆನ್ನುವವರ ಚಾಟ್​ಗೆ ಹೋಗಿ. ಈಗ ಸಂದೇಶ ಬರೆಯಲು ಕೀಬೋರ್ಡ್ ತೆರೆಯಿರಿ. ಹೆಚ್ಚುವರಿ ಕೀಬೋರ್ಡ್​ಗಳ ಮೇಲೆ ಮೇಲ್ಭಾಗದಲ್ಲಿ ಮೈಕ್ (Mic) ಸೈನ್ ಇರುತ್ತದೆ. ಅದನ್ನು ಟ್ಯಾಪ್ ಮಾಡಿ. ಆದರೆ, ವಾಟ್ಸ್​ಆ್ಯಪ್​​ನಲ್ಲಿ ವಾಯಿಸ್ ಮೆಸೇಜ್ ಕಳುಹಿಸಲು ಕೂಡ ಮೈಕ್ ನೀಡಲಾಗಿದೆ ಎಂಬುದರ ಮೇಲೆ ಗಮನವಿರಲಿ. ನೀವು ಆ ಮೈಕ್​ನ ಬಳಕೆ ಮಾಡಬೇಡಿ. ಕೀಬೋರ್ಡ್ ನಲ್ಲಿರುವ ಮೈಕ್ ಮಾತ್ರ ನೀವು ಉಪಯೋಗಿಸಬೇಕು.

ಈಗ ನಿಮ್ಮ ಮುಂದೆ ಒಂದು ಮೈಕ್ ಪ್ರಕಟವಾಗಲಿದೆ. ಜೊತೆಗೆ ನಿಮಗೆ ಮಾತನಾಡಲು ಸೂಚನೆ ನೀಡುತ್ತದೆ. ನೀವು ಕಳುಹಿಸಬೇಕೆನ್ನುವ ಸಂದೇಶವನ್ನು ಕೇವಲ ಮಾತನಾಡುವ ಮೂಲಕ ಹೇಳಿ. ನಿಮ್ಮ ಸಂದೇಶ ಪೂರ್ಣಗೊಂಡ ಬಳಿಕ ಮೈಕ್ ಐಕಾನ್ ಅನ್ನು ಟ್ಯಾಪ್ ಮಾಡಿ. ಇಲ್ಲಿ ವಿಶೇಷ ಎಂದರೆ ಇಂದಿನ ಬಹುತೇಕ ಕೀಬೋರ್ಡ್ ಇಂಗ್ಲಿಷ್ ಭಾಷೆಯ ಜೊತೆಗೆ ಪ್ರಾಂತೀಯ ಭಾಷೆಗಳನ್ನು ಸಹ ಸಮರ್ಥಿಸುತ್ತವೆ. ನೀವು ಮಾತನಾಡಿದ್ದೆಲ್ಲವು ಇಲ್ಲಿ ಟೈಪ್ ಆಗುತ್ತದೆ. ನಂತರ ಸೆಂಡ್ ಬಟನ್ ಒತ್ತಿದರೆ ಆಯಿತು.

OK Google ಮೂಲಕವೂ ಕಳುಹಿಸಬಹುದು:

ಇನ್ನೂ ವಾಟ್ಸ್​ಆ್ಯಪ್ ಓಪನ್‌ ಮಾಡದಂತೆ ಮೆಸೇಜ್‌ ಸೆಂಡ್‌ ಮಾಡಲು ಗೂಗಲ್‌ ಕೂಡ ಸಹಾಯ ಮಾಡುತ್ತಿದೆ. ಗೂಗಲ್‌ ಫೋಲ್ಡರ್‌ ಅಥವಾ ಆಪ್‌ ಡ್ರಾವರ್‌ನಿಂದ ಗೂಗಲ್‌ ಆ್ಯಪ್‌ ಓಪನ್‌ ಮಾಡಿ ಜೋರಾಗಿ ‘OK Google’ ಎಂದು ಹೇಳಿ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಕೆದಾರರು ವಾಟ್ಸ್​ಆ್ಯಪ್‌ನಲ್ಲಿ ಲಾಂಗ್‌ ಮೆಸೇಜ್‌ ಟೈಪಿಸುವ ಬದಲು, ಸೆಂಡ್‌ ಮಾಡಬೇಕಾದ ಮೆಸೇಜ್‌ ಅನ್ನು ಹೇಳಿರಿ. ನಂತರ ಗೂಗಲ್‌ ಯಾವ ಮೆಸೇಜ್‌ ಅನ್ನು ಸೆಂಡ್ ಮಾಡಬೇಕು ಎಂದು ಕೇಳುತ್ತದೆ. ಈ ರೀತಿಯಲ್ಲಿ ಟೈಪಿಸುವ ಸಮಸ್ಯೆಯಿಂದ ವಾಟ್ಸ್​ಆ್ಯಪ್ ಮೆಸೇಜ್ ಅನ್ನು ಕಳುಹಿಸಬಹುದು.

Apple iPhone: ಐಫೋನ್ ಬಳಸುತ್ತಿರುವವರಿಗೆ ಶಾಕಿಂಗ್ ನ್ಯೂಸ್: ಹೀಗೆ ಮಾಡಿದ್ರೆ ನಿಮ್ಮ ಕ್ಯಾಮೆರಾ ಹಾಳಾಗುತ್ತೆ

Computer Tips Part 1: ಮೌಸ್ ಬಳಸುವಾಗ ಈ ತಪ್ಪನ್ನು ಮಾಡದಿರಿ, ಆರೋಗ್ಯಕ್ಕೆ ತೊಂದರೆಯಾದೀತು

(WhatsApp Tricks Now You can send WhatsApp messages without even typing Here is the Tricks)

Published On - 2:30 pm, Mon, 13 September 21