Apple iPhone: ಐಫೋನ್ ಬಳಸುತ್ತಿರುವವರಿಗೆ ಶಾಕಿಂಗ್ ನ್ಯೂಸ್: ಹೀಗೆ ಮಾಡಿದ್ರೆ ನಿಮ್ಮ ಕ್ಯಾಮೆರಾ ಹಾಳಾಗುತ್ತೆ

TV9 Digital Desk

| Edited By: Vinay Bhat

Updated on: Sep 13, 2021 | 12:49 PM

ಕುಪರ್ಟಿನೊ ಆಧಾರಿತ ಟೆಕ್ ದೈತ್ಯ, ವಾಹನ ಕಂಪನದಿಂದ ಐಫೋನ್ ಕ್ಯಾಮೆರಾಗಳಿಗೆ ಹಾನಿಯಾಗುತ್ತಿದೆ ಎಂದು ಹೇಳಿದೆ. ಬೈಕ್ ಓಡಿಸುವಾಗ ಕಂಪನವಿರುತ್ತದೆ. ಈ ಕಂಪನದಿಂದ ಐಫೋನ್ ಕ್ಯಾಮೆರಾಗೆ ಹಾನಿಯಾಗುತ್ತದೆ ಎಂದು ತಿಳಿಸಿದೆ.

Apple iPhone: ಐಫೋನ್ ಬಳಸುತ್ತಿರುವವರಿಗೆ ಶಾಕಿಂಗ್ ನ್ಯೂಸ್: ಹೀಗೆ ಮಾಡಿದ್ರೆ ನಿಮ್ಮ ಕ್ಯಾಮೆರಾ ಹಾಳಾಗುತ್ತೆ
Apple iPhone
Follow us

ಐಫೋನ್ (iPhone) ಎಂದರೆ ಅದು ಕಾಸಿದ್ದವರಿಗೆ ಮಾತ್ರ ಎಂಬ ಕಾಲವಿತ್ತು. ಆದರೆ, ಅದು ಕೆಲವು ವರ್ಷಗಳ ಹಿಂದಿನ ಮಾತು. ಈಗ ಮೊಬೈಲ್ (Mobile) ಜಗತ್ತೇ ಬದಲಾಗಿ ಹೋಗಿದೆ. ಯಾರು ಬೇಕಾದರೂ ಆ್ಯಪಲ್ (Apple) ಫೋನನ್ನು ಖರೀದಿಸಸಬಹುದಾದ ಸಾಮರ್ಥ್ಯ ಹೊಂದಿದ್ದಾರೆ. ಅದು ಇಎಮ್​ಐ (EMI) ಆಯ್ಕೆಯಿಂದ ಇರಬಹುದು ಅಥವಾ ಆಫರ್​ಗಳಿಂದ ಇರಬಹುದು. ಹೀಗಾಗಿ ವಿದೇಶದಲ್ಲಿ ಮಾತ್ರವಲ್ಲದೆ ಈಗ ಭಾರತದಲ್ಲೂ ಐಫೋನ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೇನು ಆ್ಯಪಲ್ ಕಂಪೆನಿ ತನ್ನ ಹೊಸ ಐಫೋನ್ 13ನೇ (iPhonee 13) ಸರಣಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಹೀಗಿರುವಾಗ ಐಫೋನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಅದೇನೆಂದರೆ ವಾಹನ ಕಂಪನದಿಂದ ಐಫೋನ್ ಕ್ಯಾಮೆರಾಗಳಿಗೆ (Camera) ಹಾನಿಯಾಗುತ್ತಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

ಹೌದು, ಕುಪರ್ಟಿನೊ ಆಧಾರಿತ ಟೆಕ್ ದೈತ್ಯ, ವಾಹನ ಕಂಪನದಿಂದ ಐಫೋನ್ ಕ್ಯಾಮೆರಾಗಳಿಗೆ ಹಾನಿಯಾಗುತ್ತಿದೆ ಎಂದು ಹೇಳಿದೆ. ಬೈಕ್ ಓಡಿಸುವಾಗ ಕಂಪನವಿರುತ್ತದೆ. ಈ ಕಂಪನದಿಂದ ಐಫೋನ್ ಕ್ಯಾಮೆರಾಗೆ ಹಾನಿಯಾಗುತ್ತದೆ ಎಂದು ತಿಳಿಸಿದೆ.

ಈ ಬಗ್ಗೆ ಆ್ಯಪಲ್ ಕಂಪೆನಿ ಕೂಡ ವರದಿ ಮಾಡಿದ್ದು, ಕಂಪನಿ ಮೂಡಿಸುವ ಹೈ-ಪವರ್ಡ್ ಮೋಟಾರ್​​​ ಸೈಕಲ್​ನಿಂದಾಗಿ ಐಫೊನ್ ಕ್ಯಾಮೆರಾ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಐಒಎಸ್) ಅಥವಾ ಕ್ಲೋಸ್ಡ್-ಲೂಪ್ ಆಟೋಫೋಕಸ್ ಹೊಂದಿರುವ ಐಫೋನ್ ಕ್ಯಾಮೆರಾ ಲೆನ್ಸ್​ಗಳು, ಗೈರೋಸ್ಕೋಪ್ ಅಥವಾ ಮ್ಯಾಗ್ನೇಟಿಕ್ ಸೆನ್ಸಾರ್​ಗಳಿಗೆ ಹಾನಿಯಾಗಬಹುದಂತೆ.

ಆ್ಯಪಲ್ ಐಫೋನ್​ನಲ್ಲಿರುವ ಓಐಎಸ್ ಮತ್ತು ಕ್ಲೋಸ್ಡ್ ಲೂಪ್ ಎಎಫ್ ಲೆನ್ಸ್ ಹೊಂದಿರುವ ಕ್ಯಾಮೆರಾಗಳನ್ನು ಸೂಕ್ಷ್ಮವಾಗಿ ವಿನ್ಯಾಸ ಮಾಡಲಾಗಿದೆ. ಹೀಗಾಗಿ ಬೈಕಿನ ವೈಬ್ರೇಶನ್​ನಿಂದ ಕ್ಯಾಮೆರಾ ಹಾಳಗಬಹುದು ಮತ್ತು ವಿಡಿಯೋ ಅಥವಾ ಫೋಟೋಗಳ ಗುಣಮಟ್ಟ ಕಡಿಮೆಯಾಗಬಹುದು ಎಂಬುದು ಆ್ಯಪಲ್ ಹೊರಡಿಸಿರುವ ವರದಿಯಲ್ಲಿದೆ.

ಅನೇಕರು ಟ್ರಾವೆಲ್ ಅಥವಾ ಪ್ರಯಾಣ ಬೆಳೆಸುವಾಗ ಐಫೊನ್ ಅನ್ನು ಬೈಕಿನಲ್ಲಿ ಸಿಲುಕಿಸುತ್ತಾರೆ. ಅಂದರೆ ರೋಡ್ ಮ್ಯಾಪ್ ಅಥವಾ ಸಲುವಾಗಿ ಕರೆ ಸ್ವೀಕರಿಲೆಂದು ಬೈಕಿನ ಹ್ಯಾಂಡಲ್​ನಲ್ಲಿ ಐಫೋನ್ ಅನ್ನು ಇಟ್ಟುಕೊಂಡಿರುತ್ತಾರೆ. ಇದು ತುಂಬಾನೆ ಅಪಾಯಕಾರಿಯಾಗಿದ್ದು, ಇದರಿಂದ ಐಫೋನ್ ಹಾನಿ ಆಗುವ ಸಾಧ್ಯತೆ ಹೆಚ್ಚಿದೆಯಂತೆ.

Computer Tips Part 1: ಮೌಸ್ ಬಳಸುವಾಗ ಈ ತಪ್ಪನ್ನು ಮಾಡದಿರಿ, ಆರೋಗ್ಯಕ್ಕೆ ತೊಂದರೆಯಾದೀತು

Offline UPI: ಇಂಟರ್ನೆಟ್ ಕನೆಕ್ಷನ್ ಇಲ್ಲದೆಯೂ ಯುಪಿಐ ಮೂಲಕ ಹಣ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?

(iPhone Users Alert iPhones can be damaged due to certain vibration frequencies)

ತಾಜಾ ಸುದ್ದಿ

Related Stories

Click on your DTH Provider to Add TV9 Kannada