Computer Tips Part 1: ಮೌಸ್ ಬಳಸುವಾಗ ಈ ತಪ್ಪನ್ನು ಮಾಡದಿರಿ, ಆರೋಗ್ಯಕ್ಕೆ ತೊಂದರೆಯಾದೀತು

ಕಂಪ್ಯೂಟರ್ ಟಿಪ್ಸ್ ಭಾಗ 1: ಮೌಸ್ ಹಿಡಿಯಲು ಒಂದು ಸರಿಯಾದ ವಿಧಾನವಿದೆ. ಅದೆಂದರೆ ಮಣಿಕಟ್ಟಿನ ಕೆಳಗೆ ಚಿಕ್ಕ ಆಧಾರವೊಂದನ್ನು ಇರಿಸಿ ಹಸ್ತ ಮಡಚದೇ ಬೆರಳುಗಳನ್ನೂ ಮಡಚದೇ ಸುಲಭವಾಗಿ ಹಿಡಿಯುವುದು.

Computer Tips Part 1: ಮೌಸ್ ಬಳಸುವಾಗ ಈ ತಪ್ಪನ್ನು ಮಾಡದಿರಿ, ಆರೋಗ್ಯಕ್ಕೆ ತೊಂದರೆಯಾದೀತು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Vinay Bhat

Updated on: Sep 12, 2021 | 3:15 PM

ಇಂದು ಕಂಪ್ಯೂಟರ್ (Computer) ಇಲ್ಲದ ಕ್ಷೇತ್ರವೇ ಇಲ್ಲ. ಈಗಂತು ಕೊರೊನಾ ವೈರಸ್ (Corona Virus) ಬಂದಮೇಲೆ ಕಂಪೆನಿಗಳಲ್ಲಿ ಮಾತ್ರವಲ್ಲದೆ ವರ್ಕ್​ ಫ್ರಂ ಹೋಮ್ (Work From Home) ಕೆಲಸದಿಂದಾಗಿ ಮನೆಗಳಲ್ಲೂ ಕಂಪ್ಯೂಟರ್ ಬಳಕೆ ಹೆಚ್ಚಾಗಿದೆ. ಎಲ್ಲೆಲ್ಲಿ ಕಂಪ್ಯೂಟರ್ ಇದೆಯೋ ಅಲ್ಲೆಲ್ಲಾ ಮಾನಿಟರ್, ಕೀಬೋರ್ಡ್, ಮೌಸ್ ಗಳು ಅನಿವಾರ್ಯ. ಇವುಗಳ ಬಳಕೆ ಹೆಚ್ಚಿದಂತೆಯೇ ಇವುಗಳನ್ನು ಸರಿಯಾಗಿ ಬಳಸದೇ ನಮ್ಮ ದೇಹ ಹಲವು ತೊಂದರೆಗಳಿಗೂ ಎದುರಾಗುತ್ತದೆ ಎಂಬುದು ಅನೇಕರಿಗೆ ತಿಳಿದಿರದ ಸಂಗತಿ. ಅಂದರೆ ಕಂಪ್ಯೂಟರ್ ಪರದೆ ಸೂಕ್ತ ಸ್ಥಳದಲ್ಲಿ ಇಲ್ಲದೇ ಮೇಲೆ ಕೆಳಗೆ ಅಥವಾ ಅಗತ್ಯಕ್ಕಿಂತ ಹೆಚ್ಚು ದೂರದಲ್ಲಿದ್ದ ಕಾರಣ ಎದುರಾಗುವ ಬೆನ್ನು ನೋವು, ಕೀಬೋರ್ಡ್ (Keyboard) ಸರಿಯಾದ ಜಾಗದಲ್ಲಿಲ್ಲದೇ ಇರುವ ಕಾರಣ ಎದುರಾಗುವ ಮೊಣಕೈ ನೋವು ಮತ್ತು ಮೌಸ್ (Mouse) ಬಳಕೆಯನ್ನು ಎರಾಬಿರ್ರಿಯಾಗಿ ಮಾಡುವ ಕಾರಣ ಎದುರಾಗುವ ಮಣಿಕಟ್ಟಿನ ನೋವು. ಹೀಗೆ ನಾನಾ ತೊಂದರೆ…

ಮೌಸ್ ಹಿಡಿಯಲು ಒಂದು ಸರಿಯಾದ ವಿಧಾನವಿದೆ. ಅದೆಂದರೆ ಮಣಿಕಟ್ಟಿನ ಕೆಳಗೆ ಚಿಕ್ಕ ಆಧಾರವೊಂದನ್ನು ಇರಿಸಿ ಹಸ್ತ ಮಡಚದೇ ಬೆರಳುಗಳನ್ನೂ ಮಡಚದೇ ಸುಲಭವಾಗಿ ಹಿಡಿಯುವುದು. ಹೀಗೆ ಹಿಡಿಯಬೇಕೆಂತಲೇ ಇದನ್ನು ಈ ರೀತಿಯಾಗಿ ವಿನ್ಯಾಸಮಾಡಲಾಗಿದ್ದು ಇದರ ರೂಪ ನಮ್ಮ ಗಣಪನ ವಾಹನವನ್ನೇ ಹೋಲುವ ಕಾರಣ ಇದಕ್ಕೆ ಮೌಸ್ ಎಂದೇ ಹೆಸರಿಡಲಾಗಿದೆ. ಅಂದರೆ ಯಾವುದೇ ಕಾರಣಕ್ಕೂ ಮಣಿಕಟ್ಟಿನ ಮೇಲೆ ಭಾರ ಬೀಳಕೂಡದು. ಒಂದು ವೇಳೆ ನೀವು ಇಡೀ ದಿನ ಮೌಸ್ ಬಳಸುವ ಉದ್ಯೋಗದಲ್ಲಿರುವಿರಾದರೆ ಕೆಳಗೆ ನೀಡಿರುವ ಅಮೂಲ್ಯ ಮಾಹಿತಿಗಳು ನೀವು ಅರಿಯದೇ ಮಾಡುತ್ತಿರುವ ತಪ್ಪನ್ನು ತಿದ್ದಿ ಮುಂದೆಂದೋ ಆಗಬಹುದಾದ ದೊಡ್ಡ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು.

ಸತತವಾಗಿ ಮೌಸ್ ಬಳಸುವವರ ಮಣಿಕಟ್ಟಿನ ಕೊಂಚ ಮೇಲೆ ಅಂದರೆ ಕಿರುಬೆರಳಿನ ಕೆಳಗೆ ಚರ್ಮ ಗಡಸಾಗಿರುತ್ತದೆ. ಇದು ಹಸ್ತವನ್ನು ಮೌಸ್ ಪ್ಯಾಡ್ ಮೇಲೆ ಸತತವಾಗಿ ಮುಂದೆ ಹಿಂದೆ ಮೌಸ್ ಓಡಿಸುವ ಮೂಲಕ ಈ ಭಾಗವೂ ಉಜ್ಜಿ ಆಗಿರುವ ಗಡಸುತನ. ಕೆಲವರಲ್ಲಿ ಇದು ಕಲೆಯಂತೆ ಕಪ್ಪಗೂ ಆಗಿರುತ್ತದೆ. ಇದನ್ನು ತಡೆಯಲು ಸರಿಯಾದ ಉಪಾಯವೆಂದರೆ ಮೌಸ್ ಪ್ಯಾಡ್ ಮತ್ತು ರಿಸ್ಟ್ ಪ್ಯಾಡ್ ಎಂಬ ಮಣಿಕಟ್ಟಿನ ದಿಂಬು ಬಳಸುವುದು (ಇವೆರಡೂ ಒಂದೇ ಫಲದಲ್ಲಿರುವ ಮೌಸ್ ಪ್ಯಾಡ್ ಇನ್ನೂ ಉತ್ತಮ) ಕಾಲಕಾಲಕ್ಕೆ ಎಡಗೈಗೆ ಮೌಸ್ ಬಳಸುವುದೂ ಇನ್ನೊಂದು ಕ್ರಮ. ಆದರೆ ಇದರಿಂದ ನಮ್ಮ ಸಾಮಾನ್ಯ ವೇಗ ಕಡಿಮೆಯಾಗುವ ಕಾರಣ ಧಾವಂತವಿಲ್ಲದ ಕೆಲಸದ ಸಮಯದಲ್ಲಿ ಎಡಗೈ (ಎಡಗೈ ಅಭ್ಯಾಸವಿರುವವರಲ್ಲಿ ಬಲಗೈ) ಬಳಸಬಹುದು.

ಇನ್ನೂ ಕಂಪ್ಯೂಟರ್ ಮುಂದೆ ಕುಳಿತಾಗ ನಮ್ಮ ಮೊಣಕೈಗಳು ಕುರ್ಚಿಯ ಕೈಗಳ ಮೇಲೆ ಯಾವುದೇ ಒತ್ತಡವಿಲ್ಲದೇ ಕುಳಿತುಕೊಳ್ಳುವಂತಾಗಬೇಕು. ಇದೇ ಕಾರಣಕ್ಕೆ ಇಂದು ಲಭ್ಯವಿರುವ ಕಂಪ್ಯೂಟರ್ ಮೇಜಿನ ಜೊತೆ ಕುಳಿತುಕೊಳ್ಳುವ ಕುರ್ಚಿಯ ಈ ಕೈಗಳನ್ನೂ ಮೇಲೆ ಕೆಳಗೆ ಮಾಡುವಂತೆ ನಿರ್ಮಿಸಿರಲಾಗಿರುತ್ತದೆ. ಒಂದು ವೇಳೆ ಕೈಗಳಿಗೆ ಯಾವುದೇ ಆಧಾರವಿಲ್ಲದೇ ಮೌಸ್ ನಡೆಸುತ್ತಿದ್ದರೆ ಕೊಂಚ ಕಾಲಕ್ಕೇ ಮೊಣಕೈಯಲ್ಲಿ ನೋವು ಬರುತ್ತದೆ. ಇದನ್ನು ತಡೆಯಲು ನಿಮ್ಮ ಕುರ್ಚಿಯ ಕೈಗಳ ಎತ್ತರಕ್ಕೆ ಸರಿಯಾಗಿ ಮೌಸ್ ಮತ್ತು ಕೀಬೋರ್ಡ್ ಗಳನ್ನು ಇರಿಸುವುದು. ಕೊಂಚ ಕೆಳಗಿದ್ದರೂ ಪರವಾಗಿಲ್ಲ, ಆದರೆ ಎತ್ತರದಲ್ಲಿರಕೂಡದು ಅಷ್ಟೆ. ಕೀಬೋರ್ಟ್ ಸುಮಾರು ಮೂವತ್ತು ಡಿಗ್ರಿ ಕೋನದಲ್ಲಿ ಓರೆಯಾಗಿದ್ದು ಮೊಣಕೈ ಕುರ್ಚಿಯ ಕೈಮೇಲೆ ಇದ್ದಾಗ ಇದನ್ನೇ ಕೇಂದ್ರವಾಗಿಸಿ ಹಸ್ತವನ್ನು ಬಲಭಾಗದತ್ತ ತಿರುಗಿಸಿದರೆ ಮೌಸ್ ಸುಲಭವಾಗಿ ಸಿಗುವಂತಿರಬೇಕು.

ಕಂಪ್ಯೂಟರ್ ಮುಂದೆ ದಿನಪೂರ್ತಿ ಕುಳಿತು ಹೊರಬರುವವರನ್ನು ಕೊಂಚ ಗಮನಿಸಿದರೆ ಇವರೆಲ್ಲರಿಗೂ ಕೊಂಚವಾದರೂ ಬೆನ್ನು, ಭುಜನೋವುಗಳು ಕಾಡುತ್ತಿವೆ ಎಂದು ಗೊತ್ತಾಗುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಮಾನಿಟರ್ ನೋಡುವ ಭರದಲ್ಲಿ ಕೊಂಚವೇ ಬಗ್ಗುತ್ತೇವೆ. ಇದು ನಮ್ಮ ಭುಜ, ಕುತ್ತಿಗೆಯ ಸ್ನಾಯುಗಳಿಗೆ ಹೆಚ್ಚಿನ ಸೆಳೆತ ನೀಡುತ್ತದೆ. ಸತತವಾಗಿ ಹೀಗೇ ಮಾಡುತ್ತಿರುವ ಕಾರಣ ದಿನದ ಕೊನೆಯಲ್ಲಿ ಈ ನೋವೆಲ್ಲಾ ಒಂದುಗೂಡಿ ದೊಡ್ಡನೋವಾಗಿ ಹೊರಹೊಮ್ಮುತ್ತದೆ. ಇದಕ್ಕೆ ಪರಿಹಾರವೆಂದರೆ ಈ ಸೆಳೆತಕ್ಕೆ ವಿರುದ್ದವಾದ ಕೆಲವು ವ್ಯಾಯಾಮಗಳನ್ನು ಆಗಾಗ ಮಾಡುತ್ತಿರುವುದು. ಭುಜಗಳನ್ನು ಹಿಂದೆ ವಾಲಿಸುವುದು. ಬಲಗೈ ಬಲಹಣೆಗೆ ಒತ್ತಿ ಕುತ್ತಿಗೆಯನ್ನು ಬಲಭಾಗಕ್ಕೆ ಒತ್ತುವುದು, ಎರಡೂ ಕೈಗಳನ್ನು ಕೈಗಳ ಹಿಂದೆ ಕಟ್ಟಿ ತಲೆಯನ್ನು ಹಿಂದಕ್ಕೆ ವಾಲಿಸಲು ಒತ್ತಡ ನೀಡುವುದು ಮೊದಲಾದ ವ್ಯಾಯಾಮಗಳನ್ನು ಮಾಡುತ್ತಿರಬೇಕು.

ಇಡಿಯ ದಿನ ಮೌಸ್ ಮತ್ತು ಕೀಪ್ಯಾಡ್ ಗಳಲ್ಲಿ ಕೆಲಸ ಮಾಡುವವರಿಗೆ ಕೈಗಳಲ್ಲಿ ನೋವು ಸಾಮಾನ್ಯವಾಗಿರುತ್ತದೆ. ಏಕೆಂದರೆ ಟೈಪಿಂಗ್ ಹಾಗೂ ಮೌಸ್ ಅನ್ನು ಕ್ಲಿಕ್ ಮಾಡಲು ನಮ್ಮ ಕೆಲವೇ ಸ್ನಾಯುಗಳ ಬಳಕೆಯಾಗುತ್ತಿದ್ದರೂ ಇದೇ ಸ್ನಾಯುಗಳ ಮೇಲೆ ಸತತವಾಗಿ ಇಡಿಯ ದಿನ ಒತ್ತಡ ಬೀಳುವ ಕಾರಣ ಈ ಸ್ನಾಯುಗಳು ದಣಿಯುತ್ತವೆ. ಆದರೆ ಸರಿಯಾದ ಭಂಗಿಯಲ್ಲಿ ಕುಳಿತು ಕನಿಷ್ಟ ಒತ್ತಡ ನೀಡುವ ಮೂಲಕ ಈ ನೋವನ್ನೂ ಕನಿಷ್ಟಗೊಳಿಸಬಹುದು. ಇದಕ್ಕೆ ಕೀಬೋರ್ಡ್ ಮತ್ತು ನಮ್ಮ ಮೊಣಕೈ ಸರಿಯಾದ ಎತ್ತರದಲ್ಲಿರಬೇಕು.

(Computer Tips Part 1 The surprising side effects of the keyboard Mouse)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್