Nokia G50: ಬಿಡುಗಡೆಗೆ ಸಜ್ಜಾದ ನೋಕಿಯಾದ ಹೊಸ 5G ಸ್ಮಾರ್ಟ್​ಫೋನ್​: ಆನ್​ಲೈನ್​ನಲ್ಲಿ ಫೀಚರ್ಸ್ ಸೋರಿಕೆ

ವಿಶೇಷ ಎಂದರೆ ನೋಕಿಯಾ G50 5ಜಿ ಸಂಪರ್ಕ ಹೊಂದಿರಲಿದೆಯಂತೆ. ಈ ಮೂಲಕ ಕೆಲವೇ ಕೆಲವು ನೋಕಿಯಾ 5ಜಿ ಸ್ಮಾರ್ಟ್​ಫೋನ್​ಗಳ ಸಾಲಿಗೆ ಇದುಕೂಡ ಸೇರುವುದು ಖಚಿತವಾಗಿದೆ.

Nokia G50: ಬಿಡುಗಡೆಗೆ ಸಜ್ಜಾದ ನೋಕಿಯಾದ ಹೊಸ 5G ಸ್ಮಾರ್ಟ್​ಫೋನ್​: ಆನ್​ಲೈನ್​ನಲ್ಲಿ ಫೀಚರ್ಸ್ ಸೋರಿಕೆ
NOKIA G50
Follow us
TV9 Web
| Updated By: Vinay Bhat

Updated on: Sep 12, 2021 | 12:36 PM

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಈಗೀಗ ಆಕರ್ಷಕ ಫೀಚರ್​ಗಳುಳ್ಳ ಫೋನನ್ನು ಬಿಡುಗಡೆ ಮಾಡುತ್ತಿರುವ ನೋಕಿಯಾ ಕಂಪೆನಿ ಸದ್ಯ ನೋಕಿಯಾ ಜಿ50 (Nokia G50) ಎಂಬ ಹೊಸ ಸ್ಮಾರ್ಟ್​ಫೋನನ್ನು ಅನಾವರಣ ಮಾಡಲು ಸಜ್ಜಾಗಿದೆ. ಆದರೆ, ಅಚ್ಚರಿ ಎಂಬಂತೆ ಈ ಫೋನಿನ ಕೆಲವು ಮಾಹಿತಿ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. ವಾಟರ್‌ಡ್ರಾಪ್ ಶೈಲಿಯ ಡಿಸ್​ಪ್ಲೇ ನೋಚ್, ರೌಂಡ್ ಕ್ಯಾಮೆರಾ ರಚನೆ ಸೇರಿದಂತೆ ಈ ಫೋನಿನ ಕುರಿತು ಕೆಲವು ಮಾಹಿತಿಗಳು ಲೀಕ್ ಆಗಿವೆ. ವಿಶೇಷ ಎಂದರೆ ಈ ಫೋನ್ 5ಜಿ ಸಂಪರ್ಕ ಹೊಂದಿರಲಿದೆಯಂತೆ. ಈ ಮೂಲಕ ಕೆಲವೇ ಕೆಲವು ನೋಕಿಯಾ 5ಜಿ ಸ್ಮಾರ್ಟ್​ಫೋನ್​ಗಳ ಸಾಲಿಗೆ ಇದುಕೂಡ ಸೇರುವುದು ಖಚಿತವಾಗಿದೆ. ಎರಡು ವಿಭಿನ್ನ ಶೇಖರಣಾ ರೂಪಾಂತರಗಳಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದ್ದು, ನೀಲಿ ಮತ್ತು ಮಿಡ್ನೈಟ್ ಸನ್ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ.

ಟ್ವಿಟ್ಟರ್ ನಲ್ಲಿನ ಲೀಕ್ ಮಾಹಿತಿ ಪ್ರಕಾರ, ನೋಕಿಯಾ G50ಯ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್, ಸೆಕೆಂಡರಿ ಕ್ಯಾಮೆರಾವು 5 ಮೆಗಾ ಪಿಕ್ಸಲ್ ಮತ್ತು ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯ ದಲ್ಲಿ ಇರಲಿದೆ ಎಂದು ಹೇಳಲಾಗಿದೆ. ಹಾಗೆಯೇ ಫ್ಲಾಶ್ ಲೈಟ್ ಪಡೆದಿರಲಿದೆ. ಇನ್ನು ಮುಂಭಾಗದ ಸೆಲ್ಫಿ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸಾಮರ್ಥ್ಯ ಹೊಂದಿರಲಿದೆ ಎನ್ನಲಾಗಿದೆ.

6.82 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಈ ಡಿಸ್‌ಪ್ಲೇಯು 1640 × 720 ಪಿಕ್ಸಲ್ ರೆಸಲ್ಯೂಶನ್ ಹೊಂದಿರಲಿದೆ ಎಂದು ಹೇಳಲಾಗಿದೆ. ಇನ್ನು ಡಿಸ್‌ಪ್ಲೇಯು ಎಲ್‌ಸಿಡಿ ಮಾದರಿಯಲ್ಲಿದ್ದು, ವಾಟರ್‌ಡ್ರಾಪ್ ಸ್ಟೈಲ್‌ ನಾಚ್ ಪಡೆದಿರಲಿದೆ. ಇದರೊಂದಿಗೆ ಈ ಫೋನ್ ಫಿಂಗರ್‌ಪ್ರಿಂಟ್ ಸೈಡ್-ಮೌಂಟೆಡ್ ಆಯ್ಕೆ ಪಡೆದಿರಲಿದೆ.

ಎಸ್‌ಒಸಿ ಸ್ನಾಪ್‌ಡ್ರಾಗನ್ 480 5 ಜಿ ಪ್ರೊಸೆಸರ್‌ ಬಲವನ್ನು ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಇರಲಿದೆ. ಹಾಗೆಯೇ ಈ ಫೋನ್ 4GB RAM ಮತ್ತು 128 GB ಆಂತರಿಕ ಸ್ಟೋರೇಜ್ ಪಡೆದಿರಲಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಹೊಂದಿರಲಿದೆ ಎನ್ನಲಾಗಿದೆ. ಇನ್ನೂ 4850mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾದ ಫಾಸ್ಟ್ ಚಾರ್ಜಿಂಗ್ ನೀಡುವ ಸಾಧ್ಯತೆಗಳು ಇವೆ. ಭಾರತದಲ್ಲಿ ಇದರ ಬೆಲೆ 20,000 ರೂ. ಒಳಗೆ ಇರಬಹುದೆಂದು ಅಂದಾಜಿಸಲಾಗಿದೆ.

WhatsApp: ವಾವ್… ವಾಟ್ಸ್​ಆ್ಯಪ್​ನಲ್ಲಿ ಸದ್ಯದಲ್ಲೇ ಬರಲಿದೆ ಊಹಿಸಲಾಗದ ವಿಶೇಷ ಫೀಚರ್

Jio: IPL​ ಗಾಗಿ ಉಚಿತ ಹಾಟ್​ಸ್ಟಾರ್ ರಿಚಾರ್ಜ್​ ಪ್ಲ್ಯಾನ್ ಪರಿಚಯಿಸಿದ ಜಿಯೋ

(Nokia G50 most awaited Nokia G50 5G price specifications renders leaked before announcement)