Realme 8i: ಮೊದಲ ಸೇಲ್​ನಲ್ಲಿ ಕೇವಲ 12,999 ರೂ. ಗೆ ಖರೀದಿಸಿ ಭರ್ಜರಿ ಫೀಚರ್​ನ ರಿಯಲ್‌ಮಿ 8i ಸ್ಮಾರ್ಟ್​ಫೋನ್

ರಿಯಲ್‌ಮಿ 8i ಸ್ಮಾರ್ಟ್‌ಫೋನ್‌ ಒಟ್ಟು ಎರಡು ವೇರಿಯಂಟ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಅವುಗಳಲ್ಲಿ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್‌ ಬೆಲೆಯು 13,999 ರೂ. ಆಗಿದೆ.

Realme 8i: ಮೊದಲ ಸೇಲ್​ನಲ್ಲಿ ಕೇವಲ 12,999 ರೂ. ಗೆ ಖರೀದಿಸಿ ಭರ್ಜರಿ ಫೀಚರ್​ನ ರಿಯಲ್‌ಮಿ 8i ಸ್ಮಾರ್ಟ್​ಫೋನ್
Realme 8i

ಕಳೆದ ವಾರವಷ್ಟೆ ಭಾರತೀಯ ಮಾರುಕಟ್ಟೆಯಲ್ಲಿ ರಿಯಲ್‌ ಮಿ ಕಂಪೆನಿ ತನ್ನ ವರ್ಚುವಲ್ ಕಾರ್ಯಕ್ರಮದ ಮೂಲಕ ರಿಯಲ್‌ಮಿ 8i ಮತ್ತು ರಿಯಲ್‌ಮಿ 8s 5G (Realme 8s, Realme 8i) ಸ್ಮಾರ್ಟ್‌ಫೋನ್‌ಗಳನ್ನು ಅತಿ ಕಡಿಮೆ ಬೆಲೆಗೆ ಅನಾವರಣ ಮಾಡಿತ್ತು. ಈ ಪೈಕಿ ರಿಯಲ್‌ಮಿ 8s 5G ಸ್ಮಾರ್ಟ್‌ಫೋನ್‌ ಸೋಮವಾರ ತನ್ನ ಫಸ್ಟ್‌ ಸೇಲ್‌ ಆರಂಭಿಸಿದೆ. ಸದ್ಯ ಇಂದಿನಿಂದ ರಿಯಲ್‌ಮಿ 8i ಕೂಡ ಮಾರಾಟಕ್ಕೆ ಲಭ್ಯವಾಗುತ್ತಿದೆ. ತನ್ನ ಅಧಿಕೃತ ವೆಬ್‌ಸೈಟ್‌ ರಿಯಲ್‌ಮಿ.ಕಾಮ್‌ ಮತ್ತು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ (Flipkart) ತಾಣದಲ್ಲಿ ರಿಯಲ್‌ಮಿ 8i ಈ ಖರೀದಿಗೆ ಸಿಗುತ್ತಿದೆ. ಆಕರ್ಷಕ ಕ್ಯಾಮೆರಾ, ಅದ್ಭುತ ಬ್ಯಾಟರಿ ಜೊತೆಗೆ ಅತ್ಯುತ್ತಮ ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನು ಆಫರ್ ಎಂಬುದನ್ನು ನೋಡುವುದಾದರೆ…

ಬೆಲೆ-ಆಫರ್?:

ರಿಯಲ್‌ಮಿ 8i ಸ್ಮಾರ್ಟ್‌ಫೋನ್‌ ಒಟ್ಟು ಎರಡು ವೇರಿಯಂಟ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಅವುಗಳಲ್ಲಿ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್‌ ಬೆಲೆಯು 13,999 ರೂ. ಆಗಿದೆ. ಅದೇ ರೀತಿ 6GB RAM +128GB ಸ್ಟೋರೇಜ್ ವೇರಿಯಂಟ್‌ ಬೆಲೆಯು 15,999 ರೂ. ಆಗಿದೆ. ವಿಶೇಷ ಆಫರ್ ಕೂಡ ಲಭ್ಯವಿದ್ದು, ಹೆಚ್‌ಡಿಎಫ್‌ಸಿ ಹಾಗೂ ಐಸಿಐಸಿಐ ಬ್ಯಾಂಕ್‌ಗಳ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೇ 1,000 ರೂ. ರಿಯಾಯಿತಿ ಲಭ್ಯವಾಗಲಿದೆ. ಹಾಗೆಯೇ ಇಎಮ್‌ಐ ಆಯ್ಕೆಗಳು ಸಿಗಲಿವೆ.

ಏನು ವಿಶೇಷತೆ?:

ರಿಯಲ್‌ಮಿ 8i ಸ್ಮಾರ್ಟ್‌ಫೋನ್‌ 6.6 ಇಂಚಿನ ಹೆಚ್‌ಡಿ ಪ್ಲಸ್‌ LCD ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೋ G96 ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ಅನ್ನು 256 GB ವರೆಗೂ ವಿಸ್ತರಿಸಬಹುದಾಗಿದೆ.

ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್‌, ಎರಡು ಮತ್ತು ಮೂರನೇ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿವೆ. ಹಾಗೆಯೇ 16 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಎಲ್‌ಇಡಿ ಫ್ಲ್ಯಾಶ್‌ ಆಯ್ಕೆಯನ್ನೂ ಒದಗಿಸಲಾಗಿದೆ.

ಇನ್ನೂ ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಸಿ ಟೈಪ್ ಯುಎಸ್‌ಬಿ, ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್, ಅಕ್ಸೆಲೆರೊಮೀಟರ್, ಗೈರೋಮೀಟರ್ ಸೇರಿದಂತೆ ಪ್ರಮುಖ ಆಯ್ಕೆಗಳನ್ನು ನೀಡಲಾಗಿದೆ.

Apple Event: ಬಂದಿದೆ ಐಫೋನ್ ಪ್ರಿಯರು ಕಾದುಕುಳಿತಿರುವ ದಿನ: ಇಂದು ಬಹುನಿರೀಕ್ಷಿತ ಐಫೋನ್ 13 ಬಿಡುಗಡೆ: ಲೈವ್ ವೀಕ್ಷಣೆ ಹೇಗೆ?

ಕೋರ್ಟ್​ ಆವರಣದಲ್ಲೇ ವಕೀಲರ ಸ್ಮಾರ್ಟ್​ಫೋನ್ ಬ್ಲಾಸ್ಟ್: ಭಯ ಹುಟ್ಟಿಸಿದ ಒನ್​ಪ್ಲಸ್​ನ ಈ ಫೋನ್

(Realme 8i First sale started via Flipkart with Rs 1000 off on HDFC bank cards)

Click on your DTH Provider to Add TV9 Kannada