Apple Event: ಬಂದಿದೆ ಐಫೋನ್ ಪ್ರಿಯರು ಕಾದುಕುಳಿತಿರುವ ದಿನ: ಇಂದು ಬಹುನಿರೀಕ್ಷಿತ ಐಫೋನ್ 13 ಬಿಡುಗಡೆ: ಲೈವ್ ವೀಕ್ಷಣೆ ಹೇಗೆ?

TV9 Digital Desk

| Edited By: Vinay Bhat

Updated on: Sep 14, 2021 | 1:43 PM

Apple iPhone 13: ಐಫೋನ್ 13 ಸರಣಿಯ ಬಿಡುಗಡೆ ಕಾರ್ಯಕ್ರಮವನ್ನು ನೀವು ಆ್ಯಪಲ್ ಈವೆಂಟ್ ವೆಬ್​ಸೈಟ್ ಅಥವಾ ಐಫೋನ್​ನಲ್ಲಿನ ಆ್ಯಪಲ್ ಟಿವಿ ಆ್ಯಪ್​ನಲ್ಲಿ ವೀಕ್ಷಿಸಬಹುದು.

Apple Event: ಬಂದಿದೆ ಐಫೋನ್ ಪ್ರಿಯರು ಕಾದುಕುಳಿತಿರುವ ದಿನ: ಇಂದು ಬಹುನಿರೀಕ್ಷಿತ ಐಫೋನ್ 13 ಬಿಡುಗಡೆ: ಲೈವ್ ವೀಕ್ಷಣೆ ಹೇಗೆ?
Apple iPhone 13 launch event

ವಿಶ್ವದ ಜನಪ್ರಿಯ ಫೋನ್ ಬ್ರ್ಯಾಂಡ್‌ ಆಗಿರುವ ಆ್ಯಪಲ್ ಸಂಸ್ಥೆಯ (Apple Company) ಐಫೋನ್‌ಗಳು ಹೆಚ್ಚು ಡಿಮ್ಯಾಂಡ್‌ ಪಡೆದಿವೆ. ಕಂಪನಿಯು ಐಫೋನ್‌ 12 (iPhone 12)ಸರಣಿಯನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿವೆ. ಈಗಲೂ ಈ ಫೋನ್ ಭರ್ಜರಿ ಸೇಲ್ ಕಾಣುತ್ತಿವೆ. ಸದ್ಯ ಈ ಸರಣಿಯ ಮುಂದುವರೆದ ಭಾಗವಾಗಿ ಕಂಪನಿಯು ತನ್ನ ಬಹು ನಿರೀಕ್ಷಿತ ಐಫೋನ್ 13 ಸರಣಿಯನ್ನು (iPhone 13) ಬಿಡುಗಡೆ ಮಾಡಲು ಸಜ್ಜಾಗಿದೆ. ಐಫೋನ್‌ 13 ಸರಣಿಯು ಇಂದು (ಸೆ. 14) ಅಧಿಕೃತವಾಗಿ ಅನಾವರಣಗೊಳ್ಳಲಿದೆ. ಕ್ಯಾಲಿಫೋರ್ನಿಯಾ ಸ್ಟ್ರೀಮಿಂಗ್ ಹೆಸರಿನ ಈ ಕಾರ್ಯಕ್ರಮವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10:30 ಕ್ಕೆ ಪ್ರಾರಂಭವಾಗಲಿದೆ.

ಆ್ಯಪಲ್ ಹೊಸದಾಗಿ ಐಫೋನ್ 13 ಜೊತೆಗೆ ಆ್ಯಪಲ್ ವಾಚ್ ಸಿರೀಸ್ 7 ಮತ್ತು ಏರ್‌ಪಾಡ್ಸ್ 3 ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಜೊತೆಗೆ ಆ್ಯಪಲ್ ನೂತನ ಐಓಎಸ್ 15, ಮ್ಯಾಕ್‌ಓಎಸ್, ಐಪ್ಯಾಡ್ ಓಎಸ್, ವಾಚ್ ಓಎಸ್ ಕೂಡ ಬಳಕೆದಾರರಿಗೆ ಶೀಘ್ರದಲ್ಲೇ ದೊರೆಯಲಿದೆ. ಕೋವಿಡ್ ನಿಯಮಗಳಿಂದಾಗಿ ಈ ಬಾರಿ ಕೂಡ ಆ್ಯಪಲ್ ಇವೆಂಟ್ ಕ್ಯಾಲಿಫೋರ್ನಿಯಾದಿಂದ ಆನ್‌ಲೈನ್‌ ಸ್ಟ್ರೀಮಿಂಗ್‌ಗೆ ಮಾತ್ರ ಸೀಮಿತವಾಗಿರಲಿದೆ.

ಲೈವ್ ವೀಕ್ಷಿಸುವುದು ಹೇಗೆ?:

ಐಫೋನ್ 13 ಸರಣಿಯ ಬಿಡುಗಡೆ ಕಾರ್ಯಕ್ರಮವನ್ನು ನೀವು ಆ್ಯಪಲ್ ಈವೆಂಟ್ ವೆಬ್​ಸೈಟ್ ಅಥವಾ ಐಫೋನ್​ನಲ್ಲಿನ ಆ್ಯಪಲ್ ಟಿವಿ ಆ್ಯಪ್​ನಲ್ಲಿ ವೀಕ್ಷಿಸಬಹುದು. ನಿಮ್ಮನಲ್ಲಿ ಐಫೋನ್ ಇಲ್ಲವೆಂದಾದರೆ ಆ್ಯಪಲ್ ಅಧಿಕೃತ ಯೂ ಟ್ಯೂಬ್ ಚಾನೆಲ್​ನಲ್ಲಿ ಲೈವ್ ನೋಡಬಹುದು. ಇದರ ಜೊತೆಗೆ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲೂ ಲೈವ್ ಪ್ರಸಾರವಾಗುತ್ತದೆ.

ಬಹುನಿರೀಕ್ಷಿತ ಆಪಲ್‌ ಐಫೋನ್ 13 ಸರಣಿಯಲ್ಲಿ ಐಫೋನ್ 13, ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್‌ ಮತ್ತು ಐಫೋನ್ 13 ಮಿನಿ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಕಂಪನಿಯು ಐಫೋನ್ 13 ಸರಣಿಯ ಫೀಚರ್ಸ್‌ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಆದರೆ ಆನ್‌ಲೈನ್‌ನಲ್ಲಿ ಐಫೋನ್ 13 ಫೀಚರ್ಸ್‌ಗಳು ಲೀಕ್ ಆಗಿವೆ.

ಮೂಲಗಳ ಪ್ರಕಾರ ಐಫೋನ್ 13 ಮಿನಿ ಫೋನ್ 5.4 ಇಂಚಿನ ಸ್ಕ್ರೀನ್ ಹೊಂದಿರಲಿದೆ. ಐಫೋನ್ 13 ಫೋನ್ 6.1 ಇಂಚಿನ ಗಾತ್ರ ಪಡೆದಿರಲಿದೆ. ಐಫೋನ್ 13 ಪ್ರೊ ಫೋನ್ ಮಾಡೆಲ್‌ ಸಹ 6.1 ಇಂಚಿನ ಸ್ಕ್ರೀನ್ ಹೊಂದಿರಲಿದೆ. ಇನ್ನು ಐಫೋನ್ 13 ಪ್ರೊ ಮ್ಯಾಕ್ಸ್ ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿಯ ಐಫೋನ್‌ 13 ಸರಣಿಯು ವಿಶೇಷ ಕ್ಯಾಮೆರಾ ಫೀಚರ್‌ ಹೊಂದಿರಲಿದೆ ಎಂದು ಹೇಳಲಾಗಿದೆ. ಈ ಫೋನ್‌ಗಳು ಕಂಚು ಮತ್ತು ಗ್ರ್ಯಾಫೈಟ್ ಗ್ರೇ ಬಣ್ಣಗಳ ಆಯ್ಕೆಯನ್ನು ಹೊಂದಿರುವ ಸಾಧ್ಯತೆಗಳು ಇವೆ. ಹಾಗೆಯೇ ಬಿಡುಗಡೆ ಆಗಲಿರುವ ಹೊಸ ಐಫೋನ್ 13 ಫೋನ್‌ ಗಳು ಐಪ್ಯಾಡ್ ಪ್ರೊ ಮಾದರಿಯಂತೆ 120Hz ರೀಫ್ರೇಶ್ ರೇಟ್ ಹೊಂದಿರಲಿವೆ. ಹಾಗೆಯೇ ‘ಪ್ರೊಮೋಷನ್’ ಮಾದರಿಯಲ್ಲಿ ಬರಲಿವೆ ಎಂಬ ಮಾತುಗಳೂ ಇವೆ.

ಕೋರ್ಟ್​ ಆವರಣದಲ್ಲೇ ವಕೀಲರ ಸ್ಮಾರ್ಟ್​ಫೋನ್ ಬ್ಲಾಸ್ಟ್: ಭಯ ಹುಟ್ಟಿಸಿದ ಒನ್​ಪ್ಲಸ್​ನ ಈ ಫೋನ್

Realme 8s: ಅತಿ ಕಡಿಮೆ ಬೆಲೆಗೆ ಲಭ್ಯವಿರುವ ರಿಯಲ್‌ಮಿ 8s 5G ಫಸ್ಟ್ ಸೇಲ್: ಬಂಪರ್ ಆಫರ್​ನಲ್ಲಿ ಖರೀದಿಸಿ

(Apple iPhone 13 launch event iPhone 13 Launch Today Here is How to Watch Live and What to Expect)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada