AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Xiaomi: ಆಪಲ್ ಕಂಪೆನಿಯನ್ನು ಪಕ್ಕಕ್ಕೆ ಸರಿಸಿ ವಿಶ್ವದ ಎರಡನೇ ಅತಿ ದೊಡ್ಡ ಸ್ವಾರ್ಟ್​ಫೋನ್ ತಯಾರಕ ಆದ ಶಿಯೋಮಿ

ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್​ಫೋನ್ ತಯಾರಕ ಕಂಪೆನಿ ಆಗಿ ಶಿಯೋಮಿ ಹೊರಹೊಮ್ಮಿದೆ. ಈ ಮೂಲಕ ಆಪಲ್ ಕಂಪೆನಿಯನ್ನು ಪಕ್ಕಕ್ಕೆ ಸರಿಸಿದ್ದು, ಸದ್ಯಕ್ಕೆ ಸ್ಯಾಮ್ಸಂಗ್ ನಂಬರ್ ಒನ್ ಸ್ಥಾನದಲ್ಲಿದೆ.

Xiaomi: ಆಪಲ್ ಕಂಪೆನಿಯನ್ನು ಪಕ್ಕಕ್ಕೆ ಸರಿಸಿ ವಿಶ್ವದ ಎರಡನೇ ಅತಿ ದೊಡ್ಡ ಸ್ವಾರ್ಟ್​ಫೋನ್ ತಯಾರಕ ಆದ ಶಿಯೋಮಿ
ಪ್ರಾತಿನಿಧಿಕ ಚಿತ್ರ
TV9 Web
| Updated By: Srinivas Mata|

Updated on: Jul 16, 2021 | 2:05 PM

Share

ಆಪಲ್ ಕಂಪೆನಿಯನ್ನು ಹಿಂದಿಕ್ಕಿರುವ ಶಿಯೋಮಿ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್​ಫೋನ್ ತಯಾರಕ ಆಗಿದೆ. ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿಯು ಸ್ಥಳೀಯ ಪ್ರತಿಸ್ಪರ್ಧಿ ಹುವೈ ಅಂತ್ಯದೊಂದಿಗೆ ಲಾಭ ಪಡೆದಿದೆ. ಮತ್ತು ಈಗ ಸ್ಯಾಮ್‌ಸಂಗ್‌ನ ಅಗ್ರ ಸ್ಥಾನದಲ್ಲಿದೆ. ಕ್ಯಾನಲಿಸ್ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2021ರ ಎರಡನೇ ತ್ರೈಮಾಸಿಕದಲ್ಲಿ, ಶಿಯೋಮಿ ಮಾರಾಟದ ದೃಷ್ಟಿಯಿಂದ ಜಾಗತಿಕವಾಗಿ ಎರಡನೇ ಅತಿದೊಡ್ಡ ಸ್ಮಾರ್ಟ್​ಫೋನ್ ತಯಾರಕ ಸಂಸ್ಥೆಯಾಗಿದೆ. ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ತಯಾರಕ ಸ್ಯಾಮ್ಸಂಗ್ ಶೇಕಡಾ 19 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಶಿಯೋಮಿಯು ಸ್ಪರ್ಧೆಯ ಅಂತರವನ್ನು ಸಾಕಷ್ಟು ಕಡಿಮೆ ಮಾಡಿದ್ದು, ಶೇಕಡಾ 17ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಶಿಯೋಮಿಯ ಶಿಪ್​ಮೆಂಟ್ ಲ್ಯಾಟಿನ್ ಅಮೆರಿಕಾದಲ್ಲಿ ಶೇಕಡಾ 300ಕ್ಕಿಂತಲೂ ಹೆಚ್ಚಾಗಿದ್ದು, ಆಫ್ರಿಕಾದಲ್ಲಿ ಶೇ 150 ಮತ್ತು ಪಶ್ಚಿಮ ಯುರೋಪಿನಲ್ಲಿ ಶೇ 50ರಷ್ಟು ಹೆಚ್ಚಾಗಿದೆ. ಎಂಐ 11 ಅಲ್ಟ್ರಾನಂತಹ ಫೋನ್‌ಗಳ ಮಾರಾಟವನ್ನು ಹೆಚ್ಚಿಸುವುದು ಶಿಯೋಮಿಯ ಉದ್ದೇಶವಾಗಿರಬೇಕು ಎಂದು ಕ್ಯಾನಲಿಸ್ ಹೇಳಿದೆ. ಆದರೆ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿಯಾದ ಶಿಯೋಮಿಗೆ ಚೀನಾದ ಇತರ ಬ್ರಾಂಡ್‌ಗಳಾದ ಒಪ್ಪೊ ಮತ್ತು ವಿವೊಗಳಿಂದ ಸವಾಲು ಎದುರಿಸಬೇಕಾಗಿದೆ.

ಆದರೂ ಶಿಯೋಮಿ ಕಂಪೆನಿಯು ಸ್ಯಾಮ್ಸಂಗ್ ಅನ್ನು ಹಿಂದಿಕ್ಕಲು ಉತ್ತಮ ಅವಕಾಶವನ್ನು ಹೊಂದಿದೆ. ಮತ್ತು ಈ ವೇಗದಲ್ಲಿ ಮಾರಾಟ ಸಾಗಿದರೆ ವಿಶ್ವದ ನಂಬರ್ 1 ಸ್ಮಾರ್ಟ್‌ಫೋನ್ ಬ್ರಾಂಡ್ ಆಗಬಹುದು ಎಂದು ಸಂಖ್ಯೆಗಳು ಸೂಚಿಸುತ್ತವೆ. ಇದೇ ಮೊದಲ ಬಾರಿಗೆ ಸ್ಯಾಮ್ಸಂಗ್ ಮತ್ತು ಆಪಲ್ ಕಂಪೆನಿಯನ್ನು ಮೊದಲ ಎರಡು ಸ್ಥಾನದಿಂದ ಬದಿಗೆ ಸರಿಸುವಂತಹ ಸಾಮರ್ಥ್ಯವನ್ನು ಶಿಯೋಮಿ ತೋರುತ್ತಿದೆ. ಇದಕ್ಕೆ ಪ್ರಮುಖ ಕಾರಣವಾಗಿ ಕಂಡುಬರುವುದು ಮಿಡ್​ ಪ್ರೀಮಿಯಂ ವಿಭಾಗ, ನೋಟ್ 10 ಅನಾವರಣ ಮತ್ತು ಎಂಐ ಸರಣಿಯ ಸ್ಮಾರ್ಟ್‌ಫೋನ್‌ಗಳು.

ಆಪಲ್ ಈಗ ಶೇಕಡಾ 14 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಆದರೆ ಒಪ್ಪೋ ಮತ್ತು ವಿವೊ ತಲಾ ಶೇ 10 ರಷ್ಟು ದೊಡ್ಡ ಬೆಳವಣಿಗೆಯನ್ನು ಹೊಂದಿವೆ. ಆದರೂ 2020ರ ಎರಡನೇ ತ್ರೈಮಾಸಿಕದಲ್ಲಿ ಶಿಯೋಮಿಯ ಶೇಕಡಾ 83ರ ಬೆಳವಣಿಗೆಗೆ ಹೋಲಿಸಿದರೆ ಇದು ಏನೂ ಇಲ್ಲ. ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಿಂದ ಹುವೈ ನಿರ್ಗಮಿಸಿದ್ದರಿಂದ ಖಾಲಿಯಾದ ಸ್ಥಳವನ್ನು ತುಂಬಲು ಹೆಚ್ಚಿನ ಬ್ರ್ಯಾಂಡ್‌ಗಳು ಯತ್ನಿಸುತ್ತಿವೆ. ಬಹಳ ಹಿಂದೆಯೇ ಹುವೈ ಕಂಪೆನಿಯು ಆಪಲ್ ಅನ್ನು ಪಕ್ಕಕ್ಕೆ ಸರಿಸುವಲ್ಲಿ ಯಶಸ್ವಿಯಾಗಿತ್ತು ಮತ್ತು ಸ್ಮಾರ್ಟ್​ಫೋನ್ ತಯಾರಕರಲ್ಲಿ ಎರಡನೇ ಸ್ಥಾನವನ್ನು ಗಳಿಸಿತ್ತು. ಆದರೂ ಶೀಘ್ರದಲ್ಲೇ ಅದರ ಮೇಲೆ ನಿರ್ಬಂಧಗಳನ್ನು ವಿಧಿಸಲಾಯಿತು ಮತ್ತು ಕಂಪೆನಿಯು ಅಂತಿಮವಾಗಿ ಹೈ ಎಂಡ್ ಪ್ರೀಮಿಯಂ ಫೋನ್ ಮಾರುಕಟ್ಟೆಯಿಂದ ಹಿಂದೆ ಸರಿಯಿತು.

ಆ ನಂತರ ಶಿಯೋಮಿ, ಒನ್‌ಪ್ಲಸ್ ಮತ್ತು ಇತರ ಕಂಪೆನಿಗಳು ಹುವೈನಿಂದ ಖಾಲಿಯಾದ ಸ್ಥಳವನ್ನು ತುಂಬಲು ಪ್ರಯತ್ನಿಸುತ್ತಲೇ ಇವೆ. ಬೆಳೆಯುತ್ತಿರುವ ಸ್ಪರ್ಧೆಯ ಮಧ್ಯೆ ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಶಿಯೋಮಿ ಸ್ಥಾನವನ್ನು ಉಳಿಸಿಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: Mi 11 Ultra: ಶಿಯೋಮಿ ಕಂಪೆನಿಯ ದುಬಾರಿ ಫೋನ್ Mi 11 ಅಲ್ಟ್ರಾ ಮಾರಾಟ ಭಾರತದಲ್ಲಿ ಇಂದಿನಿಂದಲೇ ಶುರು

ಇದನ್ನೂ ಓದಿ: Xiaomi Mi 11 Lite: Mi 11 ಲೈಟ್ ಮೊಬೈಲ್ ಫೋನ್ ಮಾರಾಟ ಭಾರತದಲ್ಲಿ ಇಂದಿನಿಂದ ಆರಂಭ; ಬೆಲೆ ಮತ್ತಿತರ ಮಾಹಿತಿ ಇಲ್ಲಿದೆ

(Chinese brand Xiaomi become worlds second largest smartphone manufacturer, overtakes Apple)