SBI Customer Alert: ಎಸ್​ಬಿಐ ಗ್ರಾಹಕರೇ ಗಮನಿಸಿ, ಈ ಬ್ಯಾಂಕಿಂಗ್​ ಸೇವೆಗಳು ಇಷ್ಟು ಸಮಯ ವ್ಯತ್ಯಯ ಆಗಲಿದೆ

ನಿರ್ವಹಣೆ ಕಾರ್ಯ ಇರುವುದರಿಂದ ಜುಲೈ 16ನೇ ತಾರೀಕಿನ 22.45ರಿಂದ (ರಾತ್ರಿ 10.45) ಜುಲೈ 17ನೇ ತಾರೀಕಿನ ಮಧ್ಯರಾತ್ರಿ 1.15ರ ತನಕ, 150 ನಿಮಿಷಗಳ ಕಾಲ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳು ಸಿಗುವುದಿಲ್ಲ ಎಂದು ಎಸ್​ಬಿಐ ಟ್ವೀಟ್ ಮಾಡಿದೆ.

SBI Customer Alert: ಎಸ್​ಬಿಐ ಗ್ರಾಹಕರೇ ಗಮನಿಸಿ, ಈ ಬ್ಯಾಂಕಿಂಗ್​ ಸೇವೆಗಳು ಇಷ್ಟು ಸಮಯ ವ್ಯತ್ಯಯ ಆಗಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 16, 2021 | 11:04 AM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank Of India) ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಯಲ್ಲಿ ಇಂದು (ಜುಲೈ 16, 2021) ವ್ಯತ್ಯಯ ಆಗಲಿದೆ ಎಂದು ಟ್ವೀಟ್​ ಮಾಡಲಾಗಿದೆ. ನಿರ್ವಹಣೆ ಕಾರ್ಯ ಇರುವುದರಿಂದ ತಾತ್ಕಾಲಿಕವಾಗಿ ಸೇವೆ ಲಭ್ಯ ಇರುವುದಿಲ್ಲ. ಜುಲೈ 16ನೇ ತಾರೀಕಿನ 22.45ರಿಂದ (ರಾತ್ರಿ 10.45) ಜುಲೈ 17ನೇ ತಾರೀಕಿನ ಮಧ್ಯರಾತ್ರಿ 1.15ರ ತನಕ, 150 ನಿಮಿಷಗಳ ಕಾಲ ಗ್ರಾಹಕರಿಗೆ ಸೇವೆಗಳು ಸಿಗುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ. ಈ ಸಮಯದಲ್ಲಿ ಆಯ್ದ ಸೇವೆಗಳು ಗ್ರಾಹಕರಿಗೆ ದೊರೆಯುವುದಿಲ್ಲ. ಅದರಲ್ಲಿ ಇಂಟರ್​​ನೆಟ್ ಬ್ಯಾಂಕಿಂಗ್, YONO, YONO Lite ಮತ್ತು ಯುಪಿಐ ವಹಿವಾಟುಗಳ ಸೇವೆಗಳು ಒಳಗೊಂಡಿರುತ್ತವೆ. ಎಸ್​ಬಿಐನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್​ನಲ್ಲಿ ನೀಡಿರುವ ಮಾಹಿತಿ ಹೀಗಿದೆ: ನಾವು ಉತ್ತಮ ಬ್ಯಾಂಕಿಂಗ್ ಸೇವೆ ಒದಗಿಸುವುದಕ್ಕೆ ಶ್ರಮಿಸುತ್ತಿರುವುದರಿಂದ ನಮ್ಮ ಗೌರವಾನ್ವಿತ ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ ಎಂದಿದೆ.

ಮೇಲ್ಕಂಡ ಒಕ್ಕಣೆಯ ಜತೆಗೆ, “ನಾವು 16.07.2021ರ 22:45ಗಂಟೆ ಮತ್ತು 17.07.2021ರ 01:15 ಗಂಟೆಯ ನಡುವೆ (150 ನಿಮಿಷ) ನಿರ್ವಹಣಾ ಚಟುವಟಿಕೆಗಳನ್ನು ಕೈಗೊಳ್ಳಲಿದ್ದೇವೆ. ಈ ಅವಧಿಯಲ್ಲಿ ಇಂಟರ್ನೆಟ್ ಬ್ಯಾಂಕಿಂಗ್/ಯೋನೊ/ಯೋನೊ ಲೈಟ್/ಯುಪಿಐ ಸೇವೆಗಳು ಲಭ್ಯವಿರುವುದಿಲ್ಲ. ಇದರಿಂದ ಉಂಟಾಗಬಹುದಾದ ಅನನುಕೂಲಕ್ಕೆ ವಿಷಾದಿಸುತ್ತೇವೆ ಮತ್ತು ನಮ್ಮೊಂದಿಗೆ ಸಹಕರಿಸಬೇಕು ಎಂದು ವಿನಂತಿಸುತ್ತೇವೆ,” ಎನ್ನಲಾಗಿದೆ. ಬ್ಯಾಂಕ್​ಗಳು ನಿಯಮಿತವಾಗಿ ನಿರ್ವಹಣೆ ಚಟುವಟಿಕೆಗಳನ್ನು ಕೈಗೊಂಡು, ಗ್ರಾಹಕರಿಗೆ ಉತ್ತಮ ಬ್ಯಾಂಕಿಂಗ್ ಸೇವೆ ಒದಗಿಸುವುದಕ್ಕೆ ಪ್ರಯತ್ನಿಸುತ್ತಲೇ ಇರುತ್ತವೆ. ಈ ಹಿಂದೆ ಕೂಡ ಇದೇ ಕಾರಣ ನೀಡಿ, ಸೇವೆ ವ್ಯತ್ಯಯ ಆದ ಉದಾಹರಣೆಗಳು ಸಿಗುತ್ತವೆ.

ಇನ್ನು ಈ ನಿರ್ವಹಣಾ ಚಟುವಟಿಕೆಗಳನ್ನು ಸಹ ಬ್ಯಾಂಕಿಂಗ್ ವ್ಯವಹಾರಗಳು ಹೆಚ್ಚಾಗಿರುವ ಸಮಯದಲ್ಲಿ ಮಾಡದೆ, ಸಾಮಾನ್ಯವಾಗಿ ಗ್ರಾಹಕರ ದಟ್ಟಣೆ ಕಡಿಮೆ ಇರುವ ಅವಧಿಯನ್ನೇ ಆರಿಸಿಕೊಳ್ಳಲಾಗುತ್ತದೆ. ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದಿಂದಲೇ ಈ ಹಿಂದೆ ಜುಲೈ 10ನೇ ತಾರೀಕು, ಮೇ ತಿಂಗಳ 22- 23ರಂದು ನಿರ್ವಹಣೆ ಚಟುವಟಿಕೆಗಳನ್ನು ಕೈಗೊಳ್ಳುವುದಾಗಿ, ಆ ಸಮಯದಲ್ಲಿ ಸೇವೆಗಳು ಲಭ್ಯ ಇರುವುದಿಲ್ಲವಾದ್ದರಿಂದ ಸಹಕರಿಸಬೇಕು ಎಂದು ಮನವಿ ಮಾಡಲಾಗಿತ್ತು. ಮೇ 22ನೇ ತಾರೀಕಿನಂದು NEFT, RTGS, YONO ಹಾಗೂ YONO Lite ಸೇವೆಗಳು ಲಭ್ಯ ಇರಲಿಲ್ಲ. ಮೊದಲೇ ಹೇಳಿದಂತೆ ಇದು ಆಗಾಗ ನಡೆಯುವ ನಿರ್ವಹಣೆ ಚಟುವಟಿಕೆ ಆಗಿದೆ.

ಇದನ್ನೂ ಓದಿ: SBI Customers Alert: ಕೆವೈಸಿ ನೆಪ ಹೇಳಿಕೊಂಡು ವಂಚಿಸುವ ವಂಚಕರ ಬಗ್ಗೆ ಎಚ್ಚರಿಕೆ ಎಂದ ಎಸ್​ಬಿಐ

ಇದನ್ನೂ ಓದಿ: SBI minimum balance: ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಬಗ್ಗೆ ಎಸ್‌ಬಿಐ ಹೊಸ ನಿಯಮ

(SBI alert it’s customers about banking service down on July 16th and 17th. Here is the details)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ