AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI minimum balance: ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಬಗ್ಗೆ ಎಸ್‌ಬಿಐ ಹೊಸ ನಿಯಮ

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದಿಂದ ಖಾತೆಯಲ್ಲಿನ ಕನಿಷ್ಠ ಬಾಕಿ (ಮಿನಿಮಮ್ ಬ್ಯಾಲೆನ್ಸ್) ವಿಚಾರವಾಗಿ ಹೊಸ ಮಾಹಿತಿಯನ್ನು ನೀಡಲಾಗಿದೆ. ಮಾರ್ಚ್ 11, 2020 ರಂದು, ಸ್ಟೇಟ್ ಬ್ಯಾಂಕ್ ಸರಾಸರಿ ಮಾಸಿಕ ಬ್ಯಾಲೆನ್ಸ್ ಅಥವಾ ಎಎಂಬಿಯನ್ನು ಮನ್ನಾ ಮಾಡಲಾಗುತ್ತಿದೆ ಎಂದು ಘೋಷಿಸಿತು.

SBI minimum balance: ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಬಗ್ಗೆ ಎಸ್‌ಬಿಐ ಹೊಸ ನಿಯಮ
ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಸ್‌ಬಿಐ ಎರಡು ಖಾತೆಗಳನ್ನು ಒದಗಿಸುತ್ತದೆ - ಪೆಹ್ಲಾಕದಮ್ ಮತ್ತು ಪೆಹ್ಲಿಉಡಾನ್. ಇವೆರಡನ್ನು ವಿಶೇಷವಾಗಿ ಮಕ್ಕಳಿಗಾಗಿಯೇ ರೂಪಿಸಲಾಗಿದೆ. ಪೆಹ್ಲಾಕದಮ್ ಉಳಿತಾಯ ಖಾತೆಯನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಗು ತೆರೆಯಬಹುದು. ಈ ಉಳಿತಾಯ ಖಾತೆಯು ಪೋಷಕರು ಮತ್ತು ಮಗುವಿನ ಜಂಟಿ ಖಾತೆಯಾಗಿದ್ದು, ಅಲ್ಲಿ ಪೋಷಕರು ಸೆಕೆಂಡರಿ ಖಾತೆದಾರರಾಗಿರುತ್ತಾರೆ ಮತ್ತು ಮಗು ಪ್ರಾಥಮಿಕ ಹೋಲ್ಡರ್ ಆಗಿರುತ್ತದೆ. ಸಾಮಾನ್ಯ ಉಳಿತಾಯ ಖಾತೆಯಂತೆ, ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಮಾನದಂಡಗಳಿಲ್ಲ. ಮೊಬೈಲ್ ಬ್ಯಾಂಕಿಂಗ್ ಮತ್ತು ಚೆಕ್ ಪುಸ್ತಕಗಳ ವಿತರಣೆಯಂತಹ ವೈಶಿಷ್ಟ್ಯಗಳು ಎರಡರಲ್ಲೂ ಲಭ್ಯವಿವೆ. ಓವರ್ ಡ್ರಾಫ್ಟ್, ಎಟಿಎಂ ಸೌಲಭ್ಯ ಮತ್ತು ಇತರ ಹೂಡಿಕೆ ಆಯ್ಕೆಗಳನ್ನು ಈ ಖಾತೆಗಳೊಂದಿಗೆ ಸೇರಿಸಲಾಗಿದೆ.
TV9 Web
| Updated By: Srinivas Mata|

Updated on:Jul 07, 2021 | 1:21 PM

Share

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದಿಂದ ಖಾತೆಯಲ್ಲಿನ ಕನಿಷ್ಠ ಬಾಕಿ (ಮಿನಿಮಮ್ ಬ್ಯಾಲೆನ್ಸ್) ವಿಚಾರವಾಗಿ ಹೊಸ ಮಾಹಿತಿಯನ್ನು ನೀಡಲಾಗಿದೆ. ಅದರ ಪ್ರಕಾರವಾಗಿ, ಗ್ರಾಹಕರು ಎಷ್ಟು ಕನಿಷ್ಠ ಬ್ಯಾಲೆನ್ಸ್ ಇರಿಸಿರಬೇಕು ಎಂದು ತಿಳಿಸಲಾಗಿದೆ. ಸ್ಟೇಟ್ ಬ್ಯಾಂಕ್​ನಿಂದ ಮೆಸೇಜ್​ಗಳ ಶುಲ್ಕದ ಬಗ್ಗೆ ಕೂಡ ತಿಳಿಸಿದ್ದು, ಆ ಪ್ರಕಾರ, ಮೆಸೇಜ್ ಶುಲ್ಕವನ್ನು ಉಚಿತಗೊಳಿಸಿದ ದಿನಾಂಕದಿಂದ, ಆ ನಂತರ ಯಾವುದೇ ಶುಲ್ಕವಿರುವುದಿಲ್ಲ. ಆದರೆ ಆ ದಿನಾಂಕದ ಮೊದಲು ಯಾರು ಮಿನಿಮಮ್ ಬ್ಯಾಲೆನ್ಸ್ ಉಳಿಸಿಕೊಂಡಿಲ್ಲವೋ ಅಂಥವರು ಅದೇ ಹಣವನ್ನು ಪಾವತಿಸಬೇಕಾಗುತ್ತದೆ. ‘ಕನಿಷ್ಠ ಬ್ಯಾಲೆನ್ಸ್ ಮತ್ತು ಮೆಸೇಜ್ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಬ್ಯಾಂಕ್ ಘೋಷಿಸಿದ ದಿನಾಂಕದ ಮೊದಲು ನೀವು ಯಾವುದೇ ಶುಲ್ಕವನ್ನು ಹೊಂದಿದ್ದರೆ, ಅದನ್ನು ಪಾವತಿಸಬೇಕಾಗುತ್ತದೆ,’ ಎಂದು ಎಸ್‌ಬಿಐ ಟ್ವೀಟ್‌ನಲ್ಲಿ ತಿಳಿಸಿದೆ.

ಈ ಟ್ವೀಟ್ ಮೂಲಕ, ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಕನಿಷ್ಟ ಶುಲ್ಕವನ್ನು ನಿಗದಿ  ಮಾಡಿದ ದಿನಾಂಕದ ಮೊದಲು ಖಾತೆಯಲ್ಲಿ ಇರಿಸದಿದ್ದರೆ ಮತ್ತು ಈ ಐಟಂನಲ್ಲಿ ಬ್ಯಾಂಕಿಗೆ ಯಾವುದೇ ಪಾವತಿ ಮಾಡಿದ್ದರೆ, ಅದನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ. ಇದರರ್ಥ ಏನೆಂದರೆ, ಗ್ರಾಹಕರು ತಮ್ಮ ಕನಿಷ್ಠ ಬಾಕಿ ಈಗಾಗಲೇ ಬಾಕಿ ಉಳಿದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಹಾಗಿದ್ದಲ್ಲಿ, ಅದನ್ನು ಸಮಯಕ್ಕೆ ಪಾವತಿಸಬೇಕು. ಎಸ್‌ಬಿಐ ಏನು ಹೇಳಿದೆ ಅಂದರೆ, ಬ್ಯಾಂಕ್​ನಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ತಾಂತ್ರಿಕ ಭಾಷೆಯಲ್ಲಿ ಸರಾಸರಿ ಮಾಸಿಕ ಬ್ಯಾಲೆನ್ಸ್ ಅಥವಾ ಎಎಂಬಿ ಎಂದು ಕರೆಯಲಾಗುತ್ತದೆ. ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಎಲ್ಲ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿನ ಸರಾಸರಿ ಕನಿಷ್ಠ ಬಾಕಿ ಮನ್ನಾ ಮಾಡಲಾಗಿದೆ ಎಂದು ಕಳೆದ ವರ್ಷ ಘೋಷಿಸಿತು.

ನಿಯಮಗಳ ಪ್ರಕಾರ, ಮೆಟ್ರೋ ನಗರಗಳಲ್ಲಿನ ಎಸ್‌ಬಿಐ ಉಳಿತಾಯ ಖಾತೆಯ ಎಎಮ್‌ಬಿಯನ್ನು 3,000 ರೂ., ಅರೆ ನಗರ ಪ್ರದೇಶಗಳಲ್ಲಿ ಎಎಮ್‌ಬಿ 2,000 ರೂ. ಮತ್ತು ಗ್ರಾಮೀಣ ಪ್ರದೇಶಗಳ ಎಸ್‌ಬಿಐ ಶಾಖೆಯಲ್ಲಿ 1,000 ರೂ. ಇದೆ. ಈ ಮೊತ್ತವನ್ನು ಉಳಿಸಿಕೊಳ್ಳುವ ನಿಯಮವನ್ನು ಬ್ಯಾಂಕ್ ತೆಗೆದುಹಾಕಿತ್ತು. ಕನಿಷ್ಠ ಬಾಕಿ ಉಳಿಸಿಕೊಳ್ಳದ ಕಾರಣಕ್ಕೆ 5ರಿಂದ 15 ರೂಪಾಯಿ ಜೊತೆಗೆ ಜಿಎಸ್‌ಟಿಯನ್ನು ಸೇರಿಸುವ ಮೂಲಕ ಸಂಗ್ರಹಿಸಲಾಗುತ್ತದೆ. ಇದರೊಂದಿಗೆ ಸ್ಟೇಟ್ ಬ್ಯಾಂಕ್ ಸಹ ಎಸ್‌ಎಂಎಸ್ ಶುಲ್ಕವನ್ನು ಮನ್ನಾ ಮಾಡಿತ್ತು.

ಇದಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಮತ್ತು ಉತ್ತರಗಳನ್ನು ತಿಳಿಯಿರಿ 1- ಉಳಿತಾಯ ಬ್ಯಾಂಕ್ ಖಾತೆಯಲ್ಲಿ ನಿರ್ವಹಿಸಬೇಕಾದ ಕನಿಷ್ಠ ಬಾಕಿ ಎಷ್ಟು? ಮಾರ್ಚ್ 11, 2020 ರಂದು, ಸ್ಟೇಟ್ ಬ್ಯಾಂಕ್ ಸರಾಸರಿ ಮಾಸಿಕ ಬ್ಯಾಲೆನ್ಸ್ ಅಥವಾ ಎಎಂಬಿಯನ್ನು ಮನ್ನಾ ಮಾಡಲಾಗುತ್ತಿದೆ ಎಂದು ಘೋಷಿಸಿತು. ಇದರರ್ಥ ಗ್ರಾಹಕರು ಖಾತೆಯಲ್ಲಿ ಕನಿಷ್ಠ ಬಾಕಿ ಉಳಿಸಿಕೊಳ್ಳದಿದ್ದರೆ, ಅವರು ಯಾವುದೇ ದಂಡವನ್ನು ಪಾವತಿಸಬೇಕಾಗಿಲ್ಲ.

2- ಗ್ರಾಹಕರು ಆನ್‌ಲೈನ್ ಎಸ್‌ಬಿಐ ಖಾತೆಯನ್ನು ತೆರೆಯಬಹುದು ಹೌದು, ನೀವು ಎಸ್‌ಬಿಐ ಡಿಜಿಟಲ್ ಉಳಿತಾಯ ಖಾತೆಯ ಮೂಲಕ ಆನ್‌ಲೈನ್‌ನಲ್ಲಿ ಖಾತೆಯನ್ನು ತೆರೆಯಬಹುದು. ಆದರೂ ಇದಕ್ಕಾಗಿ ಗ್ರಾಹಕರು ಒಮ್ಮೆಯಾದರೂ ಶಾಖೆಗೆ ಭೇಟಿ ನೀಡಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.

3-ಎಸ್‌ಬಿಐನಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ತೆರೆಯುವುದು ಹೇಗೆ ಇದಕ್ಕಾಗಿ ಎಸ್‌ಬಿಐ ಮೂಲ ಉಳಿತಾಯ ಬ್ಯಾಂಕ್ ಖಾತೆಯನ್ನು ತೆರೆಯಬೇಕು. ಅದು ಶೂನ್ಯ ಬ್ಯಾಲೆನ್ಸ್​ನೊಂದಿಗೆ ಬರುತ್ತದೆ.

4-ಗ್ರಾಹಕರು ಎಸ್‌ಬಿಐನಲ್ಲಿ ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಯನ್ನು ಹೊಂದಬಹುದೇ? ಯಾವುದೇ ಗ್ರಾಹಕರು ಒಂದು ಗ್ರಾಹಕ ID ಯೊಂದಿಗೆ ಎಸ್‌ಬಿಐನಲ್ಲಿ ವಿವಿಧ ರೀತಿಯ ಖಾತೆಗಳನ್ನು ತೆರೆಯಬಹುದು. ಆದರೆ ಎಲ್ಲಾ ಖಾತೆಗಳನ್ನು ಒಂದೇ ಗ್ರಾಹಕ ID ಯೊಂದಿಗೆ ಪರಸ್ಪರ ಜೋಡಿಸಬೇಕಾಗುತ್ತದೆ.

5-ಎಸ್‌ಬಿಐನಲ್ಲಿ ಖಾತೆ ತೆರೆಯಲು ಆಧಾರ್ ಅಗತ್ಯವಿದೆಯೇ? ಇಲ್ಲ, ಖಾತೆ ತೆರೆಯಲು ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಲ್ಲ. ಈ ನಿಯಮಗಳು ದೇಶದ ಎಲ್ಲ ಬ್ಯಾಂಕ್​ಗಳಿಗೆ ಅನ್ವಯಿಸುತ್ತವೆ.

6-ಎಸ್‌ಬಿಐ ಖಾತೆ ಬಾಕಿ ಪರಿಶೀಲಿಸುವುದು ಹೇಗೆ? ಎಸ್‌ಬಿಐನಲ್ಲಿ ಜೀರೋ ಬ್ಯಾಲೆನ್ಸ್ ಪರಿಶೀಲಿಸಲು, ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 09223766666ಗೆ BAL ಎಂದು ಟೈಪ್ ಮಾಡಿ, ಸಂದೇಶವನ್ನು ಕಳುಹಿಸಬೇಕು. ಇದರ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಿನಿ ಸ್ಟೇಟ್​ಮೆಂಟ್ ಮತ್ತು ಅದಕ್ಕೆ ಸಂಬಂಧಿಸಿದ ಇತರ ಮಾಹಿತಿಯನ್ನು ಪಡೆಯುತ್ತೀರಿ.

ಇದನ್ನೂ ಓದಿರಿ: SBI Online Personal Loan: ಯಾವಾಗಾದರೂ ಎಲ್ಲಿಂದಾದರೂ ಎಸ್​ಬಿಐ ಆನ್​ಲೈನ್ ಲೋನ್​ಗೆ ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ

(Here is the must know details about SBI new average monthly balance rules)

Published On - 1:15 pm, Wed, 7 July 21