SBI Online Personal Loan: ಯಾವಾಗಾದರೂ ಎಲ್ಲಿಂದಾದರೂ ಎಸ್​ಬಿಐ ಆನ್​ಲೈನ್ ಲೋನ್​ಗೆ ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ

ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದ ಆನ್​​ಲೈನ್​ ಪರ್ಸನಲ್ ಸಾಲಗಳಿಗೆ ಎಲ್ಲಿಂದಲಾದರೂ ಯಾವಾಗಲಾದರೂ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಹಂತಹಂತವಾದ ವಿವರಣೆ ಇಲ್ಲಿದೆ.

SBI Online Personal Loan: ಯಾವಾಗಾದರೂ ಎಲ್ಲಿಂದಾದರೂ ಎಸ್​ಬಿಐ ಆನ್​ಲೈನ್ ಲೋನ್​ಗೆ ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ
ಸಿಟಿ ಬ್ಯಾಂಕ್ ಮಗುವು 15 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಖಾತೆಯು ಕನಿಷ್ಠ 2 ಖಾತೆದಾರರನ್ನು ಹೊಂದಿರಬೇಕು. ಇದರಲ್ಲಿ ಮೊದಲ ಖಾತೆದಾರ ಆಗಿ ಮಗು ಇರುತ್ತದೆ ಮತ್ತು ಎರಡನೆ ಖಾತೆದಾರರು ಪೋಷಕರು ಅಥವಾ ಪಾಲಕರು. ಸಿಟಿ ಬ್ಯಾಂಕ್ ಜೂನಿಯರ್ ಖಾತೆಯನ್ನು ತೆರೆಯಲು ಪೋಷಕರು ಅಥವಾ ಪಾಲಕರು ಸಿಟಿ ಬ್ಯಾಂಕ್‌ನಲ್ಲಿ ಅಸ್ತಿತ್ವದಲ್ಲಿರುವ ಖಾತೆಯನ್ನು ಹೊಂದಿರಬೇಕು. ನಗದು ವಿಥ್​ಡ್ರಾ ಎಲ್ಲ ಸಿಟಿ ಬ್ಯಾಂಕ್ ಎಟಿಎಂಗಳಲ್ಲಿ ಉಚಿತವಾಗಿರುತ್ತದೆ. ವಿಥ್​ಡ್ರಾಗೆ ಮಿತಿಯನ್ನು ನಿಗದಿ ಪಡಿಸುವಂಥ ಒಂದು ಆಯ್ಕೆ ಕೂಡ ಇದೆ. ಇದರಿಂದ ಖರ್ಚುಗಳನ್ನು ನಿಯಂತ್ರಿಸಲು ಸಹಾಯ ಆಗುತ್ತದೆ. ಸಿಟಿ ಬ್ಯಾಂಕ್ ಜೂನಿಯರ್ ಖಾತೆಯೊಂದಿಗೆ ಮಗುವಿಗೆ ಮತ್ತು ಪೋಷಕರು-ಪಾಲಕರಿಗಾಗಿ ಡ್ಯುಯಲ್ ವಿಮೆಯಿಂದ ಲಾಭ ಪಡೆಯಬಹುದು.
Follow us
TV9 Web
| Updated By: Srinivas Mata

Updated on:Jul 05, 2021 | 11:01 PM

ಸರಳ ಆನ್‌ಲೈನ್ ಸಾಲದ ಅರ್ಜಿ, ಯಾವುದೇ ಕೊಲ್ಯಾಟರಲ್ ಅವಶ್ಯಕತೆ ಇಲ್ಲ ಮತ್ತು ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಹಣ ವಿತರಣೆ ಆಗುವುದು ಹೆಚ್ಚುತ್ತಿದೆ. ಸಿಸ್ಟಮ್- ಚಾಲಿತವಾದ (ಸಿಸ್ಟಮ್ ಜನರೇಟೆಡ್) ಪ್ರಕ್ರಿಯೆಗಳು ಪಾರದರ್ಶಕತೆ ಮತ್ತು ಅನುಕೂಲತೆಯನ್ನು ಸುಧಾರಿಸಿದ್ದಲ್ಲದೆ, ಅಲ್ಪಾವಧಿಗೆ 2 ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿವರೆಗಿನ ಸಾಲವನ್ನು ಮಾಡಲು ಬ್ಯಾಂಕ್​ ಮೂಲಕ ಅನುವು ಮಾಡಿಕೊಡುತ್ತಿವೆ. ಉದಾಹರಣೆಗೆ ಎಸ್‌ಬಿಐ ಎಕ್ಸ್‌ಪ್ರೆಸ್ ಕ್ರೆಡಿಟ್ ಸಾಲ, ಎಸ್‌ಬಿಐ ಪಿಂಚಣಿ ಸಾಲ, ಎಕ್ಸ್‌ಪ್ರೆಸ್ ಎಲೈಟ್ ವೈಯಕ್ತಿಕ ಸಾಲ ಮತ್ತು ಪ್ರೀ ಅಪ್ರೂವ್ಡ್ ವೈಯಕ್ತಿಕ ಸಾಲ ಒಳಗೊಂಡಂತೆ ವಿವಿಧ ಆನ್‌ಲೈನ್ ವೈಯಕ್ತಿಕ ಸಾಲಗಳನ್ನು ನೀಡುತ್ತದೆ ಎಸ್​ಬಿಐ. ಸದ್ಯಕ್ಕೆ ಎಸ್‌ಬಿಐನಿಂದ ವಾರ್ಷಿಕ ಶೇಕಡಾ 9.60 ಮೇಲ್ಪಟ್ಟ ಬಡ್ಡಿದರದಲ್ಲಿ 20 ಲಕ್ಷ ರೂಪಾಯಿ ತನಕದ ಮೊತ್ತವನ್ನು 72 ತಿಂಗಳ ಅವಧಿವರೆಗೆ ನೀಡಲಾಗುತ್ತಿದೆ.

ವ್ಯಾಪಾರ ವಿಸ್ತರಣೆ, ಸಾಲ ಒಗ್ಗೂಡಿಸುವಿಕೆ, ಅಂತರರಾಷ್ಟ್ರೀಯ ರಜೆಯ ವೆಚ್ಚಗಳು, ಮದುವೆ, ಮನೆ ನವೀಕರಣ, ವೈದ್ಯಕೀಯ ತುರ್ತುಸ್ಥಿತಿ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಎಸ್‌ಬಿಐನಿಂದ ವೈಯಕ್ತಿಕ ಸಾಲಗಳನ್ನು ನೀಡಲಾಗುತ್ತದೆ. ಏಪ್ರಿಲ್ 1, 2021 ಹಾಗೂ ಆ ನಂತರದಲ್ಲಿ ತಮ್ಮ ಅಥವಾ ಕುಟುಂಬ ಸದಸ್ಯರಿಗೆ ಕೊವಿಡ್ ಪಾಸಿಟಿವ್ ಆಗಿದ್ದು, ಆ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಗ್ರಾಹಕರಿಗೆ ಸಹಾಯ ಮಾಡುವುದಕ್ಕೆ ಬ್ಯಾಂಕ್ ಇತ್ತೀಚೆಗೆ ಎಸ್‌ಬಿಐ ಕವಚ್ ವೈಯಕ್ತಿಕ ಸಾಲ ಯೋಜನೆಯನ್ನು ಘೋಷಿಸಿತು. ಅಂದಹಾಗೆ ಆನ್‌ಲೈನ್ ಸಾಲದ ಪ್ರಯೋಜನಗಳೇನು ಎಂದು ನೋಡೋಣವೇ?

ಆನ್‌ಲೈನ್ ಸಾಲದ ಅರ್ಜಿ ಕೇವಲ ಒಂದು ಕ್ಲಿಕ್ ಮೂಲಕ ಅಥವಾ ಒಂದೇ ಒಂದು ಸ್ವೈಪ್ ಮಾತ್ರ ದೂರದಲ್ಲಿದೆ. ಇಂಟರ್​ನೆಟ್ ಸಂಪರ್ಕ ಹೊಂದಿರುವ ಯಾವುದೇ ಸಾಧನದಿಂದ (ಡಿವೈಸ್) ಮತ್ತು ಯಾವುದೇ ಸ್ಥಳದಿಂದ, ನೀವು ದಿನದ 24 ಗಂಟೆಗಳ ಯಾವುದೇ ಸಮಯದಲ್ಲಿ ಈ ಸಾಲ ಪಡೆಯುವುದಕ್ಕೆ ಸಂಪರ್ಕ ಮಾಡಬಹುದು. ಆನ್‌ಲೈನ್ ಸಾಲಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಬಹಳ ಸರಳವಾಗಿದೆ ಮತ್ತು ಸ್ಪರ್ಧಾತ್ಮಕ ಬಡ್ಡಿದರಗಳಲ್ಲಿ ವ್ಯವಹಾರಗಳಿಗೆ ಸಾಲವನ್ನು ಸಹ ನೀಡಲಾಗುತ್ತದೆ. ಅಲ್ಲದೆ, ವೈಯಕ್ತಿಕವಾಗಿ ಮತ್ತು ಉದ್ಯಮಗಳಿಗೆ ಬೇಕಾದ ಮೊತ್ತವನ್ನು ಸಾಲವಾಗಿ ಪಡೆಯಬಹುದು ಮತ್ತು ತಮ್ಮ ಸಾಮರ್ಥ್ಯ ಹಾಗೂ ಅನುಕೂಲಕ್ಕೆ ತಕ್ಕಂತೆ ಹಿಂತಿರುಗಿಸಬಹುದು. ಅರ್ಜಿದಾರರಿಗೆ ಗೊತ್ತಿರಬೇಕಾದ ಸಂಗತಿ ಏನೆಂದರೆ, ಎಸ್‌ಬಿಐನಲ್ಲಿ ಪರ್ಸನಲ್ ಲೋನ್​ಗೆ ಆನ್‌ಲೈನ್ ಅರ್ಜಿ ಸಲ್ಲಿಸುವುದಕ್ಕೆ ಕನಿಷ್ಠ ಆದಾಯ ತಿಂಗಳಿಗೆ 15,000 ರೂಪಾಯಿ ಇರಬೇಕು.

ನಿವೃತ್ತರು, ಸಂಬಳ ಪಡೆಯುವ ನೌಕರರು ಮತ್ತು ಸ್ವಯಂ ಉದ್ಯೋಗಿಗಳು ಸೇರಿದಂತೆ ವಿವಿಧ ರೀತಿಯ ಅರ್ಜಿದಾರರಿಗೆ ಹಲವು ರೀತಿಯಲ್ಲಿ ಸಾಲದ ಕಾರ್ಯಕ್ರಮಗಳನ್ನು ನೀಡುತ್ತದೆ. ಯಾವುದೇ ಶ್ರಮವಿಲ್ಲದೆ ಎಸ್‌ಬಿಐ ವೈಯಕ್ತಿಕ ಸಾಲಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಪ್ರಕ್ರಿಯೆಗೆ ಕನಿಷ್ಠ ಪ್ರಮಾಣ ದಾಖಲಾತಿಗಳು ಬೇಕಾಗುತ್ತವೆ ಮತ್ತು ತುಂಬ ವೇಗವಾಗಿ ಪೂರ್ಣಗೊಳ್ಳುತ್ತದೆ.

ಹಂತ 1: ನಿಮಗಾಗಿ ಸೂಕ್ತವಾದ ಸಾಲ ಯಾವುದೆಂದು ನಿರ್ಧರಿಸಿ ಕಡಿಮೆ ಬಡ್ಡಿದರ ಅಥವಾ ಸರಳ ಮರುಪಾವತಿ ಅಂದುಕೊಳ್ಳದೆ ನಿಮಗೆ ಅಗತ್ಯ ಇರುವ ಸಾಲವನ್ನು ಆರಿಸಿಕೊಳ್ಳಿ. ಈ ವಿಚಾರದಲ್ಲಿ ತಪ್ಪು ಮಾಡಬೇಡಿ. ಬಡ್ಡಿದರಗಳನ್ನು ಹೋಲಿಸಬೇಕು, ಮತ್ತು ಸಣ್ಣ ಅಕ್ಷರಗಳಲ್ಲಿ ಮುದ್ರಣ ಆಗಿರುವ ಅಂಶಗಳನ್ನು ಪರಿಶೀಲಿಸಬೇಕು. ಯಾಕೆಂದರೆ, ಸಾಲದ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದರಿಂದ ತಿಳಿವಳಿಕೆಯ ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಅಗತ್ಯ ಇರುವ ಎಲ್ಲ ಮಾಹಿತಿಯು ಆನ್‌ಲೈನ್‌ನಲ್ಲೇ ಸುಲಭವಾಗಿಯೂ ಸಿಗುತ್ತದೆ.

ಸಾಲ ನೀಡುವವರ ಶುಲ್ಕ ಮತ್ತು ಹೆಚ್ಚುವರಿ ವೆಚ್ಚಗಳನ್ನು ಪರೀಕ್ಷಿಸಿ. ಎಲ್ಲ ಸಾಲಗಳಿಗೂ ಪ್ರೊಸೆಸಿಂಗ್ ಫೀ, ಸೇವಾ ತೆರಿಗೆಗಳು ಮತ್ತು ವಿಳಂಬ ಪಾವತಿ ದಂಡದಂತಹ ಶುಲ್ಕಗಳು ಇರುತ್ತವೆ. ಪ್ರೊಸೆಸಿಂಗ್ ಫೀ ಸಾಮಾನ್ಯವಾಗಿ ಶೇ 1ರಿಂದ ಶೇ 3ರಷ್ಟಿರುತ್ತದೆ. ಅರೇಂಜ್​ಮೆಂಟ್​ ಶುಲ್ಕ ಮತ್ತು ನಿರ್ವಹಣಾ ಶುಲ್ಕದಂತಹ ಹೆಚ್ಚುವರಿ ಶುಲ್ಕಗಳು ಅನ್ವಯವಾಗಬಹುದು. ಈ ಅಂಶಗಳು ಸಾಲ ಪಡೆಯುವ ವೆಚ್ಚವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು.

ಎಸ್‌ಬಿಐ ಆನ್‌ಲೈನ್ ವೈಯಕ್ತಿಕ ಸಾಲದ ವಿಚಾರಕ್ಕೆ ಬಂದರೆ, ಪ್ರೊಸೆಸಿಂಗ್ ಶುಲ್ಕವು ಮಂಜೂರಾದ ಸಾಲದ ಶೇ 1.50ಯಿಂದ ಇರುತ್ತದೆ. ಆದರೆ ಅವಧಿಗೆ ಮುಂಚಿತವಾಗಿಯೇ ಪೂರ್ವಪಾವತಿ ಅಥವಾ ಭಾಗಶಃ ಪಾವತಿಗೆ ಶುಲ್ಕಗಳೇನೂ ಇಲ್ಲ. ಆದರೆ ಸಾಲವನ್ನು ಅದೇ ಯೋಜನೆ ಅಡಿಯಲ್ಲಿ ಪಡೆದ ಹೊಸ ಸಾಲದಿಂದ ತೀರಿಸಿರಬೇಕು ಅನ್ನೋದು ಮಾತ್ರ ನಿಯಮ.

ಹಂತ 2: ಇಎಂಐ ಕ್ಯಾಲ್ಕುಲೇಟರ್ ಬಳಸಿ ನಿರ್ಧಾರ ತೆಗೆದುಕೊಳ್ಳಿ ಆನ್‌ಲೈನ್ ಇಎಂಐ ಕ್ಯಾಲ್ಕುಲೇಟರ್ ಅನ್ನೋದು ಮಾಸಿಕ ಮರುಪಾವತಿ ಮೊತ್ತ, ಮರುಪಾವತಿ ಅವಧಿ ಮತ್ತು ನೀವು ಮರುಪಾವತಿ ಮಾಡಲು ಶಕ್ತವಾಗಿರುವ ಸಾಲದ ಮೊತ್ತವನ್ನು ನಿರ್ಧರಿಸಲು ಹೆಚ್ಚು ಉಪಯೋಗ ಆಗುವಂಥ ಸಾಧನವಾಗಿದೆ. ಜತೆಗೆ, ಮಾಸಿಕ ಸಂಬಳ ಅಥವಾ ಹಣದ ಹರಿವಿನ ಆಧಾರದ ಮೇಲೆ ನಿರ್ದಿಷ್ಟ ಸಾಲದ ಮೊತ್ತಕ್ಕೆ ಅರ್ಹತೆಯನ್ನು ನಿರ್ಧರಿಸಲು ಸಹ ಸಹಾಯ ಮಾಡುತ್ತದೆ.

ಹಂತ 3: ಎಸ್‌ಬಿಐ ಆನ್‌ಲೈನ್ ವೈಯಕ್ತಿಕ ಸಾಲಗಳಿಗೆ ಅಗತ್ಯವಾದ ಪ್ರಮುಖ ದಾಖಲೆಗಳು ಸಾಲ ಅರ್ಜಿ ನಮೂನೆಯ ಹೊರತಾಗಿ, ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ಕೆವೈಸಿ) ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ವೈಯಕ್ತಿಕ ಸಾಲಗಳಿಗೆ ಈ ದಾಖಲೆಗಳು ಅಗತ್ಯ:

– ಆದಾಯ ದಾಖಲೆಗಾಗಿ ಪೇ ಸ್ಲಿಪ್, ಆದಾಯ ತೆರಿಗೆ ರಿಟರ್ನ್ಸ್, ಫಾರ್ಮ್ 16, ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌. – ವಯಸ್ಸಿನ ದೃಢೀಕರಣಕ್ಕೆ (ಪಾಸ್‌ಪೋರ್ಟ್, ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಅಥವಾ ಪ್ಯಾನ್ ಕಾರ್ಡ್) – ವಿಳಾಸ ಪರಿಶೀಲನೆ (ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಪಾಸ್‌ಪೋರ್ಟ್, ಪಡಿತರ ಚೀಟಿ ಅಥವಾ ದೂರವಾಣಿ ಬಿಲ್) – ಫೋಟೋ ದೃಢೀಕರಣ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಅಥವಾ ಚಾಲನಾ ಪರವಾನಗಿ) – ಪರ್ಮನೆಂಟ್ ಅಕೌಂಟ್​ ನಂಬರ್ (ಪ್ಯಾನ್).

ಹಂತ 4: ಆನ್‌ಲೈನ್ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ – ಬ್ಯಾಂಕಿನ ವೆಬ್‌ಸೈಟ್‌ಗೆ ಭೇಟಿ ನೀಡಿ. ಎಸ್‌ಬಿಐಗಾಗಿ, onlinesbi.comಗೆ ತೆರಳಬೇಕು. – ನೀವು ಬಯಸುವ ಸಾಲ ಯಾವುದೋ ಆ ಪುಟಕ್ಕೆ ನೇವಿಗೇಟ್ ಮಾಡಿ. – “Apply Now” ಎಂಬುದರ ಮೇಲೆ ಕ್ಲಿಕ್ ಮಾಡಿ. – ಸಂಪೂರ್ಣ ಹೆಸರು, ಹುಟ್ಟಿದ ದಿನಾಂಕ ಮತ್ತು ಸಂಪರ್ಕ ಮಾಹಿತಿಯಂತಹ ಅಗತ್ಯವಿರುವ ವೈಯಕ್ತಿಕ ಮಾಹಿತಿಯೊಂದಿಗೆ ಫಾರ್ಮ್ ಅನ್ನು ಪೂರ್ಣಗೊಳಿಸಿ. – ಅರ್ಜಿಯನ್ನು ಪೂರ್ಣಗೊಳಿಸಿ ಸಲ್ಲಿಸಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಈಗಾಗಲೇ ವೈಯಕ್ತಿಕ ಸಾಲ ಪಡೆದಿರುವವರು ತಮ್ಮ ಆನ್‌ಲೈನ್ ಬ್ಯಾಂಕಿಂಗ್ ಖಾತೆಗೆ ಸಂಪರ್ಕಿಸುವ ಮೂಲಕ ತಮ್ಮ ಸಾಲದ ಸ್ಟೇಟ್​ಮೆಂಟ್​ಗೆ ಸಂಪರ್ಕಿಸಬಹುದು.

ಹಂತ 5: ಶೀಘ್ರವಾಗಿ ಸಾಲಕ್ಕೆ ಅನುಮೋದನೆ ಭಾರತದ ಹಣಕಾಸು ವಲಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಣಕಾಸು ಸೇವೆಗಳನ್ನು ಪಡೆಯುವುದು ಎಷ್ಟು ಸರಳವಾಗಿದೆ ಎಂದು ಅನುಭವಕ್ಕೆ ಬರಲು ಇದು ಸಹಕಾರಿಯಾಗಿದೆ. ತಾಂತ್ರಿಕ ಸುಧಾರಣೆಗಳು ಆಗಿ, ಹಣಕಾಸು ಸೇವೆಗಳಿಗೆ ಭೌಗೋಳಿಕ ಅಡೆತಡೆಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕಿದೆ ಮತ್ತು ಸಾಲದ ಅಪ್ಲಿಕೇಶನ್ ಟ್ರ್ಯಾಕಿಂಗ್, ಇಎಂಐ ನೆನಪು ಮಾಡುವುದು ಮತ್ತು ಇನ್ನೂ ಹೆಚ್ಚಿನದನ್ನು ಒದಗಿಸುತ್ತದೆ.

ಸಾಲ ಪಡೆಯುವವರು ಎಸ್‌ಬಿಐನೊಂದಿಗೆ ವೈಯಕ್ತಿಕ ಸಾಲಕ್ಕಾಗಿ ಆನ್‌ಲೈನ್‌ನಲ್ಲಿ ಅಥವಾ ವೈಯಕ್ತಿಕವಾಗಿ ಒಂದು ಶಾಖೆಯಲ್ಲಿ ಅರ್ಜಿ ಸಲ್ಲಿಸಬಹುದು. ಅಂತಹ ಸಾಲಗಳನ್ನು ಯೋನೊ ಆ್ಯಪ್ ಮೂಲಕ ಆನ್‌ಲೈನ್‌ಗೂ ಅನ್ವಯಿಸಬಹುದು. ಇತರ ರೀತಿಯ ಸಾಲಗಳಿಗಾಗಿ ಒಂದು ಶಾಖೆಗೆ ಭೇಟಿ ನೀಡಬಹುದು ಮತ್ತು ನಿಮ್ಮ ಅಗತ್ಯಗಳನ್ನು ಪೂರೈಸುವ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಒಮ್ಮೆ ಎಸ್‌ಬಿಐ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ, ಅಪ್ಲಿಕೇಷನ್ ರೆಫರೆನ್ಸ್ ನಂಬರ್ ಬರುತ್ತದೆ. ಅದರ ಮೂಲಕ ಸಾಲದ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ: SBI ATM, Cheque Book: ಎಸ್​ಬಿಐ ಎಟಿಎಂ ನಗದು ವಿಥ್​ ಡ್ರಾ ನಿಯಮಗಳು, ಚೆಕ್​ಬುಕ್ ಶುಲ್ಕಗಳು ಜುಲೈನಿಂದ ಬದಲಾವಣೆ

(Get SBI personal loan online anytime and anywhere know how? Here is an explainer)

Published On - 10:59 pm, Mon, 5 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ