Amazon New CEO Andy Jassy: ಅಮೆಜಾನ್ನ ಹೊಸ ಸಿಇಒ ಆ್ಯಂಡಿ ಜಸ್ಸಿ ಬಗ್ಗೆ 10 ಇಂಟರೆಸ್ಟಿಂಗ್ ಸಂಗತಿ
ಅಮೆಜಾನ್ ಸಿಇಒ ಹುದ್ದೆಯಿಂದ ಜೆಫ್ ಬೆಜೋಸ್ ಕೆಳಗೆ ಇಳಿದಿದ್ದು, ಆ ಹುದ್ದೆಗೆ ಆ್ಯಂಡಿ ಜಸ್ಸಿ ನೇಮಕ ಆಗಿದ್ದಾರೆ. ಆ್ಯಂಡಿ ಜಸ್ಸಿ ಬಗ್ಗೆ 10 ಆಸಕ್ತಿಕರ ಸಂಗತಿಗಳು ಇವೆ.
ಅಮೆಜಾನ್.ಕಾಮ್ ಇ-ಕಾಮರ್ಸ್ ಕಂಪೆನಿಯ ಸಿಇಒ ಹುದ್ದೆಯಿಂದ ಜೆಫ್ ಬೆಜೋಸ್ ಕೆಳಗೆ ಇಳಿಯುತ್ತಿದ್ದಾರೆ ಎಂಬ ಸುದ್ದಿ ಹೊರಬರುತ್ತಿದ್ದಂತೆಯೇ ಕೇಳಲ್ಪಟ್ಟ ತಕ್ಷಣದ ಪ್ರಶ್ನೆ ಅಂದರೆ, ಮುಂದೆ ಯಾರಂತೆ? ಅಮೆಜಾನ್ ಸಿಇಒ ಯಾರಾಗ್ತಾರೆ ಎಂಬ ಪ್ರಶ್ನೆ. ಆ್ಯಂಡಿ ಜಸ್ಸಿ ಈಗ ಸಿಇಒ ಆಗ್ತಾರೆ. ಜುಲೈ 5, 2021ಕ್ಕೆ ಜೆಫ್ ಬೆಜೋಸ್ ಕೆಳಗೆ ಇಳಿಯುತ್ತಾರೆ. 25 ವರ್ಷಕ್ಕೂ ಹೆಚ್ಚು ಕಾಲದ ನಂಟು ಅವರದು. ಇನ್ನು ಮುಂದೆ ಕಾರ್ಯ ನಿರ್ವಾಹಕ ಅಧ್ಯಕ್ಷ ಹುದ್ದೆಯಲ್ಲಿ ಬೆಜೋಸ್ ಮುಂದುವರಿಯಲಿದ್ದಾರೆ. ಹಾಗಿದ್ದರೆ ಹೊಸದಾಗಿ ಸಿಇಒ ಆಗಲಿರುವ ಆ್ಯಂಡಿ ಜಸ್ಸಿ ಬಗ್ಗೆ ಏನಾದರೂ ಇಂಟರೆಸ್ಟಿಂಗ್ ಸಂಗತಿ ಇದೆಯಾ ಅಂತೀರಾ? ಇಲ್ಲೊಂದಿಷ್ಟು ಮಾಹಿತಿ ಇದೆ. ಸದ್ಯದ ಕುತೂಹಲ ತಣಿಸಲು ಸಾಕಾಗಬಹುದು.
1) ಯಹೂದಿ ಕುಟುಂಬದಲ್ಲಿ ಜನಿಸಿದ ಜಸ್ಸಿ, ಬೆಳೆದಿದ್ದು ನ್ಯೂಯಾರ್ಕ್ನ ಸ್ಕಾರ್ಸ್ಡೇಲ್ನಲ್ಲಿ. 2) 1997ರಲ್ಲಿ ಜಸ್ಸಿ ಹಾರ್ವರ್ಡ್ ಬಿಜಿನೆಸ್ ಸ್ಕೂಲ್ನಲ್ಲಿ ಎಂಬಿಎ ಮುಗಿಸಿದ ತಕ್ಷಣ ಅವರು ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಅಮೆಜಾನ್ ಸೇರಿದರು. 2003 ಅಮೆಜಾನ್ ವೆಬ್ಸರ್ವೀಸಸ್ ಸ್ಥಾಪಿಸಿದ ಅವರು, 2016ರಲ್ಲಿ ಅದರ ಸಿಇಒ ಆದರು. 3) ಅಮೆಜಾನ್ನಲ್ಲಿ ಸೀನಿಯರ್ ಟೀಮ್ ಅಥವಾ ಎಸ್- ಟೀಮ್ ಎಂದು ಕರೆಯುವ ಉನ್ನತ ಮಟ್ಟದ ಗುಂಪಿಗೆ ಸೇರಿದವರು ಈತ. 4) ಗ್ರಾಹಕರು ಮೊದಲು ಎಂಬ ಧೋರಣೆಗೆ ಜಸ್ಸಿ ಬಹಳ ಖ್ಯಾತರು ಮತ್ತು ಅಮೆಜಾನ್ನ ಅತಿ ಮುಖ್ಯ ಅಂಶ ಅದು. 5) ಅಮೆಜಾನ್ನಲ್ಲಿ ಜೆಫ್ ಬೆಜೋಸ್ಗೆ ಸೂಕ್ತ ಉತ್ತರಾಧಿಕಾರಿ ಎಂಬ ಮಾನ್ಯತೆ ಜಸ್ಸಿ ಅವರಿಗೆ ಇದೆ. ಈ ಹಿಂದೆ ಜೆಫ್ರಿ ಎ. ವಿಲ್ಕೆ ಅವರನ್ನು ಸಮರ್ಥ ಅಭ್ಯರ್ಥಿ ಎನ್ನಲಾಗಿತ್ತು. ಆದರೆ ಅವರು 2020ರ ಆಗಸ್ಟ್ನಲ್ಲಿ ನಿವೃತ್ತಿ ಘೋಷಣೆ ಮಾಡಿದರು. 6) ಅಮೆರಿಕದ ಹೊರಗೆ ಅಮೆಜಾನ್ ಪಾಲಿನ ಅತಿ ದೊಡ್ಡ ಮಾರುಕಟ್ಟೆ ಅಂದರೆ ಅದು ಭಾರತ. ಆದರೆ ಜಸ್ಸಿ ಭಾರತಕ್ಕೆ ಪದೇಪದೇ ನೀಡುವವರೇನೂ ಅಲ್ಲ. ಆದರೆ ಕಂಪೆನಿಯ ಇಂಡಿಯಾ ಕಸ್ಟಮರ್ಸ್ ಆನ್ಲೈನ್ನಿಂದ ನೇರವಾಗಿ ವಿಮರ್ಶೆಗಳನ್ನು ತೆಗೆದುಕೊಳ್ಳುತ್ತಾರೆ. 7) ತಮ್ಮ ಹಾಸ್ಯ ಪ್ರವೃತ್ತಿ, ತಮಾಷೆ ಮಾತುಗಳಿಗೆ ಜಸ್ಸಿ ಬಹಳ ಖ್ಯಾತಿ ಪಡೆದಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ತಮ್ಮ ಪ್ರತಿಸ್ಪರ್ಧಿಗಳಾದ ಐಬಿಎಂ ಮತ್ತು ಒರಾಕಲ್ ವಿರುದ್ಧ ಟೀಕೆ ಮಾಡಿದ್ದು ಸಹ ಉಂಟು. 8) ಕ್ರೀಡಾಭಿಮಾನಿಯಾದ ಅವರು ನ್ಯಾಷನಲ್ ಹಾಕಿ ಲೀಗ್ನಲ್ಲಿನ ಸೀಟಲ್ ಕ್ರಾಕೆನ್ನಲ್ಲಿ ಅಲ್ಪ ಪ್ರಮಾಣದ ಷೇರನ್ನು ಹೊಂದಿದ್ದಾರೆ. 9) ಮಾಧ್ಯಮ ವರದಿಗಳ ಪ್ರಕಾರ, ಅಮೆಜಾನ್ನಿಂದ ಜಸ್ಸಿಗೆ 2019ರಕ್ಕು 3,48,409 ಅಮೆರಿಕನ್ ಡಾಲರ್ ಪಾವತಿಸಲಾಗಿದೆ. 2018ರಲ್ಲಿ 19.7 ಮಿಲಿಯನ್ ಡಾಲರ್ ಪಾವತಿಸಲಾಗಿತ್ತು, 19 ಮಿಲಿಯನ್ ಡಾಲರ್ ಸ್ಟಾಕ್ ನೀಡಲಾಗಿತ್ತು. 10) ಜಸ್ಸಿ ಕೂಡ ಬೆಜೋಸ್ರಂತೆಯೇ ವರ್ಣರಂಜಿತ ವ್ಯಕ್ತಿತ್ವದವರು. ಹೇಗೆ ತಮ್ಮ ಮುಖ್ಯ ಭಾಷಣದ ಸಲುವಾಗಿ ಅಮೆಜಾನ್ ಪ್ರಚಾರ ಕಾರ್ಯಕ್ರಮಕ್ಕೆ ಭಾರತದಲ್ಲಿ ಬೆಜೋಸ್ ಟ್ರಕ್ ಚಲಾಯಿಸಿದ್ದರೋ ಅದೇ ರೀತಿ ವೇದಿಕೆ ಮೇಲೆ ಪ್ರದರ್ಶನಕ್ಕೆ ಜಸ್ಸಿ 18 ಚಕ್ರದ ಟ್ರಕ್- ಸ್ನೋಮೊಬೈಲ್ ಅನ್ನು ವೇದಿಕೆ ಮೇಲೆ ಪ್ರದರ್ಶನಕ್ಕೆ ತಂದಿದ್ದರು.
ಇದನ್ನೂ ಓದಿ: Jeff Bezos: ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಗಿಳಿದ ಜಗತ್ತಿನ ನಂಬರ್ ಒನ್ ಶ್ರೀಮಂತ ಜೆಫ್ ಬೆಜೋಸ್; ಪಿಕ್ಚರ್ ಅಭೀ ಬಾಕಿ ಹೈ
ಇದನ್ನೂ ಓದಿ: Jeff Bezos: ಪುಟ್ಟ ಗ್ಯಾರೇಜಿನಿಂದ 131.58 ಲಕ್ಷ ಕೋಟಿ ರೂಪಾಯಿ ಸಾಮ್ರಾಜ್ಯದ ತನಕ ಅಮೆಜಾನ್.ಕಾಮ್ ಕಟ್ಟಿದ ಜೆಫ್ ಬೆಜೋಸ್
(Here is the 10 interesting facts about e commerce giant Amazon.com new CEO Andy Jassy)
Published On - 4:36 pm, Mon, 5 July 21