Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI ATM, Cheque Book: ಎಸ್​ಬಿಐ ಎಟಿಎಂ ನಗದು ವಿಥ್​ ಡ್ರಾ ನಿಯಮಗಳು, ಚೆಕ್​ಬುಕ್ ಶುಲ್ಕಗಳು ಜುಲೈನಿಂದ ಬದಲಾವಣೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಜುಲೈನಿಂದ ಅನ್ವಯ ಆಗುವಂತೆ ಎಟಿಎಂ ನಗದು ವಿಥ್​ಡ್ರಾ, ಚೆಕ್ ಬುಕ್ ಸೇರಿದಂತೆ ಇತರ ನಿಯಮಾವಳಿಗಳು ಬದಲಾವಣೆ ಆಗಲಿವೆ.

SBI ATM, Cheque Book: ಎಸ್​ಬಿಐ ಎಟಿಎಂ ನಗದು ವಿಥ್​ ಡ್ರಾ ನಿಯಮಗಳು, ಚೆಕ್​ಬುಕ್ ಶುಲ್ಕಗಳು ಜುಲೈನಿಂದ ಬದಲಾವಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 26, 2021 | 5:13 PM

ಎಸ್​ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)ದಿಂದ ಎಟಿಎಂಗಳು ಮತ್ತು ಬ್ಯಾಂಕ್​ ಶಾಖೆಯಿಂದ ನಗದು ವಿಥ್​ಡ್ರಾಗೆ ಸಂಬಂಧಿಸಿದಂತೆ ನಿಯಮಾವಳಿಗಳು ಹಾಗೂ ಶುಲ್ಕದಲ್ಲಿ ಬದಲಾವಣೆಗಳು ಮಾಡುವುದಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಈ ಹೊಸ ನಿಯಮಾವಳಿಗಳು ಹೊಸ ಶುಲ್ಕಗಳು ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ (BSBD) ಖಾತೆದಾರರಿಗೆ ಅನ್ವಯ ಆಗುತ್ತದೆ. ಎಟಿಎಂನಲ್ಲಿ ನಗದು ವಿಥ್​ಡ್ರಾ ಶುಲ್ಕದಿಂದ ಚೆಕ್​ಬುಕ್ ಮತ್ತು ಹಣಕಾಸೇತರ ವಹಿವಾಟುಗಳ ತನಕ ಬರಲಿರುವ ಹೊಸ ನಿಯಮಾವಳಿಗಳ ಮಾಹಿತಿ ಇಲ್ಲಿದೆ.

ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಅಕೌಂಟ್ ಅಂದರೇನು? ಎಸ್​ಬಿಐ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಖಾತೆಯು ಇರುವುದು ಬಡವರಿಗಾಗಿ. ಯಾವುದೇ ಶುಲ್ಕ ಅಥವಾ ದರವನ್ನು ವಿಧಿಸದೆ ಉಳಿತಾಯ ಆರಂಭಿಸುವುದನ್ನು ಉತ್ತೇಜಿಸುವುದಕ್ಕೆ ಈ ಖಾತೆ ಇದೆ. ಇದನ್ನು ಶೂನ್ಯ ಬ್ಯಾಲೆನ್ಸ್ ಖಾತೆ ಎನ್ನಲಾಗುತ್ತದೆ. ಬಿಎಸ್​ಬಿಡಿ ಖಾತೆದಾರರಿಗೆ ಕನಿಷ್ಠ ಬ್ಯಾಲೆನ್ಸ್ ಅಥವಾ ಗರಿಷ್ಠ ಬ್ಯಾಲೆನ್ಸ್ ಅಂತಿಲ್ಲ. ಎಸ್​ಬಿಐನಿಂದ ಬೇಸಿಕ್ ರುಪೇ ಎಟಿಎಂ-ಕಮ್-ಡೆಬಿಟ್ ಕಾರ್ಡ್ ಅನ್ನು ಬಿಎಸ್​ಬಿಡಿ ಖಾತೆದಾರರಿಗೆ ನೀಡಲಾಗುತ್ತದೆ. ವೈಯಕ್ತಿಕವಾಗಿ ಯಾರ ಬಳಿ ಕೆವೈಸಿ ದಾಖಲಾತಿಗಳು ಇರುತ್ತವೆಯೋ ಅವರು ಬಿಎಸ್​ಬಿಡಿ ಖಾತೆಯನ್ನು ಎಸ್​ಬಿಐನಲ್ಲಿ ತೆರೆಯಬಹುದು.

ಎಸ್​ಬಿಐ ಎಟಿಎಂನಿಂದ ನಗದು ವಿಥ್​ಡ್ರಾ ನಿಯಮಾವಳಿಗಳು ಬಿಎಸ್​ಬಿಡಿ ಖಾತೆದಾರರಿಗೆ ನಾಲ್ಕು ಉಚಿತ ನಗದು ವಿಥ್​ಡ್ರಾ ಲಭ್ಯ ಇವೆ- ಇದರಲ್ಲಿ ಎಟಿಎಂಗಳು ಮತ್ತು ಬ್ಯಾಂಕ್​ ಶಾಖೆಗಳು ಎರಡೂ ಸೇರಿ ಒಂದು ತಿಂಗಳಲ್ಲಿ ಇಷ್ಟು ಅವಕಾಶ ಇದೆ. ಆ ಉಚಿತ ಮಿತಿಯ ನಂತರದಲ್ಲಿ ಬ್ಯಾಂಕ್​ನಿಂದ ಪ್ರತಿ ವಹಿವಾಟಿಗೆ ರೂ. 15 ಹಾಗೂ ಜಿಎಸ್​ಟಿ ಅನ್ವಯಿಸುತ್ತದೆ. ಶುಲ್ಕವು ಖಾತೆ ಹೊಂದಿರುವ ಹೋಮ್ ಬ್ರ್ಯಾಂಚ್ ಮತ್ತು ಎಟಿಎಂಗಳು ಮತ್ತು ಎಸ್​ಬಿಐ ಎಟಿಂಗಳಿಗೆ ಹೊರತಾದ ಕಡೆಗೆ ಅನ್ವಯ ಆಗುತ್ತದೆ.

ಚೆಕ್ ಬುಕ್ ಶುಲ್ಕಗಳು: ಬಿಎಸ್​ಬಿಡಿ ಖಾತೆದಾರರಿಗೆ ಬ್ಯಾಂಕ್​ನಿಂದ 10 ಚೆಕ್ ಲೀವ್ಸ್​ ಅನ್ನು ಒಂದು ಹಣಕಾಸಿನ ವರ್ಷದಲ್ಲಿ ನೀಡಲಾಗುತ್ತದೆ. ಅದಾದ ನಂತರ ಚೆಕ್​ಗಳಿಗೆ ದರ ವಿಧಿಸಲಾಗುತ್ತದೆ. 1) 10 ಚೆಕ್ ಲೀವ್ಸ್​ಗೆ ರೂ. 40 ಶುಲ್ಕ ಹಾಗೂ ಜತೆಗೆ ಜಿಎಸ್​ಟಿ

2) 25 ಚೆಕ್ ಲೀವ್ಸ್​ಗೆ ರೂ. 75 ಶುಲ್ಕ ಹಾಗೂ ಜಿಎಸ್​ಟಿ

3) ತುರ್ತು ಚೆಕ್​ ಬುಕ್​ಗೆ ರೂ. 50 ಶುಲ್ಕ ಪ್ಲಸ್ ಜಿಎಸ್​ಟಿ ಆಗುತ್ತದೆ. ಅದಕ್ಕೆ 10 ಲೀವ್ಸ್ ಬರುತ್ತದೆ.

ಆದರೆ, ಹಿರಿಯ ನಾಗರಿಕರಿಗೆ ಚೆಕ್​ ಬುಕ್​ಗಳ ಮೇಲಿನ ಈ ಹೊಸ ಸೇವೆಗೆ ಯಾವುದೇ ಶುಲ್ಕ ಇಲ್ಲ. ಹೋಮ್​ ಬ್ರ್ಯಾಂಚ್ (ಖಾತೆ ಇರುವ) ಅಥವಾ ಅಲ್ಲಿಂದ ಹೊರಗಿನ ಶಾಖೆಯಲ್ಲಿ ಬಿಎಸ್​ಬಿಡಿ ಖಾತೆಯ ಯಾವುದೇ ಹಣಕಾಸೇತರ ವ್ಯವಹಾರಗಳಿಗೆ ಬ್ಯಾಂಕ್​ನಿಂದ ಶುಲ್ಕ ಇರುವುದಿಲ್ಲ. ವರ್ಗಾವಣೆ ಕೂಡ ಶಾಖೆ ಮತ್ತು ಪರ್ಯಾಯ ಚಾನೆಲ್​ಗಳಲ್ಲಿ ಬಿಎಸ್​ಬಿಡಿ ಖಾತೆದಾರರಿಗೆ ಉಚಿತವಾಗಿರುತ್ತದೆ.

ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಿಂದ ಗ್ರಾಹಕರು ಹೋಮ್ ಬ್ರ್ಯಾಂಚ್​ ಅಲ್ಲದ ಕಡೆ ಹಣ ವಿಥ್​ಡ್ರಾ ಮಾಡುವ ಮಿತಿಯನ್ನು ಸಹ ಹೆಚ್ಚಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಗ್ರಾಹಕರನ್ನು ಬೆಂಬಲಿಸುವ ಉದ್ದೇಶದಿಂದ ಹೋಮ್​ ಬ್ರ್ಯಾಂಚ್​ ಅಲ್ಲದ ಕಡೆಯೂ ಚೆಕ್​ ಅಥವಾ ವಿಥ್​ಡ್ರಾ ಫಾರ್ಮ್ ಮೂಲಕ ನಗದು ವಿಥ್​ಡ್ರಾ ಮಾಡುವ ಮಿತಿಯನ್ನು ಏರಿಕೆ ಮಾಡಲಾಗಿದೆ. ಈ ಬಗ್ಗೆ ಬ್ಯಾಂಕ್​ನಿಂದಲೂ ಟ್ವೀಟ್ ಮಾಡಲಾಗಿದೆ. ಇನ್ನು ಒಂದು ದಿನಕ್ಕೆ ಚೆಕ್ ಬಳಸಿ ನಗದು ವಿಥ್​ಡ್ರಾ ಮಾಡುವ ಮಿತಿಯನ್ನು ರೂ. 50,000ದಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ. ವಿಥ್​ಡ್ರಾ ಫಾರ್ಮ್ ಹಾಗೂ ಪಾಸ್​ಬುಕ್ ಜತೆಗೆ ಒಂದು ದಿನಕ್ಕೆ ನಗದು ವಿಥ್​ ಡ್ರಾ ಮಾಡುವ ಮಿತಿ ರೂ. 25,000ಕ್ಕೆ ಹೆಚ್ಚಿಸಲಾಗಿದೆ. ಥರ್ಡ್​ ಪಾರ್ಟಿ ನಗದು ವಿಥ್​ ಡ್ರಾ ಅನ್ನು ಒಂದು ತಿಂಗಳಿಗೆ (ಚೆಕ್​ ಮಾತ್ರ ಬಳಸಿ) ರೂ. 50,000ಕ್ಕೆ ನಿಗದಿ ಮಾಡಲಾಗಿದೆ. ವಿಥ್​ಡ್ರಾ ಫಾರ್ಮ್ ಮೂಲಕ ನಗದು ಡ್ರಾ ಮಾಡುವುದಕ್ಕೆ ಅವಕಾಶ ಇಲ್ಲ ಎಂದು ಬ್ಯಾಂಕ್ ತಿಳಿಸಿದೆ. ಪರಿಷ್ಕೃತ ಮಿತಿ ಸೆಪ್ಟೆಂಬರ್ 30ರ ತನಕ ಇದೆ.

ಇದನ್ನೂ ಓದಿ: Aarogyam healthcare business loan: ಎಸ್​ಬಿಐನಿಂದ ಹೆಲ್ತ್​ಕೇರ್​ಗಳಿಗೆ 100 ಕೋಟಿ ರೂ. ತನಕ ಆರೋಗ್ಯಮ್ ಉದ್ಯಮ ಸಾಲ

(SBI ATM cash withdrawal and Cheque book charges will change from July. Here is the details)

Published On - 5:12 pm, Sat, 26 June 21

ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ